• Home
 • »
 • News
 • »
 • business
 • »
 • Egg Price Hike: ಮತ್ತೆ ತಟ್ಟಿದ ಬೆಲೆ ಏರಿಕೆ ಬಿಸಿ: ಬೆಂಗಳೂರಿನಲ್ಲಿ ಇನ್ಮುಂದೆ ಮೊಟ್ಟೆ ದುಬಾರಿ!

Egg Price Hike: ಮತ್ತೆ ತಟ್ಟಿದ ಬೆಲೆ ಏರಿಕೆ ಬಿಸಿ: ಬೆಂಗಳೂರಿನಲ್ಲಿ ಇನ್ಮುಂದೆ ಮೊಟ್ಟೆ ದುಬಾರಿ!

ಮೊಟ್ಟೆಯ ಬೆಲೆ ಏರಿಕೆ

ಮೊಟ್ಟೆಯ ಬೆಲೆ ಏರಿಕೆ

ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ. ಕಳೆದ ವರ್ಷ 100 ಮೊಟ್ಟೆಗಳ ಒಂದು ಬ್ಯಾಚ್‌ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 575 ರೂಪಾಯಿಗೆ ಏರಿಕೆ ಆಗಿದೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore, India
 • Share this:

ಬೆಂಗಳೂರು: ಮೊಟ್ಟೆ (Egg) ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ, ಬಹುತೇಕರು ಮೊಟ್ಟೆ ತಿನ್ನೋರೆ. ಸಸ್ಯಾಹಾರಿಗಳೂ (Vegetarians) ಮೊಟ್ಟೆ ತಿನ್ನಬಹುದು ಎಂದು ವೈಜ್ಞಾನಿಕ ಅಭಿಪ್ರಾಯ ಸೃಷ್ಟಿಯಾದ ಮೇಲೆ ಮೊಟ್ಟೆ ತಿನ್ನೋರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯ ರಾಜಧಾನಿ ಬೆಂಗಳೂರು (Bengaluru) ನಗರವೊಂದರಲ್ಲೇ ಮೊಟ್ಟೆಯಿಂದ ಕೋಟ್ಯಂತರ ರೂಪಾಯಿ (Egg Business) ವಹಿವಾಟು ಪ್ರತಿನಿತ್ಯ ನಡೆಯುತ್ತದೆ. ಅಂತಹದ್ದರಲ್ಲಿ ಮೊಟ್ಟೆಗೂ ಈಗ ಬೆಲೆ ಏರಿಕೆಯ (Egg Price Hike) ಬಿಸಿ ತಟ್ಟಿದೆ.


ಹೌದು, ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ. 2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‌ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ (2022) ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‌ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್‌ಗೆ ಬರೋಬ್ಬರಿ 575 ರೂಪಾಯಿ ಆಗಿದೆ.


ಇದನ್ನೂ ಓದಿ: Eggs Prices: ದೇಶದಲ್ಲಿ ಮೊಟ್ಟೆ ಬೆಲೆ ಏರಿಕೆಗೆ ಅಸಲಿ ಕಾರಣವೇನು?


ಮೊಟ್ಟೆ ಖಾದ್ಯಗಳ ಬೆಲೆಯೂ ಏರಿಕೆ ಸಾಧ್ಯತೆ!


ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆ ಆದ ಪರಿಣಾಮ ಮೊಟ್ಟೆಯ ಬೆಲೆ ಏರಿಕೆ ಆಗಿರುವುದರಿಂದ ಅತ್ತ ಮೊಟ್ಟೆಯಿಂದ ಮಾಡುವ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ. ಸದ್ಯ ವ್ಯಾಪಾರಿಗಳಿಗೆ ಒಂದು ಮೊಟ್ಟೆಗೆ 5.75 ರೂಪಾಯಿಯಂತೆ ಹೋಲ್ ಸೇಲ್ ದರ ನಿಗದಿ ಪಡಿಸಲಾಗಿದ್ದು, ಗ್ರಾಹಕರಿಗೆ 6 ರೂಪಾಯಿಂದ 7 ರೂಪಾಯಿಗೆ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ.


ರಾಜ್ಯಕ್ಕೂ ವಿಸ್ತರಿಸುತ್ತಾ ಬೆಲೆ ಏರಿಕೆ?


ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಏರಿಕೆ ಆಗಿದ್ದು, ಇದು ಇಲ್ಲಿಗೆ ಮಾತ್ರ ಸೀಮಿತವಾಗಿರದೆ ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಸಾಧ್ಯತೆ ಹೇರಳವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮೊಟ್ಟೆ ಬ್ಯುಸಿನೆಸ್ ಮಾಡ್ತಿರುವುದರಿಂದ ಒಂದು ಕಡೆ ಉತ್ಪನ್ನವಾದ ಮೊಟ್ಟೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ರಫ್ತಾಗುತ್ತದೆ. ಹೀಗಾಗಿ ಸಹಜವಾಗಿಯೇ ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ಮೊಟ್ಟೆ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಇದರಿಂದ ಜನ ಸಾಮಾನ್ಯರು ಕೈ ಸುಟ್ಟುಕೊಳ್ಳೋದರಲ್ಲಿ ಯಾವುದೇ ಅನುಮಾನವಿಲ್ಲ.


ಇದನ್ನೂ ಓದಿ:Onion Prices: ಕಣ್ಣೀರು ತರಿಸಲಿದೆ ಈರುಳ್ಳಿ; ದೀಪಾವಳಿ ನಂತರ ಮತ್ತೆ ಬೆಲೆ ಏರಿಕೆ?


ಬೆಲೆ ಏರಿಕೆಯಿಂದ ಕಂಗಲಾಗಿದ್ದಾರೆ ಜನಸಾಮಾನ್ಯರು!


ಅಂದ ಹಾಗೆ ದಿನ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಆಗ್ತಿರೋದು ಇದೇ ಮೊದಲೇನಲ್ಲ, ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಬೇಕಾಬಿಟ್ಟಿಯಾಗಿ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆಯಾಗುತ್ತಿದ್ದು, ಅಕ್ಕಿ, ಅಡುಗೆ ಎಣ್ಣೆ, ತೈಲ ಬೆಲೆ, ಗ್ಯಾಸ್, ಅಡುಗೆ ಸಾಮಾನು ಸೇರಿದಂತೆ ವಿವಿಧ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದೀಗ ಮೊಟ್ಟೆ ಬೆಲೆ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.ಹೊರಗಡೆ ಆಹಾರ ತಿನ್ನೋರಿಗೆ ಬೆಲೆ ಏರಿಕೆಯ ಬಿಸಿ


ಬೆಂಗಳೂರು ನಗರವೊಂದರಲ್ಲೇ ಒಂದು ಕೋಟಿಗೂ ಹೆಚ್ಚು ಜನ ಇದ್ದಾರೆ. ಹೊರ ಜಿಲ್ಲೆ, ಹೊರ ರಾಜ್ಯ, ಹೊರ ದೇಶ ಸೇರಿದಂತೆ ಉದ್ಯೋಗ, ಶಿಕ್ಷಣ ಇನ್ನಿತರ ಕಾರಣಗಳಿಗಾಗಿ ಬೆಂಗಳೂರಿನಲ್ಲಿ ಬಂದು ನೆಲೆಸಿರುವವರ ಸಂಖ್ಯೆ ಬೆಂಗಳೂರಿನ ಮೂಲ ನಿವಾಸಿಗಳ ಸಂಖ್ಯೆಗಿಂತ ಹೆಚ್ಚಿದೆ. ಹೀಗಾಗಿ ಹೋಟೆಲ್, ಫುಟ್‌ಪಾತ್ ಸೇರಿದಂತೆ ಹೊರಗಡೆ ಆಹಾರಗಳನ್ನು ಸೇವಿಸುವವರ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಸೇರಿದಂತೆ ಮೂರು ಹೊತ್ತುಗಳಲ್ಲೂ ಹೋಟೆಲ್ ತಿಂಡಿಗಳಿಗೆ ಅವಲಂಬಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಮೊಟ್ಟೆ ಬೆಲೆ ಏರಿಕೆಯಿಂದಾಗಿ ದಿನ ನಿತ್ಯ ಹೊರಗಡೆ ಆಹಾರ ಸೇವಿಸುವವರಿಗೆ, ವಿಶೇಷವಾಗಿ ಮೊಟ್ಟೆ ತಿನ್ನೋರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

Published by:Avinash K
First published: