Success Story: ಡೆಲಿವರಿ ಬಾಯ್‌ ಆಗಿದ್ದವ ಈಗ ಪ್ರತಿಷ್ಠಿತ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್! ರೋಚಕ ಜೀವನವೇ ಸ್ಪೂರ್ತಿ

ದೃಢಸಂಕಲ್ಪ ಹೊಂದಿರುವ ವ್ಯಕ್ತಿಯನ್ನು ಯಾವ ಶಕ್ತಿಗಳು ಸಹ ಸೋಲಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಶೇಕ್ ಅಬ್ದುಲ್ ಸತಾರ್ ಸಾಕ್ಷಿಯಾಗಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಈ ಯುವಕ ತನ್ನ ಕಾಲೇಜು ಸಮಯವನ್ನು ಹೊರತುಪಡಿಸಿದರೆ ಬಹುಪಾಲು ಸಮಯವನ್ನು ಡೆಲಿವರಿ ಬಾಯ್ ಆಗಿ, ಚಾಲಕನಾಗಿಯೇ ಕಳೆದಿದ್ದರು. ಹೀಗೆ ಅರೆಕಾಲಿಕ ಕೆಲಸಗಳ ಜೊತೆಗೆ ಕಷ್ಟ ಪಟ್ಟು ಓದು ಮುಗಿಸಿದ ಅಬ್ದುಲ್ ಪ್ರಸ್ತುತ ಐಟಿ ಕಂಪನಿಯಲ್ಲಿ ಕೆಲಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೇಕ್ ಅಬ್ದುಲ್ ಸತಾರ್

ಶೇಕ್ ಅಬ್ದುಲ್ ಸತಾರ್

  • Share this:
ದೃಢಸಂಕಲ್ಪ ಹೊಂದಿರುವ ವ್ಯಕ್ತಿಯನ್ನು ಯಾವ ಶಕ್ತಿಗಳು ಸಹ ಸೋಲಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಶೇಕ್ ಅಬ್ದುಲ್ ಸತಾರ್ (Shaik Abdul Sathar) ಸಾಕ್ಷಿಯಾಗಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ (Visakhapatnam of Andhra Pradesh) ಈ ಯುವಕ ತನ್ನ ಕಾಲೇಜು (College) ಸಮಯವನ್ನು ಹೊರತುಪಡಿಸಿದರೆ ಬಹುಪಾಲು ಸಮಯವನ್ನು ಡೆಲಿವರಿ ಬಾಯ್ (Delivery Boy) ಆಗಿ, ಚಾಲಕನಾಗಿಯೇ ಕಳೆದಿದ್ದರಉ. ಹೀಗೆ ಅರೆಕಾಲಿಕ ಕೆಲಸಗಳ ಜೊತೆಗೆ ಕಷ್ಟ ಪಟ್ಟು ಓದು ಮುಗಿಸಿದ ಅಬ್ದುಲ್ ಪ್ರಸ್ತುತ ಐಟಿ ಕಂಪನಿಯಲ್ಲಿ (IT Company) ಕೆಲಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಿಂಕ್ಡ್ ಇನ್ ಪೋಸ್ಟ್ ನಲ್ಲಿ, ಅಬ್ದುಲ್ ಸಾಫ್ಟ್ ವೇರ್ ಇಂಜಿನಿಯರ್ ಆಗುವ ಮೊದಲು ತಮ್ಮ ಜೀವನ ಹೇಗಿತ್ತು ಎಂದು  ಬರೆದಿದ್ದಾರೆ. ಅವರ ಪರಿಶ್ರಮದ ಜೀವನದ ಕಥೆಯನ್ನು ನೀವೂ ಓದಿ.

ಕುಟುಂಬ ಸಾಗಿಸಲು ಡೆಲಿವರಿ ಬಾಯ್ ಆಗಿ ಕೆಲಸ
ಗುತ್ತಿಗೆ ಕಾರ್ಮಿಕರ ಮಗನಾದ ಅಬ್ದುಲ್ ತನ್ನ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸಲು ಓಲಾ, ಜೊಮಾಟೊ ಮತ್ತು ಸ್ವಿಗ್ಗಿಯಂತಹ ಕಂಪನಿಗಳಿಗೆ ವಿತರಣಾ ಏಜೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. "ಓಲಾ, ಜೊಮಾಟೊ, ಉಬರ್, ಸ್ವಿಗ್ಗಿಯಂತಹ ಕಂಪನಿಗಳಲ್ಲಿ ಕೆಲಸ ಮಾಡುತ್ತಾ, ನನ್ನ ಕಾಲೇಜು ಅಂತಿಮ ವರ್ಷದಿಂದಲೂ ನಾನು ಡೆಲಿವರಿ ಬಾಯ್, ಡ್ರೈವರ್ ಆಗಿ ಎಲ್ಲೆಡೆ ಸುತ್ತಿದ್ದೇನೆ" ಎಂದು ಅವರು ಬರೆದುಕೊಂಡಿದ್ದಾರೆ.

ಕೋಡಿಂಗ್ ಕೋರ್ಸ್ ಕಲಿತ ಅಬ್ದುಲ್
ಒಂದು ದಿನ, ಅಬ್ದುಲ್ ಸ್ನೇಹಿತರೊಬ್ಬರು ಕೋಡ್ ಕಲಿಯಲು ಸಲಹೆ ನೀಡಿದರು. ಅವರ ಸಲಹೆಯನ್ನು ಅನುಸರಿಸಿ ಕೋರ್ಸ್‌ಗೆ ಸೇರಿಕೊಂಡ ಯುವಕ ಅಬ್ದುಲ್ ಸಾಯಂಕಾಲ 6 ರಿಂದ 12 AM ವರೆಗೆ ತಮ್ಮ ವಿತರಣಾ ಕೆಲಸವನ್ನು ಮಾಡುತ್ತಿದ್ದನು.  ನಂತರ ಹಗಲಿನಲ್ಲಿ ಅವರು ತಮ್ಮ ಕೋಡಿಂಗ್ ಕಲಿಯುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದರು.

ಇದನ್ನೂ ಓದಿ: Microsoft: ಉದ್ಯೋಗಿಗಳ ಸಂಬಳ ಜಾಸ್ತಿ ಮಾಡುತ್ತಂತೆ ಮೈಕ್ರೋಸಾಫ್ಟ್! ಸಿಇಒ ಸತ್ಯ ನಾಡೆಲ್ಲಾ ಘೋಷಣೆ!

"ನನಗೆ ಸಾಧ್ಯವಾದಷ್ಟು ಬೇಗ ಆರ್ಥಿಕವಾಗಿ ನನ್ನ ಕುಟುಂಬಕ್ಕೆ ನೆರವಾಗಲು ನಾನು ಬಯಸುತ್ತೇನೆ. ಏಕೆಂದರೆ ನನ್ನ ತಂದೆ ಗುತ್ತಿಗೆ ಕೆಲಸಗಾರ. ಅವರು ನಮ್ಮನ್ನು ಕಷ್ಟಪಟ್ಟು ಬೆಳೆಸುತ್ತಿದ್ದಾರೆ. ನಾನು ಆರಂಭದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ತುಂಬಾ ನಾಚಿಕೆಪಡುತ್ತಿದ್ದೆ, ಆದರೆ ಈ ಕೆಲಸದಿಂದ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ.

ಒಂದು ದಿನ, ಕೋಡಿಂಗ್ ಕಲಿಯಲು ನನಗೆ ಸಾಂದರ್ಭಿಕ ಸಲಹೆ ಸಿಕ್ಕಿತು. ನನ್ನ ಸ್ನೇಹಿತ ನನಗೆ ಕೋರ್ಸ್‌ನ ಬಗ್ಗೆ ಹೇಳಿದರು. ನಾನು ಅವನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ನನ್ನ ಬೆಳಿಗ್ಗೆ ಸಮಯವನ್ನು ಕೋಡ್ ಕಲಿಯಲು ಮೀಸಲಿಟ್ಟೆ. ಸಂಜೆ 6:00 ರಿಂದ 12:00 AM ವರೆಗೆ, ನಾನು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ" ಎಂದು ಅಬ್ದುಲ್ ಸತಾರ್ ಬರೆದಿದ್ದಾರೆ.

ಸ್ವತಃ ವೆಬ್ ಅಪ್ಲಿಕೇಶನ್ ನಿರ್ಮಿಸಿದ ಯುವಕ
ಹೀಗೆ ದಿನ ಉರುಳಿದವು ನಂತರ ಒಂದು ದಿನ, ಅಬ್ದುಲ್ ಸತಾರ್ ಸ್ವಂತವಾಗಿ ವೆಬ್ ಅಪ್ಲಿಕೇಶನ್ ಅನ್ನು ನಿರ್ಮಿಸಿದರು.  ಕೆಲವು ಇತರ ಯೋಜನೆಗಳನ್ನು ಮಾಡಿದರು. ನಂತರ ಅವರು ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ಡೆಲಿವರಿ ಬಾಯ್ ಆಗಿ ತನ್ನ ಅರೆಕಾಲಿಕ ಕೆಲಸದ ಮೂಲಕ ಸಂವಹನ ಕೌಶಲ್ಯಗಳನ್ನು ಕಲಿತಿದ್ದೇನೆ ಎಂದು ಸತಾರ್ ಹೇಳಿದರು.

"ಶೀಘ್ರದಲ್ಲೇ ನಾನು ಸ್ವಂತವಾಗಿ ವೆಬ್ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಸಾಧ್ಯವಾಯಿತು. ನಾನು ಕೆಲವು ಪ್ರಾಜೆಕ್ಟ್ ಗಳನ್ನು ಮಾಡಿದ್ದೇನೆ. ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದೆ. ನನ್ನ ಡೆಲಿವರಿ ಬಾಯ್ ಅನುಭವವು ನನಗೆ ಸಂವಹನ ಕೌಶಲ್ಯಗಳನ್ನು ನಿರ್ಮಿಸಲು ಸಹಾಯ ಮಾಡಿತು" ಎಂದು ಹೇಳಿದರು.

4.0 ತಂತ್ರಜ್ಞಾನಗಳ ವಿಶೇಷತೆಯೊಂದಿಗೆ ಫುಲ್-ಸ್ಟ್ಯಾಕ್ ಅಭಿವೃದ್ಧಿಯನ್ನು ಕಲಿತ ಅಬ್ದುಲ್
ಅಬ್ದುಲ್ ಸತಾರ್ ಅವರು NxtWave ನಲ್ಲಿ ಕೋಡಿಂಗ್ ಕೌಶಲ್ಯಗಳನ್ನು ಗಳಿಸಿದರು. ಅದರ ನಂತರ, ಅವರು ಪ್ರೋಬ್ ಇನ್ಫರ್ಮೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಪ್ರೋಬ್ 42) ನಲ್ಲಿ ಸಂದರ್ಶನವನ್ನು ಪಾಸ್ ಮಾಡಿ ಸಾಫ್ಟ್ ವೇರ್ ಉದ್ಯೋಗವನ್ನು ಗಿಟ್ಟಿಸಿಕೊಂಡರು. ಕೆಲವು ತಿಂಗಳ ಸಂಬಳದಲ್ಲಿ ತಂದೆ-ತಾಯಿಯ ಋಣ ತೀರಿಸುವ ಹಂತಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಅಬ್ದುಲ್.

ಇದನ್ನೂ ಓದಿ: Interest Rates: ಶೀಘ್ರದಲ್ಲಿಯೇ ಹೆಚ್ಚಳವಾಗಲಿದೆ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರ! ಎಷ್ಟು ಗೊತ್ತಾ ಇಲ್ಲಿದೆ ನೋಡಿ

ಅಬ್ದುಲ್ ಅವರ ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ 4.0 ತಂತ್ರಜ್ಞಾನಗಳ ವಿಶೇಷತೆಯೊಂದಿಗೆ ಫುಲ್-ಸ್ಟ್ಯಾಕ್ ಅಭಿವೃದ್ಧಿಯನ್ನು ಕಲಿಯುತ್ತಿದ್ದಾರೆ. ಅಬ್ದುಲ್ ಸತಾರ್ ಜಾವಾಸ್ಕ್ರಿಪ್ಟ್, ಪೈಥಾನ್, SQL ಮತ್ತು Node.js ಕೌಶಲ್ಯಗಳನ್ನು ಹೊಂದಿದ್ದಾರೆ. ಅವರು 2017 ರಿಂದ 2020 ರವರೆಗೆ ಸಾಯಿ ಗಣಪತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಮಾಡಿದರು.
Published by:Ashwini Prabhu
First published: