Price Hike: ದುನಿಯಾ ತುಂಬಾ ಕಾಸ್ಟ್ಲಿ ಕಣ್ರಪ್ಪಾ! ಒಂದಲ್ಲ ಎರಡಲ್ಲ, 143 ವಸ್ತುಗಳು ದುಬಾರಿ ಆಗಬಹುದು!

ಅಡುಗೆ ಮನೆಗೆ (Kitchen) ಹೋದ್ರೆ ಗ್ಯಾಸ್ (Gas) ಬೆಲೆ ಸುಡುತ್ತೆ, ವೆಜ್ ಪಲಾವ್ (Veg Pulao) ಮಾಡೋಣ ಅಂದ್ರೆ ತರಕಾರಿ ಬೆಲೆ (Vegetables Rate) ಕೇಳೋದೇ ಅಲ್ಲ, ಪೂರಿ (Poori) ಮಾಡೋಣ ಅಂದ್ರೆ ಎಣ್ಣೆ (Oil) ಬೆಲೆ ಬಿಸಿಯಾಗಿದೆ, ಹಾಳಾಗ್ ಹೋಗ್ಲಿ ಹೋಟೆಲ್‌ಗೆ (Hotel) ಹೋಗೋಣ ಅಂದ್ರೆ ನಡ್ಕೊಂಡೇ ಹೋಗಬೇಕು, ಯಾಕೆಂದ್ರೆ ಪೆಟ್ರೋಲ್ (Petrol), ಡೀಸೆಲ್ (Diesel) ಬೆಲೆ ಜಾಸ್ತಿಯಾಗಿದೆ. ಈಗ ಮತ್ತೆ 143 ವಸ್ತುಗಳ ಬೆಲೆ ಏರಿಕೆ ಆಗಲಿದೆ!

ಬೆಲೆ ಏರಿಕೆ ಕುರಿತ ವ್ಯಂಗ್ಯಚಿತ್ರ (ಕೃಪೆ: Internet)

ಬೆಲೆ ಏರಿಕೆ ಕುರಿತ ವ್ಯಂಗ್ಯಚಿತ್ರ (ಕೃಪೆ: Internet)

  • Share this:
ನವದೆಹಲಿ: ಈ ಬದುಕು ತುಂಬಾ ಕಾಸ್ಟ್ಲಿ (Costly) ಕಣ್ರೀ, ಇನ್ನು ಸ್ವಲ್ಪ ದಿನಗಳಲ್ಲಿ ದುನಿಯಾ ಮತ್ತಷ್ಟು ದುಬಾರಿ ಆಗಲಿದೆ. ಈಗಾಗಲೇ ಅಡುಗೆ ಮನೆಗೆ (Kitchen) ಹೋದ್ರೆ ಗ್ಯಾಸ್ (Gas) ಬೆಲೆ ಸುಡುತ್ತೆ, ವೆಜ್ ಪಲಾವ್ (Veg Pulao) ಮಾಡೋಣ ಅಂದ್ರೆ ತರಕಾರಿ ಬೆಲೆ (Vegetables Rate) ಕೇಳೋದೇ ಅಲ್ಲ, ಪೂರಿ (Poori) ಮಾಡೋಣ ಅಂದ್ರೆ ಎಣ್ಣೆ (Oil) ಬೆಲೆ ಬಿಸಿಯಾಗಿದೆ, ಹಾಳಾಗ್ ಹೋಗ್ಲಿ ಹೋಟೆಲ್‌ಗೆ (Hotel) ಹೋಗೋಣ ಅಂದ್ರೆ ನಡ್ಕೊಂಡೇ ಹೋಗಬೇಕು, ಯಾಕೆಂದ್ರೆ ಪೆಟ್ರೋಲ್ (Petrol), ಡೀಸೆಲ್ (Diesel) ಬೆಲೆ ಜಾಸ್ತಿಯಾಗಿದೆ. ಹೋಟೆಲ್‌ಗೆ ಹೋದ್ರೂ ಅಷ್ಟೇ ಎಲ್ಲಾ ಐಟಂಗಳೂ ದುಬಾರಿನೇ. ಇದೀಗ ಮತ್ತಷ್ಟು ಬೆಲೆ ಏರಿಕೆ ಶಾಕ್ ಜನಸಾಮಾನ್ಯರಿಗೆ ಎದುರಾಗಲಿದೆ. ಬಹುಶಃ 143 ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದಂತೆ ಕಾಣುತ್ತಿದೆ.

 143 ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ

ಸದ್ಯ ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಕೇಂದ್ರ ಸರ್ಕಾರ ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ದೇಶದ ಆದಾಯವನ್ನು ಹೆಚ್ಚಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ, ಪ್ರಸ್ತಾವಿತ ದರ ಏರಿಕೆ ಭಾಗವಾಗಿ 143 ವಸ್ತುಗಳ ಮೇಲಿನ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳಿದೆ. ಜಿಎಸ್‌ಟಿ ಸಮಿತಿ ಸಭೆಯಲ್ಲಿ ಈ ಅಭಿಪ್ರಾಯ ಕೇಳಲಾಗಿದೆ.

ಜಿಎಸ್‌ಟಿ ಸಮಿತಿ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ

143 ವಸ್ತುಗಳ ಪೈಕಿ, ಶೇ 92ರಷ್ಟು ತೆರಿಗೆಯನ್ನು ಶೇ.18ರಷ್ಟು ತೆರಿಗೆ ಸ್ಲ್ಯಾಬ್‌ನಿಂದ ಶೇ.28ರಷ್ಟು ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾವಿತ ದರ ಬದಲಾವಣೆಗಳಲ್ಲಿ ಹೆಚ್ಚಿನವು 2019 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ, ನವೆಂಬರ್ 2017 ಮತ್ತು ಡಿಸೆಂಬರ್ 2018 ರಲ್ಲಿ ಕೌನ್ಸಿಲ್ ತೆಗೆದುಕೊಂಡ ದರ ಕಡಿತದ ನಿರ್ಧಾರಗಳ ಬಗ್ಗೆ ಸೂಚಿಸುತ್ತವೆ.

ಇದನ್ನೂ ಓದಿ: Gold Price: ವಾರಾಂತ್ಯದಲ್ಲಿ ಸಿಕ್ತು ಭರ್ಜರಿ 'Gold News'! ಇಂದು ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ

ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ?

ಜನ ಸಾಮಾನ್ಯರು ದಿನ ನಿತ್ಯ ಬಳಸುವ ವಸ್ತುಗಳಾದ ಹಪ್ಪಳ, ಬೆಲ್ಲ, ಚಾಕೊಲೇಟ್, ಚೂಯಿಂಗ್ ಗಮ್‌, ವಾಲ್‌ನಟ್ಸ್, ಕಸ್ಟರ್ಡ್ ಪೌಡರ್, ಆಲ್ಕೊಹಾಲ್ ಮುಕ್ತ ಪಾನೀಯಗಳು, ಚರ್ಮದ ಉಡುಪು ಮತ್ತು ಬಟ್ಟೆಯ ಬಿಡಿಭಾಗಗಳು ಇತ್ಯಾದಿಗಳ ದರ ಏರಿಕೆಗೆ ಅಭಿಪ್ರಾಯ ಕೇಳಲಾಗಿದೆ.

ಇನ್ನಿತರ ವಸ್ತುಗಳ ಬೆಲೆಯೂ ಏರಿಕೆ ಸಾಧ್ಯತೆ

ಇನ್ನು ಪವರ್ ಬ್ಯಾಂಕ್‌ಗಳು, ಕೈಗಡಿಯಾರಗಳು, ಸೂಟ್‌ಕೇಸ್‌ಗಳು, ಕೈಚೀಲ, ಸುಗಂಧ ದ್ರವ್ಯಗಳು, 32 ಇಂಚುಗಳಿಗಿಂತ ಕಡಿಮೆಯ ಕಲರ್ ಟಿವಿ ಸೆಟ್, ಸೆರಾಮಿಕ್ ಸಿಂಕ್‌, ವಾಶ್ ಬೇಸಿನ್‌, ಕನ್ನಡಕ, ಫ್ರೇಮ್ ದರ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ.

2017ರಲ್ಲಿ ಕಡಿಮೆ ಆಗಿದ್ದ ವಸ್ತುಗಳ ಬೆಲೆ ಈಗ ಏರಿಕೆ

ನವೆಂಬರ್ 2017ರ ಗೌಹಾಟಿಯಲ್ಲಿ ನಡೆದ ಸಭೆಯಲ್ಲಿ ಸುಗಂಧ ದ್ರವ್ಯ, ಚರ್ಮದ ಉಡುಪು ಮತ್ತು ಪರಿಕರ, ಚಾಕೊಲೇಟ್‌, ಕೋಕೋ ಪೌಡರ್, ಸೌಂದರ್ಯ ಅಥವಾ ಮೇಕಪ್ ಕಿಟ್, ಪಟಾಕಿ, ಪ್ಲಾಸ್ಟಿಕ್‌ ನೆಲದ ಹೊದಿಕೆ, ದೀಪಗಳು, ಧ್ವನಿ ರೆಕಾರ್ಡಿಂಗ್ ಉಪಕರಣ ಮತ್ತು ಶಸ್ತ್ರಸಜ್ಜಿತ ಟ್ಯಾಂಕ್‌ಗಳಂತಹ ವಸ್ತುಗಳ ದರಗಳನ್ನು ಕಡಿಮೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ದರ ಹೆಚ್ಚಳ ಮಾಡಲು ಈಗ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: Plants to get rich: ಈ 5 ಗಿಡಗಳು ಮನೆಲಿದ್ರೆ ನೀವು ಶ್ರೀಮಂತರಾಗ್ತೀರಿ!

ಕಲರ್ ಟಿವಿ ಸೆಟ್‌ ಮತ್ತು ಮಾನಿಟರ್‌ (32 ಇಂಚುಗಳಿಗಿಂತ ಕಡಿಮೆ), ಡಿಜಿಟಲ್ ಮತ್ತು ವೀಡಿಯೋ ಕ್ಯಾಮೆರಾ ರೆಕಾರ್ಡರ್‌, ಪವರ್ ಬ್ಯಾಂಕ್‌ಗಳಂತಹ ವಸ್ತುಗಳ GST ದರಗಳನ್ನು ಡಿಸೆಂಬರ್ 2018 ರ ಸಭೆಯಲ್ಲಿ ಕಡಿಮೆ ಮಾಡಲಾಗಿತ್ತು ಇದೀಗ ಇವುಗಳ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ.
Published by:Annappa Achari
First published: