Anand Mahindra: ಟಾಟಾ ಮೋಟಾರ್ಸ್ ಬಗ್ಗೆ ಆನಂದ್ ಮಹಿಂದ್ರಾ ಹೀಗಂದ್ರು, ನಿಮ್ಗೂ ಇದು ಸರಿ ಅನ್ಸುತ್ತಾ?

ಅನೇಕ ರೀತಿಯ ಜೀವನಕ್ಕೆ ಮಾರ್ಗದರ್ಶನವಾಗುವ ಮತ್ತು ಮನಸ್ಸಿಗೆ ಹಿತ ಎನ್ನಿಸುವ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಮಹೀಂದ್ರಾ ಅವರು. ಈಗ ಮತ್ತೊಮ್ಮೆ ಸುದ್ದಿಯಲ್ಲಿ ಇರುವುದು ಅವರು ಹಂಚಿಕೊಳ್ಳುವ ಪೋಸ್ಟ್ ಗಳಿಂದಲ್ಲ ಬಿಡಿ, ಈ ಬಾರಿ ಅವರು ತಮ್ಮ ಉದ್ದಿಮೆಯಲ್ಲಿ ತಮ್ಮ ಸ್ಪರ್ಧಿಯ ಬಗ್ಗೆ ಹೇಳಿದ ಒಂದು ಒಳ್ಳೆಯ ಮಾತಿನಿಂದ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು.

ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ

  • Share this:
ಒಬ್ಬ ಜನಪ್ರಿಯ ಉದ್ಯಮಿ ಸದಾ ತಮ್ಮ ಒಂದಲ್ಲ ಒಂದು ಒಳ್ಳೆಯ, ಸಕರಾತ್ಮಕವಾದ ಮತ್ತು ಮನಸ್ಸಿಗೆ ಮುದ ನೀಡುವಂತಹ ಪೋಸ್ಟ್, ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಳ್ಳುತ್ತಾರೆ ಅಂತ ಹೇಳಿದರೆ ಬಹುತೇಕರಿಗೆ ನೆನಪಾಗುವುದು ಮಹೀಂದ್ರಾ ಗ್ರೂಪ್ (Mahindra Group) ಅಧ್ಯಕ್ಷರಾದ ಆನಂದ್ ಮಹೀಂದ್ರಾ (Anand Mahindra) ಅವರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಸದಾ ಒಂದಲ್ಲ ಒಂದು ಒಳ್ಳೆಯ ವಿಚಾರವನ್ನು ತಮ್ಮ ಫಾಲೋವರ್ಸ್ ಗಳಿಗಾಗಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳ ಪುಟಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಅಂತ ಹೇಳಬಹುದು. ಕಳೆದ ಬಾರಿ ಕರ್ನಾಟಕದ ಶೃಂಗೇರಿ ದೇವಸ್ಥಾನದಲ್ಲಿ ತಟ್ಟೆಗಳನ್ನು ನೀಟಾಗಿ ಜೋಡಿಸಿಟ್ಟ ಫೋಟೋವನ್ನು ಮರು ಹಂಚಿಕೊಂಡಿದ್ದರು.

ಹೀಗೆ ಅನೇಕ ರೀತಿಯ ಜೀವನಕ್ಕೆ ಮಾರ್ಗದರ್ಶನವಾಗುವ ಮತ್ತು ಮನಸ್ಸಿಗೆ ಹಿತ ಎನ್ನಿಸುವ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಮಹೀಂದ್ರಾ ಅವರು. ಈಗ ಮತ್ತೊಮ್ಮೆ ಸುದ್ದಿಯಲ್ಲಿ ಇರುವುದು ಅವರು ಹಂಚಿಕೊಳ್ಳುವ ಪೋಸ್ಟ್ ಗಳಿಂದಲ್ಲ ಬಿಡಿ, ಈ ಬಾರಿ ಅವರು ತಮ್ಮ ಉದ್ದಿಮೆಯಲ್ಲಿ ತಮ್ಮ ಸ್ಪರ್ಧಿಯ ಬಗ್ಗೆ ಹೇಳಿದ ಒಂದು ಒಳ್ಳೆಯ ಮಾತಿನಿಂದ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು.

ಟಾಟಾ ಕಾರುಗಳ ಬಗ್ಗೆ ಆನಂದ್ ಮಹಿಂದ್ರಾ ಅವರ ಪ್ರತಿಕ್ರಿಯೆ 
ಯಾರು ಆನಂದ್ ಮಹೀಂದ್ರಾ ಅವರ ಸ್ಪರ್ಧಿ ಅಂತ ನೀವೆಲ್ಲಾ ತಿಳಿದುಕೊಳ್ಳಲು ತುಂಬಾನೇ ಕಾತುರರಾಗಿರುತ್ತೀರಿ ಅಂತ ನಮಗೆ ಗೊತ್ತಿದೆ. ಆ ಸ್ಪರ್ಧಿ ಬೇರೆ ಯಾರು ಅಲ್ಲ, ಟಾಟಾ ಮೋಟಾರ್ಸ್ ಆಗಿದೆ. ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕೇಳಿದಂತಹ ಪ್ರಶ್ನೆಗೆ ಉತ್ತರಿಸುತ್ತಾ “ಟಾಟಾ ಮೋಟಾರ್ಸ್ ನಂತಹ ಪ್ರಬಲ ಪ್ರತಿಸ್ಪರ್ಧಿಗಳನ್ನು ಹೊಂದಿರುವುದು ಒಂದು ಸುಯೋಗವಾಗಿದೆ ಮತ್ತು ಸ್ಪರ್ಧೆಯು ಹೊಸ ಹೊಸ ಅನ್ವೇಷಣೆಗಳನ್ನು ಮಾಡಲು ಉತ್ತೇಜಿಸುತ್ತದೆ” ಎಂದು ಮಹೀಂದ್ರಾ ಅವರು ಸೋಮವಾರ ಹೇಳಿದ್ದಾರೆ. ಟಾಟಾ ಕಾರುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ ಟ್ವಿಟರ್ ಬಳಕೆದಾರರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.



ಇತರ ಟ್ವಿಟರ್ ಬಳಕೆದಾರರೊಂದಿಗೆ ಸಂವಾದ ನಡೆಸಿದ ಕೈಗಾರಿಕೋದ್ಯಮಿ ಮಹೀಂದ್ರಾ ಅವರು ಪರಿಚಯಿಸಿದ ಮಹೀಂದ್ರಾ ಎಕ್ಸ್‌ಯುವಿ ಯ ಬಗ್ಗೆ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಮಹೀಂದ್ರಾ ಮೋಟಾರ್ಸ್ "ಸುರಕ್ಷತಾ ವೈಶಿಷ್ಟ್ಯಗಳು, ಸ್ಟೀರಿಂಗ್, ಆಸನಗಳು, ಲೆಗ್ ಸ್ಪೇಸ್ ಮತ್ತು ಗ್ಯಾಜೆಟ್" ಗಳ ಬಗ್ಗೆ ಶ್ಲಾಘಿಸಿದ್ದಕ್ಕಾಗಿ ಅವರಲ್ಲಿ ಒಬ್ಬರಿಗೆ ಧನ್ಯವಾದ ಸಹ ಆನಂದ್ ಅವರು ಹೇಳಿದರು.

ಇದನ್ನೂ ಓದಿ:  Startup: ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾ ಸ್ವಂತ ಉದ್ದಿಮೆ ಶುರು ಮಾಡಿ ಯಶಸ್ಸಿನ ಪಥ ಹಿಡಿದ ದಂಪತಿ

"ವಾಹನಗಳ ಬಗ್ಗೆ ನಮಗೆ ಯಾವುದೇ ರೀತಿಯ ಪಕ್ಷಪಾತವಿಲ್ಲದ ಪ್ರತಿಕ್ರಿಯೆಗಳು ಸಿಗುವುದೇ ವಾಹನ ಬಳಕೆದಾರರಿಂದ ಮತ್ತು ನಮಗೆ ನಮ್ಮ ವಾಹನಗಳ ಬಗ್ಗೆ ಜನರಿಂದ ಅತ್ಯುತ್ತಮ ಅನುಮೋದನೆಗಳು ಬಂದಿವೆ. ಇದನ್ನೆಲ್ಲಾ ಕೇಳಿ ನಾನು ತುಂಬಾನೇ ಸಂತೋಷವಾಗಿದ್ದೇನೆ. ಇದುವೇ ನಮಗೆ ಒಂದು ದೊಡ್ಡ ಜಾಹೀರಾತು ಇದ್ದಂತೆ.. ನಿಮಗೆ ಧನ್ಯವಾದಗಳು. ಮತ್ತು ನನ್ನ ಉತ್ಸಾಹವನ್ನು ಲಘುವಾಗಿ ತೆಗೆದುಕೊಳ್ಳಬಹುದು, ಆದರೆ ಇದು ನನ್ನ ಇಡೀ ಮಹೀಂದ್ರಾ ಮೋಟಾರ್ಸ್ ತಂಡದಿಂದ ಹುಟ್ಟಿದ್ದು, ವಾಸ್ತವವಾಗಿ ಅವರನ್ನು ಪ್ಯಾಷನರ್ಸ್ ಎಂದು ಕರೆಯಲಾಗುತ್ತದೆ" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಮಹೀಂದ್ರಾ ಅವರ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಟ್ವಿಟ್ಟರ್ ಬಳಕೆದಾರರು
ಮಹೀಂದ್ರಾ ಅವರ ಪ್ರತಿಕ್ರಿಯೆಗೆ ಹಲವಾರು ಟ್ವಿಟ್ಟರ್ ಬಳಕೆದಾರರು ಸಹ ತಮ್ಮ ಒಪ್ಪಿಗೆಯನ್ನು ಸೂಚಿಸಿದರು ಮತ್ತು ಮೆಚ್ಚುಗೆ ಸಹ ವ್ಯಕ್ತ ಪಡಿಸಿದರು. "ಸಾಮಾನ್ಯವಾಗಿ ಪ್ರತಿಸ್ಪರ್ಧಿಯನ್ನು ಹೊಗಳುವ ಜನರು ಯಾವುದೇ ಉದ್ದಿಮೆಯಲ್ಲಿ ತುಂಬಾನೇ ವಿರಳವಾಗಿರುತ್ತಾರೆ. ನಿಮ್ಮಿಂದ ಬರುವ ಆ ಮಾತುಗಳು ಗಮನಾರ್ಹವಾಗಿದೆ.. ನೀವು ಉದ್ಯಮವನ್ನು ನೋಡುವ ರೀತಿಯನ್ನು ಇದು ತೋರಿಸುತ್ತದೆ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದರು.

ಇದನ್ನೂ ಓದಿ:  Renault Triber: ಜಸ್ಟ್​ 5,999 ರೂಪಾಯಿ ಕೊಟ್ಟು ಈ 7 ಸೀಟರ್​ ಕಾರನ್ನು ಮನೆಗೆ ತನ್ನಿ! ಮೈಲೇಜೂ ಸೂಪರ್​ ಬಾಸ್​

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಕೆ.ಟಿ.ವೆಂಕಟಾಚಲ ಅವರು "ಕಾರು ಉದ್ಯಮದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಉತ್ತಮ ವಿಷಯಗಳು ಜನರ ಬಳಿಗೆ ಬರುತ್ತಲೇ ಇರುತ್ತವೆ" ಎಂದು ಕಾಮೆಂಟ್ ಮಾಡಿದರು.
Published by:Ashwini Prabhu
First published: