• Home
  • »
  • News
  • »
  • business
  • »
  • Dairy Business: ಡೈರಿ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ!

Dairy Business: ಡೈರಿ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ!

ಹಸು

ಹಸು

ಜರ್ಸಿ ಹಸು ಪ್ರತಿ ದಿನ ಸರಾಸರಿ 30 ಲೀಟರ್ ಹಾಲು ಉತ್ಪಾದಿಸಿದಾಗ ಪ್ರತಿ ಲೀಟರ್‌ಗೆ ಸರಾಸರಿ 70 ರೂ.ಗೆ ಮಾರಾಟ ಮಾಡಿದರೆ, ಹಾಲುಗಾರನ ದಿನದ ಆದಾಯ ರೂ 2,100 ಆಗಿರುತ್ತದೆ. ಇನ್ನು 30 ದಿನಗಳಿಗೆ ಇದೇ ಆದಾಯದಲ್ಲಿ ಹಾಲು ಮಾರಾಟವಾಗುತ್ತಿದ್ದರೆ ಮಾಸಿಕ ಆದಾಯ ರೂ 63,300 ಆಗಿರುತ್ತದೆ.

  • Share this:

ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದವರಿಗೆ ಪ್ರಸ್ತುತ ಅವಕಾಶಗಳ (Opportunity) ಬಾಗಿಲು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ. ಹೆಚ್ಚಿನ ಯುವಕರು ಇಂದು ಪಟ್ಟಣಗಳ ಉದ್ಯೋಗಗಳಿಗೆ ತಿಲಾಂಜಲಿ ಇಟ್ಟು ಹಳ್ಳಿಗಳತ್ತ ಮುಖಮಾಡುತ್ತಿದ್ದಾರೆ ಹಾಗೂ ಹೈನುಗಾರಿಕೆ, ಕೃಷಿಯಲ್ಲಿ (Agriculture) ಸಾಧನೆ ಮಾಡುವ ಪಣತೊಟ್ಟಿದ್ದಾರೆ. ನಗರಗಳಲ್ಲಿ ಸರಿಯಾಗಿ ಉದ್ಯೋಗ (Job) ದೊರೆಯದೇ ಇರುವುದು, ಉದ್ಯೋಗಿ ವಜಾಗೊಳಿಸುವಿಕೆ, ಸಾಂಕ್ರಾಮಿಕ ರೋಗಗಳು ಹೀಗೆ ಹತ್ತು ಹಲವು ಕಾರಣಗಳು ಈ ಮಾರ್ಪಾಡಿಗೆ ಸೇರಿಕೊಂಡಿವೆ.


ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸಿರುವ ಅದೆಷ್ಟೋ ತರುಣರು ಇತರರಿಗೆ ಮಾದರಿ ಎಂದೆನಿಸಿದ್ದಾರೆ. ಸರಿಯಾದ ಯೋಜನೆ ಹಾಗೂ ಆತ್ಮವಿಶ್ವಾಸವೊಂದಿದ್ದರೆ ಯಾವುದನ್ನೂ ಸಾಧಿಸಬಹುದು ಎಂಬುದು ಸಲಹೆಯಾಗಿದೆ. ಹೈನುಗಾರಿಕೆಯ ವಿಷಯದಲ್ಲಿ ಡೈರಿ ಬ್ಯುಸಿನೆಸ್ ಆರಂಭಿಸುವವರಾದರೆ ತಳಿಯ ಆಯ್ಕೆಯಲ್ಲಿ ನುರಿತ ಜ್ಞಾನವಿರಬೇಕು ಎಂಬುದು ಇವರ ಸಲಹೆಯಾಗಿದೆ. ಜರ್ಸಿ ತಳಿಯು 20 ರಿಂದ 25 ವರ್ಷಗಳ ಜೀವಿತಾವಧಿಯನ್ನು ಹೊಂದಿದ್ದು 30 ತಿಂಗಳ ನಂತರ ಹಾಲಿನ ಉತ್ಪಾದನೆಯನ್ನು ಕಡಿಮೆಗೊಳಿಸುತ್ತವೆ.


ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಜರ್ಸಿ ದನ


ಪ್ರಪಂಚದಾದ್ಯಂತ ಪ್ರಸ್ತುತ 980 ದಶಲಕ್ಷಕ್ಕೂ ಹೆಚ್ಚು ಜಾನುವಾರುಗಳು ಅಸ್ತಿತ್ವದಲ್ಲಿವೆ. 300 ಮಿಲಿಯನ್‌ಗಿಂತಲೂ ಹೆಚ್ಚು ಜರ್ಸಿ ಹಸು ಹೊಂದಿರುವ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಜರ್ಸಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚಿದ್ದು ಇದು ಶೀಘ್ರದಲ್ಲೇ ಕಡಿಮೆಯಾಗುವುದಿಲ್ಲ ಎಂಬ ವಿಶ್ವಾಸ ಕೃಷಿಕರದ್ದಾಗಿದೆ. ಈ ದೃಷ್ಟಿಯಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಹಾಗೂ ಮಾರಾಟದತ್ತ ಒಲವು ತೋರಿಸುವವರು ಜರ್ಸಿ ಹಸುವನ್ನು ಖರೀದಿಸಬೇಕು ಏಕೆಂದರೆ ಹಾಲಿನ ಉತ್ಪಾದನೆಗೆ ಈ ಹಸು ಹೆಸರುವಾಸಿಯಾಗಿದೆ.


ಇದನ್ನೂ ಓದಿ: Gold Silver Price: ಮತ್ತೆ ಇಳಿಕೆಯಾಯ್ತು ಬೆಳ್ಳಿ ದರ; ಹೊಸ ವರ್ಷದ ಚಿನ್ನದ ಬೆಲೆ ಇಲ್ಲಿದೆ


ಜರ್ಸಿ ದನಗಳ ದೈನಂದಿನ ಹಾಲು ಉತ್ಪಾದನೆ


ಇತರ ಹಸುಗಳಿಗೆ ಹೋಲಿಸುವಾಗ ಜರ್ಸಿ ಹಸುಗಳು ಪ್ರತೀ ದಿನ 20 ರಿಂದ 30 ಲೀಟರ್ ಹಾಲು ನೀಡುತ್ತವೆ. ನಿತ್ಯ 35 ರಿಂದ 40 ಲೀಟರ್ ಹಾಲು ಕೊಡುವ ಜರ್ಸಿ ಹಸುಗಳೂ ಇವೆ ಎಂಬುದು ಕೆಲವು ಹಸು ಸಾಕುವವರ ಅಭಿಪ್ರಾಯವಾಗಿದೆ. ಅಂಕಿಅಂಶಗಳನ್ನು ಆಧರಿಸಿ ಜರ್ಸಿ ಹಸುಗಳು ಸಾಮಾನ್ಯ ಹಸುಗಳಿಗಿಂತ ಪ್ರತಿ ದಿನ ಎರಡು ಪಟ್ಟು ಹಾಲನ್ನು ಉತ್ಪಾದಿಸುತ್ತವೆ. ಜರ್ಸಿ ಹಸು ವರ್ಷದ 290 ದಿನಗಳು ಹಾಲು ಉತ್ಪಾದಿಸಿದರೆ ಹೈನುಗಾರಿಕೆ ಉದ್ಯಮಕ್ಕೆ ಹೊಂದುವ ಅದ್ಭುತ ತಳಿಯಾಗಿದೆ.


ಹಸು


ಜರ್ಸಿ ಹಸುವಿನ ಹಾಲಿನಿಂದ ಎಷ್ಟು ಲಾಭ ಗಳಿಸಬಹುದು


ವಿಶ್ವದ ಹಾಲಿನ ಉತ್ಪಾದನೆಯ 20% ಕ್ಕಿಂತ ಹೆಚ್ಚಿನ ಪ್ರಮಾಣವು ಜರ್ಸಿ ಹಾಲುಗಳಿಂದ ಬಂದಿದೆ. ಈ ಹಾಲು ಇತರ ಸಾಮಾನ್ಯ ಹಸುವಿನ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಜರ್ಸಿ ಹಸು ಪ್ರತಿ ದಿನ ಸರಾಸರಿ 30 ಲೀಟರ್ ಹಾಲು ಉತ್ಪಾದಿಸಿದಾಗ ಪ್ರತಿ ಲೀಟರ್‌ಗೆ ಸರಾಸರಿ 70 ರೂ.ಗೆ ಮಾರಾಟ ಮಾಡಿದರೆ, ಹಾಲುಗಾರನ ದಿನದ ಆದಾಯ ರೂ 2,100 ಆಗಿರುತ್ತದೆ. ಇನ್ನು 30 ದಿನಗಳಿಗೆ ಇದೇ ಆದಾಯದಲ್ಲಿ ಹಾಲು ಮಾರಾಟವಾಗುತ್ತಿದ್ದರೆ ಮಾಸಿಕ ಆದಾಯ ರೂ 63,300 ಆಗಿರುತ್ತದೆ.


ಭಾರತದಲ್ಲಿ ಜರ್ಸಿ ದನದ ಬೆಲೆ


ಜರ್ಸಿ ಹಸು ಗಿರ್ ಮತ್ತು ಸಾಹಿವಾಲ್‌ನಂತಹ ಇತರ ದೇಸಿ ಹಸುಗಳಿಗಿಂತ ಹೆಚ್ಚು ದುಬಾರಿಯಾಗಿದೆ ಏಕೆಂದರೆ ಇದು ಭಾರತೀಯ ತಳಿಯಲ್ಲ. ಸರಾಸರಿ ಗುಣಮಟ್ಟದ ಹೊರತಾಗಿಯೂ, ಜರ್ಸಿ ಹಸುಗಳು ಹೆಚ್ಚಿನ ಬೆಲೆಯನ್ನು ಹೊಂದಿವೆ. ಜರ್ಸಿ ಕರುವಿನ ಬೆಲೆ ಸುಮಾರು ರೂ 50,000 ಆಗಿದ್ದು ಹಾಲು ಉತ್ಪಾದಿಸುವ ಜರ್ಸಿ ಹಸುವು ರೂ 75,000 ದಿಂದ ರೂ 100,000 ದವರೆಗೆ ಇದೆ


ಜರ್ಸಿ ಹಸುವನ್ನು ಭಾರತದಲ್ಲಿ ಎಲ್ಲಿ ಖರೀದಿಸಬಹುದು?


ಸಾಮಾನ್ಯ ಹೈನುಗಾರಿಕೆ ಹಸುಗಳಿಗೆ ವ್ಯತಿರಿಕ್ತವಾಗಿ ಜರ್ಸಿ ಹಸುಗಳು ಹೆಚ್ಚು ದುಬಾರಿಯಾಗಿದೆ. ಅವುಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದಿಲ್ಲ. ಎರಡು ಅಥವಾ ಮೂರು ಜರ್ಸಿ ಹಸುಗಳನ್ನು ಹೊಂದಿರುವ ಮಾಲೀಕರಿಂದ ಜರ್ಸಿ ಹಸುವನ್ನು ಖರೀದಿಸುವುದು ಉತ್ತಮವಾಗಿದೆ. ಈ ಹಸುಗಳು ದುಬಾರಿಯಾಗಿದ್ದರೂ ಗುಣಮಟ್ಟದ ವಿಷಯದಲ್ಲಿ ಉತ್ತಮ ಆಯ್ಕೆಯಾಗಿರುತ್ತದೆ.

First published: