ದೇಶದದಲ್ಲಿ ಅಗ್ರಗಣ್ಯ ಮತ್ತು ನಂಬಿಕಸ್ಥ ಬಾಂಕ್‌ಗಳ (Bank) ಪಟ್ಟಿಯಲ್ಲಿ ಸುಮಾರು ಹಣಕಾಸು ಬ್ಯಾಂಕ್‌ಗಳಿವೆ, ಅದರಲ್ಲಿ ಒಂದು ಹೆಡಿಎಫ್‌ಸಿ ಬ್ಯಾಂಕ್. 1977 ರಲ್ಲಿ ಎಚ್.ಟಿ. ಪಾರೇಖ್ ಸ್ಥಾಪಿಸಿದ ಬ್ಯಾಂಕ್ ಈಗ ದೇಶದಲ್ಲಿ ಜನಪ್ರಿಯ ಸಾಲನೀಡುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸ್ಥಾಪಕರು ಎಚ್.ಟಿ. ಪಾರೇಖ್ ಆದರೂ ಸಹ ಈ ಸಂಸ್ಥೆಯನ್ನು ಬೆಳೆಸಿ, ಇಷ್ಟು ದೊಡ್ಡ ಮಟ್ಟಿಗೆ ತಂದಿರುವ ಖ್ಯಾತಿ ಮಾತ್ರ ಅವರ ಸಹೋದರನ ಮಗ ದೀಪಕ್ ಪಾರೇಖ್ ಅವರಿಗೆ ಸಲ್ಲುತ್ತದೆ. ದೇಶದ ಸಾಧಕರ ಪಟ್ಟಿಯಲ್ಲಿ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ನಾವು ದೀಪಕ್ ಪಾರೇಖ್ ಅವರನ್ನು ನೋಡಬಹುದಾಗಿದೆ. ನಾಲ್ಕು ದಶಕಗಳಿಂದ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (HDFC) ಅನ್ನು ಮುನ್ನಡೆಸುತ್ತಿದ್ದಾರೆ.
ಚಿಕ್ಕಪ್ಪನ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇರಿದ ಇವರು ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಮುನ್ನೆಡೆಸಿಕೊಂಡು ಬಂದರು. ಈಗ ದೀಪಕ್ ಪಾರೇಖ್ ಅವರ ನೇತೃತ್ವದ ಕಂಪನಿ 5 ಲಕ್ಷ ಕೋಟಿ ವ್ಯವಹಾರ ನಡೆಸುತ್ತಿದೆ.
ಶಿಕ್ಷಣ ಮತ್ತು ಹೆಡಿಎಫ್‌ಸಿಯಲ್ಲಿ ಕೆಲಸ
18 ಅಕ್ಟೋಬರ್ 1944 ರಲ್ಲಿ ಜನಿಸಿದ ಇವರು ಶಾಲಾ ಶಿಕ್ಷಣವನ್ನು ಮುಂಬೈನ ಸೇಂಟ್ ಕ್ಸೇವಿಯರ್ಸ್ ಪ್ರೌಢಶಾಲೆಯಲ್ಲಿ ಮುಗಿಸಿ, ನಂತರ ಮುಂಬೈ ವಿಶ್ವವಿದ್ಯಾನಿಲಯದ ಸಿಡೆನ್‌ಹ್ಯಾಮ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು.
ನಂತರ ಇಂಗ್ಲೆಂಡ್‌ಗೆ ಹೋಗಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಅರ್ಹತೆ ಕೂಡ ಪಡೆದರು. ಶಿಕ್ಷಣ, ಪದವಿ ಎಲ್ಲಾ ಮುಗಿಸಿದ ಬಳಿಕ ಲಂಡನ್‌ನಲ್ಲಿ ವಿನ್ನಿ, ಸ್ಮಿತ್ & ವಿನ್ನಿಯಲ್ಲಿ ಕೆಲಸ ಮಾಡಿದರು. ವೃತ್ತಿಜೀವನ ಆರಂಭದಲ್ಲಿ ಗ್ರಿಂಡ್ಲೇಸ್ ಬ್ಯಾಂಕ್ ಮತ್ತು ಚೇಸ್ ಮ್ಯಾನ್‌ಹ್ಯಾಟನ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ ಇವರು 1978 ರಲ್ಲಿ HDFC ಗೆ ಸೇರಿದರು.
ಇದನ್ನೂ ಓದಿ: ಈ ವರ್ಷದ ಕೇವಲ 4 ತಿಂಗಳಲ್ಲಿ ಸಾವಿರಾರು ಉದ್ಯೋಗಿಗಳ ವಜಾ; ಡೀಟೇಲ್ಸ್ ಹೀಗಿದೆ
ಪಾರೇಖ್ ಎಚ್‌ಡಿಎಫ್‌ಸಿ ಸೇರಿಕೊಂಡ ಸಂದರ್ಭದಲ್ಲಿ ಅವರ ಚಿಕ್ಕಪ್ಪನಿಗೆ 65 ವರ್ಷ ವಯಸ್ಸಾಗಿತ್ತು. ಚಿಕ್ಕಪ್ಪನಿಗೆ ಮಕ್ಕಳಿಲ್ಲದ ಕಾರಣ ಕಂಪನಿಯನ್ನು ನೋಡಿಕೊಳ್ಳುವಂತೆ ದೀಪಕ್ ಪಾರೇಖ್ ಅವರಿಗೆ ತಿಳಿಸಿದರು.
ನಂತರ ಬ್ಯಾಂಕ್‌ನ ಅಧಿಕಾರ ವಹಿಸಿಕೊಂಡು ಅಲ್ಲಿ ಹಲವಾರು ಹೊಸ ಕ್ರಮ, ನೀತಿಗಳನ್ನು ಜಾರಿಗೆ ತಂದು ಇಂದು ದೇಶದ ಜನಪ್ರಿಯ ಬ್ಯಾಂಕ್‌ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ 0.04 ರಷ್ಟು ಸಂಸ್ಥೆ ಪಾಲನ್ನು ಹೊಂದಿರುವ ಪಾರೇಖ್ ಕುಟುಂಬ
ಒಂದು ಕಂಪನಿ ಕಟ್ಟಿದ ಮೇಲೆ ಅದರ ಮುಕ್ಕಾಲು ಭಾಗ ಲಾಭ ಮತ್ತು ಪಾಲು ಸಂಸ್ಥಾಪಕರದ್ದೇ ಆಗಿರುವ ವಿದ್ಯಮಾನದಲ್ಲಿ ಪಾರೇಖ್ ಕುಟುಂಬ ಕಂಪನಿಯಲ್ಲಿ ಉದ್ಯೋಗದಾತರಾಗಿರದೇ, ಉದ್ಯೋಗಿಯಾಗಿದ್ದರು.
ಈ ಕುಟುಂಬ ತಾವೇ ಸ್ಥಾಪಿಸಿದ ಕಂಪನಿಯಲ್ಲಿ ಕೇವಲ 0.04 ರಷ್ಟು ಪಾಲನ್ನು ಹೊಂದಿದೆ. 2022 ರಲ್ಲಿ BQ ಪ್ರೈಮ್‌ಗೆ ನೀಡಿದ ಸಂದರ್ಶನದಲ್ಲಿ, ಉದ್ಯಮಿಗಳಂತೆ ಕೆಲಸ ಮಾಡಿದರೂ ಸಂಬಳ ಪಡೆಯುವ ವ್ಯಕ್ತಿಯ ಮನಸ್ಥಿತಿಯೊಂದಿಗೆ ನಾನು ಯಾವಾಗಲೂ ಕೆಲಸ ಮಾಡುತ್ತೇನೆ. ನನ್ನ ಚಿಕ್ಕಪ್ಪ ಕೂಡ ಸಂಬಳ ಪಡೆಯುವ ಉದ್ಯೋಗಿಯಂತೆ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದರು.
ಇದನ್ನೂ ಓದಿ: ಚಿನ್ನ ಪ್ರಿಯರಿಗೆ ಗುಡ್ನ್ಯೂಸ್, ಹಲವು ದಿನಗಳ ಬಳಿಕ ಬಂಗಾರ ಅಗ್ಗ
ಸ್ಥಾನಮಾನ ಮತ್ತು ಪ್ರಶಸ್ತಿ
ಪಾರೇಖ್ ಅವರು ಭಾರತ ಸರ್ಕಾರ ಸ್ಥಾಪಿಸಿದ ವಿವಿಧ ಸಮಿತಿಗಳ ಸದಸ್ಯರಾಗಿದ್ದಾರೆ. 1964 ರಲ್ಲಿ ಯುನಿಟ್ ಸ್ಕೀಮ್ ಅನ್ನು ಬಲಪಡಿಸುವ ಕ್ರಮಗಳನ್ನು ಶಿಫಾರಸು ಮಾಡಲು ರಚಿಸಲಾದ ಉನ್ನತ ಮಟ್ಟದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಅವರನ್ನು ನೇಮಿಸಲಾಯಿತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವರನ್ನು ಸೆಕ್ಯುರಿಟೀಸ್ ಮಾರ್ಕೆಟ್ ರೆಗ್ಯುಲೇಶನ್‌ಗಾಗಿ ಸಲಹಾ ಗುಂಪಿನ ಅಧ್ಯಕ್ಷರನ್ನಾಗಿ ಮಾಡಿತ್ತು. ಸಾಧನೆಯ ಫಲವಾಗಿ ಹಲವು ಪ್ರಶಸ್ತಿಗಳು ಸಹ ಇವರ ಮುಡಿಗೇರಿವೆ.
6300 ಕ್ಕೂ ಹೆಚ್ಚು ಶಾಖೆ ಹೊಂದಿರುವ ಎಚ್‌ಡಿಎಫ್‌ಸಿ
ಪ್ರಸ್ತುತ 3000 ನಗರಗಳು ಮತ್ತು ಪಟ್ಟಣಗಳಲ್ಲಿ ಮತ್ತು 6300 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಬ್ಯಾಂಕ್ 6.8 ಕೋಟಿ ಗ್ರಾಹಕರ ನೆಲೆಯನ್ನು ಹೊಂದಿದೆ. ಡಿಸೆಂಬರ್ 2021ರ ವೇಳೆಗೆ ಬ್ಯಾಂಕ್ 19 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿತ್ತು. 2021 ರಲ್ಲಿ, ಪಾರೇಖ್ ಕುಟುಂಬ ಮುಂಬೈನ ವರ್ಲಿಯಲ್ಲಿ 50 ಕೋಟಿ ರೂ. ಬೆಲೆ ಬಾಳುವ 7,450 ಚದರ ಅಡಿ ಇರುವ ಮನೆಯನ್ನು ಖರೀದಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ