Diesel Price Hike: 25 ರೂ ಹೆಚ್ಚಾಯ್ತು ಪ್ರತಿ ಲೀಟರ್ ಡೀಸೆಲ್ ಬೆಲೆ!

ಚಿಲ್ಲರೆ ವ್ಯಾಪಾರಿಗಳು ಹಳೆಯ ಬೆಲೆಗೆ ಮಾರಾಟ ಮಾಡಬೇಕಿರುವುದು ನಷ್ಟವನ್ನು ಎದುರಿಸಲಿವೆ ಎಂದು ಹೇಳಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ  (International Market) ಶೇಕಡಾ 40 ರಷ್ಟು ಡೀಸೆಲ್ ಬೆಲೆ ಏರಿಕೆಯಾಗಿದೆ. ಇದು ಭಾರತದಲ್ಲೂ ತತ್​ಕ್ಷಣಕ್ಕೆ ಪ್ರಭಾವ ಬೀರಿದ್ದು ಡೀಸೆಲ್ (Diesel Price) ಅನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುವ ಬಲ್ಕ್ ಖರೀದಿದಾರರಿಗೆ (Bulk Users) ಪ್ರತಿ ಲೀಟರ್‌ಗೆ ಡೀಸೆಲ್​ಗೆ ಸುಮಾರು 25 ರೂಪಾಯಿಗಳಷ್ಟು (Diesel Price Hike) ಹೆಚ್ಚಳವಾಗಿದೆ. ಆದರೆ ಸದ್ಯ ಪೆಟ್ರೋಲ್ ಪಂಪ್‌ಗಳಲ್ಲಿ (Petrol Pumps) ಚಿಲ್ಲರೆ ದರಗಳು ಬದಲಾಗದೆ ಉಳಿದಿವೆ ಎಂದು ಮೂಲಗಳು ತಿಳಿಸಿವೆ. ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಏರಿಕೆಯಾಗಿರುವುದು ವಿವಿಧ ರೀತಿಯಲ್ಲಿ ಪರಿಣಾಮ ಬೀರಲಿದೆ.

ಚಿಲ್ಲರೆ ವ್ಯಾಪಾರಿಗಳು ಹಳೆಯ ಬೆಲೆಗೆ ಮಾರಾಟ ಮಾಡಬೇಕಿರುವುದು ನಷ್ಟವನ್ನು ಎದುರಿಸಲಿವೆ ಎಂದು ಹೇಳಲಾಗಿದೆ. ಆದರೆ ಗ್ರಾಹಕ ಜೇಬಿಗೆ ಡೀಸೆಲ್ ಬೆಲೆ ಏರಿಕೆ ಪರಿಣಾಮ ಬೀಡುವ ಕುರಿತು ಯಾವುದೇ ಖಚಿತತೆ ಕಂಡುಬಂದಿಲ್ಲ. ಬಲ್ಕ್ ಖರೀದಿದಾರರು ಸಹ ಡೀಸೆಲ್ ಬೆಲೆ ಏರಿಕೆ ಮಾಡಿದರೆ ಗ್ರಾಹಕರ ಜೇಬಿಗೂ ತುಟ್ಟಿಯಾಗಲಿದೆ. ಹೀಗಾಗಿ ಬಲ್ಕ್ ಖರೀದಿದಾರರ ನಿರ್ಧಾರವನ್ನು ಕಾದುನೋಡಬೇಕಿದೆ.

ಯಾರಿಗೆಲ್ಲ ನಷ್ಟ?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆಯ ಹೆಚ್ಚಳದಿಂದ ನಯಾರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‌ನಂತಹ ಖಾಸಗಿ ಚಿಲ್ಲರೆ ವ್ಯಾಪಾರಿಗಳು ಹೆಚ್ಚು ಹಾನಿಗೊಳಗಾಗಿದ್ದಾರೆ. ಮಾರಾಟದಲ್ಲಿ ಏರಿಕೆಯ ಹೊರತಾಗಿಯೂ ಯಾವುದೇ ಖರ್ಚಿನ ಪ್ರಮಾಣವನ್ನು ಕಡಿಮೆ ಮಾಡಲು ನಿರಾಕರಿಸಿದ್ದಾರೆ. ಆದರೆ ಈಗ ಪಂಪ್‌ಗಳನ್ನು ಮುಚ್ಚುವುದು ಹೆಚ್ಚು ಕಾರ್ಯಸಾಧ್ಯವಾದ ಪರಿಹಾರವಾಗಿದೆ ಎನ್ನಲಾಗಿದೆ. ಆದರೆ ಈ ಕಂಪನಿಗಳು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ವಿವರ:

ಬಾಗಲಕೋಟೆ – 85.51
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 84.68
ಬೆಳಗಾವಿ – 84.57
ಬಳ್ಳಾರಿ – 86.56
ಬೀದರ್ - 85.30
ಬಿಜಾಪುರ – 85.30
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 87.26
ಚಿತ್ರದುರ್ಗ – 85.87
ದಕ್ಷಿಣ ಕನ್ನಡ – 84.72
ದಾವಣಗೆರೆ - 86.09
ಧಾರವಾಡ – 84.79
ಗದಗ – 84.41

ಇದನ್ನೂ ಓದಿ: Multibagger stock: 1 ಲಕ್ಷ ಹೂಡಿಕೆಗೆ 16 ಲಕ್ಷ ಆದಾಯ! ಯಾವುದು ಈ ಷೇರು?

ಕಲಬುರ್ಗಿ – 84.45
ಹಾಸನ – 84.72
ಹಾವೇರಿ – 85.76
ಕೊಡಗು – 86.06
ಕೋಲಾರ – 84.89
ಕೊಪ್ಪಳ- 85.89
ಮಂಡ್ಯ – 85.19
ಮೈಸೂರು – 84.56
ರಾಯಚೂರು – 84.87
ರಾಮನಗರ – 85.43
ಶಿವಮೊಗ್ಗ – 85.68
ತುಮಕೂರು – 85.83
ಉಡುಪಿ – 85.07
ಉತ್ತರ ಕನ್ನಡ – 86.71
ಯಾದಗಿರಿ – 85.44


ಇದನ್ನೂ ಓದಿ: Farmers Students Scholarship: ರೈತರ ಮಕ್ಕಳೇ, ಈ ಸ್ಕಾಲರ್​ಶಿಪ್ ಬಿಡಬೇಡಿ! ಅರ್ಜಿ ಹಾಕೋದು ಹೇಗೆ ತಿಳಿಯಿರಿ

ತೈಲ ಕಂಪನಿಗಳಿಂದ ನೇರವಾಗಿ ಆರ್ಡರ್ ಮಾಡುವ ಸಾಮಾನ್ಯ ಅಭ್ಯಾಸಕ್ಕಿಂತ ಇಂಧನ ಖರೀದಿಸಲು ಬಸ್ ಫ್ಲೀಟ್ ಆಪರೇಟರ್‌ಗಳು ಮತ್ತು ಮಾಲ್‌ಗಳಂತಹ ಬೃಹತ್ ಬಳಕೆದಾರರು ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿ ಆರಂಭಿಸಿವೆ. ಇದರಿಂದ ಚಿಲ್ಲರೆ ವ್ಯಾಪಾರಿಗಳ ನಷ್ಟದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.10 ರೂ. (00)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.22 ರೂ. (36 ಪೈಸೆ ಇಳಿಕೆ)
ಬೆಳಗಾವಿ - 100.16 ರೂ. (14 ಪೈಸೆ ಇಳಿಕೆ)
ಬಳ್ಳಾರಿ - 102.27 ರೂ. (00)
ಬೀದರ್ - 101.88 ರೂ. (00)
ಬಿಜಾಪುರ - 100.28(52 ಪೈಸೆ ಇಳಿಕೆ)
ಚಾಮರಾಜನಗರ - 100.71 ರೂ. (00)
ಚಿಕ್ಕಬಳ್ಳಾಪುರ - 100.58 ರೂ. (00)
ಚಿಕ್ಕಮಗಳೂರು - 102.15ರೂ. (84 ಪೈಸೆ ಇಳಿಕೆ)
ಚಿತ್ರದುರ್ಗ - 101.67 ರೂ. (00)
ದಕ್ಷಿಣ ಕನ್ನಡ - 100.30 ರೂ. (00)
ದಾವಣಗೆರೆ - 101.91 ರೂ. (00)
ಧಾರವಾಡ - 100.31 ರೂ. (1 ಪೈಸೆ ಇಳಿಕೆ)
ಗದಗ – 101. ರೂ. (00)
ಗುಲಬರ್ಗ - 100.04 ರೂ. (20 ಪೈಸೆ ಇಳಿಕೆ)
ಹಾಸನ – 100.39 ರೂ. (00)
ಹಾವೇರಿ - 101.38 ರೂ. (35 ಪೈಸೆ ಏರಿಕೆ)
ಕೊಡಗು – 101.89 ರೂ. (00)
ಕೋಲಾರ - 100.44 ರೂ. (20 ಪೈಸೆ ಇಳಿಕೆ)
ಕೊಪ್ಪಳ- 101.50 ರೂ. (00)
ಮಂಡ್ಯ – 100.78 ರೂ. (00)
ಮೈಸೂರು – 100.08 ರೂ. (00)
ರಾಯಚೂರು – 101.39 ರೂ. (00)
ರಾಮನಗರ – 100.04 ರೂ. (00)
ಶಿವಮೊಗ್ಗ – 101.40 ರೂ. (00)
ತುಮಕೂರು – 101.48 ರೂ. (00)
ಉಡುಪಿ - 100.68 ರೂ. (37 ಪೈಸೆ ಏರಿಕೆ)
ಉತ್ತರ ಕನ್ನಡ – 102.50 ರೂ. (00)
ಯಾದಗಿರಿ – 101.03 ರೂ. (00)

Published by:guruganesh bhat
First published: