• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Bengaluru: ಬೆಂಗಳೂರಿನಲ್ಲಿ ಔಷಧೀಯ ಅಣಬೆ ಕೃಷಿ: ಇಂದಿನಿಂದ ನಾಲ್ಕು ದಿನ ನಡೆಯುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ನೀವೂ ಪಾಲ್ಗೊಳ್ಳಿ!

Bengaluru: ಬೆಂಗಳೂರಿನಲ್ಲಿ ಔಷಧೀಯ ಅಣಬೆ ಕೃಷಿ: ಇಂದಿನಿಂದ ನಾಲ್ಕು ದಿನ ನಡೆಯುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ನೀವೂ ಪಾಲ್ಗೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಸರಘಟ್ಟ ಕ್ಯಾಂಪಸ್‌ನಲ್ಲಿ ಫೆಬ್ರವರಿ 22 ರಿಂದ ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯುತ್ತಿದೆ. 'ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ' ವಿಷಯದ ಮೇಲೆ ಕೇಂದ್ರೀಕರಿಸಿರುವ ಈ ಮೇಳವು ರೈತರು ಮತ್ತು ಉದ್ಯಮಿಗಳಿಗೆ ಅನುಕೂಲವಾಗುವಂತೆ ಹಲವಾರು ಹೊಸ ತಳಿಗಳು, ತಂತ್ರಜ್ಞಾನಗಳು ಮತ್ತು ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುತ್ತದೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Bangalore [Bangalore], India
  • Share this:

ಅಣಬೆಗಳು (Mushroom) ಪ್ರೋಟೀನ್​​ನ (Protein) ಸಮೃದ್ಧ ಮೂಲಗಳಾಗಿವೆ. ವಿಟಾಮಿನ್‌ ಬಿ, ವಿಟಾಮಿನ್‌ ಡಿ ಜೊತೆಗೆ ಫೈಬರ್‌ ಕೂಡ ಹೊಂದಿದೆ. ಆದ್ದರಿಂದಲೇ ಮಶ್ರೂಮ್‌ಗಳು ಕ್ಯಾನ್ಸರ್‌ (Cancer), ಕೊಲೆಸ್ಟ್ರಾಲ್‌ (Cholesterol) ಅಪಾಯವನ್ನು ಕಡಿಮೆ ಮಾಡುತ್ತದಲ್ಲದೇ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು (Health Benefits ) ಹೊಂದಿದೆ. ಈ ಮಧ್ಯೆ ಇತ್ತೀಚಿನವರೆಗೂ ಔಷಧೀಯ ಅಣಬೆಗಳನ್ನು (Medicinal Mushroom) ಜಪಾನ್‌, ಚೀನಾ, ದಕ್ಷಿಣ ಕೋರಿಯಾ ದೇಶಗಳು ಹೆಚ್ಚಾಗಿ ಬೆಳೆಯುತ್ತಿದ್ದವು. ಇದೀಗ ನಮ್ಮ ಬೆಂಗಳೂರಿನಲ್ಲಿ (Bengaluru) ಬಹು ವಿಧದ ಅಣಬೆಗಳನ್ನು ಯಶಸ್ವಿಯಾಗಿ ಬೆಳೆಯಲಾಗುತ್ತಿದೆ. ಸ್ಥಳೀಯವಾಗಿ ಬೆಳೆಸಲಾದ ಶಿಟೇಕ್ (Shiitake Mushroom) ಮತ್ತು ಹೆರಿಸಿಯಂ (Hericium) (ಸಿಂಹದ ಮೇನ್) ನಂತಹ ಔಷಧೀಯ ಅಣಬೆ ಪ್ರಭೇದಗಳು ವಾಣಿಜ್ಯ ಯಶಸ್ಸನ್ನು ಗಳಿಸಿವೆ.


ಐಐಹೆಚ್‌ಆರ್‌ನಲ್ಲಿ ಅಣಬೆಗಳ ಕೃಷಿ


ಹೆಸರಘಟ್ಟದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಯ ವಿಜ್ಞಾನಿಗಳು ಈಗ ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುವ ಅಣಬೆ ಪ್ರಭೇದಗಳನ್ನು ಬೆಳೆಯುವಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.


IIHR ನಿರ್ದೇಶಕ SK ಸಿಂಗ್ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕವು ಬಹಳಷ್ಟು ಬದಲಾವಣೆಯನ್ನು ತಂದಿದೆ. ಕೋವಿಡ್‌ಗೂ ಮೊದಲು ಇಡೀ ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾವು ಔಷಧೀಯ ಅಣಬೆಗಳಿಗಾಗಿ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಮೇಲೆ ಅವಲಂಬಿತವಾಗಿತ್ತು. ಆದರೆ ಸಾಂಕ್ರಾಮಿಕ ರೋಗವು ಅಪ್ಪಳಿಸಿದಾಗಿನಿಂದ, ಈ ಪರಿಸ್ಥಿತಿ ಬದಲಾಗಿದೆ ಎಂಬುದಾಗಿ ಹೇಳುತ್ತಾರೆ.



ಇದನ್ನೂ ಓದಿ: Insurance: ಜೀವ ವಿಮೆ ಮಾಡಿಸುವ ಉದ್ದೇಶವೇನು? ಇನ್ಶೂರೆನ್ಸ್ ಅನ್ನು ಹೂಡಿಕೆ ಎಂದು ಪರಿಗಣಿಸಬಾರದೇಕೆ?


ಐಐಎಚ್‌ಆರ್‌ನ ಅಣಬೆ ಸಂಶೋಧನಾ ಪ್ರಯೋಗಾಲಯದ ಹಿರಿಯ ವಿಜ್ಞಾನಿ ಡಾ ಚಂದ್ರಶೇಖರ ಸಿ ಅವರ ಪ್ರಕಾರ, ಜಪಾನ್‌ನಲ್ಲಿ ಹೆಚ್ಚಿನ ಔಷಧೀಯ ಮೌಲ್ಯಗಳನ್ನು ಹೊಂದಿರುವ ಅಣಬೆಗಳನ್ನು ಕ್ಯಾನ್ಸರ್ ವಿರುದ್ಧ ಹೋರಾಡಲು ಬಳಸಲಾಗುತ್ತದೆ.


ಅವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ. ಇದು ಜಪಾನೀಸ್ ಮತ್ತು ಚೀನಿಯರ ದೈನಂದಿನ ಆಹಾರದ ಭಾಗವಾಗಿದೆ. ಏಕೆಂದರೆ ಅಣಬೆಗಳು ಚರ್ಮದ ವಿನ್ಯಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ಆಂಟಿ ಏಜಿಂಗ್‌ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳುತ್ತಾರೆ.


"ಪ್ರೀಮಿಯಂ ತಳಿಗಳನ್ನು ಕೆಜಿಗೆ 1,300 ರಿಂದ 2,000 ರೂ.ವರೆಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ." ಎಂದೂ ಡಾ. ಚಂದ್ರಶೇಖರ್‌ ಹೇಳುತ್ತಾರೆ.


ಅಣಬೆ ಕೃಷಿಗೆ ಸವಾಲಾಗುವ ಬೆಂಗಳೂರು ಹವಾಮಾನ


ಬೆಂಗಳೂರಿನ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಈಗ ದೊಡ್ಡ ಪ್ರಮಾಣದಲ್ಲಿ ಅಣಬೆಗಳನ್ನು ಬೆಳೆಸಲು ಸಾಕಷ್ಟು ಸವಾಲಾಗಿವೆ. ಇದರಿಂದಾಗಿ ದೈನಂದಿನ ಇಳುವರಿ ಕೇವಲ 20-25 ಕೆ.ಜಿ. ಎಂಬುದಾಗಿ ಶಿಟಾಕೆ ತಳಿಯನ್ನು ಬೆಳೆಸುವ ಮುತ್ತಣ್ಣ ಹೇಳುತ್ತಾರೆ.


"ಈ ತಳಿಗಳಿಗೆ 18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಮತ್ತು ಆರ್ದ್ರ ವಾತಾವರಣ ಬೇಕಾಗುತ್ತದೆ. ಆದರೆ ಅಂತಹ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳುವುದು ಕಷ್ಟ. ಆದ್ದರಿಂದ ನಾವು ಈ ತಳಿಗಳನ್ನು ಬೆಳೆಸಲು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ” ಎಂದು ಅವರು ಹೇಳುತ್ತಾರೆ.




ಮಶ್ರೂಮ್ ರಾಗಿ ಕುಕೀಸ್


ಅಣಬೆಗಳಿಂದ ತಯಾರಿಸಿದ ರಸಂ ಮತ್ತು ಚಟ್ನಿ ಪುಡಿಗಳಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ ನಂತರ, IIHR ನ ಸಂಶೋಧಕರು ಈಗ 'ಮಶ್ರೂಮ್-ರಾಗಿ' ಕುಕೀಗಳನ್ನು ಉತ್ಪಾದಿಸುತ್ತಿದ್ದಾರೆ.


ಈ ಕುಕೀಗಳನ್ನು "ಮೈದಾ' ಹಾಕದೆಯೇ ರಾಗಿ ಮತ್ತು ಅಣಬೆ ಪುಡಿಗಳಿಂದ ತಯಾರಿಸಲಾಗುತ್ತದೆ. ಅಲ್ಲದೇ ಇದು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.


ಅಲ್ಲದೆ, ಇವುಗಳಲ್ಲಿ ಬಿಳಿ ಸಕ್ಕರೆ ಬಳಸಲಾಗುವುದಿಲ್ಲ. ಹಾಗೆಯೇ ಇವುಗಳಲ್ಲಿ ಸಾಮಾನ್ಯಕ್ಕಿಂತ ಭಿನ್ನವಾಗಿ ಶೇಕಡಾ 13.5-15 ರಷ್ಟು ಹೆಚ್ಚಿನ ಪ್ರೋಟೀನ್ ಅಂಶವಿದೆ ಎಂದು ಸಿಂಗ್ ವಿವರಿಸುತ್ತಾರೆ.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: ಚಹಾ ಮಾರಾಟ ಮಾಡಿಯೇ ಕೋಟಿ ಬೆಲೆಯ ಬೆಂಜ್ ಖರೀದಿಸಿದ ಯುವಕ!


ನಾಲ್ಕು ದಿನಗಳ ರಾಷ್ಟ್ರೀಯ ಮೇಳ


ಐಐಎಚ್‌ಆರ್ ತನ್ನ ಹೆಸರಘಟ್ಟ ಕ್ಯಾಂಪಸ್‌ನಲ್ಲಿ ಫೆಬ್ರವರಿ 22 ರಿಂದ ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯುತ್ತಿದೆ. 'ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ' ವಿಷಯದ ಮೇಲೆ ಕೇಂದ್ರೀಕರಿಸಿರುವ ಈ ಮೇಳವು ರೈತರು ಮತ್ತು ಉದ್ಯಮಿಗಳಿಗೆ ಅನುಕೂಲವಾಗುವಂತೆ ಹಲವಾರು ಹೊಸ ತಳಿಗಳು, ತಂತ್ರಜ್ಞಾನಗಳು ಮತ್ತು ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುತ್ತದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು