ಷೇರು ಮಾರುಕಟ್ಟೆಯಲ್ಲಿ (Stock market) ಹಣ ಹೂಡಿಕೆ ಮಾಡುವ ಹೂಡಿಕೆದಾರರು ಕೆಲವೊಂದು ಯೋಜನೆಗಳನ್ನು ಹೊಂದಿರಬೇಕಾಗುತ್ತದೆ. ಹೆಚ್ಚಿನ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಉತ್ಸಾಹದಿಂದಲೇ ಹಣ (Money) ವಿನಿಯೋಗಿಸುತ್ತಾರೆ, ಲಾಭ (Profit) ನಷ್ಟಗಳನ್ನು ಅವಲೋಕಿಸುವುದಿಲ್ಲ. ಹೂಡಿಕೆ ಅವಕಾಶಗಳು ಸಾಕಷ್ಟಿದ್ದು ಅನೇಕ ಆಯ್ಕೆಗಳನ್ನು ಹೊಂದಿವೆ.
ಪ್ರತಿಯೊಂದು ಹೂಡಿಕೆಯೂ ಲಾಭವನ್ನು ನೀಡುವುದಿಲ್ಲ
ಹೂಡಿಕೆದಾರರು ಹೂಡಿಕೆಯ ಸಮಯದಲ್ಲಿ ಅರಿತುಕೊಳ್ಳಬೇಕಾದ ಸತ್ಯವೆಂದರೆ ಪ್ರತಿಯೊಂದು ಹೂಡಿಕೆಯೂ ಲಾಭವನ್ನು ನೀಡುವುದಿಲ್ಲ ಎಂಬುದಾಗಿದೆ. ಕೆಲವೊಂದು ಟೆಕ್ನಿಕ್ ಈ ಸಮಯದಲ್ಲಿ ಸಹಕಾರಿಯಾದರೂ ಇನ್ನು ಕೆಲವೊಂದು ಹೂಡಿಕೆದಾರರು ಹಣ ಕಳೆದುಕೊಳ್ಳುವಂತೆ ಮಾಡುತ್ತದೆ. ನೀವು ಮುತುವರ್ಜಿಯಿಂದ ಈ ಕ್ಷೇತ್ರದಲ್ಲಿ ಮುನ್ನಡೆದರೆ ಲಾಭ ಖಂಡಿತ ದೊರೆಯುತ್ತದೆ.
ಹೂಡಿಕೆ ಕ್ಷೇತ್ರದಲ್ಲಿ ತಪ್ಪುಗಳು ಸಂಭವಿಸುವುದು ಸಹಜವಾಗಿದೆ. ಕೆಲವರು ತಪ್ಪುಗಳಿಂದ ಉಂಟಾದ ನಷ್ಟದಿಂದ ನಿರಾಶರಾದರೆ ಇನ್ನು ಕೆಲವರು ಹೂಡಿಕೆಯ ವಹಿವಾಟೇ ಬೇಡ ಎಂದು ನಿಲ್ಲಿಸುತ್ತಾರೆ. ಆದರೆ ಇತರರ ತಪ್ಪುಗಳಿಂದ ಕಲಿತುಕೊಳ್ಳುವ ಸ್ಮಾರ್ಟ್ ಜನರು ಬುದ್ಧಿವಂತಿಕೆಯಿಂದ ಹಣ ವಿನಿಯೋಗಿಸುತ್ತಾರೆ. ಈ ಬುದ್ಧಿವಂತಿಕೆಯೇ ಹೂಡಿಕೆ ಕ್ಷೇತ್ರದಲ್ಲಿ ಪ್ರಧಾನವಾದುದಾಗಿದೆ.
ಇದನ್ನೂ ಓದಿ: ವಸತಿ ಯೋಜನೆಗಾಗಿ ಬೆಂಗಳೂರಿನಲ್ಲಿ 28 ಎಕರೆ ಭೂಮಿ ಖರೀದಿಸಿದ ಬಿರ್ಲಾ ಎಸ್ಟೇಟ್ಸ್
ಹೂಡಿಕೆದಾರರು ಸಾಮಾನ್ಯವಾಗಿ ಮಾಡುವ ತಪ್ಪುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸುತ್ತಿದ್ದು ಈ ತಪ್ಪುಗಳನ್ನು ಮಾಡದೇ ಇರಲು ಈ ಲೇಖನ ನಿಮಗೆ ಮಾರ್ಗದರ್ಶಿಯಾಗಿರುತ್ತದೆ.
ಕಂಫರ್ಟ್ ಜೋನ್‌ನಲ್ಲಿ ಉಳಿಯುವುದು ಹೂಡಿಕೆದಾರ ಮಾಡುವ ತಪ್ಪಾಗಿದೆ
ಎಫ್‌ಡಿ, ಚಿನ್ನ ಅಂತೆಯೇ ರಿಯಲ್ ಎಸ್ಟೇಟ್‌ನ ಮೇಲೆ ಹೆಚ್ಚಿನ ಹೂಡಿಕೆದಾರರು ಒಂದು ರೀತಿಯ ಮೋಹವನ್ನು ಬೆಳೆಸಿಕೊಂಡಿರುತ್ತಾರೆ. ಹೂಡಿಕೆದಾರರು ತಮ್ಮ ಸುತ್ತಲೂ ಕಂಫರ್ಟ್ ಜೋನ್ ಅನ್ನು ನಿರ್ಮಿಸಿಕೊಂಡು ಆ ಪರಿಧಿಯಲ್ಲಿಯೇ ಇರುತ್ತಾರೆ.
ಅಪಾಯವಿದೆ ಎಂದು ಗೊತ್ತಿದ್ದೂ ಅದರಿಂದ ದೂರವಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದರೂ ಆ ಅಪಾಯವನ್ನು ದಾಟಿದಾಗ ಸಿಗುವ ಲಾಭವನ್ನು ನೀವು ಕಳೆದುಕೊಳ್ಳುವ ಪ್ರಮೇಯ ಕೂಡ ಇರುತ್ತದೆ. ಇದು ಬೆಳವಣಿಗೆ ಹಾಗೂ ಯಶಸ್ಸಿಗೆ ಅಡ್ಡಿಯಾಗಿರುತ್ತದೆ. ಹಾಗಾಗಿ ಆರಾಮ ವಲಯದಿಂದ ಹೊರಬರುವ ಪ್ರಯತ್ನ ಮಾಡಿ.
ಸಾಕಷ್ಟು ಸಮಯದವರೆಗೆ ಹೂಡಿಕೆ ಮಾಡದಿರುವುದು ಇನ್ನೊಂದು ತಪ್ಪಾಗಿದೆ
ಹೂಡಿಕೆ ಮಾಡಿದ ಕೂಡಲೇ ಲಾಭ ದೊರೆಯುತ್ತದೆ ಎಂಬ ಯೋಚನೆ ಸರಿಯಲ್ಲ. ತಾಳ್ಮೆಯಿಂದ ಕಾಯಬೇಕು ತದನಂತರವೇ ಲಾಭ ಪಡೆಯಲು ಸಾಧ್ಯವಾಗುತ್ತದೆ. ಸರಿಯಾದ ಯೋಜನೆಯ ಮೂಲಕ ಹೂಡಿಕೆ ಮಾಡಿ ನಂತರ ತಾಳ್ಮೆಯಿಂದ ಕಾಯಿರಿ
ಖಾತೆಯ ಬ್ಯಾಲೆನ್ಸ್ ಅನ್ನು ಆಗಾಗ್ಗೆ ಪರಿಶೀಲಿಸುವುದು, ಅಲ್ಪಾವಧಿಯ ಚಂಚಲತೆಗೆ ಪ್ರತಿಕ್ರಿಯಿಸುವುದು, ದೀರ್ಘಾವಧಿಯ ಹೂಡಿಕೆ ಯೋಜನೆಗಳನ್ನು ತ್ಯಜಿಸುವುದು ಇತ್ಯಾದಿ, ಸಂಪತ್ತು ಸೃಷ್ಟಿಯ ಅವಕಾಶಗಳ ಮೇಲೆ ಪರಿಣಾಮ ಬೀರುವ ಕೆಲವು ಹಾನಿಕಾರಕ ಹೂಡಿಕೆ ನಡವಳಿಕೆಗಳು ಎಂದೆನಿಸಿವೆ.
ಯಾವುದೇ ಆಸ್ತಿ ಹಂಚಿಕೆ ಮತ್ತು FOMO ಇಲ್ಲದಿರುವುದು ಕೂಡ ತಪ್ಪೇ
ಕ್ರಿಪ್ಟೋ ಸುದ್ದಿಯಾದಾಗ ಎಲ್ಲಾ ಹೂಡಿಕೆಯನ್ನು ಪ್ರತಿಯೊಬ್ಬರೂ ಈ ಕ್ಷೇತ್ರದ ಮೇಲೆಯೇ ಮಾಡುತ್ತಾರೆ. ಹೂಡಿಕೆ ಕ್ಷೇತ್ರದಲ್ಲಿ ಹೊಸ ಹೊಸ ಯೋಜನೆಗಳಲ್ಲಿ ತೊಡಗಿಸಿಕೊಂಡಾಗ ಅದರಿಂದ ಬರುವ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಹೂಡಿಕೆದಾರರು ಹೂಡಿಕೆಗಳಿಗೆ ಉತ್ತಮ ಆದಾಯ, ಕನಿಷ್ಠ ಅಪಾಯ, ಪರಿಪೂರ್ಣ ಹಣ ಮತ್ತು ತೆರಿಗೆ ದಕ್ಷತೆಯನ್ನು ಬಯಸುತ್ತಾರೆ. ಕೆಲವು ಸ್ವತ್ತುಗಳು ಉತ್ತಮ ಆದಾಯವನ್ನು ನೀಡುತ್ತವೆ ಆದರೆ ಅಪಾಯಕಾರಿಯಾಗಿರುತ್ತವೆ. ಕೆಲವು ಅಪಾಯ-ಮುಕ್ತ ಆದರೆ ಮಧ್ಯಮ ಆದಾಯವನ್ನು ನೀಡುತ್ತವೆ. ಕೆಲವು ಅಪಾಯ-ಮುಕ್ತವಾಗಿರುತ್ತವೆ ಮತ್ತು ಉತ್ತಮ ಆದಾಯವನ್ನು ನೀಡುತ್ತವೆ.
ಮುಂದಿನ 12 ತಿಂಗಳುಗಳಲ್ಲಿ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಎಲ್ಲದರಲ್ಲೂ ಹೂಡಿಕೆ ಮಾಡುವುದು ವಿವೇಕಯುತವಾಗಿದೆ. ಆ ರೀತಿಯಲ್ಲಿ ಅಪಾಯಗಳು ನಿಯಂತ್ರಣದಲ್ಲಿರುತ್ತವೆ.
ನಷ್ಟವನ್ನುಂಟು ಮಾಡುವ ಆಸ್ತಿಯಲ್ಲಿಯೇ ವಿನಿಯೋಗಿಸುವುದು ಹೂಡಿಕೆದಾರ ಮಾಡುವ ತಪ್ಪು
ಯಾವುದೇ ಸ್ವತ್ತು ನಷ್ಟವನ್ನುಂಟು ಮಾಡುತ್ತಿದೆ ಎಂದಾದರೆ ಅದರಲ್ಲಿ ದೋಷವಿದೆ ಎಂದರ್ಥವಾಗಿದೆ. ಹಾಗಾಗಿ ಅಂತಹ ಯೋಜನೆಗಳನ್ನು ಕೈಬಿಡುವುದೇ ಉತ್ತಮ ಉಪಾಯವಾಗಿದೆ. ಎಲ್ಲಾ ಸಮಯದಲ್ಲೂ ವಿಷಯಗಳು ತಪ್ಪಾಗುತ್ತವೆ. ದೋಷಗಳನ್ನು ಗುರುತಿಸಲು, ತಪ್ಪುಗಳಿಂದ ಕಲಿಯಲು, ನಷ್ಟವನ್ನು ಕಡಿತಗೊಳಿಸಲು ಮತ್ತು ಮುಂದುವರಿಯಲು ತಂತ್ರಗಳನ್ನು ನಿರ್ಮಿಸುವುದು ಉತ್ತಮ ಉಪಾಯವಾಗಿದೆ.
ಮನೋರಂಜನೆಗಾಗಿ ಹೂಡಿಕೆ ಮಾಡುವುದು ಕೂಡ ಅಪಾಯವೇ
ಹೂಡಿಕೆ ಎಂಬುದು ಸರಳವಾಗಿರಬಹುದು ಆದರೆ ಹೆಚ್ಚು ಸರಳಗೊಂಡಂತೆ ಬೇಸರವನ್ನೂ ಉಂಟುಮಾಡಬಹುದು. ಸ್ಪರ್ಧಾತ್ಮಕ ಅಂಶವನ್ನುಂಟು ಮಾಡುವುದಿಲ್ಲ. ಇನ್ನು ಕೆಲವು ಹೂಡಿಕೆದಾರರು ಮನೋರಂಜನೆಗಾಗಿ ಹಣ ಹೂಡಿಕೆ ಮಾಡುತ್ತಾರೆ ಇದು ಅವರು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಕರು ತಿಳಿಸುತ್ತಾರೆ. ಹೂಡಿಕೆ ಎಂಬುದು ಕೃಷಿಯ ರೀತಿ ಇರಬೇಕು ಇಲ್ಲಿ ಬೆಳವಣಿಗೆ ಪ್ರತೀ ದಿನ ಗೋಚರಿಸದೇ ಇದ್ದರೂ ಒಂದು ದಿನ ಅದು ಬೆಳೆದು ಕಟಾವಿಗೆ ಸಿದ್ಧವಾಗುವಂತೆ ನಿಮ್ಮ ಹೂಡಿಕೆ ಒಂದು ಉತ್ತಮ ದಿನ ಉತ್ತಮ ಪ್ರತಿಫಲವನ್ನು ನೀಡುವಂತಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ