ಮಾಲೀಕರ Pension ಹಣದಲ್ಲಿ ಕೆಲಸಗಾರರು ಸಹ ಪಾಲು ಪಡೆಯಬಹುದು.. ಏನಿದು ಹೊಸ ಯೋಜನೆ..?

Donate-a-Pension: ನಿಮ್ಮ ಬಳಿ ಕೆಲಸ ಮಾಡುವ ಜನರು ಎಂದರೆ ಉದಾಹರಣೆಗೆ ನಿಮ್ಮ ಕಾರು ಓಡಿಸಿಕೊಂಡು ಇರುವ ಚಾಲಕ, ನಿಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ, ನಿಮ್ಮ ಮನೆಯ ತೋಟವನ್ನು ನೋಡಿಕೊಳ್ಳುವ ವ್ಯಕ್ತಿಗೆ ಸೇವಾ ನಿವೃತ್ತಿಯಾದ ನಂತರ ಯಾವುದೇ ರೀತಿಯ ಪಿಂಚಣಿ ಸಿಗುವುದಿಲ್ಲ. ಇಂತಹ ಕೆಲಸಗಾರರಿಗೆ ನಿಮ್ಮ ಪಿಂಚಣಿಯಿಂದ ಹಣ ನೀಡಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನೀವು ಯಾವುದಾದರೂ ಸರ್ಕಾರಿ ಹುದ್ದೆಯಲ್ಲಿ (Government Employee) 60 ವರ್ಷ ಕೆಲಸ ಮಾಡಿ ಆ ಕೆಲಸದಿಂದ ನಿವೃತ್ತರಾದರೆ(Retirement) , ನಿಮಗೆ ಒಂದು ನಿರ್ದಿಷ್ಟವಾದ ಪಿಂಚಣಿ ಹಣ (Pension Amount) ತಿಂಗಳಿಗೊಮ್ಮೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬಂದು ಜಮೆ ಆಗುವುದುಂಟು. ಆದರೆ ನಿಮ್ಮ ಬಳಿ ಕೆಲಸ ಮಾಡುವ ಜನರು ಎಂದರೆ ಉದಾಹರಣೆಗೆ ನಿಮ್ಮ ಕಾರು ಓಡಿಸಿಕೊಂಡು ಇರುವ ಚಾಲಕ, ನಿಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ, ನಿಮ್ಮ ಮನೆಯ ತೋಟವನ್ನು ನೋಡಿಕೊಳ್ಳುವ ವ್ಯಕ್ತಿಗೆ ಸೇವಾ ನಿವೃತ್ತಿಯಾದ ನಂತರ ಯಾವುದೇ ರೀತಿಯ ಪಿಂಚಣಿ ಸಿಗುವುದಿಲ್ಲ. ಇಂತಹ ಕೆಲಸಗಾರರಿಗೆ ನಿಮ್ಮ ಪಿಂಚಣಿಯಿಂದ ನಿಮಗೆ ಅನುಕೂಲವಾದಷ್ಟು ಹಣವನ್ನು ಹೇಗೆ ಅವರಿಗೆ ನೀಡುವುದು ಎಂದು ನೀವು ಗೊಂದಲದಲ್ಲಿದ್ದರೆ, ಇಲ್ಲಿದೆ ನೋಡಿ ಹೊಸ ಪಿಂಚಣಿ ಯೋಜನೆ.

  ಇದನ್ನೂ ಓದಿ: ತಿಂಗಳಿಗೆ 5,000 ರೂ. Pension ಕೊಡುತ್ತೆ ಈ ಯೋಜನೆ.. ಈವರೆಗೆ 3.75 ಕೋಟಿ ಜನ ಇದರ ಫಲಾನುಭವಿಗಳು!

  ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಪಿಂಚಣಿ ನಿಧಿ ಯೋಜನೆ ಮತ್ತು ಕೊಡುಗೆ ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಪ್ರಯತ್ನವಾಗಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು ಸೋಮವಾರ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್ (ಪಿಎಂ-ಎಸ್‌ವೈಎಂ) ಅಡಿಯಲ್ಲಿ 'ಡೊನೇಟ್ ಎ ಪೆನ್ಷನ್' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ಈ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ:

  ಮನೆ ಕೆಲಸಗಾರರು, ಕಾರು ಚಾಲಕರು ಸೇರಿದಂತೆ ಸಿಬ್ಬಂದಿಗೆ ಪ್ರೀಮಿಯಂ ಕೊಡುಗೆಯನ್ನು ನಾಗರಿಕರು ದಾನ ಮಾಡಬಹುದಾದ ಪಿಂಚಣಿ ಯೋಜನೆಯ ಬಗ್ಗೆ ಕಾರ್ಮಿಕ ಸಚಿವರು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ.

  "ಮನೆಯ ತೋಟದಲ್ಲಿ ಕೆಲಸ ಮಾಡುವವರಿಗೆ ದೇಣಿಗೆ ನೀಡುವ ಮೂಲಕ ನನ್ನ ನಿವಾಸದಲ್ಲಿ 'ಡೊನೇಟ್ ಎ ಪೆನ್ಷನ್’ ಕಾರ್ಯಕ್ರಮಕ್ಕೆ  ಚಾಲನೆ ನೀಡಲಾಗಿದೆ. ಇದು (ಪಿಎಂ-ಎಸ್‌ವೈಎಂ) ಪಿಂಚಣಿ ಯೋಜನೆಯ ಅಡಿಯಲ್ಲಿ ಒಂದು ಉಪಕ್ರಮವಾಗಿದ್ದು, ನಾಗರಿಕರು ತಮ್ಮ ಮನೆಯಲ್ಲಿ ತಮ್ಮ ಬಳಿ ಕೆಲಸ ಮಾಡುವವರಿಗೆ ಪ್ರೀಮಿಯಂ ಕೊಡುಗೆಯನ್ನು ದಾನ ಮಾಡಬಹುದು."

  ಕನಿಷ್ಠ 3,000 ರೂಪಾಯಿ ಪಿಂಚಣಿ

  "ಪಿಎಂ-ಎಸ್‌ವೈಎಂ ಯೋಜನೆಯ ಅಡಿಯಲ್ಲಿ, 18 ರಿಂದ 40 ವರ್ಷ ವಯಸ್ಸಿನ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ವಯಸ್ಸನ್ನು ಅವಲಂಬಿಸಿ ಪ್ರತಿ ವರ್ಷ ಕನಿಷ್ಠ 660 ರಿಂದ 2400 ರೂಪಾಯಿಗಳವರೆಗೆ ಠೇವಣಿ ಇಡಬಹುದು. ಅವರು ತಮ್ಮ 60 ವರ್ಷ ವಯಸ್ಸನ್ನು ದಾಟಿದ ನಂತರ ಅವರು ತಿಂಗಳಿಗೆ ಕನಿಷ್ಠ 3,000 ರೂಪಾಯಿ ಪಿಂಚಣಿಯನ್ನು ಪಡೆಯಲಿದ್ದಾರೆ" ಎಂದು ಯಾದವ್ ಹೇಳಿದರು.

  ಇದನ್ನೂ ಓದಿ: Saving Schemes: FDಗಿಂತ ಹೆಚ್ಚಿನ ಬಡ್ಡಿ ನೀಡುವ 3 ಪೋಸ್ಟ್ ಆಫೀಸ್ ಯೋಜನೆಗಳು ಇಲ್ಲಿವೆ ನೋಡಿ..

  ನಿನ್ನೆ ಅನಾವರಣಗೊಂಡ 'ಡೊನೇಟ್ ಎ ಪೆನ್ಷನ್’ ಪಿಂಚಣಿ ಕಾರ್ಯಕ್ರಮವು ಮಾರ್ಚ್ 7 ರಿಂದ 13 ರವರೆಗೆ ಸಚಿವಾಲಯವು ಆಚರಿಸುತ್ತಿರುವ 'ಐಕಾನಿಕ್ ವೀಕ್' ನಲ್ಲಿ ಪ್ರಾರಂಭಿಸಲಿರುವ ಕಾರ್ಮಿಕ ಸಚಿವಾಲಯದ ಅನೇಕ ಉಪಕ್ರಮಗಳ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.

  25 ಕೋಟಿ ಜನರನ್ನು ನೋಂದಾಯಿಸಿಕೊಳ್ಳುವ ಗುರಿ

  ಈ-ಶ್ರಮ್ ಅಡಿಯಲ್ಲಿ, ಉಮಂಗ್ ಆ್ಯಪ್‌ನಲ್ಲಿ ಈ-ಶ್ರಮ್ ಮತ್ತು ಡೊನೇಟ್ ಎ ಪೆನ್ಷನ್ ಅಡಿಯಲ್ಲಿ, ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರಗಳಿಂದ ಉದ್ಯೋಗ ಮೇಳ, ಪ್ಲೇಸ್‌ಮೆಂಟ್ ಡ್ರೈವ್‌ಗಳು ಭಾರತದಾದ್ಯಂತ 65 ಸ್ಥಳಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ವಿಕಲಚೇತನರಿಗೆ ವಿಶೇಷ ಗಮನ ಕೇಂದ್ರೀಕರಿಸಿ ಪ್ಲೇಸ್‌ಮೆಂಟ್ ಆಧಾರಿತ ಅನೇಕ ತರಬೇತಿ ಶಿಬಿರಗಳನ್ನು ನಡೆಸುವ ಯೋಜನೆ ಹೊಂದಿದ್ದು, ಇದರಲ್ಲಿ ಸುಮಾರು 25 ಕೋಟಿ ಜನರನ್ನು ನೋಂದಾಯಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

  ಇದಷ್ಟೇ ಅಲ್ಲದೆ ದೇಶಾದ್ಯಂತ 20 ಪ್ರಾದೇಶಿಕ ಕಚೇರಿಗಳಲ್ಲಿ ಮುಖ್ಯ ಕಾರ್ಮಿಕ ಆಯುಕ್ತರು ಇಡೀ ವಾರ ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಕಾರ್ಮಿಕರು ಮತ್ತು ಉದ್ಯೋಗದಾತರಿಗಿರುವ ಹಕ್ಕುಗಳು ಮತ್ತು ಅವುಗಳ ಅನುಸರಣೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರನ್ನು ಸಂವೇದನಾಶೀಲಗೊಳಿಸುವುದು ಇದರ ಉದ್ದೇಶವಾಗಿತ್ತು ಎಂದು ಹೇಳಲಾಗುತ್ತಿದೆ.
  Published by:Kavya V
  First published: