• Home
  • »
  • News
  • »
  • business
  • »
  • Startup: ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾ ಸ್ವಂತ ಉದ್ದಿಮೆ ಶುರು ಮಾಡಿ ಯಶಸ್ಸಿನ ಪಥ ಹಿಡಿದ ದಂಪತಿ

Startup: ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾ ಸ್ವಂತ ಉದ್ದಿಮೆ ಶುರು ಮಾಡಿ ಯಶಸ್ಸಿನ ಪಥ ಹಿಡಿದ ದಂಪತಿ

ಕೋಲ್ಕತ್ತಾದ ಸ್ತುತಿ ಮತ್ತು ಅಂಕಿತ್ ಕೊಠಾರಿ

ಕೋಲ್ಕತ್ತಾದ ಸ್ತುತಿ ಮತ್ತು ಅಂಕಿತ್ ಕೊಠಾರಿ

ಜನರು ನಮ್ಮ ಸಮಸ್ಯೆಗಳಿಗೆ ತುಂಬಾನೇ ಗಂಭೀರವಾಗಿ ಪರಿಹಾರ ಹುಡುಕಲು ಪ್ರಯತ್ನಿಸುತ್ತೇವೆ, ನೀವೇ ಹೇಳಿ? ಆದರೆ ಇಲ್ಲಿ ಕೋಲ್ಕತ್ತಾದ (Kolkata) ದಂಪತಿಗಳು (Couple) ತಮಗಿರುವ ಸಮಸ್ಯೆಗಳಿಗೆ ಪರಿಹಾರ (Solution) ಹುಡುಕುತ್ತಾ ಹೋಗಿ ಅದರಿಂದ ಹೊಸದಾಗಿ ಒಂದು ಸ್ವಂತ ಉದ್ದಿಮೆಯನ್ನೇ (Own Business) ಶುರು ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮುಂದೆ ಓದಿ ...
  • Share this:

ನಮಗೆಲ್ಲಾ ದಿನ ಬೆಳಗ್ಗೆ (Morning) ಆದರೆ ಸಾಕು ಅನೇಕ ರೀತಿಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಕೆಲವೊಂದು ನಮ್ಮ ದೇಹಕ್ಕೆ (Body) ಸಂಬಂಧಪಟ್ಟ ಸಮಸ್ಯೆಗಳಾದರೆ, ಇನ್ನೂ ಕೆಲವು ಸಮಸ್ಯೆಗಳು (Problem) ನಮ್ಮ ಮನಸ್ಸಿಗೆ ಸಂಬಂಧಿಸಿದ್ದು ಆಗಿರುತ್ತವೆ. ನಾವೆಷ್ಟು ಜನರು ನಮ್ಮ ಸಮಸ್ಯೆಗಳಿಗೆ ತುಂಬಾನೇ ಗಂಭೀರವಾಗಿ ಪರಿಹಾರ ಹುಡುಕಲು ಪ್ರಯತ್ನಿಸುತ್ತೇವೆ, ನೀವೇ ಹೇಳಿ? ಆದರೆ ಇಲ್ಲಿ ಕೋಲ್ಕತ್ತಾದ (Kolkata) ದಂಪತಿಗಳು (Couple) ತಮಗಿರುವ ಸಮಸ್ಯೆಗಳಿಗೆ ಪರಿಹಾರ (Solution) ಹುಡುಕುತ್ತಾ ಹೋಗಿ ಅದರಿಂದ ಹೊಸದಾಗಿ ಒಂದು ಸ್ವಂತ ಉದ್ದಿಮೆಯನ್ನೇ (Own Business) ಶುರು ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಇವರು ಸ್ವಂತ ಉದ್ದಿಮೆ ಶುರು ಮಾಡಲು ಕಾರಣವೇನು?


ಸಾಫ್ಟ್‌ವೇರ್ ಡೆವಲಪರ್ ಮತ್ತು ಡಿಜಿಟಲ್ ಮಾರ್ಕೆಟರ್ ಆಗಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕೋಲ್ಕತ್ತಾದ ಸ್ತುತಿ ಮತ್ತು ಅಂಕಿತ್ ಕೊಠಾರಿ ದಂಪತಿಗೆ ತಮ್ಮ ಕೆಲಸದ ಮಧ್ಯೆ ತಮ್ಮ ಕೂದಲು ಮತ್ತು ಚರ್ಮದ ಬಗ್ಗೆ ಕಾಳಜಿ ವಹಿಸಲು ಸ್ವಲ್ಪವೂ ಸಮಯವಿರಲಿಲ್ಲ.


ವಿವಿಧ ನಗರಗಳಲ್ಲಿ ಕೆಲಸ ಮಾಡುವುದು, ಅಲ್ಲಿನ ಹವಾಮಾನ, ನೀರು ಮತ್ತು ಅವರ ಆಹಾರ ಪದ್ಧತಿಗಳು ಸಹ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿತು ಎಂದು ಹೇಳಬಹುದು.


ಕೂದಲು ಮತ್ತು ಚರ್ಮದ ಆರೈಕೆಯ ಉತ್ಪನ್ನಗಳು


ಆರಂಭದಲ್ಲಿ, ಅವರು ತಮ್ಮ ಕೂದಲು ಮತ್ತು ಚರ್ಮದ ಆರೈಕೆಯನ್ನು ಮಾಡುವ ಮತ್ತು ಸಮಸ್ಯೆಯನ್ನು ಬಗೆಹರಿಸುವ ಉತ್ಪನ್ನಗಳನ್ನು ಹುಡುಕಲು ಪ್ರಯತ್ನಿಸಿದರು, ಇದರೊಂದಿಗೆ ಅವರು ಆರೋಗ್ಯಕರ ಆಹಾರ ಪದ್ಧತಿಗಳನ್ನು ಸಹ ಅನುಸರಿಸಿದರು.


ಆದರೆ ಈ ಉತ್ಪನ್ನಗಳ ಪದಾರ್ಥಗಳ ಬಗ್ಗೆ ಆಳವಾದ ಅಧ್ಯಯನವು, ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರಾಸಾಯನಿಕ ಘಟಕಗಳಿಂದ ಹೆಚ್ಚಿನವುಗಳನ್ನು ತಯಾರಿಸಲಾಗಿದೆ ಎಂದು ಅವರಿಬ್ಬರು ಅರಿತುಕೊಂಡರು.


ಅಜ್ಜಿಯಿಂದ ಸಲಹೆ ಪಡೆದು ಉತ್ಪನ್ನಗಳ ತಯಾರಿ 


ಆದ್ದರಿಂದ ದಂಪತಿ ಏನು ಮಾಡುವುದು ಅಂತ ತೋಚದೆ ಇದ್ದಾಗ ತಮ್ಮ ಅಜ್ಜಿಯರು ಹೇಳುತ್ತಿದ್ದಂತಹ ಕೆಲವು ಸಲಹೆಗಳನ್ನು ಅನುಸರಿಸಿ ಮನೆಯಲ್ಲಿ ಲಭ್ಯವಿರುವ ಅನೇಕ ನೈಸರ್ಗಿಕ ಪದಾರ್ಥಗಳೊಂದಿಗೆ ಪ್ರಯೋಗ ಮಾಡಲು ಪ್ರಾರಂಭಿಸಿದರು.


"ನಾವೆಲ್ಲರೂ ನಮ್ಮ ಬಾಲ್ಯದಲ್ಲಿ ಅಲೋವೆರಾ, ಈರುಳ್ಳಿ ಮತ್ತು ಅಕ್ಕಿ ನೀರಿನಂತಹ ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದೆವು, ಆದರೆ ಅಂಗಡಿಗಳಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಉತ್ಪನ್ನಗಳ ಬಗ್ಗೆ ಸಮಯದ ಕೊರತೆ ಮತ್ತು ಕುತೂಹಲದಿಂದಾಗಿ ಅಂತಿಮವಾಗಿ ಅವುಗಳನ್ನು ಮರೆತು ಬಿಡುತ್ತೇವೆ.


ಅಂತಹ ಪದಾರ್ಥಗಳ ಪ್ರಮಾಣ ಮತ್ತು ಸಾಂದ್ರತೆಯ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಮತ್ತು ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿಯಂತ್ರಿಸುವ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ನಾವು ಶುರು ಮಾಡಿದೆವು. ನಂತರ, ನಾವು ಕಂಡು ಕೊಂಡಂತಹ ಆ ಮಿಶ್ರಣಗಳನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಹ ಹಂಚಿಕೊಂಡೆವು" ಎಂದು ವಿಶ್ ಕೇರ್ ನ ಸಹ-ಸಂಸ್ಥಾಪಕ ಮತ್ತು ಸಮುದಾಯ ಮುಖ್ಯಸ್ಥೆಯಾದ ಸ್ತುತಿ ಹೇಳುತ್ತಾರೆ.


ಕೈಗೆಟುಕುವ ಬೆಲೆಯಲ್ಲಿ ನೈಸರ್ಗಿಕ ಉತ್ಪನ್ನಗಳ ಮಾರಾಟ


ಅವರೆಲ್ಲರಿಂದ ಉತ್ತಮ ಅಭಿಪ್ರಾಯಗಳನ್ನು ಪಡೆದ ನಂತರ, ಸ್ತುತಿ ಮತ್ತು ಅಂಕಿತ್ ಅವರು ನೈಸರ್ಗಿಕ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುವ ವೈಯಕ್ತಿಕ ಆರೈಕೆ ಬ್ರ್ಯಾಂಡ್ ಅನ್ನು ಒಟ್ಟುಗೂಡಿಸಲು ನಿರ್ಧರಿಸಿದರು. ಹೀಗಾಗಿ, ವಿಶ್ ಕೇರ್ ಎಂಬ ಸ್ವಂತ ಸ್ಟಾರ್ಟ್ ಅಪ್ 2018 ರಲ್ಲಿ ಹುಟ್ಟಿಕೊಂಡಿತು.

View this post on Instagram


A post shared by WishCare (@mywishcare)
"ನಾವು ಉತ್ಪನ್ನಗಳನ್ನು ಹುಡುಕುತ್ತಾ ಮಾರುಕಟ್ಟೆಗೆ ಹೋದಾಗ, ಎಲ್ಲಾ ನೈಸರ್ಗಿಕ ಆರೋಗ್ಯ ಮತ್ತು ಕೂದಲನ್ನು ಸಂರಕ್ಷಿಸುವ ಉತ್ಪನ್ನಗಳನ್ನು ಕಂಡು ಕೊಳ್ಳುವುದು ತುಂಬಾನೇ ಕಷ್ಟ ಎಂದು ನಾವು ಅರಿತುಕೊಂಡೆವು. ಅವು ಲಭ್ಯವಿದ್ದರೂ ಸಹ, ಅವು ದುಬಾರಿಯಾಗಿವೆ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟುಕುವುದಿಲ್ಲ. ಒಮ್ಮೆ ಒಂದು ಬ್ರ್ಯಾಂಡ್ ಅನ್ನು ಸ್ಥಾಪಿಸಿದ ನಂತರ, ಅದು ಎಲ್ಲಾ ಜನರಿಗೆ ಲಭ್ಯವಾಗಬೇಕು ಎಂದು ನಮ್ಮ ಉದ್ದೇಶವಾಗಿತ್ತು" ಎಂದು ದಂಪತಿಗಳಿಬ್ಬರೂ ಹೇಳುತ್ತಾರೆ.


ಹರಳೆಣ್ಣೆ, ಆಲಿವ್ ಮತ್ತು ಬಾದಾಮಿಯಂತಹ ಕೋಲ್ಡ್ ಪ್ರೆಸ್ಡ್ ಕೂದಲು ಎಣ್ಣೆಗಳಂತಹ ಅನೇಕ ವಿಧಗಳನ್ನು ಪ್ರಾರಂಭಿಸುವ ಮೂಲಕ ಕಂಪನಿಯನ್ನು ಸ್ಥಾಪಿಸಲಾಯಿತು. ಇಂದು, ಅವರು ಅಂತಹ 14 ತೈಲಗಳನ್ನು ಮಾರಾಟ ಮಾಡುತ್ತಾರೆ. ಶೀಘ್ರದಲ್ಲಿಯೇ ಬ್ರ್ಯಾಂಡ್ ಸೀರಮ್ ಗಳು, ಮಾಯಿಶ್ಚರೈಸರ್ ಗಳು, ಹೇರ್ ಶಾಂಪೂಗಳು ಮತ್ತು ಕಂಡೀಷನರ್ ಗಳನ್ನು ಸಹ ಪ್ರಾರಂಭಿಸಿತು.


ಗೃಹೋಪಯೋಗಿ ಪಾಕವಿಧಾನಗಳೊಂದಿಗೆ ಶುರುಮಾಡಿದರು


ಮೊದಲ ಕೋವಿಡ್-19 ಪ್ರೇರಿತ ಲಾಕ್ಡೌನ್ ಸಮಯದಲ್ಲಿ ದಂಪತಿಗಳು ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಒಂದು ಘಟಕಾಂಶವಾಗಿ ಹುದುಗಿಸಿದ ಅಕ್ಕಿಯ ನೀರಿನ ಬಗ್ಗೆ ಹೆಚ್ಚು ಓದಿ ತಿಳಿದುಕೊಂಡರು. ಈ ಬಳಕೆಯು ಏಷ್ಯಾದಲ್ಲಿ ತನ್ನ ಬೇರುಗಳನ್ನು ಹೊಂದಿದೆ ಎಂದು ಅವರು ಕಂಡು ಹಿಡಿದರು. ಎಂಟು ತಿಂಗಳ ಸಂಶೋಧನೆಯ ನಂತರ, ಅವರು ಅಕ್ಕಿ ನೀರನ್ನು ಆಧರಿಸಿದ ಉತ್ಪನ್ನಗಳನ್ನು ಪ್ರಾರಂಭಿಸಿದರು.


ಇದನ್ನೂ ಓದಿ:  Priyanka Chopra: ‘ಸೋನಾ ಹೋಮ್ಸ್’ ಹೆಸರಿನಲ್ಲಿ ಮತ್ತೊಂದು ಬ್ಯುಸಿನೆಸ್ ಶುರು ಮಾಡಿದ ಪ್ರಿಯಾಂಕಾ ಚೋಪ್ರಾ


"ಹುದುಗಿಸಿದ ಅಕ್ಕಿಯ ನೀರು ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಎಂದು ನಾವು ನಮ್ಮ ಅಜ್ಜಿಯರಿಂದ ಕೇಳಿದ್ದೇವೆ. ಆದರೆ ಹುದುಗುವಿಕೆಯ ಎಷ್ಟು ದಿನಗಳ ಅಗತ್ಯವಿತ್ತು ಮತ್ತು ಅನೇಕ ವಿಷಯಗಳ ಬಗ್ಗೆ ನಮಗೆ ತಿಳಿದಿರಲಿಲ್ಲ. ತಜ್ಞರ ತಂಡದ ಅಡಿಯಲ್ಲಿ ನಿರಂತರ ಸಂಶೋಧನೆಯ ನಂತರ ನಾವು ಅದನ್ನು ಭೇದಿಸಿದ್ದೇವೆ ಮತ್ತು ಅಕ್ಕಿ ನೀರನ್ನು ಆಧರಿಸಿದ ಹೇರ್ ಆಯಿಲ್, ಶಾಂಪೂ, ಕಂಡೀಷನರ್ ಮತ್ತು ಹೇರ್ ಮಾಸ್ಕ್ ಅನ್ನು ಪರಿಚಯಿಸಿದ್ದೇವೆ" ಎಂದು ಸ್ತುತಿ ವಿವರಿಸುತ್ತಾರೆ.


ಅಕ್ಕಿಯ ನೀರಿನಲ್ಲಿ ಸ್ನಾನ ಮಾಡಿದರೆ ಆಗುವ ಪ್ರಯೋಜನಗಳು


ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಚೀನಾ, ಜಪಾನ್ ಮತ್ತು ಆಗ್ನೇಯ ಏಷ್ಯಾದ ಮಹಿಳೆಯರು ಶತಮಾನಗಳಿಂದ ಕೂದಲಿನ ಚಿಕಿತ್ಸೆಗಾಗಿ ಅಕ್ಕಿ ನೀರನ್ನು ಬಳಸುತ್ತಿದ್ದಾರೆ. ಚೀನಾದ ಹುವಾಂಗ್ಲುವೊ ಎಂಬ ಹಳ್ಳಿಯಲ್ಲಿ ವಾಸಿಸುವ ಯಾವೋ ಮಹಿಳೆಯರು ಆರು ಅಡಿ ಉದ್ದದ ಕೂದಲನ್ನು ಹೊಂದಿರುವುದರ ಮೂಲಕ ಪ್ರಸಿದ್ಧರಾಗಿದ್ದಾರೆ. ಅವರು ಅಕ್ಕಿಯ ನೀರಿನಲ್ಲಿ ಸ್ನಾನ ಮಾಡುತ್ತಾರೆ ಎಂದು ಹೇಳಲಾಗುತ್ತದೆ.


ಇದು ಕೂದಲನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ ಮತ್ತು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಕ್ಕಿ ನೀರಿನಲ್ಲಿ ಅಮೈನೋ ಆಮ್ಲಗಳು, ವಿಟಮಿನ್ ಬಿ, ವಿಟಮಿನ್ ಇ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ.


ಹೆಚ್ಚು ಮಾರಾಟವಾಗುವ ಸರಕು


ವಿಶ್ ಕೇರ್ ಗಾಗಿ, ಅಕ್ಕಿ ನೀರು ಆಧಾರಿತ ಉತ್ಪನ್ನಗಳು ಅವರ ಹೆಚ್ಚು ಮಾರಾಟವಾಗುವ ಸರಕುಗಳಾಗಿವೆ. "ನಮ್ಮ ಎಲ್ಲಾ ವಸ್ತುಗಳು 400 ರಿಂದ 500 ರೂಪಾಯಿಗಳ ಬೆಲೆಯ ನಡುವೆ ಲಭ್ಯವಿವೆ.


ಅಕ್ಕಿಯ ನೀರಿನ ಉತ್ಪನ್ನಗಳನ್ನು ಹೊರತುಪಡಿಸಿ, ನಮ್ಮ ಕೋಲ್ಡ್-ಪ್ರೆಸ್ಡ್ ತೈಲಗಳು ಮತ್ತು ವಿಟಮಿನ್ ಸಿ ಸೀರಮ್ ಇತರ ಉನ್ನತ-ರೇಟೆಡ್ ಉತ್ಪನ್ನಗಳಾಗಿವೆ" ಎಂದು ಬ್ರಾಂಡ್ ನ ಸಹ ಸಂಸ್ಥಾಪಕ ಅಂಕಿತ್ ಅವರು ಹೇಳುತ್ತಾರೆ.


ಉತ್ಪನ್ನದ ಬಗ್ಗೆ ಜನರ ಅಭಿಪ್ರಾಯ ಹೇಗಿದೆ 


ಬೆಂಗಳೂರಿನ ಸಿಎ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಹರ್ಷ್ ದುಗಾರ್ ಅವರು "ನಾನು ಕಳೆದ ಎರಡು ವರ್ಷಗಳಿಂದ ಅಕ್ಕಿ ನೀರಿನ ಶಾಂಪೂ ಮತ್ತು ಹೇರ್ ಮಾಸ್ಕ್ ಅನ್ನು ಬಳಸುತ್ತಿದ್ದೇನೆ.


ಅವು ಅದ್ಭುತವಾಗಿವೆ ಮತ್ತು ನನ್ನ ಕೂದಲು ಉದುರುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯ ಮಾಡಿವೆ. ಕೈಗೆಟುಕುವ ಬೆಲೆಯ ಶ್ರೇಣಿ ಮತ್ತು ನೈಸರ್ಗಿಕ ಪದಾರ್ಥಗಳ ಬಳಕೆಯು ಬ್ರ್ಯಾಂಡ್ ನ ಮುಖ್ಯಾಂಶಗಳಾಗಿವೆ" ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.


ಈ ಬಗ್ಗೆ ಅಂಕಿತ್ ಅವರು ಹೇಳಿದ್ದು ಹೀಗೆ 


"ನಾವು ಮೊದಲಿನಿಂದಲೂ ಮಾರ್ಕೆಟಿಂಗ್ ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿಲ್ಲ. ಆದರೆ ಪ್ರತಿಯೊಬ್ಬ ಗ್ರಾಹಕರಿಂದ ನಾವು ಅಭಿಪ್ರಾಯವನ್ನು ಕೇಳಿ ತಿಳಿದುಕೊಂಡಿದ್ದೇವೆ. ಅಲ್ಲದೆ, ಹೊಸ ಉತ್ಪನ್ನವನ್ನು ಪ್ರಾರಂಭಿಸುವ ಮೊದಲು, ನಾವು ಅದನ್ನು ಪ್ರಾಮಾಣಿಕ ಸಲಹೆಗಳನ್ನು ಹಂಚಿಕೊಳ್ಳುವ ಪ್ರಭಾವಶಾಲಿಗಳು ಮತ್ತು ನಿಯಮಿತ ಗ್ರಾಹಕರಿಗೆ ಕಳುಹಿಸುತ್ತೇವೆ, ಅವುಗಳನ್ನು ಉತ್ಪನ್ನದಲ್ಲಿ ನಂತರ ಸಂಯೋಜಿಸಲಾಗುತ್ತದೆ.


ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ನಕಾರಾತ್ಮಕ ಅಭಿಪ್ರಾಯಗಳು ಬಂದಿಲ್ಲ ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ" ಎಂದು ಅಂಕಿತ್ ಹೇಳುತ್ತಾರೆ. ಈ ಕ್ಷೇತ್ರದಲ್ಲಿ ಹೊಸಬರಾಗಿ, ಉದ್ಯಮಿಗಳು ಎದುರಿಸಿದ ಪ್ರಮುಖ ಸವಾಲುಗಳೆಂದರೆ ಶುದ್ಧ ಪದಾರ್ಥಗಳನ್ನು ಸಂಗ್ರಹಿಸುವುದು ಮತ್ತು ಅದರ ಪ್ರಯೋಜನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು. ಕಚ್ಚಾ ವಸ್ತುಗಳನ್ನು ವಿವಿಧ ರಾಜ್ಯಗಳಿಂದ ಪಡೆಯಲಾಗುತ್ತದೆ. ಕೇರಳದ ತೆಂಗಿನೆಣ್ಣೆ, ಉತ್ತರ ಪ್ರದೇಶದ ರೋಸ್ ವಾಟರ್ ಮತ್ತು ರಾಜಸ್ಥಾನದ ಅಲೋವೆರಾ ಇದಕ್ಕೆ ಉದಾಹರಣೆಗಳಾಗಿವೆ.


ಇದನ್ನೂ ಓದಿ: Multilayer Farming: ಬಹುಪದರ ಕೃಷಿ ಪದ್ಧತಿ ಅಳವಡಿಸಿಕೊಂಡ ಪ್ರಶಸ್ತಿ ವಿಜೇತ ರೈತ: ವರ್ಷಕ್ಕೆ ಇವರ ಆದಾಯ ಎಷ್ಟು ಗೊತ್ತಾ?


"ಉತ್ಪನ್ನದ ತಯಾರಿಕೆಯಲ್ಲಿ ಏನನ್ನು ಬಳಸಲಾಗುತ್ತದೆ ಎಂಬುದರ ಬಗ್ಗೆ ಕಾಳಜಿ ವಹಿಸದೆ ನಾವು ದುಬಾರಿ ಅಂತರರಾಷ್ಟ್ರೀಯ ಬ್ರ್ಯಾಂಡ್ ಗಳ ಹಿಂದೆ ಹೋಗುತ್ತೇವೆ. ಉದಾಹರಣೆಗೆ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸನ್ ಸ್ಕ್ರೀನ್ ಗಳು ಆಕ್ಸಿಬೆನ್ಜೋನ್ ಮತ್ತು ಆಕ್ಟಿಲ್ ಮೆಥಾಕ್ಸಿಸಿನಾಮೇಟ್ (ಒಎಂಸಿ) ಅನ್ನು ಹೊಂದಿರುತ್ತವೆ,


ಇದು ಸಂತಾನೋತ್ಪತ್ತಿ ಆರೋಗ್ಯದಲ್ಲಿ ಸಮಸ್ಯೆಗಳನ್ನು ಉಂಟು ಮಾಡುವ ಎರಡು ರಾಸಾಯನಿಕ ಘಟಕಾಂಶಗಳನ್ನು ಹೊಂದಿರುತ್ತದೆ. ಅವು ಚರ್ಮದ ಆಳಕ್ಕೆ ನುಸುಳಬಹುದು ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ಮತ್ತು ಹಾರ್ಮೋನುಗಳ ಅಸಮತೋಲನವನ್ನು ಪ್ರಚೋದಿಸಬಹುದು ಮತ್ತು ಚರ್ಮವನ್ನು ಸೂಕ್ಷ್ಮವಾಗಿಸುತ್ತದೆ ಮತ್ತು ಮೊಡವೆಗಳು ಮತ್ತು ವಿಘಟನೆಗಳಿಗೆ ಕಾರಣವಾಗುತ್ತದೆ.


ಈ ಕುರಿತು ಸ್ತುತಿ ಅವರು ಹೇಳಿದ್ದೇನು
ನಮ್ಮ ಜೆಲ್ ಸನ್ ಸ್ಕ್ರೀನ್ ಅಂತಹ ವಿಷಕಾರಿ ವಿಷಯಗಳಿಂದ ದೂರವಿದೆ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಂತಹ ಅಜ್ಞಾತ ಸಂಗತಿಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಮತ್ತು ನೈಸರ್ಗಿಕ ಪರ್ಯಾಯಗಳನ್ನು ಕಂಡು ಹಿಡಿಯಲು ಅವರಿಗೆ ಸಹಾಯ ಮಾಡುವುದು ವಿಶ್ ಕೇರ್ ನ ಧ್ಯೇಯವಾಗಿದೆ" ಎಂದು ಸ್ತುತಿ ವಿವರಿಸುತ್ತಾರೆ.


ಬ್ರ್ಯಾಂಡ್ ತಿಂಗಳಿಗೆ ಸರಾಸರಿ ಒಂದು ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡುತ್ತದೆ ಮತ್ತು ಅವರ ಬೆಳವಣಿಗೆಯ ಗರಿಷ್ಠ ಅವಧಿಯಲ್ಲಿದೆ. ಬ್ರಾಂಡ್ ತಮ್ಮ ಉತ್ಪನ್ನಗಳನ್ನು ತುಂಬಲು ಮರುಬಳಕೆ ಮಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವ ಮೂಲಕ ಪರಿಸರದ ಜವಾಬ್ದಾರಿಯನ್ನು ಸಹ ತೋರಿಸುತ್ತದೆ. ಅವರು ತಮ್ಮ ಗ್ರಾಹಕರಿಂದ ಬಾಟಲಿಗಳನ್ನು ಸಂಗ್ರಹಿಸಲು ಮತ್ತು ಪ್ಯಾಕೇಜಿಂಗ್ ಗಾಗಿ ಅವುಗಳನ್ನು ಮರುಬಳಕೆ ಮಾಡಲು 'ಎಮ್ಪ್ಟೀಸ್ ರಿಟರ್ನ್ ಪ್ರೋಗ್ರಾಂ' ಅನ್ನು ಸಹ ನಡೆಸುತ್ತಾರೆ.


ಇದನ್ನೂ ಓದಿ: Suniel Shetty: ಬರೀ ಸಿನಿಮಾ ಅಲ್ಲ, ಇಲ್ಲಿಂದಲೂ ಸಿಕ್ಕಾಪಟ್ಟೆ ದುಡ್ಡ್​ ಮಾಡ್ತಿದ್ದಾರೆ ಸುನೀಲ್​ ಶೆಟ್ಟಿ! ವರ್ಷಕ್ಕೆ 100 ಕೋಟಿ ಆದಾಯ


ಇದಲ್ಲದೆ, "ಪ್ರತಿ ವರ್ಷ ಮಾರಾಟದಲ್ಲಿ ಶೇಕಡಾ 100 ರಷ್ಟು ಬೆಳವಣಿಗೆ" ಹೊಂದಿರುವ ವಿಶ್ ಕೇರ್, ಭಾರತದಾದ್ಯಂತ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಧನಸಹಾಯ ಮಾಡುತ್ತಿದೆ.

Published by:Ashwini Prabhu
First published: