• Home
  • »
  • News
  • »
  • business
  • »
  • Research: ಪತಿ-ಪತ್ನಿಯರಿಬ್ಬರೂ ಹಣಕಾಸು ಯೋಜನೆಯಲ್ಲಿ ತೊಡಗಿಸಿಕೊಂಡರೆ ಸಂಸಾರ ಸುಖಸಾಗರ!

Research: ಪತಿ-ಪತ್ನಿಯರಿಬ್ಬರೂ ಹಣಕಾಸು ಯೋಜನೆಯಲ್ಲಿ ತೊಡಗಿಸಿಕೊಂಡರೆ ಸಂಸಾರ ಸುಖಸಾಗರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರೀತಿ, ಸಂಬಂಧ, ವ್ಯವಹಾರ, ಮನೆ ನಿರ್ವಹಣೆ, ಹಣಕಾಸು, ಮಕ್ಕಳು ಹೀಗೆ ಎಲ್ಲಾ ಜವಾಬ್ದಾರಿಯನ್ನು ಇಬ್ಬರೂ ಸಮನಾಗಿ ನಡೆಸಿದರೆ ಸಂಸಾರ ಸೂಸೂತ್ರವಾಗಿ ಸಾಗುತ್ತದೆ.

  • Trending Desk
  • 5-MIN READ
  • Last Updated :
  • Share this:

ನಮ್ಮಲ್ಲಿ ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಎಂಬ ಗಾದೆ ಮಾತೊಂದಿದೆ. ಇದು ಸಂಸಾರಕ್ಕೆ ಹೇಳಿ ಮಾಡಿಸಿದ ಮಾತು. ಸಂಸಾರದಲ್ಲಿ ಪತಿ-ಪತ್ನಿ ಜೋಡೆತ್ತು ಇದ್ದಂತೆ. ಪ್ರೀತಿ, ಸಂಬಂಧ, ವ್ಯವಹಾರ, ಮನೆ ನಿರ್ವಹಣೆ, ಹಣಕಾಸು, ಮಕ್ಕಳು ಹೀಗೆ ಎಲ್ಲಾ ಜವಾಬ್ದಾರಿಯನ್ನು ಇಬ್ಬರೂ ಸಮನಾಗಿ ನಡೆಸಿದರೆ ಸಂಸಾರ ಸೂಸೂತ್ರವಾಗಿ ಸಾಗುತ್ತದೆ. ಅದರಲ್ಲೂ ಹಣಕಾಸು ವಿಚಾರದಲ್ಲಿ ಇಬ್ಬರು ಮುಕ್ತವಾಗಿ ಮತ್ತು ಒಬ್ಬರಿಗೊಬ್ಬರು ಹೆಗಲಾಗಿದ್ದರೆ ಭವಿಷ್ಯದ ಜೀವನ ಉತ್ತಮವಾಗಿರುತ್ತದೆ. ಇತ್ತೀಚಿನ ಸಮೀಕ್ಷೆ ಕೂಡ ಇದನ್ನೇ ಹೇಳಿದೆ. ಬೆವರು ಸುರಿಸಿ ದುಡಿಯುವ ಸಂಪಾದನೆಯನ್ನು ಇಬ್ಬರು ಸಮಾಲೋಚಿಸಿ ಯೋಜಿತವಾಗಿ ಕೂಡಿಟ್ಟರೆ ಅಥವಾ ಬ್ಯಾಂಕ್ (Bank), ಕ್ರೆಡಿಟ್ ಕಾರ್ಡ್ (Credit Card) ಮತ್ತು ಹೂಡಿಕೆ ಖಾತೆಗಳನ್ನು ಸಂಯೋಜಿಸುವ ದಂಪತಿಗಳು ಭವಿಷ್ಯದಲ್ಲಿ ಸಂತೋಷವಾಗಿರುತ್ತಾರೆ ಮತ್ತು ಮನೆ ಖರೀದಿ, ನಿವೃತ್ತಿಗೆ ಹಣ ಉಳಿತಾಯದಂತಹ ಹಣದ ಮೈಲಿಗಲ್ಲುಗಳನ್ನು ಇಬ್ಬರೂ ಒಟ್ಟಿಗೆ ತಲಪಬಹುದು ಎಂದು ಹೇಳಿದೆ. ಹೀಗೆ ಹಣಕಾಸು ವಿಚಾರದಲ್ಲಿ ಪತಿ-ಪತ್ನಿ ಇಬ್ಬರೂ ತಮ್ಮ ಹಣವನ್ನು ಒಟ್ಟುಗೂಡಿಸಿದರೆ, ಬ್ಯಾಚುರಲ್‌ (Bachular) ವ್ಯಕ್ತಿಗಳಿಗಿಂತ ವಿವಾಹಿತರು ಹೆಚ್ಚು ಆರ್ಥಿಕವಾಗಿ ಸಬಲರಿರುತ್ತಾರೆ ಎಂದು ಅಧ್ಯಯನ ಹೇಳಿದೆ.


ಜಂಟಿ ಬ್ಯಾಂಕ್ ಖಾತೆ ಹೊಂದಿರುವ ದಂಪತಿಗಳು ಹೆಚ್ಚು
CreditCards.com 2022ರ ಸಮೀಕ್ಷೆಯ ಪ್ರಕಾರ, 43% ದಂಪತಿಗಳು ಜಂಟಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, 34% ದಂಪತಿಗಳು ಜಂಟಿ ಮತ್ತು ಪ್ರತ್ಯೇಕ ಖಾತೆಗಳನ್ನು ಹೊಂದಿದ್ದಾರೆ ಮತ್ತು 23% ದಂಪತಿ ತಮ್ಮ ಹಣಕಾಸುಗಳನ್ನು ಸಂಪೂರ್ಣವಾಗಿ ಬೇರೆ ಬೇರೆಯಾಗಿರಿಸಿದ್ದಾರಂತೆ.


ಹಣಕಾಸನ್ನು ಸಂಯೋಜಿಸಲು ದಂಪತಿಗಳು ಹಿಂದೇಟು ಹಾಕುವುದೇಕೆ?
ವಿಚ್ಛೇದನದಂತಹ ಮುಂದಿನ ಅಪಾಗಳನ್ನು ಪರಿಗಣಿಸಿ ಕೆಲ ದಂಪತಿಗಳು ಒಟ್ಟಿಗೆ ಹಣ ಇಡುವ ಗೋಜಿಗೆ ಹೋಗುವುದಿಲ್ಲ ಎಂಬುದಾಗಿ ಅಧ್ಯಯನ ಹೇಳಿದೆ. ದಂಪತಿಗಳು ಬೇರ್ಪಟ್ಟರೆ ಅಥವಾ ವಿಚ್ಛೇದನಗೊಂಡರೆ, ಜಂಟಿ ಹಣಕಾಸುಗಳನ್ನು ಬೇರ್ಪಡಿಸಲು ಕಷ್ಟವಾಗಬಹುದು ಮತ್ತು ಕಷ್ಟದಿಂದ ಗಳಿಸಿದ ಹಣವನ್ನು ಇಬ್ಬರೂ ತಮ್ಮದು ತಮ್ಮದು ಎಂದು ಹೊಡೆದಾಡಿಕೊಳ್ಳಬಹುದು ಎಂಬ ಭೀತಿಯಿಂದ ಪ್ರತ್ಯೇಕ ಹಣಕಾಸು ಯೋಜಿಸಲು ಬಯಸುತ್ತಾರಂತೆ.


ಎಮಿಲಿ ಗಾರ್ಬಿನ್ಸ್ಕಿ ಮತ್ತು ಜೋ ಗ್ಲಾಡ್‌ಸ್ಟೋನ್ ನಡೆಸಿದ ಸಮೀಕ್ಷೆ
ಕಾರ್ನೆಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎಮಿಲಿ ಗಾರ್ಬಿನ್ಸ್ಕಿ ಮತ್ತು ಕೊಲೊರಾಡೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೋ ಗ್ಲಾಡ್‌ಸ್ಟೋನ್ ಅವರು ಈ ಸಂಶೋಧನೆ ನಡೆಸಿದ್ದಾರೆ. ಇಬ್ಬರ ಪ್ರಕಾರ ದಂಪತಿಗಳು ಖಾತೆಗಳನ್ನು ವಿಲೀನಗೊಳಿಸುವುದರಿಂದ ಕೆಲವು ಪ್ರಯೋಜನಗಳಿವೆ ಎಂದಿದ್ದಾರೆ. ಹಣವನ್ನು ಹಂಚಿಕೊಳ್ಳುವ ದಂಪತಿಗಳು ಸಂಬಂಧದಲ್ಲಿ ಉತ್ತಮವಾಗಿರುತ್ತಾರೆ ಎಂದು ಅವರ ಸಂಶೋಧನೆ ತೋರಿಸುತ್ತದೆ.


ಇದನ್ನೂ ಓದು: ಈ ರಾಶಿಯವರಿಗಿಂದು ಆಫೀಸ್​ನಲ್ಲಿ ಕಾದಿದೆ ಗುಡ್ ನ್ಯೂಸ್​​, ಬೇಡ ಬೇಡ ಅಂದ್ರೂ ಪ್ರಮೋಷನ್​ ಸಿಗುತ್ತಂತೆ!


ಅನೇಕ ಅಧ್ಯಯನಗಳಲ್ಲಿ, ಗಾರ್ಬಿನ್ಸ್ಕಿ ಮತ್ತು ಗ್ಲಾಡ್‌ಸ್ಟೋನ್ ಅವರು ಪಾಲುದಾರರೊಂದಿಗೆ ಹಂಚಿಕೊಂಡಿರುವ ತಮ್ಮ ಪ್ರತ್ಯೇಕ ಅಥವಾ ಜಂಟಿ ಖಾತೆಗಳಿಂದ ಖರ್ಚು ಮಾಡುತ್ತಾರೆಯೇ ಎಂಬುದರ ಆಧಾರದ ಮೇಲೆ ವೈಯಕ್ತಿಕ ಪಾಲುದಾರರ ಹಣದ ನಿರ್ಧಾರಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಸಮೀಕ್ಷೆಯಲ್ಲಿ ಗಮನಿಸಿದ್ದಾರೆ. ಜಂಟಿ ಖಾತೆಗಳನ್ನು ಹೊಂದಿದವರು ಖರ್ಚುಗಳನ್ನು ಅವಶ್ಯಕತೆ ಆಧಾರದ ಮೇಲೆ ಮಾಡುತ್ತಾರೆ, ಪ್ರತ್ಯೇಕ ಹಣಕಾಸು ಖಾತೆ ಇರುವವರು ಮನಸ್ಸಿಗೆ ಬಂದಹಾಗೆ ಹಣವನ್ನು ದುಂದುವೆಚ್ಚ ಮಾಡುತ್ತಾರೆ ಎಂದು ಇಬ್ಬರು ಪ್ರಾಧ್ಯಾಪಕರು ಅಧ್ಯಯನದಲ್ಲಿ ಹೇಳಿದ್ದಾರೆ.




"ಒಟ್ಟಿಗೆ ಖಾತೆ ಹೊಂದಿರದಿದ್ದರೂ ಹಣಕಾಸಿನ ಬಗ್ಗೆ ಚರ್ಚಿಸುತ್ತೇವೆ"
ಬ್ರೂಕ್ಲಿನ್‌ನಲ್ಲಿ ವಾಸಿಸುತ್ತಿರುವ 30 ವರ್ಷ ವಯಸ್ಸಿನ ಮಾಣಿ ಮತ್ತು ಬಾರ್ಟೆಂಡರ್ ನಾಥನ್ ಗಲ್ಲಾಘರ್ ಅವರು ತಮ್ಮ ಲಿವ್-ಇನ್ ಪಾಲುದಾರರೊಂದಿಗೆ ಇನ್ನೂ ಬ್ಯಾಂಕ್ ಖಾತೆಯನ್ನು ಹಂಚಿಕೊಂಡಿಲ್ಲ. ಆದರೆ ಪ್ರತಿ ತಿಂಗಳು ಇಬ್ಬರೂ ತಮ್ಮ ತಮ್ಮ ಖಾತೆಗಳು, ಹಂಚಿಕೆಯ ಖರ್ಚುಗಳು ಮತ್ತು ದಂಪತಿಗಳಾಗಿ ಒಟ್ಟಿಗೆ ಮಾಡುತ್ತಿರುವ ಆರ್ಥಿಕ ಪ್ರಗತಿಯ ಬಗ್ಗೆ ಪ್ರತಿ ತಿಂಗಳು ಚರ್ಚಿಸುವುದಾಗಿ ಹೇಳಿಕೊಂಡಿದ್ದಾರೆ.


ದುಂದುವೆಚ್ಚ ಮುಚ್ಚಿಡದೇ, ಆಲೋಚನೆಯಿಂದ ಖರ್ಚು ಮಾಡುವ ಮತ್ತು ಹಣಕಾಸಿನ ವ್ಯವಹಾರಗಳನ್ನು, ಉಳಿತಾಯಗಳನ್ನು ಸರಿಯಾಗಿ ಪ್ಲ್ಯಾನ್‌ ಮಾಡುವ ದಂಪತಿಗಳು ಭವಿಷ್ಯದಲ್ಲಿ ಮತ್ತಷ್ಟು ಆರ್ಥಿಕವಾಗಿ ಸಬಲವಾಗಿರಬಹುದು ಎಂದು ಅಧ್ಯಯನ ಹೇಳಿದೆ.

First published: