• Home
  • »
  • News
  • »
  • business
  • »
  • Business: ನಟನೆಯಲ್ಲಿ ಯಶಸ್ಸು ಕಾಣದೆ ಇದ್ರೂ ಬಹುಕೋಟಿ ವ್ಯವಹಾರಕ್ಕೆ ಮಾಲೀಕರಾದ ನಟ ನಟಿಯರಿವರು

Business: ನಟನೆಯಲ್ಲಿ ಯಶಸ್ಸು ಕಾಣದೆ ಇದ್ರೂ ಬಹುಕೋಟಿ ವ್ಯವಹಾರಕ್ಕೆ ಮಾಲೀಕರಾದ ನಟ ನಟಿಯರಿವರು

ಬಹುಕೋಟಿ ವ್ಯವಹಾರಕ್ಕೆ ಮಾಲೀಕರಾದ ನಟ, ನಟಿಯರು

ಬಹುಕೋಟಿ ವ್ಯವಹಾರಕ್ಕೆ ಮಾಲೀಕರಾದ ನಟ, ನಟಿಯರು

ಸ್ಟಾರ್ ನ ಮಗ ಅಥವಾ ಮಗಳು ಕೆಲವೊಮ್ಮೆ ಅರ್ಹವಾದ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುವುದಿಲ್ಲ. ಬಾಲಿವುಡ್ ನಲ್ಲಿಯೂ ಸಹ ಅನೇಕ ನಟ ನಟಿಯರು ಈ ಸಾಲಿನಲ್ಲಿ ಬರುತ್ತಾರೆ ಎಂದು ಹೇಳಬಹುದು. ಟ್ವಿಂಕಲ್ ಖನ್ನಾ, ಉದಯ್ ಚೋಪ್ರಾ, ತುಷಾರ್ ಕಪೂರ್ ಮತ್ತು ಹೆಚ್ಚಿನ ಸ್ಟಾರ್ ಮಕ್ಕಳು ಚಲನಚಿತ್ರಗಳಲ್ಲಿ ಯಶಸ್ವಿಯಾಗಲಿಲ್ಲ, ಆದರೆ ಇಂದು ಅವರು ಬಹುಕೋಟಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಬಹುದು.

ಮುಂದೆ ಓದಿ ...
  • Share this:

ಅನೇಕ ಸಾರಿ ಈ ಚಲನಚಿತ್ರೋದ್ಯಮ (Film Industry) ಎನ್ನುವುದು ಅನೇಕರನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತೇ, ಆದರೆ ಇಲ್ಲಿ ಅದೃಷ್ಟ (Luck) ಒಲಿದು ಯಶಸ್ಸು ಕಾಣುವುದು ಬರೀ ಬೆರಳೆಣಿಕೆಯಷ್ಟು ಮಂದಿಗೆ ಅಂತ ಹೇಳಬಹುದು. ಇನ್ನೂ ಕೆಲವರಿಗೆ ಹೊಟ್ಟೆ ಮತ್ತು ಬಟ್ಟೆಗೆ ಏನು ಕಮ್ಮಿ ಇಲ್ಲ ಎಂಬಂತೆ ಕೆಲಸಗಳು (Work) ಸಿಗುತ್ತಾ ಹೋಗುತ್ತವೆ. ಆದರೆ ಇನ್ನೂ ಕೆಲವರಿಗೆ ಈ ಯಶಸ್ಸು (Success) ಒಲಿಯುವುದೇ ಇಲ್ಲ ಎಂದು ಹೇಳಬಹುದು. ಹೀಗೆ ಅನೇಕ ಚಿತ್ರೋದ್ಯಮಗಳಲ್ಲಿ ದೊಡ್ಡ ದೊಡ್ಡ ಯಶಸ್ಸು ಕಂಡು ಸ್ಟಾರ್ (Star) ಆದವರ ಸಂಖ್ಯೆಗಿಂತಲೂ ಸೋಲನ್ನು (Loss) ಕಂಡವರೇ ಸ್ವಲ್ಪ ಜಾಸ್ತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಬಾಲಿವುಡ್‍ನಲ್ಲಿಯೂ ಸಹ ಸುಮಾರು ನಟ ಮತ್ತು ನಟಿಯರು ತಮ್ಮ ಪೋಷಕರಂತೆ ದೊಡ್ಡ ಸ್ಟಾರ್ ಆಗಲು ಬಂದು ಅಷ್ಟೊಂದು ಯಶಸ್ಸು ಕಾಣದೆ ಮನೆಯಲ್ಲಿ ಕೂತವರು ಇದ್ದಾರೆ. ಅದರಲ್ಲೂ ಸ್ಟಾರ್ ಮಕ್ಕಳನ್ನು ಪ್ರತಿ ಹಂತದಲ್ಲೂ ಕಠಿಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಎಂದರೆ ಅವರ ಪ್ರತಿ ಚಿತ್ರದಲ್ಲಿನ ನಟನೆ ಮತ್ತು ಆ ಚಿತ್ರದ ಸೋಲು ಮತ್ತು ಗೆಲುವುಗಳನ್ನು ತುಂಬಾನೇ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಚಿತ್ರ ಗೆದ್ದಾಗ ಅವರನ್ನು ಅವರ ಪೋಷಕರೊಂದಿಗೆ ಹೋಲಿಸಿ ನೋಡಲಾಗುತ್ತದೆ ಮತ್ತು ಚಿತ್ರ ಸೋತಾಗ ಇವರ ನಟನೆಯನ್ನು ತೀವ್ರವಾಗಿ ನಿಂದಿಸಲಾಗುತ್ತದೆ.


ಒಟ್ಟಿನಲ್ಲಿ ಹೇಳುವುದಾದರೆ ಈ ಸ್ಟಾರ್‍‍ನ ಮಗ ಅಥವಾ ಮಗಳು ಕೆಲವೊಮ್ಮೆ ಅರ್ಹವಾದ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುವುದಿಲ್ಲ. ಬಾಲಿವುಡ್‍ನಲ್ಲಿಯೂ ಸಹ ಅನೇಕ ನಟ ನಟಿಯರು ಈ ಸಾಲಿನಲ್ಲಿ ಬರುತ್ತಾರೆ ಎಂದು ಹೇಳಬಹುದು. ಟ್ವಿಂಕಲ್ ಖನ್ನಾ, ಉದಯ್ ಚೋಪ್ರಾ, ತುಷಾರ್ ಕಪೂರ್ ಮತ್ತು ಹೆಚ್ಚಿನ ಸ್ಟಾರ್ ಮಕ್ಕಳು ಚಲನಚಿತ್ರಗಳಲ್ಲಿ ಯಶಸ್ವಿಯಾಗಲಿಲ್ಲ, ಆದರೆ ಇಂದು ಅವರು ಬಹುಕೋಟಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಬಹುದು.


ಟ್ವಿಂಕಲ್ ಖನ್ನಾ
ನಟಿ ಟ್ವಿಂಕಲ್ ಖನ್ನಾ ‘ಬಾದ್ ಷಾ’ ಮತ್ತು ‘ಮೇಲಾ’ ದಂತಹ ಬಾಲಿವುಡ್ ಚಿತ್ರಗಳಲ್ಲಿ ಅಸಾಧಾರಣ ಪ್ರದರ್ಶನಗಳನ್ನು ನೀಡಿದರು. ನಂತರ ಅವರು ತಮ್ಮ ನಟನಾ ವೃತ್ತಿ ಜೀವನವನ್ನು ತ್ಯಜಿಸಿದರು ಮತ್ತು ಲೇಖಕಿ, ಅಂಕಣಕಾರರಾಗಿ, ನಿರ್ಮಾಪಕ ಮತ್ತು ಮನೆಯ ಒಳಾಂಗಣ ವಿನ್ಯಾಸಕರಾದರು. ಅವರು ಹೆಚ್ಚು ಮಾರಾಟವಾಗುತ್ತಿರುವ ಕಾದಂಬರಿ ಮಿರ್ಸೆಸ್ ಫನ್ನಿಬೋನ್ಸ್ ಲೇಖಕರಲ್ಲಿ ಒಬ್ಬರು. ಟ್ವಿಂಕಲ್ ಅವರು ಕೋಹ್ಲರ್ ನ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.


ಇದನ್ನೂ ಓದಿ:  Shilpa Shetty: ಯಾವ 5 ಸ್ಟಾರ್​ ಹೋಟೆಲ್​ ರೂಮ್​ಗೂ ಕಡಿಮೆ ಇಲ್ಲ ಶಿಲ್ಪಾ ಶೆಟ್ಟಿ ವ್ಯಾನಿಟಿ ವ್ಯಾನ್, ಏನೇನಿದೆ ಇದರ ಒಳಗಡೆ?


ಉದಯ್ ಚೋಪ್ರಾ
ನಟ ಉದಯ್ ಚೋಪ್ರಾ ತಮ್ಮ 20ನೇ ವಯಸ್ಸಿನಲ್ಲಿಯೇ ಬಾಲಿವುಡ್‍ಗೆ ಪದಾರ್ಪಣೆ ಮಾಡಿದರು. ಇವರು ಶಾರುಖ್ ಖಾನ್ ಅಭಿನಯದ ‘ಮೊಹಬ್ಬತೇನ್’ ಚಿತ್ರದಲ್ಲಿ ನಟಿಸುವುದರ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಬಾಲಿವುಡ್‍ನ ಧೂಮ್, ನೀಲ್ ಅಂಡ್ ನಿಕ್ಕಿ, ಮೇರೆ ಯಾರ್ ಕಿ ಶಾದಿ ಹೈ ಮತ್ತು ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ಇವರು ಕಾಣಿಸಿಕೊಂಡರು. ಅಲ್ಲದೇ ಇವರೂ ನಟನೆ ಇಂದ ಶೀಘ್ರದಲ್ಲಿಯೇ ನಿರ್ಮಾಪಕನಾಗಿ ಬದಲಾದರು ಮತ್ತು ಲಾಸ್ ಏಂಜಲೀಸ್‍ಗೆ ತೆರಳಿದರು. 2011 ರಲ್ಲಿ, ಅವರು ಲಾಸ್ ಏಂಜಲೀಸ್‍ನಲ್ಲಿ ವೈಆರ್‌ಎಎಫ್ ಎಂಟರ್ಟೈನ್ಮೆಂಟ್ ಅನ್ನು ಸ್ಥಾಪಿಸಿದರು ಮತ್ತು ನಿಕೋಲ್ ಕಿಡ್ಮನ್ ಮತ್ತು ದಿ ಲಾಂಗೆಸ್ಟ್ ವೀಕ್ ಅನ್ನು ನಿರ್ಮಿಸಿದ್ದಾರೆ. ಅವರು ಯೋಮಿಕ್ಸ್ ಎಂಬ ಕಾಮಿಕ್ ಲೇಬಲ್‍ನ ಸ್ಥಾಪಕರಾಗಿದ್ದಾರೆ.


ಜಾಕೀ ಭಗ್ನಾನಿ
ಜಾಕೀ ಭಗ್ನಾನಿ ಅವರು 2009 ರಲ್ಲಿ ‘ಕಲ್ ಕಿಸ್ನೆ ದೇಖಾ’ ಎಂಬ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ನಂತರ ಇವರು ವೆಲ್ಕಮ್ 2 ಕರಾಚಿ, ಯಂಗಿಸ್ತಾನ್, ಮಿತ್ರಾನ್ ಮತ್ತು ಫಾಲ್ತು ನಂತಹ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಜಾಕೀ ನಿರ್ಮಾಣ ಮತ್ತು ಸ್ವಂತ ಉದ್ಯಮ ಶುರು ಮಾಡಲು ತೆರಳಿದರು ಮತ್ತು ಜೆಜೆಸ್ಟ್ ಮ್ಯೂಸಿಕ್ ಅನ್ನು ಸಹ ಸ್ಥಾಪಿಸಿದರು.


ಹರ್ಮನ್ ಬವೇಜಾ
ಹರ್ಮನ್ ಬವೇಜಾ ಅವರನ್ನು ಅವರ ಕುಟುಂಬದ ಪ್ರೊಡಕ್ಷನ್ ಬ್ಯಾನರ್‍‍ನ ಅಡಿಯಲ್ಲಿ ತಯಾರಾದ ಚಿತ್ರದಿಂದ ಬಾಲಿವುಡ್‍ಗೆ ಪರಿಚಯಿಸಲಾಯಿತು. ನಂತರ ಅವರು ‘ವಾಟ್ ಈಸ್ ಯುವರ್ ರಾಶಿ’ಯಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಈಗ ಹೆಲ್ತ್ ನ್ಯಾಚುರೆಲ್‍ನ ಸ್ಥಾಪಕರು ಆಗಿದ್ದಾರೆ ಮತ್ತು ಅವರ ವ್ಯವಹಾರದ ನಿವ್ವಳ ಮೌಲ್ಯವು ಸುಮಾರು 5 ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Vikrant Rona: ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ, NFT ಗೆ ಎಂಟ್ರಿ ಕೊಟ್ಟ ವಿಕ್ರಾಂತ್​ ರೋಣ


ತುಷಾರ್ ಕಪೂರ್
ನಟ ತುಷಾರ್ ಕಪೂರ್ 2001 ರಲ್ಲಿ ‘ಮುಜೆ ಕುಚ್ ಕೆಹ್ನಾ ಹೈ’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. 2017 ರಲ್ಲಿ, ಅವರು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿದರು ಮತ್ತು ಅಕ್ಷಯ್ ಕುಮಾರ್ ಅವರ ‘ಲಕ್ಷ್ಮಿ’ ಎಂಬ ಚಿತ್ರವನ್ನು ಸಹ ನಿರ್ಮಿಸಿದರು.

Published by:Ashwini Prabhu
First published: