• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Eris Lifesciences: ಡಾ. ರೆಡ್ಡಿಸ್​ಯಿಂದ ಬರೋಬ್ಬರಿ 275 ಕೋಟಿಗೆ ಕಾಸ್ಮೆಟಿಕ್ ಡರ್ಮಟಾಲಜಿ ಬ್ರ್ಯಾಂಡ್‌ಗಳನ್ನು ಸೇಲ್‌

Eris Lifesciences: ಡಾ. ರೆಡ್ಡಿಸ್​ಯಿಂದ ಬರೋಬ್ಬರಿ 275 ಕೋಟಿಗೆ ಕಾಸ್ಮೆಟಿಕ್ ಡರ್ಮಟಾಲಜಿ ಬ್ರ್ಯಾಂಡ್‌ಗಳನ್ನು ಸೇಲ್‌

ಡಾ. ರೆಡ್ಡಿಸ್

ಡಾ. ರೆಡ್ಡಿಸ್

ನಗದು ರೂಪದಲ್ಲಿ ಪಾವತಿಸಬೇಕಾದ ಒಪ್ಪಂದವು ಮಾರ್ಚ್ 31 ಅಥವಾ ಅದಕ್ಕಿಂತ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎರಿಸ್ ಲೈಫ್ ಸೈನ್ಸಸ್ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.

  • Share this:

ಫಾರ್ಮಸಿ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ. ರೆಡ್ಡಿಸ್ (Dr Reddy's) ಮತ್ತು ಎರಿಸ್ ಲೈಫ್ ಸೈನ್ಸಸ್ ಲಿಮಿಟೆಡ್ (Eris Lifesciences) ನಡುವೆ ಮೆಗಾ ಡೀಲ್‌ ನಡೆದಿದೆ. ಡಾ. ರೆಡ್ಡಿಸ್ ತನ್ನ ಒಂಭತ್ತು ಕಾಸ್ಮೆಟಿಕ್ ಡರ್ಮಟಾಲಜಿ ಬ್ರ್ಯಾಂಡ್‌ಗಳನ್ನು (Cosmetic Dermatology Brand) ಎರಿಸ್ ಲೈಫ್ ಸೈನ್ಸಸ್‌ಗೆ 275 ಕೋಟಿ ರೂ.ಗೆ ಮಾರಾಟ ಮಾಡಿದೆ. ಇತ್ತ ಕಾಸ್ಮೆಟಿಕ್ ಡರ್ಮಟಾಲಜಿ (Cosmetic Dermatology) ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್‌ನಿಂದ ₹ 275 ಕೋಟಿಗೆ ಒಂಭತ್ತು ಚರ್ಮಕ್ಕೆ ಸಂಬಂಧಿಸಿದ ಬ್ರ್ಯಾಂಡ್‌ಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಭಾರತೀಯ ಔಷಧ ತಯಾರಕ ಎರಿಸ್ ಲೈಫ್ ಸೈನ್ಸಸ್ ಲಿಮಿಟೆಡ್ ಹೇಳಿದೆ. ಎರಡೂ ಕಂಪನಿಗಳು ಈ ಬಗ್ಗೆ ಗುರುವಾರ ಸ್ಪಷ್ಟನೆ ನೀಡಿವೆ.


ಮಾರ್ಚ್ 31 ರೊಳಗೆ ಒಪ್ಪಂದ ಪೂರ್ಣ


ನಗದು ರೂಪದಲ್ಲಿ ಪಾವತಿಸಬೇಕಾದ ಒಪ್ಪಂದವು ಮಾರ್ಚ್ 31 ಅಥವಾ ಅದಕ್ಕಿಂತ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎರಿಸ್ ಲೈಫ್ ಸೈನ್ಸಸ್ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.


ಡಾ. ರೆಡ್ಡಿಸ್


ಎರಿಸ್ ಲೈಫ್ ಸೈನ್ಸಸ್ ವತಿಯಿಂದ ದೊಡ್ಡ ಸ್ವಾಧೀನ


ಜನವರಿಯಲ್ಲಿ, ಎರಿಸ್ ಲೈಫ್‌ಸೈನ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎರಿಸ್ ಓಕ್ನೆಟ್ ಹೆಲ್ತ್‌ಕೇರ್ ಆಂಟಿಫಂಗಲ್ ಮತ್ತು ಆಂಟಿ-ಸೋರಿಯಾಸಿಸ್ ವಿಭಾಗಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ಗ್ಲೆನ್‌ಮಾರ್ಕ್ ಫಾರ್ಮಾದ ಡರ್ಮಟಾಲಜಿ ಪೋರ್ಟ್‌ಫೋಲಿಯೊದ ಒಂಬತ್ತು ಬ್ರಾಂಡ್‌ಗಳನ್ನು ₹340 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತು. ಆದಾದ ನಂತರ ಈಗ ಅಧಿಕೃತವಾಗಿ ಡಾ. ರೆಡ್ಡಿಸ್‌ ಫಾರ್ಮಸಿಯಿಂದ ದೊಡ್ಡ ವಹಿವಾಟನ್ನು ನಡೆಸಿದೆ. ಡಾ. ರೆಡ್ಡಿಸ್‌ ಉತ್ಪನ್ನಗಳ ಮೂಲಕ ಕಂಪನಿಯ ಕಾಸ್ಮೆಟಿಕ್ ಡರ್ಮಟಾಲಜಿ ವ್ಯವಹಾರವನ್ನು ಹೆಚ್ಚಿಸಲು ಮತ್ತು ವಿಸ್ತರಿಸಲು ವಹಿವಾಟು ಸಹಾಯ ಮಾಡುತ್ತದೆ ಎಂದು ಎರಿಸ್ ಲೈಫ್‌ಸೈನ್ಸ್‌ನ ಸಂಸ್ಥಾಪಕ ಎರಿಸ್ ಹೇಳಿದರು.


“ಭಾರತ ನಮಗೆ ಕೇಂದ್ರೀಕೃತ ಮಾರುಕಟ್ಟೆಯಾಗಿದೆ. ನಾವು ಭಾರತದಲ್ಲಿ ಟಾಪ್‌ 5 ರೊಳಗೆ ಪ್ರವೇಶಿಸಲು ಬಯಸುತ್ತಿದ್ದೇವೆ" ಎಂದು ಬ್ರಾಂಡೆಡ್ ಮಾರ್ಕೆಟ್ಸ್ ಸಿಇಒ ಎಂ.ವಿ.ರಮಣ ಹೇಳಿದರು. "ಸಾವಯವವಾಗಿ ಬೆಳೆಯುತ್ತಿರುವ ಬ್ರ್ಯಾಂಡ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ ನಾನ್-ಕೋರ್ ಬ್ರ್ಯಾಂಡ್‌ಗಳ ವಿನಿಯೋಗವನ್ನು ಒಳಗೊಂಡಿರುತ್ತದೆ. ಈ ಒಪ್ಪಂದವು ನಮ್ಮ ಉದ್ಯಮವನ್ನು ಮತ್ತಷ್ಟು ಸುಧಾರಿಸುವ ಮಹತ್ವದ ಹೆಜ್ಜೆಯಾಗಿದೆ" ಎಂದು ರಮಣ ಈ ಬಗ್ಗೆ ತಿಳಿಸಿದರು.


ಸಾಂದರ್ಭಿಕ ಚಿತ್ರ


ಎರಿಸ್‌ಗೆ ಆದಾಯದ ಮೂಲವಾಗಲಿದೆ ಈ ಡೀಲ್


ಈ ಮಹತ್ವದ ಒಪ್ಪಂದದ ಬಗ್ಗೆ ವಿಶ್ಲೇಷಿಸಿದ ಮಾರುಕಟ್ಟೆ ತಜ್ಞರು ಎರಿಸ್‌ ಮತ್ತು ರೆಡ್ಡಿಸ್‌ ನಡುವೆ ನಡೆದ ಡೀಲ್‌ ಮಾರುಕಟ್ಟೆ ಪಾಲನ್ನು 2.8 ಪ್ರತಿಶತದಿಂದ 4.6 ಪ್ರತಿಶತಕ್ಕೆ ಹೆಚ್ಚಿಸುತ್ತದೆ. ಒಪ್ಪಂದ ಪೂರ್ಣಗೊಂಡ ನಂತರ, ಎರಿಸ್‌ 7.6 ಪ್ರತಿಶತದಿಂದ 12.7 ಪ್ರತಿಶತಕ್ಕೆ ಆದಾಯವನ್ನು ನಿರೀಕ್ಷಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಲಾಭದ ಹಾದಿಯಲ್ಲಿರುವ ಲ್ಯಾಬೊರೇಟರೀಸ್‌ಗಳು


ಕಳೆದ ವರ್ಷ ಎರಡೂ ಲ್ಯಾಬೊರೇಟರೀಸ್ ಲಿಮಿಟೆಡ್‌ಗಳು ಲಾಭದ ಹಾದಿಯಲ್ಲಿ ಸಾಗಿದ್ದವು. ಡಿಸೆಂಬರ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹1,247 ಕ್ಕೆ 76.5 ರಷ್ಟು ಕ್ರೋಢೀಕೃತ ನಿವ್ವಳ ಲಾಭದ ಏರಿಕೆಯನ್ನು ಡಾ ರೆಡ್ಡಿಸ್ ಲ್ಯಾಬೊರೇಟರೀಸ್ ವರದಿ ಮಾಡಿತ್ತು. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು ₹ 6770 ಕೋಟಿ ತಲುಪುವ ಮೂಲಕ 27% ಆದಾಯದಲ್ಲಿ ಏರಿಕೆ ಕಂಡಿದೆ. ಇತ್ತೀಚೆಗೆ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸೋಮವಾರ ಡಾ ರೆಡ್ಡಿಸ್ ಲ್ಯಾಬೊರೇಟರೀಸ್‌ನಲ್ಲಿ ತನ್ನ ಷೇರುಗಳನ್ನು ಶೇ.5.005ರಿಂದ ಶೇ.7.278ಕ್ಕೆ ಏರಿಸುವ ಮೂಲಕ ಶೇ 2 ರಷ್ಟು ಹೆಚ್ಚಿಸಿದೆ ಎಂದು ಹೇಳಿದೆ.




ಇದನ್ನೂ ಓದಿ: Career in Pharmacy: ಫಾರ್ಮಸಿ ಒಂದು ಎವರ್​ಗ್ರೀನ್​ ವೃತ್ತಿ: ಎಂದಿಗೂ ಉದ್ಯೋಗ ಕೊರತೆಯೇ ಬರಲ್ಲ


ಇತ್ತ ಎರಿಸ್ ಲೈಫ್ ಸೈನ್ಸಸ್ ಕೂಡ ತನ್ನ ಮೂರನೇ ತ್ರೈಮಾಸಿಕದಲ್ಲಿ ₹1.01 ಶತಕೋಟಿಯಿಂದ ₹1.02 ಬಿಲಿಯನ್ ನಿವ್ವಳ ಲಾಭವನ್ನು ವರದಿ ಮಾಡಿದೆ. ಡಾ. ರೆಡ್ಡಿಸ್ ಮತ್ತು ಎರಿಸ್ ಲೈಫ್ ಸೈನ್ಸಸ್ ಲ್ಯಾಬೊರೇಟರೀಸ್‌ ನಡುವೆ ನಡೆದ ಈ ವಹಿವಾಟು ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ಗುರುವಾರ, ಡಾ. ರೆಡ್ಡಿಸ್ ಲ್ಯಾಬೊರೇಟರೀಸ್‌ನ ಸ್ಕ್ರಿಪ್ ಬಿಎಸ್‌ಇಯಲ್ಲಿ 0.43 ಕಡಿಮೆಯಾಗಿ ₹4,377.75 ಕ್ಕೆ ಕೊನೆಗೊಂಡರೆ, ಎರಿಸ್ ಲೈಫ್ ಸೈನ್ಸಸ್ ಬಿಎಸ್‌ಇಯಲ್ಲಿ 0.84 ಇಳಿಕೆಯಾಗಿ ₹586.15 ಕ್ಕೆ ಕೊನೆಗೊಂಡಿತು,

top videos
    First published: