ನಿನ್ನೆ ಎಲ್ಲಿ ನೋಡಿದರೂ ಅಲ್ಲಿ ಹೋಳಿ ಹಬ್ಬದ (Holi Festival) ಸಂಭ್ರಮಾಚರಣೆ ಅಂತ ಹೇಳಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯನ್ನು ಆಡಲು ಸಜ್ಜಾಗುತ್ತಿರುವ ಐಪಿಎಲ್ ಕ್ರಿಕೆಟ್ (Cricket) ತಂಡಗಳ ಆಟಗಾರರು ಸಹ ತಮ್ಮ ಸಹ ಆಟಗಾರರ ಜೊತೆಯಲ್ಲಿ ಹೋಳಿ ಹಬ್ಬವನ್ನು ತುಂಬಾನೇ ಸಂಭ್ರಮದಿಂದ ಆಚರಿಸಿದ್ದಾರೆ ಅಂತ ಹೇಳಬಹುದು. ಹೌದು, ಇದೇ ಮಾರ್ಚ್ 31 ರಿಂದ ಆರಂಭವಾಗಲಿರುವ ಐಪಿಎಲ್ ಮುಂಬರುವ ಆವೃತ್ತಿಗಾಗಿ ಎಂ ಎಸ್ ಧೋನಿ (MS Dhoni) ಅವರು ತಮ್ಮ ಚೆನ್ನೈ ಸೂಪರ್ ಕಿಂಗ್ಸ್ (CSK) ಶಿಬಿರಕ್ಕೆ ಮರಳಿದ್ದಾರೆ. ಹೊಡಿ ಬಡಿ ಟ್ವೆಂಟಿ20 ಈವೆಂಟ್ ಗಾಗಿ ಆಟಗಾರರು ಎಲ್ಲರೂ ತಮ್ಮ ಅಭ್ಯಾಸವನ್ನು ಈಗಾಗಲೇ ಶುರು ಮಾಡಿಕೊಂಡಿದ್ದಾರೆ.
ಹೋಳಿ ಆಚರಿಸಿದ ಖ್ಯಾತ ಕ್ರಿಕೆಟಿಗರು!
ಅಭಿಮಾನಿಗಳು ಸಹ ಅವರ ನೆಚ್ಚಿನ ಆಟಗಾರರು ಈ ಐಪಿಎಲ್ ನಲ್ಲಿ ಹೇಗೆ ಆಡುತ್ತಾರೆ ಅಂತ ಕಾತುರದಿಂದ ಕಾಯುತ್ತಿದ್ದಾರೆ. ನೆಚ್ಚಿನ ಆಟಗಾರರು ಮೈದಾನದಲ್ಲಿ ಆಡುವುದನ್ನು ನೋಡಲು ಮತ್ತಷ್ಟು ಉತ್ಸುಕರಾಗಿದ್ದಾರೆ ಅಂತ ಹೇಳಬಹುದು. ಧೋನಿ ಅವರು ಈಗಾಗಲೇ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದು, ಅಭಿಮಾನಿಗಳಿಗೆ ಇವರು ಬರೀ ಐಪಿಎಲ್ ನಲ್ಲಿ ಮಾತ್ರ ನೋಡಲು ಸಿಗುವುದು ಅಂತ ಹೇಳಬಹುದು.
ಹೋಳಿಯ ರಂಗಿನಲ್ಲಿ ಮಿಂದೆದ್ದ ಸಿಎಸ್‌ಕೆ ಆಟಗಾರರು
ಅಲ್ಲದೆ ಧೋನಿ ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ಅಷ್ಟೊಂದು ಸಕ್ರಿಯವಾಗಿಲ್ಲವಾದ್ದರಿಂದ, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯನ್ನು ನೋಡುವುದು ಇತ್ತೀಚೆಗೆ ತುಂಬಾನೇ ಅಪರೂಪವಾಗಿದೆ. ಹೋಳಿ ಆಚರಣೆಯ ಸಂದರ್ಭದಲ್ಲಿ ಧೋನಿ ಅವರ ಸಹ ಆಟಗಾರರು ಬಣ್ಣದ ರಂಗಿನಲ್ಲಿ ಮಿಂದೆದ್ದರೆ, ಕ್ಯಾಪ್ಟನ್ ಕೂಲ್ ಬಟ್ಟೆ ಮೇಲೆ ಮಾತ್ರ ಒಂದು ಚೂರು ಬಣ್ಣ ಬಿದ್ದಿಲ್ಲ ನೋಡಿ.
Celebrating Holi the "Thala" Way 😁
Anbuden Diaries Full 🎥👉 https://t.co/8NqSJ8t4QJ#WhistlePodu #Yellove 🦁💛 pic.twitter.com/vKI5F3T8G7
— Chennai Super Kings (@ChennaiIPL) March 8, 2023
ಇದನ್ನೂ ಓದಿ: ವಡಾ ಪಾವ್ನಿಂದ ಮಸಾಲೆ ದೋಸೆವರೆಗೆ, ಇವೇ ಅಂತೆ ಭಾರತೀಯ ಕ್ರಿಕೆಟಿಗರ ಇಷ್ಟದ ಫುಡ್!
ಅಷ್ಟೇ ಏಕೆ ಧೋನಿ ಮುಖಕ್ಕೂ ಸಹ ಯಾವುದೇ ಬಣ್ಣ ಹಚ್ಚಿರಲಿಲ್ಲ ನೋಡಿ. ಈ ಹೋಳಿ ಸಂಭ್ರಮಾಚರಣೆಯ ವೀಡಿಯೋವನ್ನು ಸಿಎಸ್‌ಕೆ ತಂಡದವರು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮಾರ್ಚ್ 31ರಿಂದ ಐಪಿಎಲ್ ಟೂರ್ನಿ ಆರಂಭ
ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಂದಾಗಿ ಹೇರಲಾಗಿದ್ದ ನಿರ್ಬಂಧಗಳಿಂದಾಗಿ ಧೋನಿ ಮೂರು ವರ್ಷಗಳ ಅಂತರದ ನಂತರ ಚೆನ್ನೈನಲ್ಲಿ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಆಡಲಿದ್ದಾರೆ. ಅಭಿಮಾನಿಗಳು ಇದನ್ನು ನೋಡಲು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ ಅಂತ ಹೇಳಬಹುದು. ಐಪಿಎಲ್ ಟೂರ್ನಿ ಮಾರ್ಚ್ 31 ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ತಂಡಗಳು ಈಗಾಗಲೇ ಅದಕ್ಕಾಗಿ ಸಜ್ಜಾಗಲು ಪ್ರಾರಂಭಿಸಿವೆ.
ಧೋನಿಗೆ ಚೆನ್ನೈನಲ್ಲಿ ಅಪಾರ ಅಭಿಮಾನಿ ಬಳಗವಿದೆ
ಐಪಿಎಲ್ 2023 ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿಯು ಸಹ ಐಪಿಎಲ್ ಅನ್ನು ತವರು ಮತ್ತು ವಿದೇಶದ ಸ್ವರೂಪದಲ್ಲಿ ಆಡಲಾಗುವುದು.
ಧೋನಿಗೆ ಚೆನ್ನೈನಲ್ಲಿ ಅಪಾರ ಅಭಿಮಾನಿ ಬಳಗವಿದ್ದು, ಐಪಿಎಲ್ 2023 ರ ವೇಳಾಪಟ್ಟಿಯನ್ನು ಘೋಷಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ಹೇಡನ್, ಸಿಎಸ್‌ಕೆ ನಾಯಕ ಎಂಎಸ್ ಧೋನಿ ಸುಮಾರು ಮೂರು ವರ್ಷಗಳ ನಂತರ ಚೆಪಾಕ್ ಮೈದಾನಕ್ಕೆ ಕಾಲಿಟ್ಟಾಗ ಪಡೆಯುವ ಸ್ವಾಗತದ ಬಗ್ಗೆ ಮಾತನಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ