ನೀವು ಹಣವನ್ನು FD ಮಾಡಲು ಪ್ಲ್ಯಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ಈ ಬ್ಯಾಂಕುಗಳ ಬಡ್ಡಿದರಗಳನ್ನೊಮ್ಮೆ ನೋಡಿ

ಇತ್ತೀಚೆಗೆ, ಹಲವಾರು ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಉದಾಹರಣೆಗೆ, ಎಸ್‌ಬಿಐ ನ ಸ್ಥಿರ ಠೇವಣಿ ಬಡ್ಡಿದರಗಳು, ಬ್ಯಾಂಕ್ ಆಫ್ ಬರೋಡಾ ಸ್ಥಿರ ಠೇವಣಿ ಬಡ್ಡಿ ದರಗಳು ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಿರ ಠೇವಣಿ ಬಡ್ಡಿದರಗಳನ್ನು ಕಳೆದ ಎರಡು ವಾರಗಳಲ್ಲಿ ಹೆಚ್ಚಿಸಲಾಗಿದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಸಾಮಾನ್ಯವಾಗಿ ಜನರು ತಮ್ಮ ಹಣವನ್ನು (Money) ಎಲ್ಲಿ ಹೂಡಿಕೆ (Investment)ಮಾಡುವುದು ಅಂತ ತುಂಬಾನೇ ತಲೆ ಕೆಡೆಸಿಕೊಂಡಿರುವುದನ್ನು ನಾವು ನೋಡುತ್ತೇವೆ. ಕೊನೆಗೆ ಅನೇಕ ಜನರು ತಮ್ಮ ಬಳಿ ಇರುವ ಆ ಭಾರಿ ಮೊತ್ತದ ಹಣವನ್ನು ಈ ಬ್ಯಾಂಕುಗಳಲ್ಲಿ (Bank) ಸ್ಥಿರ/ನಿಶ್ಚಿತ ಠೇವಣಿ ಎಂದರೆ ಎಫ್‌ಡಿ ಮಾಡಿ ಬಿಡುತ್ತಾರೆ. ಆದರೆ ಇದನ್ನು ಮಾಡುವ ಮುಂಚೆ ಸ್ವಲ್ಪ ನೀವು ಕೆಲವು ಬ್ಯಾಂಕುಗಳು ಈ ಎಫ್‌ಡಿ ಗಳ ಮೇಲೆ ಒದಗಿಸುವಂತಹ ಬಡ್ಡಿದರಗಳನ್ನು (Interest rate) ಒಮ್ಮೆ ಪರಿಶೀಲಿಸಿ ನೋಡಿದರೆ ನಿಮಗೆ ಹೆಚ್ಚಿನ ಬಡ್ಡಿ ದೊರಕಬಹುದಲ್ಲವೇ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಜೂನ್ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ತನ್ನ ರೆಪೋ ದರಗಳನ್ನು ಹೆಚ್ಚಿಸುವುದನ್ನು ಮುಂದುವರಿಸಿದ್ದರಿಂದ, ಬ್ಯಾಂಕುಗಳು ಸಹ ಇದನ್ನು ಅನುಸರಿಸಿದವು ಮತ್ತು ತಮ್ಮ ಬಡ್ಡಿದರಗಳನ್ನು ಹೆಚ್ಚಿಸಿದವು ಎಂದು ಹೇಳಬಹುದು.

ಇದು ಬ್ಯಾಂಕ್ ನಿಶ್ಚಿತ ಠೇವಣಿ ಬಡ್ಡಿದರಗಳ ಹೆಚ್ಚಳವನ್ನು ಒಳಗೊಂಡಿದೆ. ಇತ್ತೀಚೆಗೆ, ಹಲವಾರು ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಉದಾಹರಣೆಗೆ, ಎಸ್‌ಬಿಐ ನ ಸ್ಥಿರ ಠೇವಣಿ ಬಡ್ಡಿದರಗಳು, ಬ್ಯಾಂಕ್ ಆಫ್ ಬರೋಡಾ ಸ್ಥಿರ ಠೇವಣಿ ಬಡ್ಡಿ ದರಗಳು ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಿರ ಠೇವಣಿ ಬಡ್ಡಿದರಗಳನ್ನು ಕಳೆದ ಎರಡು ವಾರಗಳಲ್ಲಿ ಹೆಚ್ಚಿಸಲಾಗಿದೆ ನೋಡಿ.

1. ಜೂನ್ 14, 2022 ರಿಂದ ಜಾರಿಗೆ ಬಂದಿರುವ 2 ಕೋಟಿ ರೂಪಾಯಿಗಿಂತಲೂ ಕಡಿಮೆ ಠೇವಣಿಗಳ ಮೇಲಿನ ಎಸ್ಬಿಐ ಬ್ಯಾಂಕ್ ನ ನಿಶ್ಚಿತ ಠೇವಣಿ ಬಡ್ಡಿದರಗಳು ಇಲ್ಲಿವೆ:

 • 7 ದಿನಗಳಿಂದ 45 ದಿನಗಳು: ಸಾಮಾನ್ಯ ಜನರಿಗೆ 2.90 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 3.40 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 46 ರಿಂದ 179 ದಿನಗಳು: ಸಾಮಾನ್ಯ ಜನರಿಗೆ 3.90 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 4.40 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 180 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ: ಸಾಮಾನ್ಯ ಜನರಿಗೆ 4.60 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.10 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಗೆ: ಸಾಮಾನ್ಯ ಜನರಿಗೆ 5.30 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.80 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಗೆ: ಸಾಮಾನ್ಯ ಜನರಿಗೆ 5.35 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.85 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಗೆ: ಸಾಮಾನ್ಯ ಜನರಿಗೆ 5.45 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.95 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 5 ವರ್ಷದಿಂದ 10 ವರ್ಷಗಳವರೆಗೆ: ಸಾಮಾನ್ಯ ಜನರಿಗೆ 5.50 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 6.30 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.


2. ಜೂನ್ 14, 2022 ರಿಂದ ಜಾರಿಗೆ ಬಂದಿರುವ 2 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿಗಳ ಮೇಲಿನ ಪಿಎನ್ಬಿ ಸ್ಥಿರ ಠೇವಣಿ ಬಡ್ಡಿದರಗಳು ಇಲ್ಲಿವೆ:

 • 7 ದಿನಗಳಿಂದ 14 ದಿನಗಳು: ಸಾಮಾನ್ಯ ಜನರಿಗೆ 3.00 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3.50 ಬಡ್ಡಿದರವನ್ನು ಒದಗಿಸುತ್ತಿದೆ.

 • 15 ದಿನಗಳಿಂದ 29 ದಿನಗಳು: ಸಾಮಾನ್ಯ ಜನರಿಗೆ 3.00 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3.50 ಬಡ್ಡಿದರವನ್ನು ಒದಗಿಸುತ್ತಿದೆ.

 • 30 ದಿನಗಳಿಂದ 45 ದಿನಗಳು: ಸಾಮಾನ್ಯ ಜನರಿಗೆ 3.00 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3.50 ಬಡ್ಡಿದರವನ್ನು ಒದಗಿಸುತ್ತಿದೆ.

 • 46 ರಿಂದ 90 ದಿನಗಳು: ಸಾಮಾನ್ಯ ಜನರಿಗೆ 3.25 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3.75 ಬಡ್ಡಿದರವನ್ನು ಒದಗಿಸುತ್ತಿದೆ.

 • 91 ರಿಂದ 179 ದಿನಗಳು: ಸಾಮಾನ್ಯ ಜನರಿಗೆ 4.00 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 4.50 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 180 ರಿಂದ 270 ದಿನಗಳು: ಸಾಮಾನ್ಯ ಜನರಿಗೆ 4.50 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.00 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 271 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ: ಸಾಮಾನ್ಯ ಜನರಿಗೆ 4.50 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.00 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 1 ವರ್ಷದ ಅವಧಿಗೆ: ಸಾಮಾನ್ಯ ಜನರಿಗೆ 5.20 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 5.70 ಬಡ್ಡಿದರವನ್ನು ಒದಗಿಸುತ್ತದೆ.

 • 1 ವರ್ಷದಿಂದ 2 ವರ್ಷ ಅವಧಿಯವರೆಗೆ: ಸಾಮಾನ್ಯ ಜನರಿಗೆ 5.20 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 5.70 ಬಡ್ಡಿದರವನ್ನು ಒದಗಿಸುತ್ತಿದೆ.

 • 2 ರಿಂದ 3 ವರ್ಷ ಅವಧಿಯವರೆಗೆ: ಸಾಮಾನ್ಯ ಜನರಿಗೆ 5.30 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.80 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 3 ರಿಂದ 5 ವರ್ಷ ಅವಧಿಯವರೆಗೆ: ಸಾಮಾನ್ಯ ಜನರಿಗೆ 5.50 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.00 ಬಡ್ಡಿದರವನ್ನು ಒದಗಿಸುತ್ತಿದೆ.

 • 5 ರಿಂದ 10 ವರ್ಷ ಅವಧಿಗೆ: ಸಾಮಾನ್ಯ ಜನರಿಗೆ 5.60 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.10 ಬಡ್ಡಿದರವನ್ನು ಒದಗಿಸುತ್ತಿದೆ.

 • 1111 ದಿನಗಳು: ಸಾಮಾನ್ಯ ಜನರಿಗೆ 5.50 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.00 ಬಡ್ಡಿದರವನ್ನು ಒದಗಿಸುತ್ತಿದೆ.


3. ಜೂನ್ 14, 2022 ರಿಂದ ಜಾರಿಗೆ ಬಂದಿರುವಂತೆ 2 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿಗಳ ಮೇಲಿನ ಬ್ಯಾಂಕ್ ಆಫ್ ಬರೋಡಾ ಸ್ಥಿರ ಠೇವಣಿ ಬಡ್ಡಿ ದರಗಳು ಇಲ್ಲಿವೆ:

 • 7 ದಿನಗಳಿಂದ 14 ದಿನಗಳು: ಸಾಮಾನ್ಯ ಜನರಿಗೆ 2.80 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3.30 ಬಡ್ಡಿದರವನ್ನು ಒದಗಿಸುತ್ತಿದೆ.

 • 15 ರಿಂದ 45 ದಿನಗಳು: ಸಾಮಾನ್ಯ ಜನರಿಗೆ 2.80 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3.30 ಬಡ್ಡಿದರವನ್ನು ಒದಗಿಸುತ್ತಿದೆ.

 • 46 ರಿಂದ 90 ದಿನಗಳು: ಸಾಮಾನ್ಯ ಜನರಿಗೆ 3.70 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 4.20 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 91 ರಿಂದ 180 ದಿನಗಳು: ಸಾಮಾನ್ಯ ಜನರಿಗೆ 3.70 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 4.20 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 181 ರಿಂದ 270 ದಿನಗಳು: ಸಾಮಾನ್ಯ ಜನರಿಗೆ 4.30 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 4.80 ಬಡ್ಡಿದರವನ್ನು ಒದಗಿಸುತ್ತಿದೆ.

 • 271 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ: ಸಾಮಾನ್ಯ ಜನರಿಗೆ 4.40 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 4.90 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 1 ವರ್ಷ ಅವಧಿಗೆ: ಸಾಮಾನ್ಯ ಜನರಿಗೆ 5.00 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 5.50 ಪ್ರತಿಶತ ಬಡ್ಡಿದರವನ್ನು ಒದಗಿಸುತ್ತಿದೆ.

 • 1 ವರ್ಷದಿಂದ 400 ದಿನದ ಅವಧಿಯವರೆಗೆ: ಸಾಮಾನ್ಯ ಜನರಿಗೆ 5.45 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 5.95 ಬಡ್ಡಿದರವನ್ನು ಒದಗಿಸುತ್ತಿದೆ.

 • 400 ದಿನಗಳಿಂದ 2 ವರ್ಷಗಳ ಅವಧಿಯವರೆಗೆ: ಸಾಮಾನ್ಯ ಜನರಿಗೆ 5.45 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 5.95 ಬಡ್ಡಿದರವನ್ನು ಒದಗಿಸುತ್ತಿದೆ.

 • 2 ವರ್ಷ ಮೇಲ್ಪಟ್ಟ ಮತ್ತು 3 ವರ್ಷಗಳ ಒಳಗಿನ ಅವಧಿಗೆ: ಸಾಮಾನ್ಯ ಜನರಿಗೆ 5.50 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.00 ಬಡ್ಡಿದರವನ್ನು ಒದಗಿಸುತ್ತಿದೆ.

 • 3 ವರ್ಷ ಮೇಲ್ಪಟ್ಟ ಮತ್ತು 5 ವರ್ಷಗಳ ಒಳಗಿನ ಅವಧಿಗೆ: ಸಾಮಾನ್ಯ ಜನರಿಗೆ 5.35 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.00 ಬಡ್ಡಿದರವನ್ನು ಒದಗಿಸುತ್ತಿದೆ.

 • 5 ವರ್ಷ ಮೇಲ್ಪಟ್ಟ ಮತ್ತು 10 ವರ್ಷ ಒಳಗಿನ ಅವಧಿಗೆ: ಸಾಮಾನ್ಯ ಜನರಿಗೆ 5.35 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.00 ಬಡ್ಡಿದರವನ್ನು ಒದಗಿಸುತ್ತಿದೆ.

 • 10 ವರ್ಷ ಮೇಲ್ಪಟ್ಟ ಅವಧಿಗೆ (ಎಂಎಸಿಟಿ/ ಎಂಎಸಿಎಡಿ ಕೋರ್ಟ್ ಆರ್ಡರ್ ಸ್ಕೀಮ್ ಗಳಿಗೆ ಮಾತ್ರ): ಸಾಮಾನ್ಯ ಜನರಿಗೆ 5.10 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 6.35 ಬಡ್ಡಿದರವನ್ನು ಒದಗಿಸುತ್ತಿದೆ.

Published by:Ashwini Prabhu
First published: