Business Idea: ಈ ಬೆಳೆ ಬೆಳೆದ್ರೆ ಮೂರೇ ತಿಂಗಳಲ್ಲಿ ನೀವು ಲಕ್ಷಾಧಿಪತಿ ಆಗ್ತಿರಿ; ಇಲ್ಲಿದೆ ಕೃಷಿ ಐಡಿಯಾ

ಕೊರೊನಾ (Corona Pandemic) ಅಪ್ಪಳಿಸಿದ ಬಳಿಕ ಅನೇಕ ವಿದ್ಯಾವಂತರು ಕೃಷಿ(Agriculture) ಯನ್ನು ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಕೃಷಿಯಲ್ಲೂ ಸಾಕಷ್ಟು ಹಣ (Good Return) ಗಳಿಸುವ ಅವಕಾಶವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
How to Start Own Business: ಇತ್ತೀಚಿನ ದಿನಗಳಲ್ಲಿ ಯುವಕರು (Youths) ಸ್ವಯಂ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಕೊರೊನಾ (Corona Pandemic) ಅಪ್ಪಳಿಸಿದ ಬಳಿಕ ಅನೇಕ ವಿದ್ಯಾವಂತರು ಕೃಷಿ(Agriculture) ಯನ್ನು ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಕೃಷಿಯಲ್ಲೂ ಸಾಕಷ್ಟು ಹಣ (Good Return) ಗಳಿಸುವ ಅವಕಾಶವಿದೆ. ಅನೇಕ ಜನರು ಅದರಲ್ಲಿ ಉತ್ತಮ ಹಣವನ್ನು ಸಹ ಗಳಿಸುತ್ತಿದ್ದಾರೆ. 2020ರಲ್ಲಿ ಉದ್ಯೋಗ ಕಳೆದುಕೊಂಡ ಅದೆಷ್ಟೋ ಜನರು, ಇಂದು ಕೃಷಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ವ್ಯವಹಾರ (Own Business) ಆರಂಭಿಸಿದ್ದಾರೆ. ನೀವೂ ಕೂಡ ಕೃಷಿಯ ಮೂಲಕ ಉತ್ತಮ ಹಣ ಗಳಿಸಬೇಕೆಂದರೆ ಜೀರಿಗೆ ಕೃಷಿ (Cumin Farming) ಮಾಡಬೇಕು.

ಜೀರಿಗೆ ಲಾಭದಾಯಕ ಬೆಳೆಗಳಲ್ಲಿ ಒಂದಾಗಿದ್ದು, ಇದನ್ನು ಮಸಾಲೆಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ ಇದರಲ್ಲಿರುವ ಔಷಧೀಯ ಗುಣಗಳಿಂದ ಔಷಧಗಳನ್ನೂ ತಯಾರಿಸುತ್ತಾರೆ. ಆದ್ದರಿಂದ, ಅದರ ಬೇಡಿಕೆಯು ವರ್ಷವಿಡೀ ಇರುತ್ತದೆ. ಬೇಡಿಕೆಯ ಜೊತೆಗೆ ಉತ್ತಮ ಆದಾಯವನ್ನು ಸಹ ಜೀರಿಗೆ ತಂದು ಕೊಡುತ್ತದೆ. ಜೀರಿಗೆಯನ್ನು ಬೆಳೆದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಬೇಕು. ಮಾರುಕಟ್ಟೆಯಲ್ಲಿ ಬುದ್ಧಿವಂತಿಕೆ ವ್ಯವಹರಿಸಿದ್ದಲ್ಲಿ ಲಾಭ ನಿಶ್ಚಿತ.

ಹವಾಮಾನ ಮತ್ತು ಮಣ್ಣು

ಜೀರಿಗೆ ಕೃಷಿಗೆ ಲೋಮಿ ಮಣ್ಣು ಸೂಕ್ತವಾಗಿದೆ. ಇದನ್ನು ಚಳಿಗಾಲದಲ್ಲಿ ಬಿತ್ತಲಾಗುತ್ತದೆ. ಜೀರಿಗೆ ಸಸ್ಯವು ಹೆಚ್ಚಿನ ಶಾಖ ತಡೆದುಕೊಳ್ಳಲ್ಲ. ಜೀರಿಗೆ ಬಿತ್ತನೆಯ ಸಮಯದಲ್ಲಿ ತಾಪಮಾನವು 24 ರಿಂದ 28 ಡಿಗ್ರಿ ಸೆಂಟಿಗ್ರೇಡ್ ಮತ್ತು ಸಸ್ಯದ ಬೆಳವಣಿಗೆಯ ಸಮಯದಲ್ಲಿ 20 ರಿಂದ 22 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಇರುವಂತೆ ನೋಡಿಕೊಳ್ಳಬೇಕು. ನವೆಂಬರ್ ಮೂರನೇ ವಾರದಿಂದ ಡಿಸೆಂಬರ್ ಮೊದಲ ವಾರದವರೆಗೆ ಬಿತ್ತನೆ ಮಾಡಬೇಕು.

ಇದನ್ನೂ ಓದಿ:  Scrap Paper: ಮನೆಯಲ್ಲಿ ರದ್ದಿ ಪೇಪರ್ ಇದೆಯೇ? ಈಗಲೇ ಈ ಬೊಂಬಾಟ್ ಬೆಲೆಗೆ ಮಾರಿಬಿಡಿ!

Earn more than two lakh in three month through cumin farming mrq
ಜೀರಿಗೆ


ಕೃಷಿ ತಯಾರಿ

ಜೀರಿಗೆ ಬಿತ್ತನೆ ಮಾಡುವ ಮೊದಲು ಗದ್ದೆಯಲ್ಲಿ ಆಳವಾದ ಉಳುಮೆ ಮಾಡಬೇಕು. ಇದರ ನಂತರ, ರೋಟವೇಟರ್ ಅನ್ನು ಚಾಲನೆ ಮಾಡುವ ಮೂಲಕ ಮಣ್ಣನ್ನು ಪುಡಿಪುಡಿ ಮಾಡಿ. ರೋಟವೇಟರ್ ಇಲ್ಲದಿದ್ದಲ್ಲಿ ಎರಡು-ಮೂರು ಉಳುಮೆ ಮಾಡಿದ ನಂತರ ಭೂಮಿಯನ್ನು ಸಮತಟ್ಟು ಮಾಡಬೇಕು. ಜೀರಿಗೆಯನ್ನು ಸೂಕ್ತವಾದ ತೇವಾಂಶದಲ್ಲಿ ಬಿತ್ತಬೇಕು. ಬಿತ್ತನೆಗಾಗಿ ಸುಧಾರಿತ ತಳಿಗಳು ಮತ್ತು ಬೀಜಗಳನ್ನು ಬಳಸಿ.

ಪ್ರಭೇದಗಳ ಉತ್ತಮ ಆಯ್ಕೆ

ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ವಿವಿಧ ತಳಿಗಳನ್ನು ಬಿತ್ತಲಾಗುತ್ತದೆ. ಆದ್ದರಿಂದ, ವೈವಿಧ್ಯತೆಯ ಆಯ್ಕೆಗಾಗಿ ನೀವು ನಿಮ್ಮ ರಾಜ್ಯದ ಕೃಷಿ ಇಲಾಖೆ ಅಥವಾ ಕೃಷಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು. RZ 19 ಮತ್ತು 209, RZ 223 ಮತ್ತು GC 1-2-3 ಪ್ರಭೇದಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ಪ್ರಭೇದಗಳ ಬೀಜಗಳು 120-125 ದಿನಗಳಲ್ಲಿ ಹಣ್ಣಾಗುತ್ತವೆ. ಈ ತಳಿಗಳ ಸರಾಸರಿ ಇಳುವರಿ ಹೆಕ್ಟೇರಿಗೆ 510 ರಿಂದ 530 ಕೆ.ಜಿ ಯಷ್ಟು ಇರುತ್ತದೆ.

ಇದನ್ನೂ ಓದಿ:  Money Mantra: ಈ ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ದುಡ್ಡು ಸಿಗುತ್ತೆ! ಆದ್ರೆ, ಅದನ್ನು ಉಳಿಸಿಕೊಳ್ಳೋದು ಅವರ ಕೈಯಲ್ಲೇ ಇದೆ

ಬಿತ್ತನೆ ಹೇಗೆ?

ಒಂದು ಹೆಕ್ಟೇರ್‌ಗೆ 12 ಕೆಜಿ ಜೀರಿಗೆ ಸಾಕು. ಅಂದರೆ ಒಂದು ಎಕರೆಯಲ್ಲಿ ಐದು ಕಿಲೋಗ್ರಾಂಗಳಷ್ಟು ಬೀಜವನ್ನು ಬಿತ್ತಬೇಕು. ಬೀಜವನ್ನು 1 ರಿಂದ 1.5 ಸೆಂಟಿಮೀಟರ್ ಗಳಷ್ಟು ಬೇರ್ಪಡಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಬೀಜ ಹೆಚ್ಚು ಆಳವಾಗಿ ಬಿತ್ತಬಾರದು.ಆಳದಲ್ಲಿ ಬಿತ್ತನೆ ಮಾಡುವುದರಿಂದ ಬೀಜ ಮೊಳಕೆಯೊಡೆಯುವ ಪ್ರಕ್ರಿಯೆ ವಿಳಂಬವಾಗುತ್ತದೆ.

Earn more than two lakh in three month through cumin farming mrq
ಜೀರಿಗೆ


ಎಷ್ಟು ಆದಾಯ ಸಿಗಲಿದೆ?

ಜೀರಿಗೆ ಬೀಜಗಳ ಸರಾಸರಿ ಇಳುವರಿ ಹೆಕ್ಟೇರಿಗೆ 7-8 ಕ್ವಿಂಟಾಲ್ ಬೀಜಗಳು ಆಗುತ್ತದೆ. ಜೀರಿಗೆ ಕೃಷಿಗೆ ಪ್ರತಿ ಹೆಕ್ಟೇರ್‌ ಗೆ ಸುಮಾರು 30 ಸಾವಿರ ರೂ. ತಗಲುತ್ತದೆ. ಜೀರಿಗೆ ಬೆಲೆ ಕೆಜಿಗೆ 100 ರೂ. ತೆಗೆದುಕೊಂಡರೆ ಹೆಕ್ಟೇರ್‌ ಗೆ 80000 ರೂ. ಸಿಗುತ್ತದೆ. ಈ ರೀತಿಯಾಗಿ ಪ್ರತಿ ಹೆಕ್ಟೇರಿಗೆ ನಿವ್ವಳ ಲಾಭ 50000 ರೂ. ಇರಲಿದೆ. 4 ಹೆಕ್ಟೇರ್ ನಲ್ಲಿಯೂ ಜೀರಿಗೆ ಬೆಳೆದರೆ ಸುಮಾರು 3 ತಿಂಗಳಲ್ಲಿ 2,00,000 ರೂಪಾಯಿ ಉಳಿತಾಯ ಮಾಡಬಹುದು.?
Published by:Mahmadrafik K
First published: