Diamond Startup: ಇನ್ಮುಂದೆ ಕೈಗೆಟಕುವ ದರದಲ್ಲೂ ಸಿಗಲಿದೆ ವಜ್ರಗಳು! ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ ಈ ಸ್ಟಾರ್ಟ್​ಅಪ್​

ವಜ್ರ ಎಂದರೆ ಎಲ್ಲಾ ಆಭರಣಕ್ಕಿಂತ ಶ್ರೇಷ್ಠ ಮತ್ತು ದುಬಾರಿಯಾಗಿದೆ. ವಜ್ರ ಧರಿಸುವುದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ. ಆದರೆ ಅದರ ದುಬಾರಿತನದಿಂದಾಗಿ ವಜ್ರ ಧರಿಸುವ ಹಲವರು ಕನಸು ಕನಸಾಗಿಯೇ ಉಳಿದು ಬಿಡುತ್ತದೆ. ಆದರೆ ಇನ್ಮುಂದೆ ಹೀಗಾಗಲ್ಲ ಬಿಡಿ. ಏಕೆಂದರೆ ಕೈಗೆಟಕುವ ಬೆಲೆಯಲ್ಲಿ ವಜ್ರದ ಪರ್ಯಾಯವಾಗಿ ಪ್ರಯೋಗಾಲಯದಲ್ಲಿ ತಯಾರು ಮಾಡಿದ ವಜ್ರದ ಆಭರಣಗಳು ಈಗಾಗ್ಲೇ ಪರಿಚಯವಾಗಿದೆ. ಏನಿದು ಲ್ಯಾಬ್ ನಲ್ಲಿ ತಯಾರು ಮಾಡಿದ ವಜ್ರ ಅಂತೀರಾ, ಮುಂದೆ ಓದಿ.

 ಲ್ಯಾಬ್ ನಲ್ಲಿ ತಯಾರಾದ ವಜ್ರದ ಸ್ಟಾರ್ಟ್ ಅಪ್

ಲ್ಯಾಬ್ ನಲ್ಲಿ ತಯಾರಾದ ವಜ್ರದ ಸ್ಟಾರ್ಟ್ ಅಪ್

  • Share this:
ಸಾವಿರಾರು ವರ್ಷಗಳ ಇತಿಹಾಸ (History) ಹೊಂದಿರುವ ವಜ್ರವನ್ನು (Diamond) ಪ್ರಾಚೀನ ಕಾಲದಿಂದಲೂ ಆಭರಣ, ಪ್ರತಿಷ್ಠೆಯ ಪ್ರತೀಕವಾಗಿ ಬಳಲಾಗುತ್ತಿದೆ. ವಜ್ರ ಎಂದರೆ ಎಲ್ಲಾ ಆಭರಣಕ್ಕಿಂತ (Jewelery) ಶ್ರೇಷ್ಠ ಮತ್ತು ದುಬಾರಿಯಾಗಿದೆ. ವಜ್ರ ಧರಿಸುವುದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ. ಆದರೆ ಅದರ ದುಬಾರಿತನದಿಂದಾಗಿ ವಜ್ರ ಧರಿಸುವ ಹಲವರು ಕನಸು ಕನಸಾಗಿಯೇ ಉಳಿದು ಬಿಡುತ್ತದೆ. ಆದರೆ ಇನ್ಮುಂದೆ ಹೀಗಾಗಲ್ಲ ಬಿಡಿ. ಏಕೆಂದರೆ ಕೈಗೆಟಕುವ ಬೆಲೆಯಲ್ಲಿ ವಜ್ರದ ಪರ್ಯಾಯವಾಗಿ ಪ್ರಯೋಗಾಲಯದಲ್ಲಿ (Lab) ತಯಾರು ಮಾಡಿದ ವಜ್ರದ ಆಭರಣಗಳು ಈಗಾಗ್ಲೇ ಪರಿಚಯವಾಗಿದೆ. ಏನಿದು ಲ್ಯಾಬ್ ನಲ್ಲಿ ತಯಾರು ಮಾಡಿದ ವಜ್ರ ಅಂತೀರಾ, ಮುಂದೆ ಓದಿ.

ಲ್ಯಾಬ್ ನಲ್ಲಿಯೇ ವಜ್ರದ ತಯಾರಿ
ವಜ್ರವು ಇಂಗಾಲದ ಒಂದು ರೂಪ. ಎಲ್ಲಿ ಬೇಕೆಂದರಲ್ಲಿ ವಜ್ರ ಲಭ್ಯವಾಗುವುದಿಲ್ಲ. ಅತ್ಯಂತ ನಿಖರವಾದ ಸನ್ನಿವೇಶದಲ್ಲಿ ಮಾತ್ರ ನೈಸರ್ಗಿಕ ವಜ್ರದ ಹರಳಿನ ರಚನೆಯಾಗುತ್ತದೆ. ಆದರೆ ಇಲ್ಲೊಂದು ಯುವಕರ ಸ್ಟಾರ್ಟ್ ಅಪ್ ತಮ್ಮ ಲ್ಯಾಬ್ ನಲ್ಲಿಯೇ ವಜ್ರವನ್ನು ತಯಾರಿಸುತ್ತಿದ್ದಾರೆ. ಇವರು ತಯಾರಿಸಿರುವ ವಜ್ರ ನೈಸರ್ಗಿಕ ವಜ್ರಗಳಿಗೆ ಪರ್ಯಾಯವಾಗಿ ಹೊರಹೊಮ್ಮುತ್ತಿವೆ. ಮತ್ತು ಕೈಗೆಟಕುವ ಬೆಲೆಯಲ್ಲಿ ಸಿಗುವುದರಿಂದ ಯುವಕರ ಸ್ಟಾರ್ಟ್ ಅಪ್ ಸಾಕಷ್ಟು ಜನಪ್ರಿಯತೆ ಕೂಡ ಗಳಿಸುತ್ತಿದೆ.

ಯುವಕರ ಆಪುಲೆಂಟ್ ಎಂಬ ಹೊಸ ಸ್ಟಾರ್ಟ್ಅಪ್
ಐದನೇ ತಲೆಮಾರಿನ ಆಭರಣ ವ್ಯಾಪಾರಿ ಸೂರ್ಯ ಜೈನ್ ಮೊದಲಿನಿಂದಲೂ ಫ್ಯಾಶನ್, ಆಭರಣ ಈ ರೀತಿಯ ಟ್ರೆಂಡ್ ನಲ್ಲಿ ಆಸಕ್ತಿ ಹೊಂದಿದ್ದರು. ಅವರ ಆಸಕ್ತಿ ಮತ್ತು ಕನಸಿನ ಪ್ರತಿರೂಪವೇ ಈ ಲ್ಯಾಬ್ ನಲ್ಲಿ ತಯರಾಗುತ್ತಿರುವ ವಜ್ರ. 2021ರಲ್ಲಿ, ಸೂರ್ಯ ಜೈನ್, ಅಭಿಷೇಕ್ ದಕ್ ಎಂಬ ಮತ್ತೊಬ್ಬ ಯುವಕನ ಜೊತೆಗೂಡಿ ಆಪುಲೆಂಟ್ ಎಂಬ ಉದ್ಯಮ ಆರಂಭಿಸಿದನು.



ದೆಹಲಿ ಮೂಲದ ಈ ಸ್ಟಾರ್ಟಪ್ ಲ್ಯಾಬ್ ನಲ್ಲಿ ತಯಾರು ಮಾಡಿದ ವಜ್ರಗಳಿಂದ ಮಾಡಿದ ಆಭರಣಗಳನ್ನು ಮಾರಾಟ ಮಾಡುತ್ತದೆ ಮತ್ತು ಜನಪ್ರಿಯತೆ ಕೂಡ ಗಳಿಸಿದೆ. ಸೂರ್ಯ ತಮ್ಮ ಬ್ರ್ಯಾಂಡ್‌ನ ಉತ್ಪನ್ನಗಳನ್ನು "ಬಜೆಟ್ ಸ್ನೇಹಿ" ಎಂದು ವಿವರಿಸುತ್ತಾರೆ. ದೈನಂದಿನ ಬಳಕೆಗಾಗಿ ವಜ್ರದ ಆಭರಣಗಳನ್ನು ಹುಡುಕುತ್ತಿರುವ ಯುವ ಪೀಳಿಗೆಯ ಅಗತ್ಯಗಳನ್ನು ಇವರು ತಮ್ಮ ಉತ್ಪನ್ನಗಳಿಂದ ಪೂರೈಸುತ್ತಿದ್ದಾರೆ.

ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳನ್ನು ಹೇಗೆ ತಯಾರಿಸಲಾಗುತ್ತದೆ?
ಲ್ಯಾಬ್-ಗ್ರೋನ್ ಅಥವಾ ಕಲ್ಚರ್ಡ್ ವಜ್ರಗಳು ಭೂಮಿಯ ಮೇಲ್ಮೈ ಕೆಳಗೆ ನಡೆಯುವ ಸೃಷ್ಟಿ ಪ್ರಕ್ರಿಯೆಯನ್ನು ಪುನರಾವರ್ತಿಸುವ ಮೂಲಕ ಪ್ರಯೋಗಾಲಯಗಳಲ್ಲಿ ತಯಾರು ಮಾಡಲಾಗುತ್ತಿದೆ. ಈ ವಜ್ರಗಳನ್ನು ತಯಾರಿಸುವ ಪ್ರಕ್ರಿಯೆಯು ವಜ್ರದ ಬೀಜಗಳಿಂದ ಪ್ರಾರಂಭವಾಗುತ್ತದೆ. ವಜ್ರದ ಸಣ್ಣ ಚೂರುಗಳು ಮಾನವ ಕೂದಲಿನಷ್ಟು ದಪ್ಪವಾಗಿರುತ್ತದೆ. ಈ ಬೀಜಗಳನ್ನು ಪ್ಲಾಸ್ಮಾ ರಿಯಾಕ್ಟರ್ ಎಂಬ ಕೋಣೆಯಲ್ಲಿ ಇರಿಸಲಾಗುತ್ತದೆ.

ಇದನ್ನೂ ಓದಿ: JIO Institute: ಜಿಯೋ ಇನ್‌ಸ್ಟಿಟ್ಯೂಟ್‌ನ ಮೊದಲ ಬ್ಯಾಚ್ ಆರಂಭ, ವಿಶೇಷತೆಗಳೇನು?

ಶಾಖ, ಒತ್ತಡ ಮತ್ತು ಇಂಗಾಲದ ಮೂಲದ ಸಂಯೋಜನೆಯ ಅಡಿಯಲ್ಲಿ, ಬೀಜಗಳು ಬೆಳೆಯುತ್ತವೆ, ಪದರದಿಂದ ಪದರವು ಒರಟಾಗಿ ರೂಪುಗೊಳ್ಳುತ್ತದೆ. ನಂತರ ಒರಟು ಪದರವನ್ನು ತೆಗೆದು ಹೊಳಪು ನೀಡಲಾಗುತ್ತದೆ. ಲ್ಯಾಬ್ ನಲ್ಲಿ ಬೆಳೆದ ವಜ್ರಗಳ ಮೊದಲ ಸೆಟ್ ಮಾಡಲು ವಜ್ರದ ಗಣಿಗಳಿಂದ ಬೀಜಗಳನ್ನು ಪಡೆದುಕೊಂಡ ಯುವಕರು ಅದರ ನಂತರ, ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳ ಬೀಜಗಳನ್ನು ಹೆಚ್ಚಿನ ವಜ್ರಗಳನ್ನು ಉತ್ಪಾದಿಸಲು ಬಳಸಿಕೊಂಡರು. ಹೀಗೆ ತಯಾರು ಮಾಡಿದ ವಜ್ರಗಳಿಗೆ ಮಾನವ ನಿರ್ಮಿತ ವಜ್ರಗಳು, ಬೆಳೆದ ವಜ್ರಗಳು, ಇಂಜಿನಿಯರಿಂಗ್ ವಜ್ರಗಳು ಮತ್ತು ರಚಿಸಿದ ವಜ್ರಗಳು ಎಂದೂ ಕರೆಯಲಾಗುತ್ತದೆ.

ವಜ್ರದ ಬಗ್ಗೆ ಸೂರ್ಯ ಜೈನ್ ಹೇಳುವುದು ಹೀಗೆ 
ಸೂರ್ಯ ಜೈನ್ ಹೇಳುವ ಪ್ರಕಾರ, “ಗಣಿಗಾರಿಕೆ ಮಾಡಿದ ವಜ್ರಗಳು ಮತ್ತು ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳನ್ನು ಬರಿಗಣ್ಣಿನಿಂದ ಪ್ರತ್ಯೇಕಿಸುವುದು ಕಷ್ಟ, ಏಕೆಂದರೆ ಅವು ರಾಸಾಯನಿಕವಾಗಿ ಒಂದೇ ಸಂಯೋಜನೆಯನ್ನು ಹೊಂದಿವೆ. ವಿವಿಧ ರತ್ನಶಾಸ್ತ್ರೀಯ ಪರೀಕ್ಷೆಗಳನ್ನು ಬಳಸಿಕೊಂಡು ವೃತ್ತಿಪರ ರತ್ನಶಾಸ್ತ್ರಜ್ಞರು ಮಾತ್ರ ಇವುಗಳನ್ನು ಗುರುತಿಸಬಹುದು” ಎಂದು ಅವರು ಹೇಳುತ್ತಾರೆ.



ಜಾಗತಿಕವಾಗಿ, ಬೈನ್ & ಕಂಪನಿಯ ಪ್ರಕಾರ, 2021-2022ಕ್ಕೆ ವಜ್ರದ ಮಾರುಕಟ್ಟೆಯು $84 ಶತಕೋಟಿ ಮೌಲ್ಯ ಹೊಂದಿದೆ. ಸ್ಟ್ಯಾಟಿಸ್ಟಾ ಪ್ರಕಾರ, ಲ್ಯಾಬ್ ನಲ್ಲಿ ಬೆಳೆದ ವಜ್ರದ ಮಾರುಕಟ್ಟೆಯು 2030ರ ವೇಳೆಗೆ ಪ್ರಪಂಚದಾದ್ಯಂತದ ವಜ್ರದ ಮಾರುಕಟ್ಟೆಯ 10 ಪ್ರತಿಶತವನ್ನು ಆಕ್ರಮಿಸಬಹುದು ಎಂದು ಮುನ್ಸೂಚಿಸಲಾಗಿದೆ. 2030 ರ ಹೊತ್ತಿಗೆ, ಲ್ಯಾಬ್-ಬೆಳೆದ ವಜ್ರಗಳ ಜಾಗತಿಕ ಮಾರುಕಟ್ಟೆ ಪ್ರಮಾಣವು ಸುಮಾರು 19.2 ಮಿಲಿಯನ್ ಕ್ಯಾರೆಟ್‌ಗಳೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Startup: ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾ ಸ್ವಂತ ಉದ್ದಿಮೆ ಶುರು ಮಾಡಿ ಯಶಸ್ಸಿನ ಪಥ ಹಿಡಿದ ದಂಪತಿ

ಏಪ್ರಿಲ್ 2021 ರಿಂದ ಮಾರ್ಚ್ 2022 ರವರೆಗೆ, ಭಾರತವು $ 24433.97 ಮಿಲಿಯನ್ ಮೌಲ್ಯದ ಕಟ್ ಮತ್ತು ಪಾಲಿಶ್ ಮಾಡಿದ ವಜ್ರಗಳನ್ನು ರಫ್ತು ಮಾಡಿದೆ. ಇದರಲ್ಲಿ, ಲ್ಯಾಬ್-ಬೆಳೆದ ವಜ್ರಗಳು $1313.98 ಮಿಲಿಯನ್ ಮೌಲ್ಯದ್ದಾಗಿದೆ ಎಂದು ಜೆಮ್ ಮತ್ತು ಜ್ಯುವೆಲ್ಲರಿ ರಫ್ತು ಪ್ರಮೋಷನ್ ಕೌನ್ಸಿಲ್ ತಿಳಿಸಿದೆ.
Published by:Ashwini Prabhu
First published: