• Home
  • »
  • News
  • »
  • business
  • »
  • Business Ideas: ನಿಮ್ಮ ಬಳಿ ಸ್ವಂತ ಕಾರು ಇದೆಯೇ? ಹಾಗಿದ್ರೆ ಈ ಲಾಭದಾಯಕ ವ್ಯವಹಾರಗಳನ್ನು ಆರಂಭಿಸಿ

Business Ideas: ನಿಮ್ಮ ಬಳಿ ಸ್ವಂತ ಕಾರು ಇದೆಯೇ? ಹಾಗಿದ್ರೆ ಈ ಲಾಭದಾಯಕ ವ್ಯವಹಾರಗಳನ್ನು ಆರಂಭಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Business Ideas: ನೀವು ಕಾರುಗಳ ಬಗ್ಗೆ ತುಂಬಾನೇ ಆಸಕ್ತಿ ಹೊಂದಿರುವವರಾಗಿದ್ದು, ನಿಮಗೆ ನಿಮ್ಮದೇ ಆದ ಸ್ವಂತ ವ್ಯವಹಾರವನ್ನು ಅಂದರೆ ಬಿಸಿನೆಸ್ (Business) ಅನ್ನು ಶುರು ಮಾಡುವ ಗುರಿ ಇದೆಯೇ? ನಿಮ್ಮ ಉತ್ತರ ಹೌದು ಅಂತಾದಲ್ಲಿ ನಿಮಗಾಗಿ ಇಲ್ಲಿವೆ ನೋಡಿ ಸರಳವಾದ ಮತ್ತು ಲಾಭದಾಯಕವಾದ ವ್ಯವಹಾರದ ಕಲ್ಪನೆಗಳು.

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

ನೀವು ಕಾರುಗಳ ಬಗ್ಗೆ ತುಂಬಾನೇ ಆಸಕ್ತಿ ಹೊಂದಿರುವವರಾಗಿದ್ದು, ನಿಮಗೆ ನಿಮ್ಮದೇ ಆದ ಸ್ವಂತ ವ್ಯವಹಾರವನ್ನು ಅಂದರೆ ಬಿಸಿನೆಸ್ (Business) ಅನ್ನು ಶುರು ಮಾಡುವ ಗುರಿ ಇದೆಯೇ? ನಿಮ್ಮ ಉತ್ತರ ಹೌದು ಅಂತಾದಲ್ಲಿ ನಿಮಗಾಗಿ ಇಲ್ಲಿವೆ ನೋಡಿ ಸರಳವಾದ ಮತ್ತು ಲಾಭದಾಯಕವಾದ ವ್ಯವಹಾರದ ಕಲ್ಪನೆಗಳು. ಕಾರಿನ (Car) ಬಗ್ಗೆ ಮಾಹಿತಿ ಮತ್ತು ವಿವರಗಳನ್ನು ಬರೆಯುವುದರಿಂದ ಹಿಡಿದು ಕಾರಿನ ರಿಪೇರಿ, ಕಾರಿನ ಮಾರಾಟ ಮತ್ತು ಬಾಡಿಗೆಗೆ (Rent) ನೀಡುವುದು ಹೀಗೆ ಕಾರುಗಳ ಮೇಲಿನ ನಿಮ್ಮ ಪ್ರೀತಿಯನ್ನು ಒಂದು ಆದಾಯ ಬರುವಂತಹ ವ್ಯಾಪಾರ ಉದ್ಯಮವಾಗಿ ಪರಿವರ್ತಿಸಲು ತುಂಬಾ ಅವಕಾಶಗಳು ಇವೆ. ಆದ್ದರಿಂದ, ನಿಮಗೆ ಲಭ್ಯವಿರುವ ವಿವಿಧ ಆಯ್ಕೆಗಳ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.


1. ವಿಶೇಷ ಸಂದರ್ಭಗಳಿಗಾಗಿ  ಚಾಲಕರನ್ನು ಒದಗಿಸಿ:


ನೀವು ಕಾರುಗಳ ಬಗ್ಗೆ ತುಂಬಾ ಪ್ರೀತಿಯನ್ನು ಹೊಂದಿದ್ದರೆ, ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಪರಿಗಣಿಸಬೇಕಾದ ಮೊದಲ ಆಯ್ಕೆಯೆಂದರೆ ನಿಮ್ಮ ನಗರದಲ್ಲಿ ವಿಶೇಷ ಸಂದರ್ಭಗಳಲ್ಲಿ ಚಾಲಕ ಸೇವೆಗಳನ್ನು ನೀಡುವುದು. ನೀವು ಆನಂದಿಸುವ ಕೆಲಸವನ್ನು ಮಾಡುವುದರೊಂದಿಗೆ ಕೆಲವು ಹೆಚ್ಚುವರಿ ಆದಾಯವನ್ನು ಸಹ ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ಜೊತೆಗೆ, ಇದು ಯಾವಾಗಲೂ ಬೇಡಿಕೆಯಲ್ಲಿರುವ ಸೇವೆಯಾಗಿದೆ.


ಅದರಲ್ಲೂ ಈ ಮದುವೆ ಸಮಾರಂಭಗಳು ಅಥವಾ ಇತರ ವಿಶೇಷ ಕಾರ್ಯಕ್ರಮವಾಗಿರಲಿ, ಕಾರಿನ ಅಗತ್ಯವಿರುವ ಜನರು ಯಾವಾಗಲೂ ಇರುತ್ತಾರೆ. ನೀವು ಕಾರಿನ ಜೊತೆಗೆ ನಿಮ್ಮ ಸ್ವಂತ ಡ್ರೈವರ್ ಅನ್ನು ಸಹ ಒದಗಿಸಬಹುದು.


2. ಕಾರ್ ಡೀಟೈಲಿಂಗ್ ವ್ಯವಹಾರ:


ನೀವು ಕಾರುಗಳ ಬಗ್ಗೆ ಉತ್ಸುಕರಾಗಿದ್ದಲ್ಲಿ ಮತ್ತು ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸುವ ಮಾರ್ಗವನ್ನು ಹುಡುಕುತ್ತಿದ್ದಲ್ಲಿ, ಕಾರ್ ಡೀಟೈಲಿಂಗ್ ಒಂದು ಉತ್ತಮ ವ್ಯವಹಾರವಾಗಿದೆ. ಆದರೆ ನೀವು ಹೇಗೆ ಪ್ರಾರಂಭಿಸುತ್ತೀರಿ? ಮೊದಲು ನೀವು ವ್ಯವಹಾರ ಯೋಜನೆಯನ್ನು ರೂಪಿಸಿಕೊಳ್ಳಿರಿ, ಕೆಲವು ಗುರಿಗಳನ್ನು ನಿಗದಿಪಡಿಸಿಕೊಳ್ಳಿ ಮತ್ತು ನಿಮ್ಮ ಕಂಪನಿಗೆ ಒಂದು ಹೆಸರನ್ನು ಆಯ್ಕೆ ಮಾಡಿ.


ಇದನ್ನೂ ಓದಿ: Multibagger Share: 1 ಷೇರು ಖರೀದಿಸಿದ್ರೆ ಉಚಿತವಾಗಿ ಸಿಗುತ್ತೆ 100 ಷೇರು, ಯಾರಿಗುಂಟು ಯಾರಿಗಿಲ್ಲ!


ಮುಂದೆ, ನಿಮ್ಮ ವ್ಯವಹಾರದ ಬಗ್ಗೆ ಜನರಿಗೆ ತಿಳಿಸಲು ಕೆಲವು ಮಾರ್ಕೆಟಿಂಗ್ ಸಾಮಗ್ರಿಗಳನ್ನು ರಚಿಸಿ ಮತ್ತು ನಿಮ್ಮ ಹೊಸ ವ್ಯವಹಾರದ ಬಗ್ಗೆ ಸುದ್ದಿಗಳನ್ನು ಹರಡಲು ಪ್ರಾರಂಭಿಸಿ. ನೀವು ವೆಬ್ಸೈಟ್ ಅನ್ನು ಸಹ ಹೊಂದಬಹುದು ಮತ್ತು ಆನ್ಲೈನ್ ಉಪಸ್ಥಿತಿಯನ್ನು ಸಹ ನಿರ್ಮಿಸಬಹುದು.


 3. ಕಾರಿನ ಬಿಡಿಭಾಗಗಳ ಆನ್ಲೈನ್  ಮಾರಾಟ:


ಕಾರಿನ ಬಿಡಿಭಾಗಗಳು ಮತ್ತು ಅಕ್ಸೆಸೇರಿಸ್ ಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವುದು ಒಳ್ಳೆಯ ಆದಾಯವನ್ನು ನಿಮಗೆ ತಂದುಕೊಡಬಹುದು. ಇದು ಸಾಕಷ್ಟು ವಿನೋದಮಯ ಸಹ ಆಗಿರುತ್ತದೆ. ಆದರೆ ಇಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ.


ಮೊದಲನೆಯದಾಗಿ, ನೀವು ಒಂದು ಪ್ರಮುಖ ಮಾರುಕಟ್ಟೆಯನ್ನು ಕಂಡು ಹಿಡಿಯಬೇಕು. ಎಲ್ಲರಿಗೂ ಎಲ್ಲವನ್ನೂ ಮಾರಾಟ ಮಾಡಲು ಪ್ರಯತ್ನಿಸಬೇಡಿ. ಒಂದು ನಿರ್ದಿಷ್ಟ ರೀತಿಯ ಗ್ರಾಹಕ ಅಥವಾ ನಿರ್ದಿಷ್ಟ ರೀತಿಯ ಕಾರಿನ ಮೇಲೆ ಗಮನ ಹರಿಸುವುದು ಒಳ್ಳೆಯದು. ಎರಡನೆಯದಾಗಿ, ನಿಮ್ಮ ಬೆಲೆಗಳು ಸ್ಪರ್ಧಾತ್ಮಕವಾಗಿವೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು.


ಕಾರಿನ ಬಿಡಿಭಾಗಗಳು ಮತ್ತು ಅಕ್ಸೆಸೇರಿಸ್ ಗಳನ್ನು ಮಾರಾಟ ಮಾಡುವ ಇತರ ಸಾಕಷ್ಟು ವ್ಯವಹಾರಗಳಿವೆ, ಆದ್ದರಿಂದ ನಿಮ್ಮ ಬೆಲೆಗಳು ಆಕರ್ಷಕವಾಗಿವೆಯೇ ಅನ್ನೋದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಅಂತಿಮವಾಗಿ, ನೀವು ಗ್ರಾಹಕ ಸೇವೆಯ ಮೇಲೆ ಗಮನ ಹರಿಸಬೇಕು.


4. ನಿಮ್ಮ ಗ್ಯಾರೇಜ್ ಬಾಡಿಗೆಗೆ ನೀಡಿ:


ಇನ್ನೂ ಸ್ವಲ್ಪ ಹೆಚ್ಚು ಹಣ ಗಳಿಸಲು ನೀವು ಇಷ್ಟ ಪಡುವವರಾಗಿದ್ದರೆ, ನಿಮ್ಮ ಕಾರಿನ ಗ್ಯಾರೇಜ್ ಅನ್ನು ಶೇಖರಣಾ ಘಟಕವಾಗಿ ಏಕೆ ಬಾಡಿಗೆಗೆ ನೀಡಬಾರದು? ಇದನ್ನು ಪ್ರಾರಂಭಿಸುವುದು ತುಂಬಾನೇ ಸುಲಭ. ಇದರಿಂದ ನೀವು ಉತ್ತಮ ಲಾಭವನ್ನು ಗಳಿಸಬಹುದು. ಇದನ್ನು ಹೇಗೆ ಪ್ರಾರಂಭಿಸುವುದು ನೋಡಿ.


ಇದನ್ನೂ ಓದಿ: Electric Cars: ಒಂದೇ ಚಾರ್ಜ್​ಗೆ 500 ಕಿಮೀ ಸಂಚರಿಸುವ ಎಲೆಕ್ಟ್ರಿಕ್​ ಕಾರುಗಳಿವು!


ಮೊದಲನೆಯದಾಗಿ, ನಿಮ್ಮ ಗ್ಯಾರೇಜ್ ಸ್ವಚ್ಛವಾಗಿದೆ ಮತ್ತು ಸಂಘಟಿತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಸಂಭಾವ್ಯ ಗ್ರಾಹಕರಿಗೆ ಸ್ವಚ್ಛ ಮತ್ತು ಉತ್ತಮ ಬೆಳಕಿನ ಸ್ಥಳವನ್ನು ಒದಗಿಸಿ. ನಂತರ, ಆ ಸ್ಥಳದಲ್ಲಿ ಕೆಲವು ಕಪಾಟುಗಳು ಅಥವಾ ಶೇಖರಣಾ ಕಂಟೇನರ್ ಗಳನ್ನು ಸ್ಥಾಪಿಸಿ. ಲಭ್ಯವಿರುವ ಸ್ಥಳಾವಕಾಶದ ವಿಷಯದಲ್ಲಿ ನಿಮ್ಮ ಗ್ರಾಹಕರು ಏನನ್ನು ನಿರೀಕ್ಷಿಸಬಹುದು ಎಂದು ತಿಳಿಯಲು ಇದು ಸಹಾಯ ಮಾಡುತ್ತದೆ.


5. ಕಾರುಗಳನ್ನು ಸ್ವಚ್ಛಗೊಳಿಸುವ ಕೆಲಸ:


ನೀವು ಕಾರುಗಳನ್ನು ಯಾವಾಗಲೂ ನೀವೇ ಸ್ವಂತವಾಗಿ ಸ್ವಚ್ಛಗೊಳಿಸುತ್ತಿದ್ದರೆ, ಇತರರ ಕಾರುಗಳನ್ನು ತೊಳೆಯುವ ಮತ್ತು ವ್ಯಾಕ್ಯೂಮ್ ಮಾಡುವ ಮೂಲಕ ಹಣ ಗಳಿಸಬಹುದು. ಈ ಕೆಲಸ ಶುರು ಮಾಡಲು ನೀವು ಮೊದಲು ಫ್ಲೈಯರ್ ಗಳನ್ನು ರಚಿಸಿ ಮತ್ತು ಅದನ್ನು ನಿಮ್ಮ ನೆರೆಹೊರೆಯಲ್ಲಿ ಅಥವಾ ಸ್ಥಳೀಯ ವ್ಯವಹಾರಗಳಲ್ಲಿ ಪೋಸ್ಟ್ ಮಾಡಬಹುದು.


6. ಕಾರುಗಳು ಬಗ್ಗೆ ಬ್ಲಾಗ್ ಬರೆಯಿರಿ ಅಥವಾ ಯೂಟ್ಯೂಬ್ ಚಾನಲ್ ಶುರು ಮಾಡಿ:


ನಿಮ್ಮ ನೆಚ್ಚಿನ ಕಾರುಗಳ ಬಗ್ಗೆ ಬ್ಲಾಗ್ ಬರೆಯಿರಿ ಅಥವಾ ಯೂಟ್ಯೂಬ್ ಚಾನೆಲ್ ಅನ್ನು ರಚಿಸುವ ಮೂಲಕ ವ್ಯವಹಾರವನ್ನು ಪ್ರಾರಂಭಿಸುವುದು ಹೆಚ್ಚುವರಿ ಹಣವನ್ನು ಗಳಿಸಲು ಪರಿಪೂರ್ಣ ಮಾರ್ಗವಾಗಿದೆ. ಸ್ವಲ್ಪ ಪ್ರಯತ್ನ ಮತ್ತು ಸ್ವಲ್ಪ ಸೃಜನಶೀಲತೆಯೊಂದಿಗೆ, ಇದು ಒಂದು ಅಗಾಧ ಪ್ರಯತ್ನದಂತೆ ತೋರಬಹುದಾದರೂ, ನಿಮ್ಮ ವಿಷಯವನ್ನು ಮೆಚ್ಚುವ ಕಾರು ಪ್ರಿಯರ ಫಾಲೋವರ್ಸ್ ಗಳನ್ನು ತ್ವರಿತವಾಗಿ ನಿರ್ಮಿಸಿಕೊಳ್ಳಬಹುದು.


7. ಕಾರುಗಳ ಸೀಟ್ ಕವರ್ ಗಳ ರಿಪೇರಿ ಕೆಲಸ:


ನೀವು ಕಾರುಗಳನ್ನು ತುಂಬಾ ಪ್ರೀತಿಸುವವರಾಗಿದ್ದರೆ, ಕಾರಿನ ಒಳಗೆ ಇರುವ ಸೀಟ್ ಗಳ ಕವರ್ ಮತ್ತು ಒಳಗೆ ಇರುವ ಕಾರ್ ಮ್ಯಾಟ್ ಅನ್ನು ರಿಪೇರಿ ಮಾಡುವ ಕೆಲಸ ಶುರು ಮಾಡುವುದು ತುಂಬಾನೇ ಸುಲಭದ ಕೆಲಸ. ಆಟೋ ಅಪ್ಹೋಲ್ಸ್ಟರಿ ರಿಪೇರಿ ಅಂಗಡಿಯನ್ನು ತೆರೆಯುವುದು ನಿಮಗೆ ಪರಿಪೂರ್ಣ ವ್ಯವಹಾರ ಕಲ್ಪನೆಯಾಗಿದೆ.


ಅದು ಸವೆದು ಹೋದ ಸೀಟ್ ಕವರ್ ಅನ್ನು ಬದಲಾಯಿಸುವುದಿರಲಿ ಅಥವಾ ಒಳಗಿನ ಇಂಟೆರಿಯರ್ ಅನ್ನು ಸ್ವಚ್ಛಗೊಳಿಸುವುದಾಗಿರಲಿ, ನಿಮ್ಮ ಕೌಶಲ್ಯಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ನಿಮ್ಮ ಕೆಲಸಕ್ಕೆ ನೀವೇ ಬಾಸ್ ಆಗಬಹುದು ಮತ್ತು ನಿಮ್ಮ ಸ್ವಂತ ಸಮಯವನ್ನು ಸಹ ಪಡೆಯಬಹುದು.


8. ವಿಂಡ್ ಶೀಲ್ಡ್ ರಿಪೇರಿ:


ವಿಂಡ್ ಶೀಲ್ಡ್ ಗಳನ್ನು ಸರಿಪಡಿಸುವುದಕ್ಕಿಂತ ಉತ್ತಮವಾದ ಕೆಲಸ ಯಾವುದಿದೆ ಹೇಳಿ? ಅಷ್ಟಕ್ಕೂ, ದಿನವಿಡೀ ವಾಹನ ಚಲಾಯಿಸುವುದಕ್ಕಿಂತ, ಸಾಂದರ್ಭಿಕವಾಗಿ ಬಿರುಕು ಬಿಟ್ಟ ವಿಂಡ್ ಶೀಲ್ಡ್ ಅನ್ನು ರಿಪೇರಿ ಮಾಡುವುದು ಒಂದು ಒಳ್ಳೆಯ ಕೆಲಸ ಮತ್ತು ಆದಾಯ ನೀಡುವ ವ್ಯವಹಾರವಾಗಿದೆ.


ಮೊದಲನೆಯದಾಗಿ, ನಿಮ್ಮ ಎಲ್ಲಾ ಉಪಕರಣಗಳನ್ನು ಹಿಡಿದಿಡುವ ವ್ಯಾನ್ ಅಥವಾ ಟ್ರಕ್ ನಿಮಗೆ ಬೇಕಾಗುತ್ತದೆ. ಮುಂದೆ, ನೀವು ಕೆಲವು ವೃತ್ತಿಪರ-ದರ್ಜೆಯ ವಿಂಡ್ ಶೀಲ್ಡ್ ರಿಪೇರಿ ಕಿಟ್ ಗಳನ್ನು ಖರೀದಿಸಬೇಕಾಗುತ್ತದೆ. ಅಂತಿಮವಾಗಿ, ಅಪಘಾತದ ಸಂದರ್ಭದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನೀವು ಕೆಲವು ವಿಮೆಯನ್ನು ಪಡೆಯಬೇಕಾಗುತ್ತದೆ.

Published by:shrikrishna bhat
First published: