ಸಾಮಾನ್ಯವಾಗಿ ಈ ಬಾಲಿವುಡ್ನ (Bollywood) ಜನಪ್ರಿಯ ನಟರು, ನಿರ್ಮಾಪಕರು (Producer) ಮತ್ತು ಕ್ರಿಕೆಟ್ ಆಟಗಾರರು (Cricket Player) ಮುಂಬೈ ಅಂತಹ ಸ್ಥಳದಲ್ಲಿ ಪ್ರತಿಷ್ಠಿತ ಕಾಲೋನಿಗಳಲ್ಲಿ ದೊಡ್ಡ ದೊಡ್ಡ ಭವ್ಯವಾದ ಬಂಗಲೆಯನ್ನು (Bungalow) ಕಟ್ಟಿಸಿಕೊಂಡಿರುವುದನ್ನು ನಾವು ತುಂಬಾನೇ ನೋಡಿದ್ದೇವೆ. ಆದರೆ ಈಗ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು (Industrialist) ಮತ್ತು ಉದ್ಯಮಿಗಳು ಸಹ ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಐಷಾರಾಮಿ ಬಂಗಲೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ ಮತ್ತು ಫ್ಲ್ಯಾಟ್ ಗಳನ್ನು ಖರೀದಿಸುತ್ತಿದ್ದಾರೆ ಅಂತ ಹೇಳಬಹುದು.
240 ಕೋಟಿ ರೂಪಾಯಿ ಬೆಲೆಯ ಫ್ಲ್ಯಾಟ್ ಖರೀದಿಸಿದ ಗೋಯೆಂಕಾ
ಈಗ ಇದರ ಬಗ್ಗೆ ಮಾತೇಕೆ ಅಂತೀರಾ? ಇಲ್ಲೊಬ್ಬರು ಸುಮಾರು 240 ಕೋಟಿ ರೂಪಾಯಿ ಕೊಟ್ಟು ಮುಂಬೈಯಲ್ಲಿ ಫ್ಲ್ಯಾಟ್ ವೊಂದನ್ನು ಖರೀದಿಸಿದ್ದಾರಂತೆ ನೋಡಿ. ವೆಲ್ಸ್ಪನ್ ಗ್ರೂಪ್ನ ಬಿ ಕೆ ಗೋಯೆಂಕಾ ಅವರೇ ಮುಂಬೈನಲ್ಲಿ 240 ಕೋಟಿ ರೂಪಾಯಿ ಕೊಟ್ಟು ಫ್ಲ್ಯಾಟ್ ವೊಂದನ್ನು ಖರೀದಿಸಿರುವುದು.
ಫೋರ್ಬ್ಸ್ ನಿಯತಕಾಲಿಕೆಯು ಏಷ್ಯಾದ 16ನೇ ಅತ್ಯಂತ ಪ್ರಭಾವಶಾಲಿ ಉದ್ಯಮಿ ಮಹಿಳೆಯರಲ್ಲಿ ಒಬ್ಬರೆಂದು ಶ್ರೇಯಾಂಕ ನೀಡಿರುವ ದೀಪಾಲಿ ಗೋಯೆಂಕಾ ಅವರ ಪತಿ ಬಿ ಕೆ ಗೋಯೆಂಕಾ
ದೀಪಾಲಿ ಅವರು ವೆಲ್ಸ್ಪನ್ ಇಂಡಿಯಾ ಲಿಮಿಟೆಡ್ ನ ಸಿಇಒ ಮತ್ತು ಎಂಡಿ ಆಗಿದ್ದಾರೆ. ಅವರ ಕಂಪನಿಯು ವಿಶ್ವದ ಅತಿದೊಡ್ಡ ಗೃಹ ಜವಳಿ ಕಂಪನಿಗಳಲ್ಲಿ ಒಂದಾಗಿದೆ. ಇವರ ಕಂಪನಿಯು ಯುನೈಟೆಡ್ ಸ್ಟೇಟ್ಸ್ ಗೆ ಹಾಸಿಗೆ ಮತ್ತು ರಗ್ಗು ಉತ್ಪನ್ನಗಳನ್ನು ಪೂರೈಸುತ್ತದೆ.
ಇವರ ಫ್ಲ್ಯಾಟ್ ಬೆಲೆ ರತನ್ ಟಾಟಾ ಅವರ ಮನೆಯ ಬೆಲೆಗಿಂತ ಹೆಚ್ಚಿದೆಯಂತೆ
ಈ ಮನೆ ರತನ್ ಟಾಟಾ ಅವರ ಮನೆಗಿಂತಲೂ ಹೆಚ್ಚು ಮೌಲ್ಯಯುತವಾಗಿದೆಯಂತೆ ಎಂದು ಹೇಳಲಾಗುತ್ತಿದೆ. ರತನ್ ಟಾಟಾ ಅವರ ಮನೆಯ ಮೌಲ್ಯ 150 ಕೋಟಿ ರೂಪಾಯಿ ಅಂತೆ.
ಇವರು ಖರೀದಿಸಿದ ಪೆಂಟಾ ಹೌಸ್ ಮುಂಬೈನ ವರ್ಲಿಯಲ್ಲಿದೆ. ಇದು ಟ್ರಿಪಲ್ ಡೆಕ್ಕರ್ ಪೆಂಟಾ ಹೌಸ್ ಆಗಿದ್ದು, ಇದು ವರ್ಲಿಯ ತ್ರೀ ಸಿಕ್ಸ್ಟಿ ವೆಸ್ಟ್ ಬಿಲ್ಡಿಂಗ್ ಕಟ್ಟಡದ 63, 64 ಮತ್ತು 65ನೇ ಮಹಡಿಗಳಲ್ಲಿದೆ.
ಪೆಂಟಾ ಹೌಸ್ ಒಟ್ಟು 30000 ಚದರ ಅಡಿ ಪ್ರದೇಶವನ್ನು ಹೊಂದಿದೆ. ಕೈಗಾರಿಕೋದ್ಯಮಿ ಮುಂಬೈನ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ವಾಸಿಸಲು ಯೋಜಿಸಿದ್ದಾರೆ.
2015ರಲ್ಲಿ ಜಿಂದಾಲ್ ಕುಟುಂಬ 160 ಕೋಟಿ ಮೌಲ್ಯದ ಮನೆ ಖರೀದಿಸಿತ್ತು. ಮನೆಯ ಗಾತ್ರವು 10000 ಚದರ ಅಡಿಗಳಷ್ಟಿತ್ತು. 2022 ರಲ್ಲಿ, ನಟ ರಣಬೀರ್ ಕಪೂರ್ 119 ಕೋಟಿ ರೂಪಾಯಿಗೆ ಮನೆ ಖರೀದಿಸಿದರು.
ಡಿಸೆಂಬರ್ 2022 ರಲ್ಲಿ, ದೇವವ್ರತ್ ಡೆವಲಪರ್ಸ್ ಐದು ಐಷಾರಾಮಿ ಅಪಾರ್ಟ್ಮೆಂಟ್ ಗಳನ್ನು 113 ಕೋಟಿ ರೂಪಾಯಿಗೆ ಖರೀದಿಸಿತು. ಆದರೆ ಯಾರು ಈ ಬಿ ಕೆ ಗೋಯೆಂಕಾ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿರಬೇಕು ಅಲ್ಲವೇ?
ಯಾರು ಈ ಬಿ ಕೆ ಗೋಯೆಂಕಾ?
ಬಿ ಕೆ ಗೋಯೆಂಕಾ 1966 ರಲ್ಲಿ ಹರಿಯಾಣದ ಹಿಸಾರ್ ನಲ್ಲಿ ಜನಿಸಿದರು. ಅವರ ವೆಲ್ಸ್ಪನ್ ಗ್ರೂಪ್ ಜವಳಿ, ಉಕ್ಕು, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಉಗ್ರಾಣ ಮತ್ತು ತೈಲ ಮತ್ತು ಅನಿಲ ಕ್ಷೇತ್ರಗಳನ್ನು ಒಳಗೊಂಡಿದೆ.
ಅವರು 1985 ರಲ್ಲಿ ತಮ್ಮ ಕಂಪನಿಯನ್ನು ಪ್ರಾರಂಭಿಸಿದರು. ಅವರ ಕಂಪನಿಯು ಈಗ 50 ದೇಶಗಳಲ್ಲಿ ವ್ಯವಹಾರಗಳನ್ನು ಹೊಂದಿದೆ. ಇಲ್ಲಿಯವರೆಗೆ, ಇದು ದೇಶದಲ್ಲಿ ಮಾರಾಟವಾದ ಅತ್ಯಂತ ದುಬಾರಿ ಫ್ಲ್ಯಾಟ್ ಆಗಿದೆ.
ಫೋರ್ಬ್ಸ್ ಪ್ರಕಾರ, ಬಿ ಕೆ ಗೋಯೆಂಕಾ 1.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ತ್ರೀ ಸಿಕ್ಸ್ಟಿ ವೆಸ್ಟ್ ಯೋಜನೆಯು ಎರಡು ಕಟ್ಟಡಗಳನ್ನು ಹೊಂದಿದ್ದು, ಒಂದರಲ್ಲಿ ವಸತಿ ಯೋಜನೆ ಇದ್ದರೆ, ಇನ್ನೊಂದರಲ್ಲಿ ಐಷಾರಾಮಿ ಹೋಟೆಲ್ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ