ಈಗಂತೂ ಬಹುತೇಕರು ಪ್ರತಿದಿನ ಅಥವಾ ಪ್ರತಿ ತಿಂಗಳು ಅವರು ದುಡಿಯುವ ಹಣದಲ್ಲಿ (Money) ಸ್ವಲ್ಪವಾದರೂ ಉಳಿತಾಯ ಮಾಡಬೇಕು ಅಂತ ಪ್ರಯತ್ನಿಸುತ್ತಿರುತ್ತಾರೆ. ಇದಕ್ಕಾಗಿಯೇ ಸಾರ್ವಜನಿಕರಿಗೆ (Public) ಸಹಾಯವಾಗಲೆಂದು ಭಾರತ ಸರ್ಕಾರವು (Indian Government) ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಅನ್ನು (PPF) ಹಲವಾರು ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದು ಸಣ್ಣ ಉಳಿತಾಯಗಾರರಿಗೆ (Saving) ತುಂಬಾನೇ ಪ್ರಯೋಜನವನ್ನು ನೀಡುತ್ತದೆ, ಅವರು ಪ್ರತಿ ತಿಂಗಳು ಅವರಿಗೆ ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡಿದರೆ ಸಾಕು, ಅದು ಮುಂದೆ ದೊಡ್ಡ ಮೊತ್ತದ ಆದಾಯವನ್ನು ತರಬಲ್ಲದು.
ಇದು ಭಾರತದ ಅತ್ಯಂತ ಜನಪ್ರಿಯ ಸರ್ಕಾರಿ-ಬೆಂಬಲಿತ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಪಿಪಿಎಫ್ ತನ್ನ ವೈಶಿಷ್ಟ್ಯದೊಂದಿಗೆ ತೆರಿಗೆಗಳನ್ನು ಉಳಿಸಲು ಸಾರ್ವಜನಿಕರಿಗೆ ಆಯ್ಕೆಯನ್ನು ಒದಗಿಸುವ ಕೆಲವೇ ಯೋಜನೆಗಳಲ್ಲಿ ಒಂದಾಗಿದೆ, ಅಂದರೆ ಇದು ಸಂಪೂರ್ಣವಾಗಿ ತೆರಿಗೆ ಮುಕ್ತ ಉಳಿತಾಯ ಆಯ್ಕೆಯಾಗಿದೆ.
1968 ರಲ್ಲಿ ಹಣಕಾಸು ಸಚಿವಾಲಯದ ನ್ಯಾಷನಲ್ ಸೇವಿಂಗ್ಸ್ ಇನ್ಸ್ಟಿಟ್ಯೂಟ್ ಪರಿಚಯಿಸಿದ ಪಿಪಿಎಫ್ ಭಾರತೀಯರಿಗೆ ಒಂದು ಪ್ರಬಲ ಸಾಧನವಾಗಿ ಮಾರ್ಪಟ್ಟಿದೆ, ಇದರಲ್ಲಿ ಅವರು ತೆರಿಗೆ ಪ್ರಯೋಜನಗಳನ್ನು ಸಹ ಪಡೆಯಬಹುದು.
ಪಿಪಿಎಫ್ ಬಡ್ಡಿದರ ಮತ್ತು ಮೆಚ್ಯೂರಿಟಿ
ಪ್ರಸ್ತುತ, ಪಿಪಿಎಫ್ ವಾರ್ಷಿಕವಾಗಿ ಶೇಕಡಾ 7.1 ರಷ್ಟು ಬಡ್ಡಿದರವನ್ನು ನೀಡುತ್ತದೆ ಮತ್ತು ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ ಹೂಡಿಕೆದಾರರು ತಮ್ಮ ಪಿಪಿಎಫ್ ಖಾತೆಯಲ್ಲಿ ಸತತ 15 ವರ್ಷಗಳವರೆಗೆ ತಮ್ಮ ಹಣವನ್ನು ಹೂಡಿಕೆ ಮಾಡಬಹುದು.
ಇದನ್ನೂ ಓದಿ: Minimum Wages: ಕಾರ್ಮಿಕರೆಲ್ಲ ತಿಳಿದಿರಲೆಬೇಕಾದ ಸುದ್ದಿ ಇದು, ಸರ್ಕಾರದಿಂದ ಕನಿಷ್ಠ ವೇತನ ಜಾರಿ!
ಆದಾಗ್ಯೂ, 15 ವರ್ಷಗಳ ಕೊನೆಯಲ್ಲಿ ಹಣದ ಅಗತ್ಯವಿಲ್ಲದಿದ್ದರೆ, ಅವರು ಆ ಪಿಪಿಎಫ್ ಖಾತೆಯ ಅವಧಿಯನ್ನು ಅಗತ್ಯವಿರುವಷ್ಟು ವರ್ಷಗಳವರೆಗೆ ವಿಸ್ತರಿಸಬಹುದು. ಪಿಪಿಎಫ್ ಖಾತೆ ವಿಸ್ತರಣೆ ಅರ್ಜಿಯನ್ನು ಸಲ್ಲಿಸುವ ಮೂಲಕ ಅದನ್ನು ಇನ್ನೂ ಐದು ವರ್ಷಗಳ ತನಕ ಬ್ಲಾಕ್ ಮಾಡಬಹುದು. ಹೂಡಿಕೆದಾರರು ತಮ್ಮ ಪಿಪಿಎಫ್ ಖಾತೆಗಳಲ್ಲಿ ವರ್ಷಕ್ಕೆ 500 ರೂಪಾಯಿಗಳಿಂದ ಹಿಡಿದು 1.5 ಲಕ್ಷ ರೂಪಾಯಿಯವರೆಗೆ ಹೂಡಿಕೆ ಮಾಡಬಹುದು.
ದಿನಕ್ಕೆ 417 ರೂಪಾಯಿ ಹೂಡಿಕೆ ಮಾಡಿ, ಕೋಟ್ಯಧಿಪತಿಯಾಗಿ
ಉತ್ತಮ ಬಡ್ಡಿ ಆದಾಯ, ಹೆಚ್ಚಿನ ಜನಪ್ರಿಯತೆ, ಕಡಿಮೆ ಅಪಾಯ ಮತ್ತು ತೆರಿಗೆ ಮುಕ್ತ ಸ್ವಭಾವದೊಂದಿಗೆ, ಪಿಪಿಎಫ್ ಹೂಡಿಕೆದಾರರು ಸರಿಯಾಗಿ ಹೂಡಿಕೆ ಮಾಡಿದರೆ 1 ಕೋಟಿ ರೂಪಾಯಿಯಗಳವರೆಗೆ ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಹೂಡಿಕೆದಾರರು ಕೆಳಗೆ ಉಲ್ಲೇಖಿಸಿದ ವಿಧಾನವನ್ನು ಅನುಸರಿಸಬೇಕು.
ನಿಮ್ಮ ಪಿಪಿಎಫ್ ಖಾತೆಯಲ್ಲಿ ನೀವು ದಿನಕ್ಕೆ 417 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಮಾಸಿಕ ಹೂಡಿಕೆ ಮೌಲ್ಯವು ಸುಮಾರು 12,500 ರೂಪಾಯಿಯಾಗುತ್ತದೆ. ಇದರರ್ಥ, ಪ್ರತಿ ವರ್ಷ ನೀವು ನಿಮ್ಮ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ 1,50,000 ರೂಪಾಯಿಗಳಿಗಿಂತ ಸ್ವಲ್ಪ ಹೆಚ್ಚು ಹೂಡಿಕೆ ಮಾಡುತ್ತಿದ್ದೀರಿ ಎಂದರ್ಥ. ಹೀಗೆ 15 ವರ್ಷಗಳಲ್ಲಿ, ಒಟ್ಟು ಸಂಗ್ರಹವಾದ ಮೊತ್ತವು 40.58 ಲಕ್ಷ ರೂಪಾಯಿಗಳಾಗಿರುತ್ತದೆ ಮತ್ತು ತದನಂತರ ನೀವು ತಲಾ ಐದು ವರ್ಷಗಳ ಬ್ಲಾಕ್ ಮಾಡುವುದರ ಮೂಲಕ ಎರಡು ಬಾರಿ ಅವಧಿಯನ್ನು ವಿಸ್ತರಿಸಬೇಕಾಗುತ್ತದೆ.
ಇದನ್ನೂ ಓದಿ: Money Tips: ಬ್ಯಾಂಕ್‌ನಲ್ಲಿ ಕ್ಲೈಮ್ ಮಾಡದ ಹಣವನ್ನು ಹೀಗೆ ಪಡೆದುಕೊಳ್ಳಿ! ತುಂಬಾ ಸಿಂಪಲ್ ರೀ
ನೀವು 25ನೇ ವಯಸ್ಸಿನಿಂದ 50ನೇ ವಯಸ್ಸಿನವರೆಗೆ, ಅಂದರೆ 25 ವರ್ಷಗಳವರೆಗೆ ಇದನ್ನು ಮುಂದುವರಿಸಿದರೆ, ಮೆಚ್ಯೂರಿಟಿ ಸಮಯದಲ್ಲಿ ನೀವು ಪಡೆಯುವ ಮೊತ್ತವು 1.03 ಕೋಟಿ ರೂಪಾಯಿ ಆಗಿರುತ್ತದೆ. ಈ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ ಮತ್ತು ಗಳಿಸಿದ ಒಟ್ಟು ಬಡ್ಡಿ ಸುಮಾರು 66 ಲಕ್ಷವಾಗಿರುತ್ತದೆ. 25 ವರ್ಷಗಳಲ್ಲಿ ನೀವು ಠೇವಣಿ ಇಟ್ಟಿರುವ ಒಟ್ಟು ಮೊತ್ತ ಸುಮಾರು 37 ಲಕ್ಷ ರೂಪಾಯಿ ಆಗಿರುತ್ತದೆ.
ಹೆಚ್ಚಿನ ಆದಾಯ ಪಡೆಯಲು ಉತ್ತಮ ಮಾರ್ಗ
ಈ ಯೋಜನೆಯಲ್ಲಿ ನಿಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ಪಡೆಯಲು ಉತ್ತಮ ಮಾರ್ಗವೆಂದರೆ ಬಡ್ಡಿಯನ್ನು ಮಾಸಿಕವಾಗಿ ಲೆಕ್ಕ ಹಾಕುವುದರಿಂದ ಪ್ರತಿ ತಿಂಗಳ 1 ರಿಂದ 5ನೇ ತಾರೀಖಿನ ನಡುವೆ ಹಣವನ್ನು ಠೇವಣಿ ಇಡುವುದು ಎಂದು ಸಹ ಉಲ್ಲೇಖಿಸಬೇಕು.ಆದಾಗ್ಯೂ, ನೀವು ಇಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ನೀವು ವರ್ಷಕ್ಕೆ 500 ರೂಪಾಯಿಗಳಷ್ಟು ಕಡಿಮೆ ಹಣವನ್ನು ಸಹ ನೀವು ಹೂಡಿಕೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ