ಕೇವಲ ₹50,000 ಹೂಡಿಕೆ ಮಾಡಿ ತಿಂಗಳಿಗೆ ಕೋಟಿಗಳಲ್ಲಿ ಲಾಭ ಗಳಿಸಿ; ಸೂಪರ್ Business Idea ಇಲ್ಲಿದೆ ನೋಡಿ

ನಿಮ್ಮಲ್ಲಿ ಕಡಿಮೆ ಬಜೆಟ್ ಇದ್ದರೆ ಇಂದು ನಾವು ನಿಮಗೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಗಳಿಸಲು ಸಹಾಯ ಮಾಡುವ ಉತ್ತಮ ವ್ಯಾಪಾರ ಕಲ್ಪನೆಯ ಬಗ್ಗೆ ಹೇಳುತ್ತೇವೆ. ಈ ಅದ್ಭುತ ವ್ಯವಹಾರದ ಬಗ್ಗೆ ತಿಳಿಯೋಣ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊರೊನಾ (COVID-19 pandemic) ಸಮಯದಲ್ಲಿ ಅನೇಕ ಜನರು ತಮ್ಮ ಉದ್ಯೋಗವನ್ನು (jobs) ಕಳೆದುಕೊಂಡಿದ್ದಾರೆ. ಇದರಿಂದ ಹಲವರು ಸ್ವಂತ ವ್ಯವಹಾರವನ್ನು (own business) ಪ್ರಾರಂಭಿಸಲು ಯೋಚಿಸುತ್ತಿದ್ದಾರೆ. ಒಳ್ಳೆಯ ಲಾಭ ಕೊಡುವ ಬ್ಯುಸಿನೆಸ್​ ಮಾಡಬೇಕು ಎಂಬುವುದು ನಿಮ್ಮ ಬಯಕೆ ಆಗಿದ್ದರೆ, ನಾವು ಇಲ್ಲಿ ಒಂದೊಳ್ಳೆ ಐಡಿಯಾ ಬಗ್ಗೆ ಹೇಳ್ತೀವಿ ಮುಂದೆ ಓದಿ. ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಆನ್‌ಲೈನ್ ವ್ಯಾಪಾರ ವೇದಿಕೆಯನ್ನು (online business platform) ಸಹ ಬಳಸಬಹುದು. ಅನೇಕ ಕಂಪನಿಗಳು ತಮ್ಮ ಜಾಹೀರಾತುಗಳನ್ನು ಸಿದ್ಧಪಡಿಸಲು ಡಿಜಿಟಲ್ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳನ್ನು (digital hoardings and banners) ಸಿದ್ಧಪಡಿಸಲು ಆದೇಶ ನೀಡುತ್ತವೆ. ನೀವು ಕಂಪ್ಯೂಟರ್ ಜ್ಞಾನವನ್ನು ಹೊಂದಿದ್ದರೆ, ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಜೊತೆಗೆ ಉತ್ತಮ ಲಾಭವನ್ನು ಗಳಿಸಬಹುದು. 

ಕಡಿಮೆ ಹೂಡಿಕೆ ಹೆಚ್ಚು ಲಾಭ

ಉತ್ತಮ ಗಳಿಕೆಗಾಗಿ ನಿಮ್ಮ ಕೆಲಸವನ್ನು ಬಿಟ್ಟು ವ್ಯಾಪಾರ ಮಾಡುವ ಆಲೋಚನೆಯಲ್ಲಿದ್ದರೆ ಮತ್ತು ನಿಮ್ಮಲ್ಲಿ ಕಡಿಮೆ ಬಜೆಟ್ ಇದ್ದರೆ ಇಂದು ನಾವು ನಿಮಗೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಗಳಿಸಲು ಸಹಾಯ ಮಾಡುವ ಉತ್ತಮ ವ್ಯಾಪಾರ ಕಲ್ಪನೆಯ ಬಗ್ಗೆ ಹೇಳುತ್ತೇವೆ. ಈ ಅದ್ಭುತ ವ್ಯವಹಾರದ ಬಗ್ಗೆ ತಿಳಿಯೋಣ. ನಿಮಗೆ ಡಿಸೈನಿಂಗ್ ಗೊತ್ತಿದ್ದರೆ ಡಿಜಿಟಲ್ ಹೋರ್ಡಿಂಗ್ಸ್ ಮಾಡುವ ವ್ಯವಹಾರವನ್ನು ಆರಂಭಿಸಬಹುದು. ಸೂಪರ್​ ವಿಷಯ ಏನಂದರೆ ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಪ್ರಾರಂಭಿಸಬಹುದು. ಈ ವ್ಯವಹಾರದಲ್ಲಿನ ಹೂಡಿಕೆಯು ತುಂಬಾ ಕಡಿಮೆಯಾಗಿದೆ (ಸುಮಾರು  50,000 ರೂ.). ಏಕೆಂದರೆ ನೀವು ಈ ವ್ಯವಹಾರವನ್ನು ಒಂದು ಕೋಣೆಯಿಂದಲೂ ಪ್ರಾರಂಭಿಸಬಹುದು.

ಈ ಪ್ಲಾಟ್​​ಫಾರ್ಮ್​​ಗಳನ್ನು ಬಳಸಿಕೊಳ್ಳಿ

ನಿಮಗೆ ಗ್ರಾಫಿಕ್ಸ್, ಡಿಸೈನಿಂಗ್ ಮತ್ತು ಕಂಪ್ಯೂಟರ್ ಬಗ್ಗೆ ಉತ್ತಮ ಜ್ಞಾನವಿದ್ದರೆ, ನೀವು ಮನೆಯಲ್ಲಿಯೇ ಕುಳಿತು ಡಿಜಿಟಲ್ ಹೋರ್ಡಿಂಗ್‌ಗಳನ್ನು ಸಿದ್ಧಪಡಿಸುವ ಕೆಲಸವನ್ನು ಮಾಡಬಹುದು. ಆರಂಭಿಕ ಹಂತದಲ್ಲಿ, freelancing.com ಅಥವಾ upwork ಮುಂತಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ವಿವಿಧ ಸೈಟ್‌ಗಳಲ್ಲಿ ನಿಮ್ಮ ಕೌಶಲ್ಯಗಳನ್ನು ಆಧಾರವಾಗಿ ನೀವು ಆರ್ಡರ್‌ಗಳನ್ನು ತೆಗೆದುಕೊಳ್ಳಬಹುದು. ನೀವು ಇದರಲ್ಲಿ ಪರಿಣತರಾದಾಗ ಕೋಟಿಗಳಲ್ಲಿ ಗಳಿಸಬಹುದು.

ಇದನ್ನೂ ಓದಿ: Mobile ಮೂಲಕ ಮನೆಯಲ್ಲಿಯೇ ಕುಳಿತು ₹50,000-1 ಲಕ್ಷದವರೆಗೆ ಸಂಪಾದಿಸಬಹುದು..ಹೇಗೆ ಗೊತ್ತಾ?

ಸೋಷಿಯಲ್​ ಮೀಡಿಯಾದಲ್ಲಿ ಮಾರ್ಕೆಟಿಂಗ್​ ಮಾಡಬಹುದು

ಇದಕ್ಕಾಗಿ ನೀವು ಈ ಪೋರ್ಟಲ್‌ಗಳಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಬೇಕು. ಆದರೆ ನೋಂದಾಯಿಸುವ ಮೊದಲು ಈ ಪೋರ್ಟಲ್‌ಗಳ ವಿಶ್ವಾಸಾರ್ಹತೆಯ ಬಗ್ಗೆ ತಿಳಿದುಕೊಳ್ಳಿ. ಜೊತೆಗೆ ನೀವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಟ್ವಿಟರ್‌ನಲ್ಲಿ ಡಿಜಿಟಲ್ ಹೋರ್ಡಿಂಗ್‌ಗಳನ್ನು ಮಾಡುವ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಜನರಿಂದ ಆನ್‌ಲೈನ್ ಆರ್ಡರ್‌ಗಳನ್ನು ಸಹ ತೆಗೆದುಕೊಳ್ಳಬಹುದು.

ಗ್ರಾಮೀಣ ಭಾಗದವರಿಗೂ ಇದೆ ಸೂಪರ್​ ಬ್ಯುಸಿನೆಸ್​ ಐಡಿಯಾ

ನೀವು ಗ್ರಾಮೀಣ ಭಾಗದವರಾಗಿದ್ದು ಸಣ್ಣ ಹೂಡಿಕೆಯ(small investment) ಆಯ್ಕೆಗಳನ್ನು ಹುಡುಕುತ್ತಿದ್ದರೆ ಈ ಸುದ್ದಿ ನಿಮಗಾಗಿ. ನಾವು ನಿಮಗೆ ಅದ್ಭುತವಾದ ವ್ಯವಹಾರ ಕಲ್ಪನೆಯ (Business Idea) ಬಗ್ಗೆ ಹೇಳುತ್ತಿದ್ದೇವೆ. ಇದರ ಮೂಲಕ ನೀವು ಪ್ರತಿ ತಿಂಗಳು 2 ಲಕ್ಷ ರೂ.ವರೆಗೆ ಗಳಿಸಬಹುದು. ಇಷ್ಟು ಮಾತ್ರವಲ್ಲದೆ ಸರ್ಕಾರವೂ ಇದಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ. ನಾವು ಮಾತನಾಡುತ್ತಿರುವ ವಿಚಾರವೆಂದರೆ ಮೇಕೆ ಸಾಕಾಣಿಕೆ(Goat farming). ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಹೆಚ್ಚಿನ ವ್ಯವಸ್ಥೆ ಅಗತ್ಯವಿಲ್ಲ, ತುಂಬಾ ಸುಲಭ. ಈ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರವು ನಿಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ ಹರಿಯಾಣ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಪಶುಸಂಗೋಪನೆಯನ್ನು ಉತ್ತೇಜಿಸಲು ಮತ್ತು ಸ್ವಯಂ ಉದ್ಯೋಗವನ್ನು ಅಳವಡಿಸಿಕೊಳ್ಳಲು, ಜಾನುವಾರು ಮಾಲೀಕರಿಗೆ ಶೇಕಡಾ 90 ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ರೀತಿ ನಿಮಗೆ ಸರ್ಕಾರದಿಂದ ಸಾಕಷ್ಟು ಸಹಾಯ ಸಿಗುತ್ತದೆ.
Published by:Kavya V
First published: