ನೀವು ಸಣ್ಣ ಉದ್ದಿಮೆಯೊಂದನ್ನು (Business) ಹೊಂದಿದ್ದು ಅದು ಸಾಕಷ್ಟು ಗ್ರಾಹಕರನ್ನು (Customer) ನಿಮ್ಮ ಬಳಿ ಸೆಳೆಯುವಂತಾಗಬೇಕೆಂಬ ಆಸೆ ಹೊಂದಿರುವುದು ಸಹಜ ಹಾಗೂ ಅನಿವಾರ್ಯ ಅದರಲ್ಲೂ ಆನ್ಲೈನ್ನಲ್ಲಿ (Online) ನಿಮ್ಮ ಬ್ರ್ಯಾಂಡ್ (Brand) ಮೊದಲ ಪುಟದಲ್ಲಿ ಮೊದಲ ಸ್ಥಾನದಲ್ಲಿ ಕಾಣುವಂತೆ ಮಾಡುವುದಕ್ಕೆ ನೀವು ನಿಮ್ಮ ಉದ್ದಿಮೆ ಬಗ್ಗೆ ತಿಳೀಸುವಂತಹ ವೆಬ್ಸೈಟ್ ಹೊಂದಿರುವುದು ಸಾಕಷ್ಟು ನೆರವು ನೀಡುತ್ತದೆ. ಆದರೆ ಬರೀ ವೆಬ್ಸೈಟ್ (Website) ಹೊಂದಿದ್ದರೆ ಸಾಲದು. ಅದು ಆನ್ಲೈನ್ನಲ್ಲಿ ಎಲ್ಲರನ್ನು ಸುಲಭವಾಗಿ ತಲುಪುವಂತೆ ಅದಕ್ಕಾಗಿ ನೀವು ಸರ್ಚ್ ಎಂಜಿನ್ ಆಪ್ಟಿಮೈಸೇಷನ್ ಎಂಬಂಶದ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಇದು ಸರಿಯಾಗಿದ್ದಲ್ಲಿ ಬಳಕೆದಾರರು ನಿಮ್ಮ ಉದ್ದಿಮೆಯ ಉತ್ಪನ್ನಗಳನ್ನು ಸಾಮಾನ್ಯವಾಗಿ ಗೂಗಲ್ನಲ್ಲಿ ಹುಡುಕುವಾಗ ಅವರಿಗೆ ನಿಮ್ಮ ವೆಬ್ಸೈಟ್ ಹೆಚ್ಚು ಪ್ರಖರವಾಗಿ ಎದ್ದು ಕಾಣಬಹುದು.
ಹಾಗಾದರೆ ನಿನಿಮ್ಮ ವೆಬ್ಸೈಟ್ ಆನ್ಲೈನ್ ಸರ್ಚ್ನಲ್ಲಿ ಮೊದಲ ಪುಟದಲ್ಲಿ ಮೊದಲ ಸ್ಥಾನದಲ್ಲಿ ಕಾಣುವಂತೆ ಎಸ್‍ಇಒ ಸ್ನೇಹಿ ಹೇಗೆ ಮಾಡಬಹುದೆಂಬುದರ ಬಗ್ಗೆ ನಾವಿಲ್ಲಿ ಏಳು ಅದ್ಭುತ ಸಲಹೆಗಳನ್ನು ತಿಳಿದುಕೊಳ್ಳೋಣ ಬನ್ನಿ. ನೀಡಿದ್ದೇವೆ.
ಇವುಗಳನ್ನು ನೀವು ಪಾಲಿಸಿದರೆ ಖಂಡಿತ ನಿಮಗೆ ಸಹಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಸಲಹೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.
ಸಮರ್ಪಕವಾದ ಕೀಶಬ್ದ ಹುಡುಕುವುದು
ನಿಮ್ಮ ವೆಬ್ಸೈಟಿನಲ್ಲಿ ಮೊದಲಿಗೆ ನೀವು ನಿಮ್ಮ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಜನರು ಆ ಉತ್ಪನ್ನಗಳನ್ನು ಯಾವ ರೀತಿ ಪದಗಳನ್ನು ಬಳಸು ಹುಡುಕುತ್ತಿದ್ದಾರೆಂದು ಮೊದಲು ತಿಳಿಯಬೇಕು.
ಅದರಂತೆ ಈ ವಿಷಯದಲ್ಲಿ ಸಂಶೋಧನೆ ಮಾಡಿ ಸಮರ್ಪಕವಾದ ಕೀವರ್ಡ್ಗಳನ್ನು ಹುಡುಕಿ ಅವುಗಳನ್ನು ನಿಮ್ಮ ವೆಬ್ಸೈಟಿನಲ್ಲಿ ಅಳವಡಿಸಿಕೊಳ್ಳಬೇಕು.
ಇದಕ್ಕಾಗಿ ಗೂಗಲ್ ಕೀವರ್ಡ್ ಪ್ಲ್ಯಾನರ್, SEMrush ಗಳಂತಹ ಟೂಲ್ಗಳನ್ನು ಬಳಸಿ ನಿಮ್ಮ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಉತ್ತಮವಾದ ಕೀಶಬ್ದಗಳನ್ನು ಪಡೆಯಬಹುದು. ತದಂತರ ಇವುಗಳನ್ನು ಒಂದೆಡೆ ಪಟ್ಟಿ ಮಾಡಿಕೊಂಡು ನಿಮ್ಮ ಸೈಟಿನಲ್ಲಿ ಬಳಸಬಹುದು.
ವೆಬ್ಸೈಟ್ ಕಂಟೆಂಟ್ನಲ್ಲಿ ಕೀವರ್ಡ್ ಬಳಕೆ
ಇನ್ನು ನಿಮ್ಮ ವೆಬ್ಸೈಟಿನಲ್ಲಿ ನೀವು ನಿಮ್ಮ ಉತ್ಪನ್ನಗಳ ಹಲವು ವಿವರಗಳನ್ನು ಬರೆದಿರುತ್ತೀರಿ. ಈ ಸಂದರ್ಭದಲ್ಲಿ ನಿಮ್ಮ ಬರವಣಿಗೆಯಲ್ಲೂ ಸಹ ಕೀವರ್ಡ್ ಗಳು ಹೆಚ್ಚು ಹೆಚ್ಚಾಗಿ ಬಳಸಲ್ಪಟ್ಟಿರುವಂತೆ ನೋಡಿಕೊಳ್ಳಬೇಕು.
ಇವು ಕೀವರ್ಡ್ ಗಳಾಗಿರುವುದರಿಂದ ಗೂಗಲ್ ಎಂಜಿನ್ನಿಗೆ ನಿಮ್ಮ ಕಂಟೆಂಟ್ ಆಧರಿಸಿ ತನಗೆ ನೀಡಲಾದ ಹುಡುಕಾಟದ ಫಲಿತಾಂಶಕ್ಕೆ ಸಂಬಂಧಿಸಿದಂತೆ ನಿಮ್ಮ ವೆಬ್ಸೈಟ್ ಅನ್ನು ತೋರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಿಮ್ಮ ವೆಬ್ ಪುಟಗಳಲ್ಲಿ ಸರಿಯಾದ ಶಿರ್ಷಿಕೆ, ಉಪಶಿರ್ಷಿಕೆ ಇರುವಂತೆ ನೋಡಿಕೊಳ್ಳಿ ಹಾಗೂ ಆ ಶಿರ್ಷಿಕೆಗಳು ಕೀವರ್ಡ್ ಗಳಿಂದ ಸಿರಿವಂತವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಶಿರ್ಷಿಕೆಗಳ ಮೂಲಕ ಗೂಗಲ್ ಹೆಚ್ಚು ಹುಡುಕುತ್ತದೆ.
ಇದನ್ನೂ ಓದಿ:Business Tips: ಸಣ್ಣ ವ್ಯಾಪಾರ ಆರಂಭಿಸುವ ಮುನ್ನ ಈ ಆರು ಅಂಶಗಳನ್ನು ತಿಳಿದುಕೊಳ್ಳಿ
ಉತ್ತಮ ಬರವಣಿಗೆ
ಕೇವಲ ಕಂಟೆಂಟ್ ನಲ್ಲಿ ಕೀವರ್ಡ್ ಗಳಿವೆ ಎಂದು ಸುಮ್ಮನಿದ್ದರೆ ಸಾಲದು. ಯಾವುದೇ ಕೀವರ್ಡ್ ಗಳು ಅತ್ಯುತ್ತಮ ಗುಣಮಟ್ಟದ ಬರವಣಿಗೆ ಇದ್ದಾಗ ಬಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಮ್ಮ ಬರವಣಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವಂತಿರಬೇಕು.
ಅವಶ್ಯಕತೆ ಇದ್ದಲ್ಲಿ ಗ್ರಾಫ್ ಬಳಕೆ, ಚಾರ್ಟ್ ಬಳಕೆ, ಚಿತ್ರಗಳ ಬಳಕೆ ಇತ್ಯಾದಿಗಳನ್ನು ಸಮಂಜಸವಾಗಿ ಮಾಡಬೇಕು.
ಮೊಬೈಲ್ ಫೋನ್ ಗಳಿಗೂ ಆಪ್ಟಿಮೈಸ್ ಮಾಡಿ
ಇಂದು ಸಾಕಷ್ಟು ಜನರು ಗೂಗಲ್ ನಲ್ಲಿ ಹುಡುಕಾಟ ಮಾಡಲು ಮೊಬೈಲ್ ಫೋನ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ನೀವು ಅಳವಡಿಸಿಕೊಳ್ಳುವ ಎಸ್‍ಇಒ ಸಾಮಾನ್ಯವಾಗಿ ಡೇಸ್ಕ್ ಟಾಪ್ ಗಳಿಗೆ ಅನುಕೂಲವಾಗಿರುತ್ತದೆ.
ಹಾಗಾಗಿ ಮೊಬೈಲ್ ಫೋನ್ ಗಳನ್ನೂ ಸಹ ಬೆಂಬಲಿಸುವ ಕೀವರ್ಡ್ ಗಳನ್ನು, ಎಸ್‍ಇಒ ಅನ್ನು ಮೊಬೈಲ್ ಸ್ನೇಹಿ ರೂಪವಾಗಿಯೂ ಬಳಸಿಕೊಳ್ಳಿ. ನಿಮ್ಮ ವೆಬ್ಸೈಟ್ ಅನ್ನು ವಿವಿಧ ಡಿವೈಸ್ ಗಳಲ್ಲಿ ತೆರೆದು ಎಲ್ಲವೂ ಸಮರ್ಪಕವಾಗಿ ತೆರೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಬ್ಯಾಕ್ ಲಿಂಕ್ ಬಳಕೆ
ಸಾಮಾನ್ಯವಾಗಿ ಎಸ್‍ಇಒ ಚೆನ್ನಾಗಿ ಕೆಲಸ ಮಾಡಬೇಕೆಂದರೆ ಇರುವ ಹಲವು ಅಂಶಗಳ ಪೈಕಿ ಬ್ಯಾಕ್ ಲಿಂಕ್ ಸಹ ಒಂದಾಗಿದೆ. ಸಾಧ್ಯವಾದಷ್ಟು ನಿಮ್ಮ ವೆಬ್ಸೈಟ್ ನಲ್ಲಿ ಬ್ಯಾಕ್ ಲಿಂಕ್ ಗಳನ್ನು ಇರಿಸಿ. ಈ ಬ್ಯಾಕ್ ಲಿಂಕ್ ಗಳು ಎಂಬುದು ಇತರೆ ವೆಬ್ಸೈಟ್ ಗಳ ಲಿಂಕ್ ಗಳಾಗಿವೆ.
ನಿಮ್ಮ ಉತ್ಪನ್ನಕ್ಕೆ, ಬರಹಕ್ಕೆ ಸಂಬಂಧಿಸಿದಂತೆ ಇತರೆ ಅಧಿಕೃತ ಹಾಗೂ ಗುಣಮಟ್ಟದ ವೆಬ್ಸೈಟ್ ಗಳ ಲಿಂಕ್ ಗಳನ್ನು ನಿಮ್ಮ ಸೈಟಿನಲ್ಲಿ ಹಾಕಿ. ಗೆಸ್ಟ್ ಪೋಸ್ಟಿಂಗ್ ಸಹ ಇದಕ್ಕಾಗಿ ನೀವು ಮಾಡಬಹುದು.
ಸ್ಥಳೀಯ ಎಸ್‍ಇಒ ರಣತಂತ್ರ
ಸ್ಥಳೀಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುವ ಎಸ್‍ಇಒ ರಣತಂತ್ರಗಳನ್ನೂ ಸಹ ನೀವು ನಿಮ್ಮ ವೆಬ್ಸೈಟಿನಲ್ಲಿ ಬಳಸಬಹುದು. ಇದರಿಂದ ನಿಮ್ಮ ಸೈಟಿಗೆ ಸ್ಥಳೀಯವಾಗಿ ಹೆಚ್ಚಿನ ಮೌಲ್ಯ ದೊರೆಯುತ್ತದೆ. ಸ್ಥಳೀಯ ಮಟ್ಟದಲ್ಲಿ ವಿವಿಧ ತಂತ್ರಾಂಶಗಳಲ್ಲಿ ನಿಮ್ಮ ಉದ್ದಿಮೆಗೆ ಸಂಬಂಧಿಸಿದಂತೆ ಒಂದೇ ರೀತಿಯ ಮಾಹಿತಿ ಇರಲಿ.
ಗೂಗಲ್ ಮೈ ಬ್ಯುಸಿನೆಸ್, ಯೆಲ್ಪ್ ಅಥವಾ ಬಿಂಗ್ ಪ್ಲೇಸಸ್ ಮುಂತಾದವುಗಳಲ್ಲಿ ನಿಮ್ಮ ಮಾಹಿತಿ ಸರಿಯಾಗಿರಲಿ.
ಟ್ರ್ಯಾಕ್ ಮಾಡುತ್ತಿರಿ
ಇನ್ನು ಗೂಗಲ್ ಅನಲಾಟಿಕ್ಸ್ ಎಂಬುದು ನಿಮ್ಮ ವೆಬ್ಸೈಟ್ ಆನ್ಲೈನ್ನಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಿದೆ ಎಂಬುದನ್ನು ಅರಿಯಲು ನೆರವು ನೀಡುತ್ತದೆ. ಹಾಗಾಗಿ ಅನಾಲಿಟಿಕ್ಸ್ ಅನ್ನು ಬಳಸುವ ಮೂಲಕ ನಿಮ್ಮ ಸೈಟಿನ ಪ್ರದರ್ಶನದ ಬಗೆಗಿನ ಮಾಹಿತಿ ಪಡೆಯಿರಿ ಹಾಗೂ ಅವಶ್ಯಕತೆಯಿದ್ದೆಡೆಯಲ್ಲಿ ಎಸ್‍ಇಒ ತಂತ್ರಗಳನ್ನು ಆಗಾಗ್ಗೆ ರೂಪಿಸುತ್ತಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ