• Home
 • »
 • News
 • »
 • business
 • »
 • Note Sale- ಇಂಥ ಹಳೆಯ 500 ರೂ ನೋಟು ಇದ್ದರೆ ಗಳಿಸಬಹುದು 10 ಸಾವಿರ

Note Sale- ಇಂಥ ಹಳೆಯ 500 ರೂ ನೋಟು ಇದ್ದರೆ ಗಳಿಸಬಹುದು 10 ಸಾವಿರ

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮಲ್ಲಿ 500 ರೂ ಮುಖಬೆಲೆಯ ಹಳೆಯ ನೋಟುಗಳು ಇದ್ದರೆ ಗಮನಿಸಿ. ಅವು ದೋಷಪೂರಿತವಾಗಿದ್ದರೆ ಆಂಟಿಕ್ ಐಟಂ ಆಗಬಹುದು. ಮಾರುಕಟ್ಟೆಯಲ್ಲಿ ಅದಕ್ಕೆ ಒಳ್ಳೆಯ ಬೆಲೆ ಇದೆ. ಹೆಚ್ಚಿನ ವಿವರ ಈ ಸುದ್ದಿಯಲ್ಲಿದೆ:

 • News18
 • Last Updated :
 • Share this:

  ಬೆಂಗಳೂರು: ಹಳೆಯ ವಸ್ತುಗಳೆಲ್ಲವೂ ಕಸಕ್ಕೆ ಬಿಸಾಡುವಂಥದ್ದಿರುವುದಿಲ್ಲ. ಕಸ ಎಂದು ಭಾವಿಸುವ ವಸ್ತುವಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರಬಹುದು. ಆ್ಯಂಟಿಕ್ ಐಟಂಗಳಂತೂ (Antique Items) ಯಾವತ್ತಿದ್ದರೂ ಬೆಲೆ ಬಾಳುವಂಥದ್ದು. ನಿಮ್ಮ ತಾತ, ಮುತ್ತಾತನ ಕಾಲದ ನಾಣ್ಯವೋ, ಅಥವಾ ಈಗ ಚಾಲ್ತಿಯಲ್ಲಿಲ್ಲದ ಯಾವುದೇ ನಾಣ್ಯ ಅಥವಾ ನೋಟುಗಳಿಗೂ ಒಳ್ಳೆಯ ಬೆಲೆ ಉಂಟು. ನಿಮಗೆ ಅಚ್ಚರಿ ಆಗಬಹುದು, ಕೆಲ ವರ್ಷಗಳ ಹಿಂದೆ ನೋಟ್ ಬ್ಯಾನ್ ಆದಾಗ ನಿಷೇಧಗೊಂಡಿದ್ದ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳು ನಿಮ್ಮಲ್ಲಿದ್ದರೆ ಭರ್ಜರಿ ಹಣ ಮಾಡುವ ಅವಕಾಶ ಇದೆ. ನಿಷೇಧಿತ ನೋಟಿನಿಂದ ನಷ್ಟವೇ ಹೊರತು ಲಾಭ ಹೇಗೆ ಎಂದು ಯೋಚಿಸುತ್ತಿರಬೇಕಲ್ಲ..! ಅದಕ್ಕೆ ಇಲ್ಲಿದೆ ಉತ್ತರ…


  ಭಾರತದಲ್ಲಿ ಎಲ್ಲಾ ನೋಟುಗಳನ್ನ ಮುದ್ರಿಸುವುದು ಮತ್ತು ನಾಣ್ಯಗಳನ್ನ ತಯಾರಿಸುವುದು ಭಾರತೀಯ ರಿಸರ್ವ್ ಬ್ಯಾಂಕ್. ಒಂದು ಮುಖಬೆಲೆಯ ಎಲ್ಲಾ ನೋಟುಗಳು ಏಕರೀತಿಯಲ್ಲೇ ಇರುವಂತೆ ಪ್ರಿಂಟ್ ಮಾಡಲಾಗುತ್ತದೆ. ಕಾಗದದ ಅಳತೆ, ಗಾತ್ರ, ಬಣ್ಣ ಇತ್ಯಾದಿ ಎಲ್ಲವೂ ಒಂದೇ ಪ್ಯಾಟರ್ನ್ ನಲ್ಲೇ ಇರಬೇಕು. ಹಾಗೆಯೇ, ಪ್ರತಿಯೊಂದು ನಾಣ್ಯ ಕೂಡ ಇಷ್ಟೇ ತೂಕ ಇತ್ಯಾದಿ ಹೊಂದಿರುತ್ತದೆ. ಇದರಲ್ಲಿ ನೋಟುಗಳನ್ನ ಮುದ್ರಿಸುವಾಗ ಬಹಳ ಅಪರೂಪಕ್ಕೆ ಒಂದಷ್ಟು ಏರುಪೇರಾಗಬಹುದು. ಹಾಗೊಂದು ವೇಳೆ ಏರುಪೇರಾಗಿದ್ದು ಕಂಡು ಬಂದರೆ ಆರ್​ಬಿಐ ಸಿಬ್ಬಂದಿ ಕೂಡಲೇ ಅದನ್ನ ಸರಿಪಡಿಸಿ ಮತ್ತೆ ಮುದ್ರಿಸುತ್ತಾರೆ. ಆದರೆ, ಕಣ್ತಪ್ಪಿನಿಂದ ಕೆಲವೊಮ್ಮೆ ಅಂಥ ದೋಷಪೂರಿತ ನೋಟುಗಳು ಮಾರುಕಟ್ಟೆಗೆ ಬಂದುಬಿಡುತ್ತವೆ.


  ಇದರಲ್ಲಿ ಒಂದೇ ಸೀರಿಯಲ್ ನಂಬರ್ ಅನ್ನು ಎರಡು ಬಾರಿ ಮುದ್ರಿಸಿರುವ ನೋಟುಗಳು ಹಿಂದೆ ಮಾರುಕಟ್ಟೆಗೆ ಆಕಸ್ಮಿಕವಾಗಿ ಬಂದುಬಿಟ್ಟಿವೆ. ಈ ರೀತಿಯ ಎರಡು ಬಾರಿ ಸೀರಿಯಲ್ ನಂಬರ್ ಮುದ್ರಣ ಆಗಿರುವುದು 500 ರೂ ಮುಖಬೆಲೆಯ ನೋಟುಗಳಲ್ಲಿ. ಹಾಗೆಯೇ, ಒಂದೇ ನೋಟಿನಲ್ಲಿ ಎರಡು ರೀತಿಯ ಸೀರಿಯಲ್ ನಂಬರ್​ಗಳನ್ನ ಮುದ್ರಿಸಿರುವ ನೋಟುಗಳೂ ಇವೆ. ಕೆಲ ಜನರು ಇದನ್ನ ವಿಶೇಷ ನೋಟೆಂದು, ಆ್ಯಂಟಿಕ್ ಐಟಂ ಎಂದು ಪರಿಗಣಿಸುತ್ತಾರೆ. ಈ ನೋಟಿಗೆ ಆನ್​ಲೈನ್ ಮಾರಾಟದಲ್ಲಿ 5 ಸಾವಿರ ರೂವರೆಗೆ ಬೆಲೆ ಇದೆ.


  ಹಾಗೆಯೇ, 500 ರೂ ಮುಖಬೆಲೆಯ ಹಳೆಯ ಕೆಲ ನೋಟುಗಳ ಕಾಗದದ ಅಳತೆಯಲ್ಲಿ ವ್ಯತ್ಯಾಸ ಆಗಿರುವುದುಂಟು. ನೋಟಿನ ಕಾಗದದ ಒಂದು ಮೂಲೆ ಸಮವಾಗಿರದೇ ಉದ್ದವಾಗಿರುವ ನೋಟುಗಳು ಹಿಂದೆ ಚಲಾವಣೆಗೆ ಬಂದಿದ್ದವು. ಇಂಥ ನೋಟು ನಿಮಗೆ ಸಿಕ್ಕಿದರೆ 10 ಸಾವಿರ ರೂ ಸಂಪಾದಿಸಬಹುದು.


  ಈ ವಿಶೇಷ ದೋಷಪೂರಿತ ನೋಟುಗಳನ್ನ ಇಲ್ಲಿ ಮಾರಬಹುದು:
  * ಮೊದಲಿಗೆ OldIndianCoins.com ವೆಬ್​ಸೈಟ್​ಗೆ ಭೇಟಿ ಕೊಡಿ.
  * ಅಲ್ಲಿ ನೀವು ಸೆಲ್ಲರ್ (ಮಾರಾಟಗಾರ) ಎಂದು ನೊಂದಾಯಿಸಿಕೊಳ್ಳಿ.
  * ನಂತರ ನಿಮ್ಮ ಬಳಿರುವ ಆ ವಿಶೇಷ 500 ರೂ ಮುಖಬೆಲೆಯ ನೋಟಿನ ಫೋಟೋವನ್ನು ಅಪ್​ಲೋಡ್ ಮಾಡಿ
  * ಈ ನೋಟನ್ನು ಖರೀದಿಸಲುಬಯಸುವ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ. ಆಗ ಅವರೊಂದಿಗೆ ವ್ಯವಹಾರ ಕುದುರಿಸಿಕೊಳ್ಳಿ.


  ಇದನ್ನೂ ಓದಿ: Cheaper EVs- ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಗಣನೀಯ ಇಳಿಕೆ ಸಾಧ್ಯತೆ


  ಈ ಸರಣಿ ಸಂಖ್ಯೆಯ ನೋಟಿಗೆ ಇದೆ ಡಿಮ್ಯಾಂಡ್:


  ನಿರ್ದಿಷ್ಟ ಸಂಖ್ಯೆಗಳಿರುವ ಸೀರಿಯಲ್ ನಂಬರ್​ನ ಕರೆನ್ಸಿ ನೋಟುಗಳಿಂದ ಭಾರೀ ಹಣ ಮಾಡಿಕೊಳ್ಳಬಹುದು. ನಿಮ್ಮಲ್ಲಿ ಇರುವ ಕರೆನ್ಸಿ ನೋಟುಗಳನ್ನ ಗಮನಿಸಿ. ಅದರಲ್ಲಿರುವ ಸೀರಿಯಲ್ ನಂಬರ್​ನಲ್ಲಿ 786 ನಂಬರ್ ಇದ್ದರೆ ಆ ನೋಟಿನಿಂದ ನೀವು ಆನ್​ಲೈನ್​ನಲ್ಲಿ 3 ಲಕ್ಷ ರೂವರೆಗೆ ಗಳಿಸಬಹುದು. ಅಷ್ಟು ಡಿಮ್ಯಾಂಡ್ ಇದೆ ಆ ಸಂಖ್ಯೆಯ ನೋಟುಗಳಿಗೆ.


  786 ನಂಬರ್ ಇರುವ ನೋಟು ಯಾವುದಾದರೂ ಆಗಿರಬಹುದು. 1 ರೂ, 5 ರೂ, 10 ರೂ, ಕೊನೆಗೆ 2 ಸಾವಿರ ರೂ ಮುಖಬೆಲೆಯ ನೋಟಾದರೂ ಆಗಿರಬಹುದು. ಹೀಗಾಗಿ, ಇನ್ಮುಂದೆ ನಿಮ್ಮ ಕೈಗೆ ಯಾವ ನೋಟು ಬಂದರೂ ಅದರಲ್ಲಿರುವ ಸೀರಿಯಲ್ ನಂಬರ್ ಗಮನಿಸಿ. ಅದರಲ್ಲಿ 786 ನಂಬರ್ ಕಾಣಿಸಿದರೆ ಅದನ್ನ ತೆಗೆದಿರಿಸಿಕೊಳ್ಳಿ. ಗಮನಿಸಬೇಕಾದ ಅಂಶ ಎಂದರೆ 786 ಅಂಕಿಗಳು ಒಂದರ ಪಕ್ಕ ಒಂದು ಹಾಗೆಯೇ ಇರಬೇಕು.


  786 ನಂಬರ್​ನಲ್ಲಿ ಏನಿದೆ ವಿಶೇಷತೆ:


  ಇಸ್ಲಾಮ್ ಮತದಲ್ಲಿ 786 ನಂಬರ್ ಅನ್ನು ಬಹಳ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಮುಸ್ಲಿಮರಷ್ಟೇ ಅಲ್ಲ ಇತರ ಕೆಲ ಧರ್ಮಗಳಲ್ಲೂ ಜನರು ಈ ನಂಬರ್ ಅನ್ನು ಪವಿತ್ರವೆಂದು ಭಾವಿಸುತ್ತಾರೆ. ಹೀಗಾಗಿ, ಈ ನಂಬರ್ ಇರುವ ನೋಟನ್ನು ಜನರು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇದರಿಂದ ಅದೃಷ್ಟ ಕೈಗೂಡಿ ಬರುತ್ತದೆ ಎಂಬ ನಂಬಿಕೆ.


  ನಿಮಗೂ ಆ ನಂಬಿಕೆ ಇದ್ದರೆ ಆ ನೋಟನ್ನು ತೆಗೆದಿರಿಸಿಕೊಳ್ಳಬಹುದು. ಇಲ್ಲದಿದ್ದರೆ ಅದನ್ನ ಮಾರುಕಟ್ಟೆಯಲ್ಲಿ ಮಾರಿದರೆ ಭರ್ಜರಿ ಹಣ ಮಾಡಿಕೊಳ್ಳಬಹುದು.

  Published by:Vijayasarthy SN
  First published: