Cyrus Mistry Death: ಸೈರಸ್​ ಮಿಸ್ತ್ರಿ ಕಾರು ಅಪಘಾತಕ್ಕೆ ಇದೇ ಕಾರಣವಂತೆ! ಫಾರೆನಿಕ್ಸ್ ತಂಡದಿಂದ ಸ್ಫೋಟಕ ಮಾಹಿತಿ

Cyrus Mistry Death: ಅಪಘಾತವಾದ ಬಳಿಕ ತನಿಖೆಗಾಗಿಗೆ 7 ಸದಸ್ಯರ ತಂಡವನ್ನು ನೇಮಿಸಲಾಗಿತ್ತು. ಈ ಅಪಘಾತಕ್ಕೆ ಸೇತುವೆಯ ದೋಷಯುಕ್ತ ವಿನ್ಯಾಸವೇ ಕಾರಣ ಎಂದು ವರದಿ ಹೇಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ (Cyrus Mistry) ಕಾರು ಅಪಘಾತದಲ್ಲಿ (Car Accident) 4 ದಿನದ ಹಿಂದೆ ಬಲಿಯಾಗಿದ್ದಾರೆ. ಕಾರನ್ನು ಖ್ಯಾತ ವೈದ್ಯೆಯೊಬ್ಬರು ಚಲಾಯಿಸುತ್ತಿದ್ದರು. ಹಾಗೆ, ಹೆಚ್ಚು ವೇಗವಾಗಿ ಕಾರು ಚಲಾಯಿಸುವುದರ (Car Drive) ಜೊತೆಗೆ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿದ್ದೇ ಈ ಅಪಘಾತ ಆಗಲು ಮುಖ್ಯ ಕಾರಣ ಎಂದು ಪೊಲೀಸರು (Police) ತಿಳಿಸಿದ್ದಾರೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೆ ಕಾರಿನ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸೈರಸ್‌ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಳೆ ಇಬ್ಬರೂ ಸೀಟ್ ಬೆಲ್ಟ್ (Seat Belt) ಧರಿಸಿರಲಿಲ್ಲ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.

ಫಾರೆನ್ಸಿಕ್​ ತಂಡದದಿಂದ ಶಾಕಿಂಗ್​ ಮಾಹಿತಿ!

ಈ ತನಿಖೆಯನ್ನು ಫಾರೆನ್ಸಿಕ್​ ತಂಡ (Forensic Team) ಕ್ಕೆ ನೀಡಲಾಗಿತ್ತು. ಇದೀಗ ಮತ್ತೊಂದು ಶಾಕಿಂಗ್​ ಮಾಹಿತಿಯೊಂದು ಹೊರಬಿದ್ದಿದೆ. ಸೈರಸ್​ ಮಿಸ್ರ್ತಿ ಅಪಘಾತಕ್ಕೆ ಇದೇ ಕಾರಣ ಅಂತ ಫಾರೆನ್ಸಿಕ್​ ತಂಡ ಹೇಳಿದೆ. ಸೈರಸ್ ಮಿಸ್ತ್ರಿ ಮತ್ತು ಪಾಂಡೋಲೆ ಕುಟುಂಬದ ಸದಸ್ಯರು ದಕ್ಷಿಣ ಗುಜರಾತ್‌ನಲ್ಲಿರುವ ಪಾರ್ಸಿಗಳ ಪವಿತ್ರ ಅಗ್ನಿ ದೇಗುಲವಾದ ಉದ್ವಾಡಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು. ಆದರೆ, ಈ ನಡುವೆ ಅಪಘಾತ ಸಂಭವಿಸಿತ್ತು. ಮರ್ಸಿಡಿಸ್ ಕಾರು ಅಪಘಾತವಾದ್ದರಿಂದ ಕಂಪನಿ ಕೂಡ ತನ್ನದೇವ ರೀತಿಯಲ್ಲಿನ ತನಿಖೆ ನಡೆಸುತ್ತಿದೆ. ಇತ್ತ ಫಾರೆನ್ಸಿಕ್ ತಂಡ ತನಿಖೆ ನಡೆಸಿದ್ದು ಅಪಘಾತಕ್ಕೆ ಕಾರಣವೇನು ಎಂಬುದನ್ನ ತಿಳಿಸಿದೆ.

ಕಾರು ಹೀಗೆ ಅಪಘಾತವಾಗಿರಬಹುದು


ಅಪಘಾತ ನಡೆದಿದ್ದು ಹೇಗೆ?

ಅಹಮದಾಬಾದ್‌ನಿಂದ ಮುಂಬೈಗೆ ಮಿಸ್ತ್ರಿ ಹಾಗೂ ಇತರರು ಮರ್ಸಿಡೀಸ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರನ್ನು ಡಾ. ಅನಾಹಿತಾ ಪಂಡೋಳೆ ಚಲಾಯಿಸುತ್ತಿದ್ದರು. ಮುಂಬೈನಿಂದ 120 ಕಿ.ಮೀ. ದೂರದ ಪಾಲ್ಘರ್‌ ಜಿಲ್ಲೆಯಲ್ಲಿ ಮಧ್ಯಾಹ್ನ 2.15 ಕ್ಕೆ ಸೂರ್ಯ ನದಿಯ ಮೇಲಿನ ಸೇತುವೆ ಮೇಲೆ ಕಾರು ಸಾಗುತ್ತಿತ್ತು. ಎಡಗಡೆಯಿಂದ ಓವರ್‌ಟೇಕ್‌ ಮಾಡಲು ಹೋದಾಗ ಕಾರಿನ ಚಾಲಕಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದ ಗೋಡೆಗೆ ಗುದ್ದಿದೆ. ಇದರಿಂದಲೇ ಅಪಘಾತ ಸಂಭವಿಸಿದೆ ಎಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಹೀಗೆ ಕಾರು ಗುದ್ದಿರಬಹುದು


ಇದನ್ನೂ ಓದಿ: ಸಾವಿನ ಕುರಿತು ಮತ್ತಷ್ಟು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸರು

ಅಪಘಾತದ ಅಸಲಿ ಕಾರಣ ಇದಂತೆ!

ಅಪಘಾತವಾದ ಬಳಿಕ ತನಿಖೆಗಾಗಿಗೆ 7 ಸದಸ್ಯರ ತಂಡವನ್ನು ನೇಮಿಸಲಾಗಿತ್ತು. ಈ ಅಪಘಾತಕ್ಕೆ ಸೇತುವೆಯ ದೋಷಯುಕ್ತ ವಿನ್ಯಾಸವೇ ಕಾರಣ ಎಂದು ವರದಿ ಹೇಳಿದೆ. ಸೇತುವೆಯ ರೇಲಿಂಗ್ ರಸ್ತೆಯ ಕಡೆಗೆ ಬಾಗಿದ ಕಾರಣ ಅಪಘಾತ ಸಂಭವಿಸಿದೆ ಎಂದು ವರದಿ ಹೇಳಿದೆ. ಸೈರಸ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸದ ಕಾರಣ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಮಿಸ್ತ್ರಿ ಕಾರಿನಲ್ಲಿ ಕುಳಿತು ಸೀಟ್ ಬೆಲ್ಟ್ ಹಾಕಿಕೊಂಡಿದ್ದ ವೇಳೆ ಏರ್ ಬ್ಯಾಗ್ ತೆರೆದು ಪ್ರಾಣ ಉಳಿಸುತ್ತಿತ್ತು. ಇದನ್ನು ವರದಿಯಲ್ಲೂ ಹೇಳಲಾಗಿದೆ.

ಹೀಗೆ ಅಪಘಾತವಾಗಿರಬಹುದು


ಕಾಸ್ಟ್ಲಿನ ಕಾರಿನಲ್ಲಿದ್ರು ಜೀವ ಉಳಿಯಲಿಲ್ಲ!

ಸೈರಸ್ ಮಿಸ್ತ್ರಿ ಮತ್ತು ಪಾಂಡೋಲ್ ಕುಟುಂಬ ಸದಸ್ಯರು ಹೈ ಎಂಡ್ ಕಾರ್ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ 220 ರಲ್ಲಿ ಪ್ರಯಾಣಿಸುತ್ತಿದ್ದರು. ಈ ವಾಹನ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳು ಕಾರ್ಯನಿರ್ವಹಿಸುತ್ತಿವೆ. ಹಿಂಬದಿ ಸೀಟಿನ ಪ್ರಯಾಣಿಕರಿಗೆ ಸೈಡ್ ಕರ್ಟನ್ ಏರ್‌ಬ್ಯಾಗ್‌ಗಳನ್ನು ಈ ಕಾರು ಹೊಂದಿದೆ. ಅಪಘಾತದ ನಂತರ, ಕಾರಿನ ಏರ್‌ಬ್ಯಾಗ್ ಓಪನ್ ಆಗಿದೆ. ಆದರೆ, ಸೀಟು ಬೆಲ್ಟ್​ ಹಾಕದ ಕಾರಣ ಕೆಲ ಸಮಯ ಬಿಟ್ಟು ಏರ್​ ಬ್ಯಾಗ್​ ಓಪನ್​ ಆಗಿದೆ.

ಇದನ್ನೂ ಓದಿ: ಸೈರಸ್ ಮಿಸ್ತ್ರಿ ಭೀಕರ ಅಪಘಾತಕ್ಕೆ ಬಲಿ, ಟಾಟಾ ಗ್ರೂಪ್​ನಿಂದ ಉಚ್ಛಾಟನೆಗೊಂಡಿದ್ದ ಉದ್ಯಮಿ ಬಗ್ಗೆ ಒಂದಷ್ಟು ಮಾಹಿತಿ!

ಮರ್ಸಿಡಿಸ್​ ಕಂಪನಿ ತನಿಖೆ ಹೇಗೆ ಮಾಡಿದೆ?

ಸೈರಸ್ ಮಿಸ್ತ್ರಿ ಅವರ ಕಾರನ್ನು ಪರೀಕ್ಷಿಸುವಾಗ, ಮರ್ಸಿಡಿಸ್ ಕಂಪನಿಯು ಅಪಘಾತವಾದ ಕಾರಿನೊಳಗಿರುವ ಚಿಪ್​ ಅನ್ನು ತನ್ನ ತನ್ನ ಜರ್ಮನ್ ಸ್ಟೇಟಸ್ ಸೆಂಟರ್‌ಗೆ ಪರೀಕ್ಷೆಗಾಗಿ ಕಳುಹಿಸಿತ್ತು. ಪ್ರಾಥಮಿಕ ವರದಿಯೂ ಹೊರಬಿದ್ದಿದೆ ಎಂಬ ವರದಿಗಳು ಬಂದಿವೆ. ಅದರ ಪ್ರಕಾರ ಅಪಘಾತದ ಸಮಯದಲ್ಲಿ ವಾಹನದ ವೇಗ ಗಂಟೆಗೆ 100 ಕಿ.ಮೀ. ಡಿವೈಡರ್ ಗೆ ಡಿಕ್ಕಿ ಹೊಡೆದಾಗ ಕಾರಿನ ವೇಗ ಗಂಟೆಗೆ 89 ಕಿ..ಮೀ ಇಳಿದಿದೆ. ಹೀಗಾಗಿ ಅಪಘಾತದ ಸಮಯದಲ್ಲಿ ವಾಹನದ ವೇಗ ಗಂಟೆಗೆ 11 ಕಿ.ಮೀ ಕಡಿಮೆಯಾಗಿದೆ.
Published by:Vasudeva M
First published: