Success Story: ಪ್ರಿಂಟಿಂಗ್​ ಪ್ರೆಸ್​​ ಕೆಲಸ ಹೋಯ್ತು, ರಾಜ್ಮಾ ಖಾದ್ಯದ ಘಮಲಲ್ಲಿ ಬದುಕು ಅರಳಿತು!

ರಾಜ್ಮ ಮಾರುವ ದಂಪತಿ!

ರಾಜ್ಮ ಮಾರುವ ದಂಪತಿ!

ಅದು ಫರಿದಾಬಾದ್​ನ್ ಗ್ರೀನ್​ಫೀಲ್ಡ್​ ಕಾಲೋನಿಯ ಗೇಟ್​ ಸಂಖ್ಯೆ 5 ರ ಸಮೀಪದಲ್ಲಿರುವ ಸ್ಟಾಲ್. ಸುತ್ತಲೂ ​ವಾಹನಗಳ ಗದ್ದಲದ ನಡುವೆ ಬಿರು ಬೇಸಿಗೆಯಲ್ಲಿ ಮರದ ಕೆಳಗೆ ರಸ್ತೆ ಬದಿಯಲ್ಲಿ ದಂಪತಿ ನಿಮ್ಮನ್ನು ನಗು ಮೊಗದಿಂದ ಸ್ವಾಗತಿಸುತ್ತಾರೆ.

  • Share this:

ಅಡುಗೆ ತಯಾರಿಸುವುದು (Cooking) ಈಗ ಕೌಟುಂಬಿಕ (Family) ಜವಾಬ್ದಾರಿಯಾಗಿ ಮಾತ್ರ ಉಳಿದಿಲ್ಲ. ಬಹುತೇಕರ ಬದುಕನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ವೃತ್ತಿಯಾಗುತ್ತಿದೆ. ಯೂಟ್ಯೂಬ್​ (Youtube) ಮೂಲಕ ಲಕ್ಷಾಂತರ ಗೃಹಿಣಿಯರು ಅಡುಗೆ ಮಾಡುತ್ತಾ ಹೊಸ ಕರಿಯರ್ (Career) ಕಂಡುಕೊಂಡಿದ್ದಾರೆ. ಕೋವಿಡ್​ (Covid) ಸಮಯದಲ್ಲಿ ಮನೆ ಮನೆಗೆ ಊಟ (Food) ಕಳಿಸಿದ್ದಾರೆ. ಇಷ್ಟೆಲ್ಲಾ ಬದಲಾವಣೆ ಹೊತ್ತ ಅಡುಗೆ ಮನೆಯತ್ತ ಹಲವಾರು ಕ್ಷೇತ್ರದ ಪ್ರತಿಭಾನ್ವಿತರು ಉದ್ಯೋಗ ತೊರೆದು ಹೆಜ್ಜೆ ಇಡುತ್ತಿದ್ದಾರೆ. ಜೊತೆಗೆ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.


ಈಗ ಇದೇ ಹಾದಿಯಲ್ಲಿ ಮಧ್ಯ ವಯಸ್ಸಿನ ದಂಪತಿಯೊಬ್ಬರು ಬದುಕು ಕಟ್ಟುತ್ತಿದ್ದಾರೆ. ತಮ್ಮ ಪ್ರಿಂಟಿಂಗ್​ ಪ್ರೆಸ್​ ತೊರೆದು ಬಿಸಿ ಬಿಸಿ ಅನ್ನ ಮತ್ತು ರಾಜ್ಮ ಖಾದ್ಯದ ಘಮಲಲ್ಲಿ ಬದುಕನ್ನು ಅರಳಿಸುತ್ತಿರುವ ಸ್ಫೂರ್ತಿದಾಯಕ ಕಥೆ ಇಲ್ಲಿದೆ.


ಬನ್ನಿ ಬಿಸಿ ಬಿಸಿ ಅನ್ನ ಮತ್ತು ರಾಜ್ಮ ಸವಿಯಿರಿ!


ಅದು ಫರಿದಾಬಾದ್​ನ್ ಗ್ರೀನ್​ಫೀಲ್ಡ್​ ಕಾಲೋನಿಯ ಗೇಟ್​ ಸಂಖ್ಯೆ 5 ರ ಸಮೀಪದಲ್ಲಿರುವ ಸ್ಟಾಲ್. ಸುತ್ತಲೂ ​ವಾಹನಗಳ ಗದ್ದಲದ ನಡುವೆ ಬಿರು ಬೇಸಿಗೆಯಲ್ಲಿ ಮರದ ಕೆಳಗೆ ರಸ್ತೆ ಬದಿಯಲ್ಲಿ ದಂಪತಿ ನಿಮ್ಮನ್ನು ನಗು ಮೊಗದಿಂದ ಸ್ವಾಗತಿಸುತ್ತಾರೆ.


ತಮ್ಮ ಮುಂದೆ ಸಣ್ಣದೊಂದು ಟೇಬಲ್ ಇರಿಸಿಕೊಂಡು ಅದರಲ್ಲಿ ಒಂದು ಬಾಕ್ಸ್​ನಲ್ಲಿ ಬಿಸಿ ಬಿಸಿ ಅನ್ನ, ಇನ್ನೊಂದು ಬಾಕ್ಸ್​ನಲ್ಲಿ ರಾಜ್ಮಾ ಗ್ರೇವಿಯನ್ನಿಟ್ಟಿದ್ದಾರೆ. ಜೊತೆಗೊಂದಿಷ್ಟು ಸೈಡ್ಸ್​ಗಳೊಂದಿಗೆ ಹಸಿದು ಬರುವ ದಾರಿ ಹೋಕರಿಗೆ 40 ರೂಪಾಯಿಗೆ ಮನೆ ಊಟ ನೀಡುತ್ತಿದ್ದಾರೆ. ಊಟ ಮಾಡಿದ ಗ್ರಾಹಕರು ತೃಪ್ತಿಯಿಂದ ತಮ್ಮ ಕೆಲಸಗಳಿಗೆ ಮರಳುತ್ತಿದ್ದಾರೆ.


40 ರೂಪಾಯಿಗೆ ಮನೆ ಊಟ!


ಜತೀನ್ ಸಿಂಗ್ ಎನ್ನುವ ಇನ್​ಸ್ಟಾಗ್ರಾಂ ಬಳಕೆದಾರರು ಪೋಸ್ಟ್​ ಮಾಡಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಪ್ರಿಂಟಿಂಗ್​ ಪ್ರೆಸ್​​ ನಡೆಸುತ್ತಿದ್ದವರು ಲಾಕ್​ ಡೌನ್​ ಸಮಯದಲ್ಲಿ ನಷ್ಟವನ್ನು ಅನುಭವಿಸಬೇಕಾಯ್ತು. ಆ ನಂತರ ಕುಟುಂಬ ನಿರ್ವಹಣೆಗೆ ಬೇರೆ ಬೇರೆ ಕೆಲಸಗಳನ್ನು ಪ್ರಯತ್ನಿಸಿದರು ಕೂಡ ತೃಪ್ತಿಯಾಗಲಿಲ್ಲ.


ಕಡೆಗೆ ತಮ್ಮ ಪತ್ನಿ ಜೊತೆಗೆ ಸೇರಿ ರಾಜ್ಮ ಚಾವಲ್(ಅನ್ನ) ಫುಡ್​ ಸರ್ವೀಸ್​ ಮೂಲಕ ನೀಡಲು ನಿರ್ಧರಿಸಿದರು. 40 ರೂಪಾಯಿಗೆ ಸಿಗುವ ಮನೆ ಊಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಈ ವಿಡಿಯೋ 6.3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. 27, 400 ಲೈಕ್ಸ್​ಗಳು ಬಂದಿದೆ.


ಇದನ್ನೂ ಓದಿ: ಕಾರ್ಪೋರೇಟ್ ಟೆಕ್ಕಿ To ಕೃಷಿಕ! 15 ಲಕ್ಷ ಲಾಭ ಗಳಿಸಿದ ಮಂಗಳೂರಿನ ಚೇತನ್ ಶೆಟ್ಟಿ


ಯಾವ ಕೆಲಸವೂ ಚಿಕ್ಕದಲ್ಲ!


ಕಷ್ಟದ ಸಮಯದಲ್ಲಿ ಪತಿಯ ಜೊತೆಗೂಡಿರುವ ಪತ್ನಿಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಜೊತೆಗೆ ಪ್ರಿಂಟಿಂಗ್​ ಪ್ರೆಸ್​ ಕೂಡ ಬೇಗ ತೆರೆಯಲಿ ಎನ್ನುವ ಹಾರೈಕೆಯೂ ಕಮೆಂಟ್​ಗಳಲ್ಲಿದೆ. ಪ್ರಾಮಾಣಿಕತೆಯಿಂದ ದುಡಿದಾಗ ಯಾವ ಕೆಲಸವೂ ಚಿಕ್ಕದಲ್ಲ ಎನ್ನುವ ಪ್ರಶಂಸೆಯ ಮಾತುಗಳು ದಂಪತಿಗೆ ಬಲ ತುಂಬುತ್ತಿವೆ.


ಬೆಂಗಳೂರಿನಲ್ಲೂ ಫುಡ್​ ಸರ್ವೀಸ್​ಗೆ ಡಿಮ್ಯಾಂಡ್


ಕೋವಿಡ್​ 19 ಲಾಕ್​ಡೌನ್​ ಬಳಿಕ ಬಹುತೇಕರು ಊಟದ ಸರ್ವೀಸ್​ ಆರಂಭಿಸಿದ್ದಾರೆ. ಅದರಲ್ಲೂ ಕ್ಲೌಡ್​ ಕಿಚನ್​, ಮೊಬೈಲ್ ಕ್ಯಾಂಟೀನ್​ ಸರ್ವೀಸ್​ಗಳಿಗೆ ಎಲ್ಲಿಲದ ಬೇಡಿಕೆ ಇದೆ. ಪ್ರತಿನಿತ್ಯ ನೂರಾರು ಗೃಹಿಣಿಯರು ಮನೆಯಿಂದಲೇ ಅಡುಗೆ ಮಾಡಿ ಕಳುಹಿಸುವ ಬ್ಯುಸಿನೆಸ್​ ಬೆಂಗಳೂರಿನಲ್ಲೂ ಹೆಚ್ಚು ಪ್ರಚಲಿತದಲ್ಲಿದೆ.


ಇದಿಷ್ಟೇ ಅಲ್ಲದೇ ಮನೆಯಿಂದಲೇ ದೋಸೆ ಹಿಟ್ಟು ಮಾರಾಟ, ಪುಲಾವ್, ಬಿರಿಯಾನಿ ಮಸಾಲೆಗಳ ಮಾರಾಟಕ್ಕೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಇನ್ನೂ ದೊಡ್ಡ ದೊಡ್ಡ ಸಂಸ್ಥೆಯಲ್ಲಿರುವ ಉದ್ಯೋಗಿಗಳು ಕೂಡ ಟೀ ಶಾಪ್, ಸಮೋಸ ಮಾರುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.

top videos
    First published: