• Home
  • »
  • News
  • »
  • business
  • »
  • Bike Mileage: ಈ ಸ್ಪೀಡ್​ನಲ್ಲಿ ನಿಮ್ಮ ಬೈಕ್​ ಓಡಿಸಿದ್ರೆ ಬೆಸ್ಟ್​ ಮೈಲೇಜ್​ ಬರುತ್ತಂತೆ, ಟ್ರೈ ಮಾಡಿ ನೋಡಿ!

Bike Mileage: ಈ ಸ್ಪೀಡ್​ನಲ್ಲಿ ನಿಮ್ಮ ಬೈಕ್​ ಓಡಿಸಿದ್ರೆ ಬೆಸ್ಟ್​ ಮೈಲೇಜ್​ ಬರುತ್ತಂತೆ, ಟ್ರೈ ಮಾಡಿ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಜನರು ತಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳತ್ತಿದ್ದಾರೆ. ಆದಾಗ್ಯೂ, ಬೈಕಿನ ಮೈಲೇಜ್ ಅದನ್ನು ಚಾಲನೆ ಮಾಡುವ ವಿಧಾನವನ್ನು ಅವಲಂಬಿಸಿರುತ್ತದೆ.

  • Share this:

ಯಾವುದೇ ಹೊಸ ಬೈಕ್ (New Bike)  ಮಾರುಕಟ್ಟೆಗೆ ಬಂದರೆ ಮೊದಲು ಕೇಳುವುದು ಮೈಲೇಜ್ (Mileage)​ ಎಷ್ಟು ಅಂತ. ಯಾವುದೇ ವಾಹನ ಕೊಂಡುಕೊಳ್ಳುವ ಮೊದಲು ಎಲ್ಲರೂ ಮೈಲೇಜ್​ ಬಗ್ಗೆ ಯೋಚನೆ ಮಾಡುತ್ತಾರೆ. ಪೆಟ್ರೋಲ್​ ಬೆಲೆ ಮೊದಲೇ ಗಗನಕ್ಕೇರಿದೆ. ಅದರಲ್ಲೂ ಬೆಂಗಳೂರು (Bengaluru) ಸಿಟಿಯಲ್ಲಿ ಒಂದು ಮನೆಗೆ ಕಡಿಮೆ ಅಂದರೂ ಎರಡು ದ್ವಿಚಕ್ರ ವಾಹನ (Two Wheeler Vehicle) ಇರುತ್ತೆ. ಎರಡು ಗಾಡಿಗೆ ಪೆಟ್ರೋಲ್ (Petrol) ಹಾಕಿಸಿ ಓಡಿಸುವುದು ಅಂದರೆ ಸುಲಭದ ಮಾತಲ್ಲ. ಹೀಗಾಗಿ  ವಾಹನ ಖರಿದೀಸುವ ಮುನ್ನ ಮೆಲೇಜ್​ ಎಷ್ಟು ಕೊಡುತ್ತೆ ಅನ್ನೋದನ್ನು ತಿಳಿದುಕೊಂಡಿರಬೇಕು. ಇತ್ತೀಚೆಗೆ ಜನರು ತಮ್ಮ ಬೈಕ್ (Bike) ಮತ್ತು ಸ್ಕೂಟರ್‌ (Scooter) ಗಳ ಮೈಲೇಜ್ ಬಗ್ಗೆ ತುಂಬಾ ಯೋಚನೆ ಮಾಡುವಂತಾಗಿದೆ.


ಬೈಕ್​ ಮೆಲೇಜ್​ ಹೆಚ್ಚಿಸಿಕೊಳ್ಳೋದು ಹೇಗೆ?


ಅನೇಕ ಜನರು ತಮ್ಮ ಬೈಕಿನ ಮೈಲೇಜ್ ಹೆಚ್ಚಿಸಲು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳತ್ತಿದ್ದಾರೆ. ಆದಾಗ್ಯೂ, ಬೈಕಿನ ಮೈಲೇಜ್ ಅದನ್ನು ಚಾಲನೆ ಮಾಡುವ ವಿಧಾನವನ್ನು ಅವಲಂಬಿಸಿರುತ್ತದೆ. ನೀವು ಹೇಗೆ ದೇಹಕ್ಕೆ ಸರಿಯಾದ ಆಹಾರ ಕೊಟ್ಟರೆ, ನಿಯಮಿತವಾಗಿ ದೇಹ ದಂಡಿಸಿದರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತೋ, ಹಾಗೇ ನಿಮ್ಮ ಬೈಕ್​ನ  ನೀವು ಹೇಗೆ ಚಲಾಯಿಸುತ್ತೀರಾ ಅದರ ಮೇಲೆ ಮೆಲೇಜ್​ ಡಿಪೆಂಡ್​ ಆಗಿರುತ್ತೆ.


ಮೆಲೇಜ್​ ಜಾಸ್ತಿ ಬೇಕು ಅಂದ್ರೆ ಹೀಗ್​ ಮಾಡಿ!


ಉತ್ತಮ ಮೈಲೇಜ್ ಪಡೆಯಲು ಬೈಕ್ ಅನ್ನು ಯಾವ ವೇಗ ಅಥವಾ ಆರ್‌ಪಿಎಂನಲ್ಲಿ ಓಡಿಸಬೇಕು ಅಂತ ಎಲ್ಲರಿಗೂ ಗೊತ್ತಿರಲ್ಲ. ಸುಮ್ನೆ ಗಾಡಿಯನ್ನು ಅವರಿಷ್ಟ ಬಂದ ಹಾಗೇ ಓಡಿಸುತ್ತಾರೆ. ಹೀಗೆ ಆದಾಗ ಬೈಕ್​ನಲ್ಲಿ ಸಾಕಷ್ಟು ಪ್ರಾಬ್ಲಂ ಕಾಣಿಸಿಕೊಳ್ಳುತ್ತದೆ. ಇಲ್ಲಿ ನಿಮ್ಮ ಬೈಕ್​ ಯಾವ ಸ್ಪೀಡ್​ನಲ್ಲಿ ಓಡಿಸಿದರೆ, ಮೈಲೇಜ್​ ಚೆನ್ನಾಗಿ ಬರುತ್ತೆ ಅಂತ ಹೇಳಿದ್ದೇವೆ.


ಆರ್​ಪಿಎಮ್​ ಹೆಚ್ಚಾದಷ್ಟು ಮೈಲೇಜ್ ಕಡಿಮೆ!


ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೈಕ್‌ಗಳು ವೇಗದ ಜೊತೆಗೆ ಆರ್‌ಪಿಎಂ ಮೀಟರ್ ಪಡೆಯುತ್ತಿವೆ. 1 ನಿಮಿಷದಲ್ಲಿ ಯಾಂತ್ರಿಕ ಘಟಕವು ಅದರ ಅಕ್ಷದ ಮೇಲೆ ಎಷ್ಟು ಬಾರಿ ತಿರುಗುತ್ತದೆ ಎಂಬುದನ್ನು RPM ಹೇಳುತ್ತದೆ. ನಿಮ್ಮ ಬೈಕಿನ ವೇಗ ಹೆಚ್ಚಿದಷ್ಟೂ ಅದರ ಆರ್‌ಪಿಎಂ ವೇಗ ಹೆಚ್ಚುತ್ತದೆ. ಸಾಮಾನ್ಯವಾಗಿ ಬೈಕ್‌ಗಳಲ್ಲಿ 1000 ರಿಂದ 10,000 ಆರ್‌ಪಿಎಂ ಬರೆಯಲಾಗುತ್ತದೆ.


ನೀವು ಬೈಕ್ ಅನ್ನು ವೇಗವಾಗಿ ಓಡಿಸಿದಾಗ, ಬೈಕ್‌ನ ಆರ್‌ಪಿಎಂ ಕೂಡ ಹೆಚ್ಚಾಗುತ್ತದೆ. ಹೆಚ್ಚಿನ ಆರ್‌ಪಿಎಂ ಎಂದರೆ ಬೈಕ್ ಹೆಚ್ಚು ಪವರ್ ಬಳಸುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಬೈಕು ಹೆಚ್ಚು ಇಂಧನವನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಮೈಲೇಜ್ ಕಡಿಮೆಯಾಗಲು ಪ್ರಾರಂಭಿಸುತ್ತದೆ. ನೀವು ಬೈಕ್‌ನಿಂದ ಉತ್ತಮ ಮೈಲೇಜ್ ಪಡೆಯಲು ಬಯಸಿದರೆ, ಅದನ್ನು 1500 ರಿಂದ 3500 ಆರ್‌ಪಿಎಂ ನಡುವೆ ಚಲಾಯಿಸಿ.


60ರಿಂದ 70 ಸ್ಪೀಡ್​ನಲ್ಲಿ ಬೈಕ್ ಓಡಿಸಿ!


ಹೌದು, ನೀವು ನಿಮ್ಮ ಬೈಕನ್ನು ಒಂದೇ ರೀತಿಯ ಸ್ಪೀಡ್​ನಲ್ಲಿ ಓಡಿಸಬೇಕು. ಇಂದು ತುಂಬಾ ಸ್ಲೋ ಸ್ಪೀಡ್​ನಲ್ಲಿ ಓಡಿಸಿ, ನಾಳೆ ಮನಸೋ ಇಚ್ಛೆ ಓಡಿಸಿದರೆ ಮೈಲೇಜ್​ ಕಡಿಮೆಯಾಗುತ್ತೆ. ಇಂಜಿನ್​ಗೂ ಕೂಡ ಪೆಟ್ಟು ಬೀಳುತ್ತೆ. ಪ್ರತಿದಿನ 60 ರಿಂದ 70 ಸ್ಪೀಡ್​ನಲ್ಲಿ ಓಡಿಸಿದರೆ, ದೀರ್ಘಕಾಲದವರೆಗೂ ಮೈಲೇಜ್​ ಚೆನ್ನಾಗಿ ಬರುತ್ತದೆ.


ಸ್ಮೂತ್​ ಆಗಿ ಗೇರ್ ಶಿಫ್ಟ್​ ಮಾಡಿ!


ಮೊಪೆಡ್​ಗಳನ್ನು ನೀವು 60 ರಿಂದ 70 ಸ್ಫೀಡ್​ನಲ್ಲಿ ಓಡಿಸಿದರೆ ಒಳ್ಳೆ ಮೈಲೇಜ್​ ಬರುತ್ತೆ. ಬೈಕ್​ ವಿಚಾರಕ್ಕೆ ಬಂದರೆ, ಸ್ಪೀಡ್​ಗೆ ಅನುಗುಣವಾಗಿ ನಿಮ್ಮ ಗೇರ್​ ಚೇಂಜ್​ ಮಾಡಬೇಕಾಗುತ್ತದೆ. ಒಂದೇ ಗೇರ್​ನಲ್ಲಿ ತುಂಬಾ ಹೊತ್ತು ಹೋಗಿ ನಂತರ ಗೇರ್​ ಚೇಂಜ್ ಮಾಡಿ ಮತ್ತೆ ಹೆಚ್ಚು ಹೊತ್ತು ಹೀಗೆ ಮಾಡಿದರೆ ನಿಮ್ಮ  ಮೈಲೇಜ್​ ಕಡಿಮೆಯಾಗುತ್ತದೆ.

Published by:ವಾಸುದೇವ್ ಎಂ
First published: