Donkey Milk Business: ಕತ್ತೆ ಹಾಲಿನಿಂದ ಕೋಟ್ಯಾಧಿಪತಿ ಆದ ಯುವಕ! ಕತ್ತೆ ಎಂದು ಮೂದಲಿಸುವ ಮುನ್ನ ಎಚ್ಚರ

Donkey Milk Rate: ಕೈಯಿಂದ ತಯಾರಿಸಿದ 130 ಗ್ರಾಂನ ಕತ್ತೆ ಹಾಲಿನ ಸಾಬೂನಿನ ಬೆಲೆ ಸೋಪ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ರೂ. 799 ಆಗಿದೆ! ಅಮೆರಿಕಾದಲ್ಲಿ ಇದನ್ನೇ ಖರೀದಿಸಬೇಕೆಂದರೆ 16.77 ಡಾಲರ್ ಅರ್ಥಾತ್ 1,299 ರೂ. ಪಾವತಿಸಿಬೇಕು!. ಈಗ ನೀವೇ ಹೇಳಿ, ಯಾರನ್ನಾದರೂ ಕತ್ತೆ ಎಂದು ಮೂದಲಿಸುವುದು ಸರಿಯೇ?!

ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ನ್ಯಾಶನಲ್ ಹೆರಾಲ್ಡ್)

ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ನ್ಯಾಶನಲ್ ಹೆರಾಲ್ಡ್)

  • Share this:
ಕೆಲವು ಪೋಷಕರು ಮಕ್ಕಳು ಶಾಲೆಗೆ ಹೋಗದಿದ್ದರೆ ಗದರಿಸುತ್ತಾರೆ. ನೀನು ಈಗ ಚೆನ್ನಾಗಿ ಓದದಿದ್ದರೆ ಕತ್ತೆಗಳ ಸಾಲಿಗೆ ಸೇರುತ್ತೀಯಾ! ನಿನಗೆ ಮುಂದೆ ಯಾರೂ ಕೆಲಸ (Job Opportunity) ಕೊಡಲ್ಲ, ಕರೆದು ಮಾತನ್ನೂ ಆಡಿಸುವುದಿಲ್ಲ ಎಂದು ಅಗತ್ಯಕ್ಕಿಂತ ಹೆಚ್ಚೇ ಪದಬಳಕೆ ಮಾಡುವ ಪೋಷಕರೂ ನಮ್ಮಲ್ಲಿದ್ದಾರೆ. ಆದರೆ ಇಲ್ಲೋರ್ವ ಯುವಕ  ಶಾಲೆ ಬಿಟ್ಟು ಕತ್ತೆಯ (Donkey Milk Business) ಮೂಲಕವೇ ಚೆನ್ನಾಗಿ ಓದಿದವರಿಗಿಂತ ಹೆಚ್ಚು ಹಣ ಗಳಿಕೆ (Money Earn) ಮಾಡುತ್ತಿದ್ದಾರೆ. ಈ ಯುವಕನ ಜೀವನ ಕತ್ತೆ ಎಂದು  ಮೂದಲಿಸುವವರಿಗೆ ಉತ್ತಮ ಪಾಠದಂತಿದೆ. ಹಾಗಾದರೆ ಈ ಯುವಕ ಯಾರು? ಅವರು ಕತ್ತೆಯ ಮೂಲಕ ಹೇಗೆ ಅಷ್ಟೊಂದು ಹಣ (Earn Money From Donkey) ಗಳಿಸುತ್ತಾರೆ? ಎಂಬ ಕುತೂಹಲ ಆಯಿತಲ್ಲ ನಿಮಗೆ? 

ಶಾಲೆ ಬಿಟ್ಟ ವನ್ನರಪೇಟ್‌ನ ಯು.ಬಾಬು ಅವರು ತಮಿಳುನಾಡಿನ ಮೊದಲ ಕತ್ತೆ ಸಾಕಣೆ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನ ಮೂಲದ ಸಂಸ್ಥೆಗೆ ಕೇವಲ ಒಂದು ಲೀಟರ್ ಕತ್ತೆ ಹಾಲನ್ನು ₹ 7,000 ಕ್ಕೆ ಮಾರಾಟ ಮಾಡುವ ಮೂಲಕ ಯಶಸ್ವಿ ಯುವ ಉದ್ಯಮಿ ಎನಿಸಿಕೊಂಡಿದ್ದಾರೆ.

ಕತ್ತೆ ಸಾಕಣೆ ಉದ್ಯಮ ಆರಂಭಿಸಲು ಏನು ಕಾರಣ?
ಪ್ರಥಮ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದರೂ ಬಾಬು ಅವರು ತಮ್ಮ ಅಧ್ಯಯನವನ್ನು ಅಲ್ಲಿಗೇ ಕೊನೆಗೊಳಿಸಲು ನಿರ್ಧರಿಸಿದರು.  ಇದೇ ವೇಳೆ ಇತ್ತ, ಅಂದರೆ ಬೆಂಗಳೂರಿನ ಸಂಸ್ಥೆಯೊಂದು ಪ್ರತಿ ತಿಂಗಳು 1,000 ಲೀಟರ್ ಕತ್ತೆ ಹಾಲನ್ನು ಪೂರೈಸುವ ವಿಶ್ವಾಸಾರ್ಹ ಮೂಲವನ್ನು ಹುಡುಕುತ್ತಿತ್ತು. ಈ ಮಾಹಿತಿಯನ್ನು ಅರಿತ ಬಾಬು ಅವರು ತಮ್ಮದೇ ಆದ ‘ಕತ್ತೆ ಸಾಕಣೆ’ಉದ್ಯಮ ಆರಂಭಿಸಲು ನಿರ್ಧರಿಸಿದರು. ತಿರುನಲ್ವೇಲಿ ಬಳಿ ಕತ್ತೆ ಸಾಕಣೆ ಆರಂಭಿಸುವ ವಿಚಾರವನ್ನು ಅವರು ತಮ್ಮ ಕುಟುಂಬಕ್ಕೆ ತಿಳಿಸಿದಾಗ ಅವರಿಗೆ ಯಾವ ರೀತಿಯ ಪ್ರತಿಕ್ರಿಯೆ ಸಿಕ್ಕಿರಬಹುದು ಎಂಬುದನ್ನು ನೀವೂ ಊಹಿಸಬಹುದು!

ತಮಿಳುನಾಡಿನಲ್ಲಿ ಇರುವ ಕತ್ತೆಗಳೆಷ್ಟು?
ಅಷ್ಟಕ್ಕೂ ತಮಿಳುನಾಡಿನಲ್ಲಿ ಕೇವಲ 2,000 ಕ್ಕಿಂತ ಕಡಿಮೆ ಕತ್ತೆಗಳಿವೆ. ಹಾಲು ನೀಡುವ ಕತ್ತೆ ಪ್ರತಿದಿನಕ್ಕೆ ಕೇವಲ 350 ಮಿಲೀ ಲೀಟರ್ ಹಾಲು ನೀಡಬಹುದು. ಅಷ್ಟೇ ಅಲ್ಲದೇ ಒಂದು ಕತ್ತೆ 6 ತಿಂಗಳುಗಳ ಕಾಲ ಮಾತ್ರ ಹಾಲು ನೀಡುತ್ತದೆ.

ಮನೆಯವರು ಒಪ್ಪಲಿಲ್ಲ!
ಕತ್ತೆ ಹಾಲಿನ ಬೇಡಿಕೆಯ ಬಗ್ಗೆ ವಿವರಿಸಲು ಪ್ರಯತ್ನಿಸಿದಾಗಲೂ ಅವರ ಪತ್ನಿ ಸೇರಿದಂತೆ ಯಾರೂ ಕತ್ತೆ ಸಾಕಣೆ ಉದ್ಯಮ ಆರಂಭಿಸಲು ಸಿದ್ಧರಿರಲಿಲ್ಲ. ಆದರೂ ಬಾಬು ಅವರು ಛಲ ಬಿಡಲಿಲ್ಲ. ಅವರ ಮಾತಲ್ಲೇ ಕತ್ತೆ ಸಾಕಣೆ ಉದ್ಯಮ ಆರಂಭದ ಕಥೆ ಕೇಳುವುದಾದರೆ "ನನ್ನ ಕುಟುಂಬದವರೇ ಒಪ್ಪದಿದ್ದರೂ ನನ್ನ ಪ್ರಯತ್ನಗಳು ಮುಂದುವರೆಯಿತು. ವೃದ್ಧಾಚಲಂ ಜಿಲ್ಲೆಯಿಂದ 10 ಮಿಲಿ ಕತ್ತೆ ಹಾಲನ್ನು ₹ 50ಕ್ಕೆ ಮಾರಾಟ ಮಾಡಲು ಅಲೆದಾಡುವ ಕೆಲವು ಜನರ ಪರಿಚಯ ನನಗಿತ್ತು. ಕತ್ತೆ ಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಅದ್ಭುತವಾಗಿ ಬಲಪಡಿಸುತ್ತದೆ ಎಂಬ ನಂಬಿಕೆಯಿದೆ.  ಪಟ್ಟು ಬಿಡದೇ ಕೊನೆಗೂ ಆರಂಭಿಸಿದ ನನ್ನ 17 ಎಕರೆಯ “ಕತ್ತೆಗಳ ಅರಮನೆ” 5 ಕತ್ತೆಗಳಿಂದ ಈಗ 100 ಕತ್ತೆಗಳವರೆಗೂ ವಿಸ್ತರಿಸಿದ್ದೇನೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಒಂದು ಕತ್ತೆ ಬೆಲೆ 1 ಲಕ್ಷ!
ಅವರ ಬಳಿ ಗುಜರಾತ್‌ನ ಹಲಾರಿ ಕತ್ತೆಗಳು, ಮಹಾರಾಷ್ಟ್ರದ ಕಥಿಯಾವಾಡಿ ಜೊತೆಗೆ ತಮಿಳುನಾಡು ಮೂಲದ ಕತ್ತೆ ತಳಿಗಳಿವೆ. "ದೇಶಿ ತಳಿಯ ಕತ್ತೆಯ ಬೆಲೆ ಸುಮಾರು ₹ 40,000 ಆಗಿದ್ದರೆ, ದಿನಕ್ಕೆ 1 ಲೀಟರ್ ಹಾಲು ನೀಡುವ ಹಲರಿಸ್ ತಳಿಯ ಒಂದು ಕತ್ತೆಗೆ ಸುಮಾರ 1 ಲಕ್ಷದವರೆಗೂ ಬೆಲೆಯಿದೆ" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Unused Bank Accounts: ಎಚ್ಚರ! ಬಳಕೆ ಮಾಡದ ಬ್ಯಾಂಕ್ ಅಕೌಂಟ್ ಇದೆಯೇ? ಬೇಗ ಈ ಕೆಲಸ ಮಾಡಿ

ಇದೇ ವೇಳೆ ಬಾಬು ಅವರು ನೂರು ಕತ್ತೆಗಳ ಫಾರ್ಮ್ ಆರಂಭಿಸಿದ್ದಾರೆ. ಕತ್ತೆಗಳು ಉತ್ಪಾದಿಸುವ ಹಾಲನ್ನು ಬೆಂಗಳೂರಿಗೆ ಮಾರಾಟಕ್ಕೆ ಕಳುಹಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಕತ್ತೆಯ ಹಾಲನ್ನು ಸೌಂದರ್ಯವರ್ಧಕಗಳು, ಸಾಬೂನುಗಳು, ಮುಖದ ಉತ್ಪನ್ನಗಳು ಮತ್ತು ಇತರ ಅನೇಕ ವಸ್ತುಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ. ಅವುಗಳನ್ನು ಭಾರತದಾದ್ಯಂತ ಮತ್ತು ವಿದೇಶಗಳಲ್ಲಿಯೂ ಮಾರಾಟಕ್ಕೆ ಕಳುಹಿಸಲಾಗುತ್ತದೆ.

ಕತ್ತೆ ಹಾಲು ಎದೆಹಾಲಿಗೆ ಸಮ!
"ಕತ್ತೆ ಹಾಲು ಅಪರೂಪದ ಔಷಧೀಯ ಗುಣಗಳನ್ನು ಹೊಂದಿದೆ. ಇದು ಎದೆ ಹಾಲಿಗೆ ಸಮಾನವಾದ ಪೋಷಕಾಂಶವನ್ನು ಹೊಂದಿದೆ. ಆದ್ದರಿಂದ ಪ್ರಪಂಚದಾದ್ಯಂತ ಕತ್ತೆಯ ಹಾಲಿಗೆ ಯಾವಾಗಲೂ ಬೇಡಿಕೆಯಿದೆ" ಎಂದು ಅವರು ತಮ್ಮ ಉದ್ಯಮದ ಕುರಿತು ಸಂತಸ ವ್ಯಕ್ತಪಡಿಸಿದರು.

ನಾನು ಯಾವ ಕಂಪನಿಗೂ ಸೇರಲ್ಲ!
ಬಾಬು ಅವರ ಕುಟುಂಬದ ಸದಸ್ಯರಲ್ಲೊಬ್ಬರಾದ ಜಿ.ಸಂತೋಷ್ ಅವರು ಕೊಯಮತ್ತೂರು ಸಮೀಪದ ಕೋವಿಲ್‌ಪಾಳ್ಯಂನಲ್ಲಿರುವ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಅವರು ಕಾಲೇಜು ವ್ಯಾಸಂಗದ ಜೊತೆ ಇತರರಂತೆ ಕತ್ತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. "ನಾನು ಯಾವುದೇ ಕಂಪನಿಗೆ ಸೇರಲು ಬಯಸುವುದಿಲ್ಲ.. ಬಾಬು ಅವರು ಸೂಚಿಸಿದಂತೆ ಕತ್ತೆ ಹಾಲಿನ ಉದ್ಯಮದ ಮಾರ್ಕೆಟಿಂಗ್ ವಿಭಾಗವನ್ನು ನೋಡಿಕೊಳ್ಳುವ ಮೂಲಕ ನಾನು ಈ ಸಾಹಸದ ಭಾಗವಾಗಲು ಬಯಸುತ್ತೇನೆ" ಎಂದು ಸಂತೋಷ್ ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ IKEA ಮಳಿಗೆ! ಯಾವಾಗ ಶುರುವಾಗುತ್ತೆ? ಏನೆಲ್ಲ ಸಿಗುತ್ತೆ?

ಕತ್ತೆ ಹಾಲಿನ ಬೆಲೆ ಕೇಳಿದಿರಾ?
ಶೇಕಡಾ 99 ಕ್ಕಿಂತ ಹೆಚ್ಚು TFM (ಒಟ್ಟು ಕೊಬ್ಬಿನ ಅಂಶ) ಹೊಂದಿರುವ ಕತ್ತೆ ಹಾಲನ್ನು ಶೈತ್ಯೀಕರಿಸಲಾಗುತ್ತದೆ. ಸ್ನಾನದ ಸಾಬೂನುಗಳು, ಚರ್ಮ ಮತ್ತು ಕೂದಲಿನ ಆರೈಕೆಗಾಗಿ ಲೋಷನ್‌ಗಳು, ಕ್ರೀಮ್ ಇತ್ಯಾದಿ ಸೇರಿದಂತೆ ಸೌಂದರ್ಯವರ್ಧಕಗಳನ್ನು ತಯಾರಿಸಲು ಬೆಂಗಳೂರಿಗೆ ಕಳುಹಿಸಲಾಗುತ್ತದೆ.  ಕೈಯಿಂದ ತಯಾರಿಸಿದ 130 ಗ್ರಾಂನ ಕತ್ತೆ ಹಾಲಿನ ಸಾಬೂನಿನ ಬೆಲೆ ಸೋಪ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ರೂ. 799 ಆಗಿದೆ! ಅಮೆರಿಕಾದಲ್ಲಿ ಇದನ್ನೇ ಖರೀದಿಸಬೇಕೆಂದರೆ 16.77 ಡಾಲರ್ ಅರ್ಥಾತ್ 1,299 ರೂ. ಪಾವತಿಸಿಬೇಕು!. ಈಗ ನೀವೇ ಹೇಳಿ, ಯಾರನ್ನಾದರೂ ಕತ್ತೆ ಎಂದು ಮೂದಲಿಸುವುದು ಸರಿಯೇ?!
Published by:guruganesh bhat
First published: