ಹೆದ್ದಾರಿಗಳಲ್ಲಿ (Highway) ಪ್ರಯಾಣಿಸುವ ಜನರು ಸಾಮಾನ್ಯವಾಗಿ ಫಾಸ್ಟ್‌ಟ್ಯಾಗ್ (FASTag)ಬಗ್ಗೆ ತಿಳಿದಿರುತ್ತಾರೆ. ರಾಷ್ಟ್ರೀಯ ಹೆದ್ದಾರಿಗಳು (National Highway) ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ (Express way) ಟೋಲ್ (Toll) ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಲಭ ಮತ್ತು ವೇಗವಾಗಿ ಮಾಡಲು ಫಾಸ್ಟ್‌ಟ್ಯಾಗ್ ಬಳಕೆ ಉಪಯುಕ್ತವಾಗಿದೆ. ಸಾಮಾನ್ಯವಾಗಿ ಜನರು ಫಾಸ್ಟ್‌ಟ್ಯಾಗ್ ಬರೀ ಟೋಲ್ ಹಣ ಕಟ್ಟುವುದಕ್ಕೆ ಮಾತ್ರ ಅಂದುಕೊಂಡಿದ್ದಾರೆ. ಆದರೆ ಬರೀ ಟೋಲ್ ಕಟ್ಟೋದು ಅಲ್ಲ, ಫಾಸ್ಟ್‌ಟ್ಯಾಗ್ ಅನ್ನು ಇತರ ಉದ್ದೇಶಗಳಿಗಾಗಿ ಸಹ ಬಳಸಬಹುದು. ಇದನ್ನು ನೀವು ತಿಳಿದುಕೊಂಡರೇ ನಿಜಕ್ಕೂ ಶಾಕ್ ಆಗ್ತೀರಾ? ಇದೆಲ್ಲಾ ಸಾಧ್ಯನಾ? ಅಂತ ಕೇಳ್ತಿರಾ.
ನಿಮ್ಮ ಕಾರಿಗೆ ರಕ್ಷಣೆ ನೀಡುತ್ತೆ ಈ ಫಾಸ್ಟ್‌ಟ್ಯಾಗ್!
ಫಾಸ್ಟ್‌ಟ್ಯಾಗ್ ನಿಮ್ಮ ಕಾರಿಗೆ ಭದ್ರತೆಯನ್ನು ಒದಗಿಸುವ ಗುಪ್ತ ವೈಶಿಷ್ಟ್ಯದೊಂದಿಗೆ ಬರುತ್ತದೆ. ಫಾಸ್ಟ್‌ಟ್ಯಾಗ್ ನಿಮ್ಮ ಕಾರನ್ನು ಕಳ್ಳತನದಿಂದ ರಕ್ಷಿಸುತ್ತದೆ. ಇದು ನಿಮ್ಮ ಕಾರನ್ನು ಕಾವಲುಗಾರನಂತೆ ನೋಡಿಕೊಳ್ಳುತ್ತದೆ. FASTag ಎಂಬುದು ಕಾರಿನ ವಿಂಡ್‌ಶೀಲ್ಡ್‌ನಲ್ಲಿ ಅನ್ವಯಿಸಲಾದ ಸ್ಟಿಕ್ಕರ್‌ನಂತಹ ಸಾಧನವಾಗಿದೆ. ಈ ಸಣ್ಣ ಸ್ಟಿಕರ್ ಅದು ಹೇಗೆ ನಿಮ್ಮ ಕಾರನ್ನು ಕಾವಲುಗಾರನಂತೆ ನೋಡಿಕೊಳ್ಳುತ್ತೆ ಅಂತ ನೀವು ಕೇಳಬಹುದು.
ಫಾಸ್ಟ್ಟ್ಯಾಗ್ನಿಂದ ಹಣ ಕಟ್ ಆದ್ರೆ ಬರುತ್ತೆ ಮೆಸೇಜ್!
ನಿಮ್ಮ ಕಾರು ಟೋಲ್ ಪ್ಲಾಜಾವನ್ನು ತಲುಪಿದಾಗ, ಸ್ಕ್ಯಾನಿಂಗ್ ಮೂಲಕ ಟೋಲ್ ತೆರಿಗೆ ಮೊತ್ತವನ್ನು ನಿಮ್ಮ ಡಿಜಿಟಲ್ ವ್ಯಾಲೆಟ್‌ನಿಂದ ಕಡಿತಗೊಳಿಸಲಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್‌ಗೆ ಸಂದೇಶವನ್ನು ಕಳುಹಿಸಲಾಗುತ್ತದೆ.
ಕಾರು ಕಳ್ಳತನವಾದ್ರೆ ಟ್ರ್ಯಾಕ್ ಮಾಡಬಹುದು!
ಫಾಸ್ಟ್‌ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿಯನ್ನು ಸಹ ಹೊಂದಿದೆ. ಈ ಕಾರಣದಿಂದಾಗಿ, ಪೊಲೀಸರು ಕೂಡ ಫಾಸ್ಟ್‌ಟ್ಯಾಗ್ ಮೂಲಕ ನಿಮ್ಮ ಕಾರನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಕದ್ದ ಮೊಬೈಲ್ ಅನ್ನು ಹೇಗೆ ಟ್ರ್ಯಾಕ್ ಮಾಡಬಹುದು, ಹಾಗೆಯೇ ನಿಮ್ಮ ಕಾರನ್ನು ಕಳ್ಳತನ ಮಾಡಿದ್ದರೆ ಕಾರನ್ನು ಟ್ರ್ಯಾಕ್ ಮಾಡಬಹುದು. ಆದರೆ ಅದಕ್ಕಾಗಿ ನಿಮ್ಮ ಕಾರಿನಲ್ಲಿ ಫಾಸ್ಟ್‌ಟ್ಯಾಗ್ ಸಕ್ರಿಯವಾಗಿರುವುದು ಅವಶ್ಯಕ.
ಇದನ್ನೂ ಓದಿ: ಫಾಸ್ಟ್‌ಟ್ಯಾಗ್ ಖರೀದಿ ಮತ್ತು ರೀಚಾರ್ಜ್ ಮಾಡುವುದು ಹೇಗೆ?; ಇಲ್ಲಿದೆ ಮಾಹಿತಿ
ಕದ್ದ ಕಾರು ಟೋಲ್ ಪ್ಲಾಜಾ ಮೂಲಕ ಹಾದು ಹೋದಾಗ ಅದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಇದು ಕಾರಿನ ಸ್ಥಳವನ್ನು ತಿಳಿಯುತ್ತದೆ. ಆದರೆ ಅದಕ್ಕಾಗಿ ನೀವು ಯಾವಾಗಲೂ ನಿಮ್ಮ ಕಾರಿನಲ್ಲಿ ಫಾಸ್ಟ್‌ಟ್ಯಾಗ್ ಆ್ಯಕ್ಟೀವ್ ಆಗಿರೋದು ಬಹಳ ಮುಖ್ಯ.
FASTag ಖರೀದಿಸುವುದು ಹೇಗೆ?
ವಾಹನ ರಿಜಿಸ್ಟ್ರೇಷನ್ ದಾಖಲೆಯ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದಾಗಿದೆ. ಮಾತ್ರವಲ್ಲದೆ, ಅಮೆಜಾನ್.ಇನ್ ಮೂಲಕ ಫಾಸ್ಟ್ ಟ್ಯಾಗ್ ಖರೀದಿಸಬಹುದಾಗಿದೆ.
ಫಾಸ್ಟ್ಟ್ಯಾಗ್ಗಾಗಿ ಪಾವತಿ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ಗಳನ್ನು ಸಂಪರ್ಕಿಸಿ ಖರೀದಿಸಬಹುದಾಗಿದೆ. ಪ್ರಸ್ತುತ ಎಚ್ಡಿಎಫ್ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದಾಗಿದೆ. ಅದಕ್ಕಾಗಿ ಬ್ಯಾಂಕ್ಗಳ ಅಧಿಕೃತ ವೆಬ್ಸೈಟ್ಗೆ ತೆರಳಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಬಹುದಾಗದೆ. ಅಷ್ಟು ಮಾತ್ರವಲ್ಲದೆ, ಪೇಟಿಎಂ ಮತ್ತು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಅಪ್ಲಿಕೇಶನ್ ಮೂಲಕ ನೇರವಾಗಿ ಖರೀದಿಸಬಹುದಾಗಿದೆ.
FASTag ವೆಚ್ಚವೆಷ್ಟು?
ಎರಡು ವಿಷಯದ ಮೇಲೆ ಫಾಸ್ಟ್‌ಟ್ಯಾಗ್ ವೆಚ್ಚ ಅವಲಂಬಿತವಾಗಿರುತ್ತದೆ. ಮೊದಲನೆದಾಗಿ ವಾಹನದ ವರ್ಗ-ಕಾರು, ಜೀಪ್, ವ್ಯಾನ್, ಬಸ್ ಅಥವಾ ಟ್ರಕ್ ಇತ್ಯಾದಿ.
ಎರಡನೆಯದಾಗಿ ಬ್ಯಾಂಕ್ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸವವರಿಗೆ ಶುಲ್ಕ ಮತ್ತು ಭದ್ರತಾ ಠೇವಣಿ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ?
ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್-ಡೆಬಿಟ್ ಕಾರ್ಡ್ ಅಥವಾ ಯುಪಿಐ ಬಳಸಿ ರೀಚಾರ್ಜ್ ಮಾಡಬಹುದಾಗಿದೆ. ಪೇಟಿಯಂ ಮತ್ತು ಫೋನ್ಪೇ ಮುಂತಾದ ಮೊಬೈಲ್ ವ್ಯಾಲೆಟ್ಗಳ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ