ಭಾರತದಲ್ಲಿ ವಿಶೇಷಚೇತನರಿಗೆ ಹಲವು ಸೌಲಭ್ಯಗಳಿವೆ. ಒಟ್ಟಾರೆ ಜನಸಂಖ್ಯೆಯಲ್ಲಿ ವಿಶೇಷಚೇತನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2011 ರ ಜನಗಣತಿಯ ಪ್ರಕಾರ, 26.8 ಮಿಲಿಯನ್ ಜನರು ಅಥವಾ ಒಟ್ಟು ಜನಸಂಖ್ಯೆಯ ಸುಮಾರು ಎರಡು ಪ್ರತಿಶತದಷ್ಟು ಜನರು ವಿಶೇಷಚೇತನರಾಗಿದ್ದರು. ವಿಶೇಷಚೇತನರೂ (Disable Health Benefits) ಎಲ್ಲರಂತೆ ಎಲ್ಲ ರೀತಿಯ ಸೌಲಭ್ಯಗಳನ್ನು (Health Insurance) ಪಡೆದುಕೊಳ್ಳಬೇಕು. ಅವರಿಗೂ ಎಲ್ಲ ಸವಲತ್ತುಗಳು ದೊರೆಯುವಂತಾಗಬೇಕು ಎಂಬ ದೃಷ್ಟಿಯಲ್ಲಿ ವಿಶೇಷಚೇತನರಿಗೆಂದೇ ವಿಮಾ ಯೋಜನೆಗಳನ್ನು (Disable Health Insurance Policy) ಜಾರಿಗೊಳಿಸಲಾಗಿದೆ. ವ್ಯಕ್ತಿ ಮತ್ತು ವ್ಯಕ್ತಿಯ ಪರಿಸ್ಥಿತಿಗಳನ್ನು ಅವಲಂಬಿಸಿ ವಿಮೆ ಬದಲಾಗುತ್ತದೆ. ವಿಶೇಷ ಅಗತ್ಯವುಳ್ಳವರು ಹೆಚ್ಚು ವೈವಿಧ್ಯಮಯ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಭಾರತದಲ್ಲಿ ವಿಮಾ ಕ್ಷೇತ್ರವು ಬಹಳ ಹಿಂದಿನಿಂದಲೂ ಜನರ ಪಾಲಿಗೆ ಆದ್ಯತೆಯ ವಿಷಯವಲ್ಲ. ವಿಶೇಷಚೇತನರ ವಿಚಾರಕ್ಕೆ ಬಂದರೆ ವಿಮಾ ಯೋಜನೆಗಳನ್ನು ಹೊಂದಿರುವವರ ಸಂಖ್ಯೆ ತೀರಾ ಕಡಿಮೆ. ಕರೋನಾ ನಂತರದ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ.
ಅನುಮಾನ ಇಟ್ಟುಕೊಳ್ಳಬೇಡಿ! ಹೆಚ್ಚು ಹೆಚ್ಚು ಜನರು ಆರೋಗ್ಯ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೂ ಅನೇಕ ಜನರಿಗೆ ವಿಮಾ ಯೋಜನೆಗಳ ನೀತಿಗಳ ಬಗ್ಗೆ ಅನುಮಾನಗಳಿವೆ. ಆದರೆ ಈ ಅನುಮಾನಗಳನ್ನು ಪರಿಹರಿಸಿಕೊಳ್ಳುವುದು ಒಳಿತು.
ವಿವರ ಇಂತಿದೆ.. ಈ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಸೇವೆಗಳನ್ನು ಒದಗಿಸಲು ಭಾರತದಲ್ಲಿನ ವಿಮಾ ಉದ್ಯಮವು ಇನ್ನಷ್ಟು ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ಅಪಘಾತದ ಸಂದರ್ಭದಲ್ಲಿ ಕುಟುಂಬಗಳಿಗೆ ಆರ್ಥಿಕ ರಕ್ಷಣೆಯನ್ನು ಒದಗಿಸುವ ಪಾಲಿಸಿಗಳನ್ನು ವಿಮಾದಾರರು ನೀಡುತ್ತವೆ. ಇವು ಅಂಗವಿಕಲರಿಗೂ ಲಭ್ಯವಿರುವ ವಿಮಾ ಪಾಲಿಸಿಗಳಾಗಿವೆ.
ಎರಡು ರೀತಿಯ ಅಂಗವೈಕಲ್ಯತೆ ಮನುಷ್ಯರು ಸಾಮಾನ್ಯವಾಗಿ ಎರಡು ರೀತಿಯ ಅಂಗವೈಕಲ್ಯಗಳನ್ನು ಹೊಂದಿರುತ್ತಾರೆ. ಕೆಲವರು ಜನ್ಮಥಃ ಅಂಗವೈಕಲ್ಯದಿಂದ ಹುಟ್ಟುತ್ತಾರೆ. ಇನ್ನು ಕೆಲವರು ಅಪಘಾತಗಳಿಗೆ ಬಲಿಯಾಗಿ ವಿಶೇಷ ಚೇತನರಾಗುತ್ತಾರೆ. ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ.
ಜನ್ಮಜಾತ ವಿರೂಪತೆಯು ವ್ಯಕ್ತಿಯು ಜನಿಸಿದ ಸ್ಥಿತಿಯನ್ನು ಸೂಚಿಸುತ್ತದೆ. ಹೃದಯ, ನರಗಳ ಅಸ್ವಸ್ಥತೆಗಳು ಮತ್ತು ಡೌನ್ ಸಿಂಡ್ರೋಮ್ ಜನ್ಮಜಾತವಾಗಿ ಬರುವ ಸಮಸ್ಯೆಗಳಾಗಿವೆ.
ಏನೆಲ್ಲಾ ಇದೆ? ಆಕಸ್ಮಿಕ ಅಂಗವೈಕಲ್ಯವು ಶಾಶ್ವತ ಸಂಪೂರ್ಣ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಹೆಚ್ಚಿನ ವಿಮಾ ಯೋಜನೆಗಳು ಆಕಸ್ಮಿಕವಾಗಿ ಅಂಗವಿಕಲರಾದ ಜನರನ್ನು ಒಳಗೊಳ್ಳುತ್ತವೆ.
ಇತ್ತೀಚಿನ ದಿನಗಳಲ್ಲಿ ಕೆಲವು ಆರೋಗ್ಯ ವಿಮಾ ಕಂಪನಿಗಳು ಜನ್ಮತಃ ದೋಷಗಳಿರುವ ಜನರಿಗಾಗಿ ಪಾಲಿಸಿಗಳನ್ನು ಒದಗಿಸುತ್ತಿವೆ. ಆದರೂ ಕಂಪನಿಗಳು ಜನ್ಮಜಾತ ಅಂಗವೈಕಲ್ಯ ಹೊಂದಿರುವ ಜನರಿಗೆ ವಿಮಾ ಯೋಜನೆ ನೀಡುವುದು ಹೆಚ್ಚಿನ ಅಪಾಯವೆಂದು ಪರಿಗಣಿಸುತ್ತವೆ. ಕೆಲವು ನಿರ್ಬಂಧಗಳನ್ನು ಹೇರುತ್ತವೆ.
ಪರಿಗಣಿಸಬೇಕಾದ ನಿಯಮಗಳು ವಿಕಲಾಂಗರಿಗಾಗಿ ಎರಡು ರೀತಿಯ ಯೋಜನೆಗಳು ಲಭ್ಯವಿದೆ. ಅವುಗಳಲ್ಲಿ ಒಂದು, ಸಮಗ್ರ ವಿಮಾ ಯೋಜನೆ. ಸಮಗ್ರ ಯೋಜನೆಯಡಿ ವಿಮೆ ಮಾಡಿದವರಿಗೆ ಸಂಪೂರ್ಣ ಕವರೇಜ್ ಲಭ್ಯವಿದೆ.
ನಿರ್ಬಂಧಿತ ವಿಮಾ ಯೋಜನೆ
ನಿರ್ಬಂಧಿತ ಯೋಜನೆಯಲ್ಲಿನ ಅಂಗವೈಕಲ್ಯದ ತೀವ್ರತೆಯನ್ನು ವ್ಯಾಪ್ತಿ ಅವಲಂಬಿಸಿರುತ್ತದೆ. ಕೆಲವು ವಿನಾಯಿತಿಗಳು ಅನ್ವಯಿಸಬಹುದು. ಎರಡು ವಿಧದ ವಿನಾಯಿತಿಗಳಿವೆ. ಅವುಗಳೇ ತಾತ್ಕಾಲಿಕ ಮತ್ತು ಶಾಶ್ವತ ವಿನಾಯಿತಿಗಳು.
ತಾತ್ಕಾಲಿಕ ವಿನಾಯಿತಿಗಳಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಅಸಾಮರ್ಥ್ಯ ರೋಗಗಳ ವ್ಯಾಪ್ತಿಯನ್ನು ಹೋಲುವ ನಿಯಮಗಳ ಅಡಿಯಲ್ಲಿ ಕವರೇಜ್ ಲಭ್ಯವಿದೆ. ಶಾಶ್ವತ ವಿನಾಯಿತಿ ಶಾಶ್ವತ ಅಂಗವೈಕಲ್ಯ ವ್ಯಾಪ್ತಿಯನ್ನು ಶಾಶ್ವತವಾಗಿ ಹೊರಗಿಡಲಾಗುತ್ತದೆ ಮತ್ತು ಇತರ ವೈದ್ಯಕೀಯ ತುರ್ತುಸ್ಥಿತಿಗಳಿಗೆ ಮಾತ್ರ ಕ್ಲೈಮ್ಗಳನ್ನು ಮಾಡಬಹುದು.
ತೆರಿಗೆ ಪ್ರಯೋಜನಗಳು ಆರೋಗ್ಯ ವಿಮೆಯು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80U ಅಡಿಯಲ್ಲಿ ವಿಶೇಷಚೇತನ ವ್ಯಕ್ತಿಗಳಿಗೆ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ವಿಭಾಗ 80U ಅಡಿಯಲ್ಲಿ ಎರಡು ವಿಭಾಗಗಳಿವೆ. ಭಾಗಶಃ ಅಂಗವೈಕಲ್ಯ ಮತ್ತು ತೀವ್ರ ಅಂಗವೈಕಲ್ಯ.
ಕನಿಷ್ಠ 40 ಪ್ರತಿಶತ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ತೆರಿಗೆ ವಿನಾಯಿತಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಎಷ್ಟು ವಿನಾಯಿತಿ ಪಡೆಯಬಹುದು? ಅಂಗವಿಕಲ ಪಾಲಿಸಿದಾರರು ರೂ. 75,000 ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ತೀವ್ರ ಅಂಗವೈಕಲ್ಯ ಹೊಂದಿರುವ (ಶೇ. 80 ಅಂಗವೈಕಲ್ಯ) ವ್ಯಕ್ತಿ 1.25 ಲಕ್ಷ ರೂ.ವರೆಗೆ ಕ್ಲೈಮ್ ಮಾಡಬಹುದು.
ಅಂತೆಯೇ, ಸೆಕ್ಷನ್ 80DD ಅಡಿಯಲ್ಲಿ ಅಂಗವಿಕಲರಿಗಾಗಿ ಪಾಲಿಸಿಯನ್ನು ಖರೀದಿಸುವ ಕುಟುಂಬದ ಸದಸ್ಯರು ವೈದ್ಯಕೀಯ ವಿಮಾ ಪ್ರೀಮಿಯಂನಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಸೆಕ್ಷನ್ 80U ಅಡಿಯಲ್ಲಿ ರಿಯಾಯಿತಿಗಳು ಸಹ ಲಭ್ಯವಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ