Wedding Industry: ಇವೆಂಟ್‌ ಮ್ಯಾನೇಜ್‌ಮೆಂಟ್​ಗೆ ಭಾರೀ ಡಿಮ್ಯಾಂಡ್:‌ ಈ ವರ್ಷ ಮದುವೆ ಉದ್ಯಮ 200% ಹೆಚ್ಚಳ!

ಮದುವೆ ಸೇರಿ ಇತರೆ ಎಲ್ಲಾ ಕಾರ್ಯಕ್ರಮಗಳನ್ನು ಇವೆಂಟ್ ಮ್ಯಾನೆಂಜ್‌ ಮೆಂಟ್‌ (Event Management) ಅವರು ಸೂಸೂತ್ರವಾಗಿ ನಡೆಸಿಕೊಡುತ್ತಾರೆ. ಎಲ್ಲವನ್ನೂ ಅದ್ದೂರಿತನದಿಂದ ಮಾಡಲು ಬಯಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಕಾರ್ಯಕ್ರಮಗಳನ್ನು ನಡೆಸಿಕೊಡುವ ಕಂಪನಿಗಳು (Companies) ಸಹ ಈ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಹೊಂದುತ್ತಿವೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹೊಸದಿಲ್ಲಿ: ಭಾರತದಲ್ಲಿ ಮದುವೆಗೆ (Marriage) ಸಾಕಷ್ಟು ಹಣವನ್ನು ವ್ಯಯಿಸಲಾಗುತ್ತದೆ. ಪೋಷಕರು (Parents) ತಮ್ಮ ಮಕ್ಕಳ ಮದುವೆಗೆಂದೇ ವರ್ಷಗಳಿಂದ ಹಣ ಕೂಡಿಟ್ಟು ಅದ್ದೂರಿಯಾಗಿ ಮದುವೆ ಮಾಡುತ್ತಾರೆ. ಈಗಂತೂ ಮದುವೆ ಸೇರಿ ಇತರೆ ಎಲ್ಲಾ ಕಾರ್ಯಕ್ರಮಗಳನ್ನು ಇವೆಂಟ್ ಮ್ಯಾನೆಂಜ್‌ ಮೆಂಟ್‌ (Event Management) ಅವರು ಸೂಸೂತ್ರವಾಗಿ ನಡೆಸಿಕೊಡುತ್ತಾರೆ. ಎಲ್ಲವನ್ನೂ ಅದ್ದೂರಿತನದಿಂದ ಮಾಡಲು ಬಯಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಕಾರ್ಯಕ್ರಮಗಳನ್ನು ನಡೆಸಿಕೊಡುವ ಕಂಪನಿಗಳು (Companies) ಸಹ ಈ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಹೊಂದುತ್ತಿವೆ. ಅಂತೆಯೇ ಈ ವರ್ಷ ಮದುವೆಯನ್ನು ನಡೆಸಿಕೊಡುವ ಉದ್ಯಮವು (Business) 200% ಬೆಳವಣಿಗೆಯನ್ನು ಕಾಣುವ ಸಾಧ್ಯತೆಯಿದೆ ಎಂದು ಫರ್ನ್ಸ್ ಎನ್ ಪೆಟಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಗುಟ್ಗುಟಿಯಾ ತಿಳಿಸಿದ್ದಾರೆ.

ಈ ವರ್ಷ ಮದುವೆ ಉದ್ಯಮ 200% ಬೆಳವಣಿಗೆ ಸಾಧ್ಯತೆ
ಕೋವಿಡ್‌ ಬಂದ ನಂತರ ಅದ್ಧೂರಿ ಮದುವೆಗಳ ಸಂಖ್ಯೆ ಕಡಿಮೆಯಾಗಿತ್ತು. ಈಗ ಕೋವಿಡ್‌ ಪರಿಸ್ಥಿತಿ ಬದಲಾಗಿದ್ದು ಎಲ್ಲಾ ಉದ್ಯಮಗಳು ಚೇತರಿಕೆ ಕಾಣುತ್ತಿವೆ. 2019ರಲ್ಲಿ ಮದುವೆ ಉದ್ಯಮದ ಆದಾಯ ಉತ್ತಮವಾಗಿತ್ತು ಆದರೆ ಕೋವಿಡ್‌ ಆಗಮನದ ಬಳಿಕ ಇವೆಂಟ್ ಮ್ಯಾನೆಜ್‌ ಮೆಂಟ್‌ ಗಳು ಸಾಕಷ್ಟು ನಷ್ಟ ಅನುಭವಿಸಿದ್ದವು. ಪ್ರಸ್ತುತ ಮದುವೆ ಸಮಾರಂಭಗಳು ಸದ್ಯ ಮುಂಚಿನಹಾಗೆ ಅದ್ಧೂರಿಯಾಗಿ ನಡೆಯುತ್ತಿದ್ದು, ಇದರಿಂದಾಗಿ ಈ ವರ್ಷ ಮತ್ತೆ ಉದ್ಯಮವು ಕೋವಿಡ್‌ ಪೂರ್ವದ ಸ್ಥಿತಿಗೆ ಮರಳಿದ್ದು, ಈ ವರ್ಷ 200% ಬೆಳೆಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

2019ರಲ್ಲಿ ಮದುವೆ ಉದ್ಯಮದ ಆದಾಯ ಉತ್ತಮವಾಗಿತ್ತು ಆದರೆ ಕೋವಿಡ್‌ ಆಗಮನದ ಬಳಿಕ ಇವೆಂಟ್ಮ್ಯಾನೆಜ್‌ ಮೆಂಟ್‌ ಗಳು ಸಾಕಷ್ಟು ನಷ್ಟ ಅನುಭವಿಸಿದ್ದವು. ಆದರೆ ಈ ವರ್ಷ ಮತ್ತೆ ಉದ್ಯಮವು ಕೋವಿಡ್‌ ಪೂರ್ವದ ಸ್ಥಿತಿಗೆ ಮರಳಿದ್ದು, ಈ ವರ್ಷ ಮತ್ತೆ ಚೇತರಿಕೆ ಕಾಣಲಿವೆ ಎಂದು ನೀರೀಕ್ಷಿಸಲಾಗಿದೆ.

ಇವೆಂಟ್ ಮ್ಯಾನೆಜ್‌ ಮೆಂಟ್‌ ಕಂಪನಿಗಳಿಗಿದ್ಯಂತೆ ಭಾರಿ ಡಿಮ್ಯಾಂಡ್ 
ಈ ವರ್ಷದ ಮಾರ್ಚ್‌ನಲ್ಲಿ ಕಂಪನಿಯಲ್ಲಿ ₹200 ಕೋಟಿ ಹೂಡಿಕೆ ಮಾಡಿದ ಲೈಟ್‌ಹೌಸ್ ಇಂಡಿಯಾ ಫಂಡ್ III ಬೆಂಬಲದೊಂದಿಗೆ ಫರ್ನ್ಸ್ ಎನ್ ಪೆಟಲ್ಸ್, 100% ಬೆಳವಣಿಗೆಯನ್ನು ಉದ್ಯಮದಿಂದ ನಿರೀಕ್ಷಿಸಿದೆ ಮತ್ತು ಮುಂಬರುವ ಮದುವೆಯ ಋತುವಿನ ಬುಕಿಂಗ್‌ಗಳು ಈಗಾಗಲೇ ಬುಕಿಂಗ್‌ ಆಗಿದ್ದು, ವ್ಯಾಪಾರವು 2019ರ ದಿಕ್ಕಿನಲ್ಲಿ ಸಾಗಿದೆ ಎಂದಿದ್ದಾರೆ.

ಇದನ್ನೂ ಓದಿ:  Billionaire: ಕೇವಲ ಒಂದು ತಿಂಗಳಲ್ಲಿ 600 ಕೋಟಿ ರುಪಾಯಿ ಒಡೆಯನಾದ 20 ವರ್ಷದ ಯುವಕ! ಇದು ಹೇಗೆ ಸಾಧ್ಯ

ಅದ್ದೂರಿ ಮದುವೆಗಾಗಿ ಈಗಾಗಲೇ ಸ್ಥಳಗಳು ಬುಕ್‌ ಆಗಿದ್ದು, ಮದುವೆ ಆಯೋಜಿಸುವ ಇವೆಂಟ್ ಮ್ಯಾನೆಜ್‌ ಮೆಂಟ್‌ ಕಂಪನಿಗಳು ಈ ವರ್ಷ 100% ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಾಣಲಿದೆ, ಎಂದು ಗುಟ್ಗುಟಿಯಾ ಹೇಳಿದರು.

ವೆಡ್ಡಿಂಗ್‌ವೈರ್ ಇಂಡಿಯಾ ಕಳೆದ ತಿಂಗಳು ನಡೆಸಿದ ಸಮೀಕ್ಷೆಯ ಪ್ರಕಾರ, 2019 ಕ್ಕೆ ಹೋಲಿಸಿದರೆ ಅದರ ಅರ್ಧದಷ್ಟು ವಿವಾಹ ಮಾರಾಟಗಾರರ (42.5%) ತಿಂಗಳ ಆದಾಯವು 2022 ರಲ್ಲಿ ಹೆಚ್ಚಾಗಿದೆ ಮತ್ತು ಮದುವೆ ಉದ್ಯಮದಲ್ಲಿ ಸುಮಾರು 31% ಮಾರಾಟಗಾರರು ಉತ್ಪನ್ನ ಮತ್ತು ಕಾರ್ಮಿಕ ವೆಚ್ಚಗಳನ್ನು ಭರಿಸಲು ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ.

ಈ ಬಗ್ಗೆ ಫರ್ನ್ಸ್ ಎನ್ ಪೆಟಲ್ಸ್ ಕಂಪನಿ ಸ್ಥಾಪಕ ವಿಕಾಸ್ ಗುಟ್ಗುಟಿಯಾ ಏನು ಹೇಳಿದ್ದಾರೆ?
ಮದುವೆಯ ಋತುವು ದೀಪಾವಳಿಯ ನಂತರ ಪ್ರಾರಂಭವಾಗಲಿದೆ ಮತ್ತು ನವೆಂಬರ್ ಮತ್ತು ಫೆಬ್ರವರಿ ನಡುವಿನ ತಿಂಗಳುಗಳು ಭಾರತದಲ್ಲಿ ಗರಿಷ್ಠ ಮದುವೆಯಗಳು ನಡೆಯುತ್ತವೆ. “ಸಾಮಾನ್ಯವಾಗಿ, ಮದುವೆಗಳನ್ನು ವರ್ಷದುದ್ದಕ್ಕೂ ಕೆಲವು ಮಂಗಳಕರ ದಿನಗಳಲ್ಲಿ ನಡೆಸಲಾಗುತ್ತದೆ ಆದರೆ ಅನುಕೂಲ ಮತ್ತು ವೆಚ್ಚಗಳೆರಡರಿಂದಲೂ ಪ್ರವೃತ್ತಿಯು ಕ್ರಮೇಣ ಬದಲಾಗುತ್ತಿದೆ. ಮಂಗಳಕರ ದಿನಾಂಕದಂದು ನಡೆಯುವ ವಿವಾಹವು ಜನರಿಗೆ ಸುಮಾರು ಎರಡು ಪಟ್ಟು ವೆಚ್ಚವಾಗುತ್ತದೆ ಏಕೆಂದರೆ ಸ್ಥಳಗಳು, ಅಲಂಕಾರಗಳು ಮತ್ತು ಇತರ ಸೇವೆಗಳಿಗೆ ಆ ಸಮಯದಲ್ಲಿ ಭಾರಿ ಬೇಡಿಕೆ ಇರುತ್ತದೆ.

ಶುಭಕರ ದಿನಾಂಕ ಬಿಟ್ಟು ಬೇರೆ ದಿನಗಳಲ್ಲಿ ಅದೇ ವಿವಾಹವನ್ನು ಮಾಡಿದರೆ ಅರ್ಧದಷ್ಟು ವೆಚ್ಚದಲ್ಲಿ ಕಾರ್ಯಕ್ರಮವನ್ನು ಮುಗಿಸಬಹುದು. ಹೋಟೆಲ್‌ಗಳು ಮತ್ತು ಕ್ಯಾಟರರ್‌ಗಳು ಸಹ ಈ ಸಮಯದಲ್ಲಿ ದರಗಳನ್ನು ಹೆಚ್ಚಿಸುತ್ತವೆ" ಎಂದು ಫರ್ನ್ಸ್ ಎನ್ ಪೆಟಲ್ಸ್ ಕಂಪನಿ ಸ್ಥಾಪಕ ವಿಕಾಸ್ ಗುಟ್ಗುಟಿಯಾ ತಿಳಿಸಿದರು.

ಇದನ್ನೂ ಓದಿ: Relationship: ಹೌಸ್ ಕೀಪಿಂಗ್ ಸಿಬ್ಬಂದಿಯನ್ನೇ ಮದುವೆಯಾದ ಡಾಕ್ಟರ್: ಹೀಗೆ ಶುರುವಾಯ್ತು ಇವರ ಪ್ರೇಮ್ ಕಹಾನಿ!

ಫರ್ನ್ಸ್ ಎನ್ ಪೆಟಲ್ಸ್ ಕಂಪನಿಯನ್ನು 1994 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಎಫ್‌ ಎನ್‌ ಪಿ ಕಂಪನಿ ವೆಡ್ಡಿಂಗ್ಸ್ ಮತ್ತು ಇವೆಂಟ್​ಗಳು ಸೇರಿದಂತೆ 12 ವರ್ಟಿಕಲ್‌ಗಳನ್ನು ಇದು ಹೊಂದಿದೆ. ಇದು ತನ್ನ ಉಡ್ಮಾನ್ ಬ್ರ್ಯಾಂಡ್ ಅಡಿಯಲ್ಲಿ ಮೂರು ಹೋಟೆಲ್‌ಗಳನ್ನು ಹೊಂದಿದೆ, ಅಲ್ಲಿ ಅದು ಮದುವೆಗಳನ್ನು ಸಹ ಆಯೋಜಿಸುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಇದನ್ನು 20 ಹೋಟೆಲ್‌ಗಳಿಗೆ ವಿಸ್ತರಿಸುವ ಉದ್ದೇಶವನ್ನು ಕಂಪನಿ ಹೊಂದಿದೆ.
Published by:Ashwini Prabhu
First published: