ಕಾಂಗ್ರೆಸ್ (Congress) ಸರ್ಕಾರ ರಾಜ್ಯದ ಗದ್ದುಗೆ ಹಿಡಿದಾಯ್ತು. ಚುನಾವಣೆ ಪೂರ್ವ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ (Congress Guarantee) ನೀಡಿತ್ತು. ಶೀಘ್ರದಲ್ಲೇ ಈ ಗ್ಯಾರಂಟಿಗಳನ್ನು ನೆರವೇರಿಸುವುದಾಗಿ ಸರ್ಕಾರ ಹೇಳಿಕೊಂಡಿದೆ. ಜೂನ್ (June) ಒಂದನೇ ತಾರೀಖಿನಿಂದ ಯಾರೂ ಕರೆಂಟ್ ಬಿಲ್ (Current Bill) ಕಟ್ಟಂಗಿಲ್ಲ ಎಂದು ಡಿಕೆಶಿ ಹೇಳಿದ್ದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. ಅದಕ್ಕೂ ಮಾರ್ಕೆಟ್ನಲ್ಲಿ ಎಲೆಕ್ಟ್ರಿಕ್ ಸ್ಟವ್ (Electric Stove) ಡಿಮ್ಯಾಂಡ್ ಹೆಚ್ಚಾಗಿದ್ದಕ್ಕೂ ಏನು ಸಂಬಂಧ ಅಂತ ನೀವು ಕೇಳಬಹುದು. ಎರಡಕ್ಕೂ ಸಂಬಂಧವಿದೆ. ಎಲ್ಲ ಕಡೆ ಕರೆಂಟ್ ಬಿಲ್ ಕಟ್ಟಿ ಅಂದ್ರೆ ನಾವ್ ಕಟ್ಟಕ್ಕಿಲ್ಲ ಹೋಗಿ ಸಿದ್ದು, ಡಿಕೆಶಿನಾ ಕೇಳಿ ಅಂತಿದ್ದಾರೆ.
ಈ ನಡುವೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಟವ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಹಳೆ ಮೈಸೂರು ಭಾಗದ ಜನ ಎಲ್ಪಿಜಿ ಗ್ಯಾಸ್ ಸ್ಟವ್ ಬಳಸುವುದನ್ನು ನಿಲ್ಲಿಸಿ, ಎಲೆಕ್ಟ್ರಿಕ್ ಸ್ಟವ್ ಬಳಸುವುದಕ್ಕೆ ಶುರು ಮಾಡಿದ್ದಾರೆ.
ಎಲೆಕ್ಟ್ರಿಕ್ ಸ್ಟವ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!
ಕಾಂಗ್ರೆಸ್ ಸರ್ಕಾರ್ 200 ಯೂನಿಟ್ ಉಚಿತ ಕರೆಂಟ್ ಕೊಡುವುದಾಗಿ ಹೇಳಿಕೊಂಡಿದೆ. ಇದನ್ನೇ ನಂಬಿಕೊಂಡ ಜನರು ಯಾವ ರೀತಿಯಲ್ಲಿ ಹಣ ಉಳಿಸಬಹುದು ಅಂತ ಜನ ಯೋಚನೆ ಮಾಡುತ್ತಿದ್ದಾರೆ.
ವರ್ಷಕ್ಕೆ ಏನಿಲ್ಲ ಅಂದ್ರು ಒಂದು ಮನೆಗೆ 9 ಸಿಲಿಂಡರ್ ಬೇಕಾಗುತ್ತೆ 1 ಗ್ಯಾಸ್ ಬೆಲೆ 1150 ರೂಪಾಯಿ, ವರ್ಷಕ್ಕೆ 9 ಗ್ಯಾಸ್ ಅಂದರೆ 10,035 ರೂಪಾಯಿ ಖರ್ಚಾಗುತ್ತೆ. ಸರ್ಕಾರನೇ ಫ್ರೀ ಕರೆಂಟ್ ಕೊಡುವಾಗ ಅದನ್ನು ಬಳಸಿಕೊಳ್ಳದೇ ಯಾಕೆ ಗ್ಯಾಸ್ ಸ್ಟವ್ ಬಳಸಬೇಕು ಅಂತ ಜನ ಎಲೆಕ್ಟ್ರಿಕ್ ಸ್ಟವ್ ಮೊರೆ ಹೋಗುತ್ತಿದ್ದಾರೆ.
ಕಳೆದ 5 ವರ್ಷದಲ್ಲಿ ಎಲ್ಪಿಜಿ ದರ ಭಾರೀ ಏರಿಕೆ!
LPG ರೀಫಿಲ್‌ಗಳ ಬೆಲೆ ಕಳೆದ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಆಡಳಿತದ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಉಚಿತ ವಿದ್ಯುತ್ ಯೋಜನೆ ಜಾರಿ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನಾಲ್ವರು ಘೋಷಣೆ ಮಾಡಲಾಗಿತ್ತು. ಗ್ರಾಮೀಣ ಭಾಗದ ಜನರು ಉಚಿತವಾಗಿ ಸಿಗುವ ಕರೆಂಟ್ ಯಾಕೆ ವೇಸ್ಟ್ ಮಾಡಬೇಕು ಅಂತ ಎಲೆಕ್ಟ್ರಿಕ್ ಸ್ಟವ್ ಕೊಂಡುಕೊಳ್ಳಲು ಮುಗಿಬೀಳುತ್ತಿದ್ದಾರೆ.
ಇದನ್ನೂ ಓದಿ: ನಾವ್ ಕರೆಂಟ್ ಬಿಲ್ ಕಟ್ಟಲ್ಲ; ಗ್ರಾಮಸ್ಥರ ಪಟ್ಟು; ವಿಡಿಯೋ ವೈರಲ್
ಗ್ರಾಮೀಣ ಭಾಗದಲ್ಲೂ ಎಲೆಕ್ಟ್ರಿಕ್ ಸ್ಟವ್ ಹವಾ!
ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಇಂಡಕ್ಷನ್ ಕುಕ್ಕರ್ ಬಳಸುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದಮೇಲೆ ಜನರು ಇಂಡಕ್ಷನ್ ಕುಕ್ಕರ್ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಅಂತಾರೆ ಅಂಗಡಿ ಮಾಲೀಕರು.
ಕರೆಂಟ್ ಬಿಲ್ ಕಟ್ಟಲ್ಲ ಅಂತೀರೋ ಜನರು!
ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಾವು ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಎಂದು ಬೆಸ್ಕಾಂ ಅಧಿಕಾರಿಗೆ ಗ್ರಾಮಸ್ಥರು ಅವಾಜ್ ಹಾಕಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮಸ್ಥರು ವಿದ್ಯುತ್ ಬಿಲ್ ಪಾವತಿಸಲ್ಲ ಎಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಸರ್ಕಾರ ಬಂದಿದೆ. ಅವರ ಬಿಲ್ ಕಟ್ಟುವಂತಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾವು ಬಿಲ್ ಪಾವತಿಸಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕಾಂಗ್ರೆಸ್ಗೆ ಬಹುಮತ ಬಂದಿದ್ದು, ಆದೇಶ ಬರೋವರೆಗೂ ನೀವು ಬಿಲ್ ಪಾವತಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಅದೆಲ್ಲ ನಮಗೆ ಗೊತ್ತಿಲ್ಲ. ಆದೇಶದ ಬಗ್ಗೆ ಕಾಂಗ್ರೆಸ್ನವರನ್ನ ಕೇಳಿಕೊಳ್ಳಿ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ