Indian CEO's Salary: ಭಾರತದಲ್ಲಿ ಸಿಇಒಗಳ ಸಂಭಾವನೆ ಎಷ್ಟಿರುತ್ತೆ? ಅತಿ ಹೆಚ್ಚು ಸ್ಯಾಲರಿ ಪಡೆಯುವವರು ಯಾರು?

ಕಂಪನಿಯ ಅನೇಕ ಕೆಲಸಗಳಿಗೆ ಸಿಇಒ ಜವಾಬ್ದಾರರಾಗಿರುತ್ತಾನೆ. ಅಲ್ಲದೇ ಇವರಿಗೆ ಕಂಪನಿಯಲ್ಲಿ ವೇತನ ಕೂಡ ಅಷ್ಟೇ ಉನ್ನತವಾಗಿರುತ್ತದೆ. ಹಾಗಾದರೆ ಭಾರತದ ಯಾವೆಲ್ಲಾ ಕಂಪನಿಯ ಸಿಇಒಗಳು ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ನಾವಿಲ್ಲಿ ನೋಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಒಂದು ಕಂಪನಿಯನ್ನು (Company) ಸಾರಥಿಯಂತೆ ನಡೆಸುವವರು ಸಿಇಒ (CEO). ಕಂಪನಿಯ ಕಾರ್ಯಸೂಚಿಗಳನ್ನು ನಿಯೋಜಿಸುವುದು ಮತ್ತು ನಿರ್ದೇಶಿಸುವುದು, ಲಾಭದಾಯಕದತ್ತ ಕಂಪನಿಯನ್ನು ಕೊಂಡೊಯ್ಯುವುದು, ಸಾಂಸ್ಥಿಕ ರಚನೆಯನ್ನು ನಿರ್ವಹಿಸುವುದು, ಕಾರ್ಯತಂತ್ರ ಮತ್ತು ಮಂಡಳಿಯೊಂದಿಗೆ ಸಂವಹನವನ್ನು (Communication) ನಡೆಸುವುದು ಹೀಗೆ ಕಂಪನಿಯ ಅನೇಕ ಕೆಲಸಗಳಿಗೆ ಸಿಇಒ ಜವಾಬ್ದಾರರಾಗಿರುತ್ತಾನೆ. ಅಲ್ಲದೇ ಇವರಿಗೆ ಕಂಪನಿಯಲ್ಲಿ ವೇತನ ಕೂಡ ಅಷ್ಟೇ ಉನ್ನತವಾಗಿರುತ್ತದೆ. ಹಾಗಾದರೆ ಭಾರತದ (India) ಯಾವೆಲ್ಲಾ ಕಂಪನಿಯ ಸಿಇಒಗಳು ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ನಾವಿಲ್ಲಿ ನೋಡೋಣ. ನಿಫ್ಟಿಯಲ್ಲಿನ (Nifty) ಟಾಪ್-50 ಕಂಪನಿಗಳ ಸರಾಸರಿ ಸಂಭಾವನೆಯು ವರ್ಷದಿಂದ ವರ್ಷಕ್ಕೆ 22 ಪ್ರತಿಶತದಷ್ಟು ಜಿಗಿದಿದ್ದು, 2021-22ರ ಹಣಕಾಸು ವರ್ಷದಲ್ಲಿ ದಾಖಲೆಯ 28.4 ಕೋಟಿ ರೂ ತಲುಪಿದೆ ಎಂದು ವರದಿಯಾಗಿದೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಸಿಇಒಗಳು

ಸಿ. ವಿಜಯಕುಮಾರ್ -ಎಚ್‌ಸಿಎಲ್ ಟೆಕ್ ಸಿಇಒ
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ಪಟ್ಟಿಯಲ್ಲಿ ಎಚ್‌ಸಿಎಲ್ ಟೆಕ್ ಸಿಇಒ ಸಿ. ವಿಜಯಕುಮಾರ್ ಇದ್ದಾರೆ. ಇತ್ತೀಚೆಗೆ ತನ್ನ ವಾರ್ಷಿಕ ವರದಿಯಲ್ಲಿ ವಿಜಯಕುಮಾರ್ $ 16.52 ಮಿಲಿಯನ್ ಅಥವಾ ಸುಮಾರು 130 ಕೋಟಿ ರೂ ದಾಖಲಿಸಿದ್ದಾರೆ. ವಿಜಯಕುಮಾರ್ ಅವರು 2021 ರಲ್ಲಿ ರೂ 123.13 ಕೋಟಿ ($ 16.52 ಮಿಲಿಯನ್) ಸಂಭಾವನೆ ಪಡೆದರು. ಅವರು $ 2 ಮಿಲಿಯನ್ ಮೂಲ ವೇತನ ಮತ್ತು ಮತ್ತೊಂದು $ 2 ಮಿಲಿಯನ್ ವೇರಿಯಬಲ್ ವೇತನದಲ್ಲಿ ಪಡೆದರು. ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ವಿಜಯ್ ಅವರು $0.02 ಮಿಲಿಯನ್ ಅನ್ನು ಪರ್ಕ್ವಿಸೈಟ್‌ಗಳು ಮತ್ತು ಇತರ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. $12.50 ಮಿಲಿಯನ್‌ನ LTI (ದೀರ್ಘಾವಧಿಯ ಪ್ರೋತ್ಸಾಹ) ಅವರ ಒಟ್ಟು ವೇತನವನ್ನು $16.52 ಮಿಲಿಯನ್‌ಗೆ ತಲುಪಿಸಿದೆ.

ಥಿಯೆರಿ ಡೆಲಾಪೋರ್ಟೆ - ವಿಪ್ರೊದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ವಿಪ್ರೊದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ಡೆಲಾಪೋರ್ಟೆ ಅವರು 2021-22ರಲ್ಲಿ ವಾರ್ಷಿಕ $10.5 ಮಿಲಿಯನ್ (ಸುಮಾರು 80 ಕೋಟಿ ರೂ.) ಸಂಭಾವನೆಯನ್ನು ಪಡೆದಿದ್ದಾರೆ. ಅವರು ಜುಲೈ 2020 ರಲ್ಲಿ ಕಂಪನಿಯ ಸಿಇಒ ಆಗಿ ನೇಮಕಗೊಂಡರು ಮತ್ತು ಮೊದಲ ಒಂಬತ್ತು ತಿಂಗಳ ಅಧಿಕಾರಾವಧಿಯಲ್ಲಿ, ಅವರ ಸಂಭಾವನೆಯು ಹಣಕಾಸು ವರ್ಷ 21ಕ್ಕೆ 64 ಕೋಟಿ ರೂ. ಆಗಿತ್ತು.

ಇದನ್ನೂ ಓದಿ:  Rupees Vs Dollar: ಡಾಲರ್​ ಎದುರು ಮತ್ತೆ ಮಂಕಾದ ರೂಪಾಯಿ! ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ

ಸಲೀಲ್ ಪರೇಖ್ - ಇನ್ಫೋಸಿಸ್ ಸಿಇಒ
ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು 2021-22ರ ಹಣಕಾಸು ವರ್ಷದಲ್ಲಿ ಒಟ್ಟು 71.02 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಇನ್ಫೋಸಿಸ್ ಲಿಮಿಟೆಡ್ ಐದು ವರ್ಷಗಳ ಅವಧಿಗೆ ಸಲೀಲ್ ಪರೇಖ್ ಅವರನ್ನು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಆಗಿ ಮರುನೇಮಕ ಮಾಡಿಕೊಂಡಿದೆ. ಮತ್ತು ಅವರ ಪ್ಯಾಕೇಜ್ ಅನ್ನು 79.75 ಕೋಟಿಗೆ ಹೆಚ್ಚಿಸಲಾಗಿದೆ.

ವಾರ್ಷಿಕ ವರದಿಯ ಪ್ರಕಾರ, 2021-22ರಲ್ಲಿ ಪರೇಖ್ ಅವರ ವೇತನವು ರೂ 5.69 ಕೋಟಿ ಮೂಲ ವೇತನ, ರೂ 0.38 ಕೋಟಿ ನಿವೃತ್ತಿ ಪ್ರಯೋಜನಗಳು, ರೂ 12.62 ಕೋಟಿ ಬೋನಸ್ ಮತ್ತು ಪ್ರೋತ್ಸಾಹಕಗಳು ಮತ್ತು ರೂ 52.33 ಕೋಟಿ ಪರ್ಕ್ವಿಸೈಟ್‌ಗಳನ್ನು ಒಳಗೊಂಡಿತ್ತು.

 ಸಿ ಪಿ ಗುರ್ನಾನಿ - ಟೆಕ್ ಮಹೀಂದ್ರಾದ ಸಿಇಒ
ಟೆಕ್ ಮಹೀಂದ್ರಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಿ ಪಿ ಗುರ್ನಾನಿ ಅವರು 2021-22ರ ಅವಧಿಯಲ್ಲಿ 63.4 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ, ಇದು ವರ್ಷದಿಂದ ವರ್ಷಕ್ಕೆ 189 ಪ್ರತಿಶತ ಜಿಗಿತವಾಗಿದೆ. ಟೆಕ್ ಮಹೀಂದ್ರಾದ ವಾರ್ಷಿಕ ವರದಿಯ ಪ್ರಕಾರ ಸಂಬಳವು ಸಂಬಳ, ಸ್ಟಾಕ್ ಪರಿಹಾರದ ಪ್ರಯೋಜನಗಳು ಮತ್ತು ಒಂದು ವರ್ಷದ ಅವಧಿಗೆ ಉದ್ಯೋಗದ ನಂತರದ ಪ್ರಯೋಜನಗಳನ್ನು ಒಳಗೊಂಡಿದೆ.

 ರಾಜೇಶ್ ಗೋಪಿನಾಥನ್ - ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಿಇಒ
2021-22 ರ ಕಂಪನಿಯ ವಾರ್ಷಿಕ ವರದಿಯ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಿಇಒ ಮತ್ತು ಎಂಡಿ ರಾಜೇಶ್ ಗೋಪಿನಾಥನ್ ಅವರ ಸಂಬಳದಲ್ಲಿ ಶೇಕಡಾ 26.6 ರಷ್ಟು ಹೆಚ್ಚಳವಾಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ 25.75 ಕೋಟಿ ರೂ.ಗಳ ಒಟ್ಟು ಸಂಭಾವನೆಯನ್ನು ಇವರು ಪಡೆದಿದ್ದಾರೆ.

ಇದನ್ನೂ ಓದಿ: Reliance AGM 2022 Live Updates: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

ಜೂನ್‌ನಲ್ಲಿ ಪ್ರಕಟವಾದ ಡೆಲಾಯ್ಟ್ ಇಂಡಿಯಾ ಸಮೀಕ್ಷೆಯ ಪ್ರಕಾರ, ಸಿಇಒಗಳ ಸಂಭಾವನೆ ಕೋವಿಡ್‌ ಬಂದಮೇಲೆ ಹೆಚ್ಚಾಗಿದೆ ಎಂದು ವರದಿ ಮಾಡಿದೆ. ಒಟ್ಟು ವೇತನದಲ್ಲಿ 10 ಕೋಟಿ ರೂಪಾಯಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
Published by:Ashwini Prabhu
First published: