• Home
  • »
  • News
  • »
  • business
  • »
  • Rs 5 coin: ನಿಮ್ಮ ಬಳಿ ಈ 5 ರೂಪಾಯಿ ನಾಣ್ಯವಿದ್ದರೆ, ₹5 ಲಕ್ಷ ನಿಮ್ಮ ಕೈ ಸೇರಲಿದೆ: ಸಂಪೂರ್ಣ ಮಾಹಿತಿ ಇಲ್ಲಿದೆ

Rs 5 coin: ನಿಮ್ಮ ಬಳಿ ಈ 5 ರೂಪಾಯಿ ನಾಣ್ಯವಿದ್ದರೆ, ₹5 ಲಕ್ಷ ನಿಮ್ಮ ಕೈ ಸೇರಲಿದೆ: ಸಂಪೂರ್ಣ ಮಾಹಿತಿ ಇಲ್ಲಿದೆ

ಅಪರೂಪದ 5 ರೂ. ನಾಣ್ಯ

ಅಪರೂಪದ 5 ರೂ. ನಾಣ್ಯ

earn Rs 5 lakh: ಈ 5 ರೂಪಾಯಿ ನಾಣ್ಯವು ಸಾಮಾನ್ಯ 5 ರೂಪಾಯಿ ನಾಣ್ಯವಲ್ಲ. ಈ ಅಪರೂಪದ 5 ರೂಪಾಯಿ ನಾಣ್ಯವನ್ನು ಆಹಾರ ಮತ್ತು ಕೃಷಿ ಸಂಸ್ಥೆಯ 70 ನೇ ವಾರ್ಷಿಕೋತ್ಸವದಂದು ಬಿಡುಗಡೆ ಮಾಡಲಾಗಿದೆ.

  • Share this:

exchange old coin: ನೀವು ಏನನ್ನೂ ಮಾಡದೆ ಸುಮ್ಮನೆ ಮನೆಯಲ್ಲಿ ಕುಳಿತು ಹಣ(money) ಸಂಪಾದಿಸಲು ಬಯಸಿದರೆ, ಅದಕ್ಕಾಗಿ ಒಂದು ಸುವರ್ಣ ಅವಕಾಶವನ್ನು (golden opportunity)ನಾವು ನಿಮಗೆ ಹೇಳಲಿದ್ದೇವೆ. ಕೇವಲ 5 ರೂಪಾಯಿ ನಾಣ್ಯಕ್ಕೆ (Rs 5 coin) ಬದಲಾಗಿ 5 ಲಕ್ಷ ರೂಪಾಯಿ (Rs 5 lakh) ಗಳಿಸಬಹುದು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ನೀವು ಮನೆಯಲ್ಲಿ ಕುಳಿತು ಸುಲಭವಾಗಿ ಹಣವನ್ನು ಗಳಿಸಬಹುದು. ಒಂದು ನಾಣ್ಯಕ್ಕೆ ಬದಲಾಗಿ ನೀವು ಲಕ್ಷಗಟ್ಟಲೆ ರೂಪಾಯಿಗಳನ್ನು ಪಡೆಯಬಹುದು ಎಂಬ ಸುದ್ದಿಯನ್ನು ನೀವು ಆಗಾಗ್ಗೆ ಓದಿರಬೇಕು. ಈ ಅಪರೂಪದ ನಾಣ್ಯಗಳಿಗೆ ಯಾರು ಹಣ ಪಾವತಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹಳೆಯ, ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸಲು ಇಷ್ಟಪಡುವ ಕೆಲವರು ಇದ್ದಾರೆ. ಅಂತಹ ಜನರು ಪುರಾತನ ವಸ್ತುಗಳನ್ನು ಹೊಂದಲು ದೊಡ್ಡ ಮೊತ್ತವನ್ನು ಪಾವತಿಸಲು ಹಿಂಜರಿಯುವುದಿಲ್ಲ.


5 ರೂ. ನಾಣ್ಯಕ್ಕೆ ಇದೆ ತುಂಬಾನೇ ಮಹತ್ವ..!


ನಿಮ್ಮ ಬಳಿಯೂ ಹಳೆಯ ಅಪರೂಪದ ನಾಣ್ಯಗಳಿದ್ದರೆ ಅದಕ್ಕೆ ಬದಲಾಗಿ ಲಕ್ಷಗಟ್ಟಲೆ ಹಣವೂ ಸಿಗುತ್ತದೆ.  ವಾಸ್ತವವಾಗಿ, ಈ 5 ರೂಪಾಯಿ ನಾಣ್ಯವು ಸಾಮಾನ್ಯ 5 ರೂಪಾಯಿ ನಾಣ್ಯವಲ್ಲ. ಈ ಅಪರೂಪದ 5 ರೂಪಾಯಿ ನಾಣ್ಯವನ್ನು ಆಹಾರ ಮತ್ತು ಕೃಷಿ ಸಂಸ್ಥೆಯ 70 ನೇ ವಾರ್ಷಿಕೋತ್ಸವದಂದು ಬಿಡುಗಡೆ ಮಾಡಲಾಗಿದೆ. ನೀವು ಈ ನಾಣ್ಯವನ್ನು ಆನ್‌ಲೈನ್ ಹರಾಜಿಗೆ ಹಾಕಬಹುದು ಮತ್ತು ಉತ್ತಮ ಮೊತ್ತವನ್ನು ಪಡೆಯಬಹುದು.


ಅಪರೂಪದ 5 ರೂಪಾಯಿ ನಾಣ್ಯವನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡುವುದು ಹೇಗೆ?


- Quikr.com ಗೆ ಲಾಗ್ ಇನ್ ಮಾಡಿ


- ಜನರು ಈ ವೇದಿಕೆಯಲ್ಲಿ ಅಪರೂಪದ ನಾಣ್ಯವನ್ನು ಖರೀದಿಸಲು ಉತ್ತಮ ಮೊತ್ತವನ್ನು ಪಾವತಿಸುತ್ತಿದ್ದಾರೆ.


- Quikr ನಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.


- ನಾಣ್ಯದ ಫೋಟೋ ಕ್ಲಿಕ್ ಮಾಡಿ ಮತ್ತು ಅದನ್ನು ಅಪ್‌ಲೋಡ್ ಮಾಡಿ.


- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ


ಆಸಕ್ತರು ನಿಮ್ಮನ್ನು ಸಂಪರ್ಕಿಸಿ ನಿಮ್ಮ ಬಳಿ ಇರುವ 5 ರೂಪಾಯಿ ನಾಣ್ಯವನ್ನು ಒಡೆದು, 5 ಲಕ್ಷ ರೂಪಾಯಿಯನ್ನು ನಿಮಗೆ ನೀಡುತ್ತಾರೆ. ಇನ್ನೇಕೆ ತಡ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ.


ಇದನ್ನೂ ಓದಿ: ಈ ಇಸವಿಯ 1 ರೂ. ನೋಟು ನಿಮ್ಮ ಬಳಿ ಇದ್ದರೆ ಕ್ಷಣಾರ್ಧದಲ್ಲಿ 7 ಲಕ್ಷ ರೂ. ನಿಮ್ಮ ಕೈಯಲ್ಲಿ.. ಹೇಗೆಂದು ತಿಳಿಯಿರಿ


786 ಸಂಖ್ಯೆಯ ನೋಟುಗಳಿಗೆ ಲಕ್ಷಾಂತರ ರೂಪಾಯಿ


ಹಳೆಯ, ಅಪರೂಪದ ನೋಟುಗಳು ಮತ್ತು ನಾಣ್ಯಗಳು ಸೇರಿದಂತೆ ಪುರಾತನ ವಸ್ತುಗಳನ್ನು ಸಂಗ್ರಹಿಸಲು ಇಷ್ಟಪಡುವ ಅನೇಕ ಜನರಿದ್ದಾರೆ. ನೀವು ಹಳೆಯ ಮತ್ತು ಅಪರೂಪದ ನಾಣ್ಯಗಳು ಅಥವಾ ನೋಟುಗಳನ್ನು ಹೊಂದಿದ್ದರೆ ಈಗ ಲಕ್ಷ ಲಕ್ಷ ರೂಪಾಯಿಗಳನ್ನು ಗಳಿಸಬಹುದು. 786 ಸರಣಿಯ ಹಳೆಯ ನೋಟು ಇದ್ದರೆ ಮನೆಯಲ್ಲಿ ಕುಳಿತು 3 ಲಕ್ಷ ರೂಪಾಯಿಯನ್ನು ಆರಾಮಾಗಿ ಗಳಿಸಬಹುದು.  ನಿಮ್ಮ ಬಳಿ 5, 10, 20, 50, 100 ನೋಟುಗಳಿದ್ದರೂ ಪರವಾಗಿಲ್ಲ, ಆದರೆ ಅದರ ಮೇಲೆ 786 ಸಂಖ್ಯೆ ಮುದ್ರಿಸಬೇಕು. ನಿಮ್ಮ ಬಳಿ 786 ಸಂಖ್ಯೆಯ ನೋಟುಗಳ ಸರಣಿಯಿದ್ದರೆ ತಡ ಮಾಡಬೇಡಿ. ಕೂಡಲೇ ಇಬೇ ವೆಬ್‌ಸೈಟ್‌ಗೆ ಹೋಗಿ ಮತ್ತು ಅಲ್ಲಿ ನಿಮ್ಮ ನೋಟಿನ ಮೌಲ್ಯ ಕಂಡು ನಿಮಗೇ ಅಚ್ಚರಿ ಆಗುತ್ತೆ.


ಧಾರ್ಮಿಕ ನಂಬಿಕೆಯಿಂದ ಬೇಡಿಕೆ


ಭಾರತದಲ್ಲಿ ಇರುವಷ್ಟು ಧಾರ್ಮಿಕ ನಂಬಿಕೆಗಳು ಬೇರೆ ಯಾವ ದೇಶದಲ್ಲಿಯೂ ಇಲ್ಲ ಅನಿಸುತ್ತೆ. 786 ಸಂಖ್ಯೆಯ ನೋಟುಗಳಿಗೆ ಡಿಮ್ಯಾಂಡ್​ ಬರಲು ಧಾರ್ಮಿಕ ನಂಬಿಕೆಯೇ ಕಾರಣ. ಈ ಸಂಖ್ಯೆಯನ್ನು ಮುಸ್ಲಿಮರು ಅದೃಷ್ಟವೆಂದು ಪರಿಗಣಿಸುತ್ತಾರೆ ಹಾಗಾಗಿಯೇ ಈ ಸರಣಿಯ ನೋಟುಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ.


ಮಾತಾ ವೈಷ್ಣೋದೇವಿ ನಾಣ್ಯದ ಮಹಿಮೆ!


ನೀವು ಮಾತಾ ವೈಷ್ಣೋದೇವಿ ಇರುವ 5 ಮತ್ತು 10 ರೂ. ಮುಖಬೆಲೆಯ ನಾಣ್ಯಗಳನ್ನು ಹೊಂದಿದ್ದರೆ, ಅವುಗಳನ್ನು ಹರಾಜಿಗೆ ಹಾಕುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. ಈ ನಾಣ್ಯಗಳನ್ನು ಸರ್ಕಾರ 2002 ರಲ್ಲಿ ಬಿಡುಗಡೆ ಮಾಡಿದ್ದು, ಹೆಚ್ಚಿನ ಬೇಡಿಕೆ ಇದೆ. ಹಿಂದೂಗಳು ಮಾತಾ ವೈಷ್ಣೋದೇವಿಯನ್ನು ಬಹಳವಾಗಿ ಗೌರವಿಸುತ್ತಿರುವುದರಿಂದ ಅಂತಹ ಒಂದು ನಾಣ್ಯವನ್ನು ಹೊಂದಲು ಲಕ್ಷಗಟ್ಟಲೆ ಖರ್ಚು ಮಾಡಲು ಸಿದ್ಧರಿದ್ದಾರೆ.

Published by:Kavya V
First published: