Savings Tips: 10 ತಿಂಗಳಲ್ಲಿ 20 ಲಕ್ಷ ಕೂಡಿಟ್ಟ ದಂಪತಿ: ಹೇಗೆ ಎಂಬ ಗುಟ್ಟು ಅವರೇ ಹೇಳಿದ್ದಾರೆ ನೋಡಿ

How to save money, savings tips in Kannada: ಅಬ್ಬಿ ಡುನ್ಸುಮುರೆ ಎಂಬ ಮಹಿಳೆ ತಾನು ಮತ್ತು ತನ್ನ ಗಂಡ ಹೇಗೆ ದುಂದು ವೆಚ್ಚ ಮಾಡುತ್ತಿದ್ದೆವು ಮತ್ತು ಅದಕ್ಕೆ ಹೇಗೆ ಕಡಿವಾಣ ಹಾಕಿದರು ಎಂಬುದನ್ನು ಹಂಚಿಕೊಂಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚೆಗೆ ಟಿಕ್​ಟಾಕ್​ನಲ್ಲಿ (TikTok) ಒಂದು ದಂಪತಿ, 10 ತಿಂಗಳಲ್ಲಿ 20 ಲಕ್ಷ ಹಣವನ್ನು ಹೇಗೆ ಕೂಡಿಟ್ಟರು ಎಂಬ ಕುತೂಹಲಕರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟೇಕ್​ ಅವೇ ತಿಂಡಿ ತಿನಿಸುಗಳು (Food takeways), ಬ್ರಾಂಡೆಡ್​ ಪ್ರಾಡಕ್ಟ್​ಗಳನ್ನು (Branded Products) ಕೊಳ್ಳುವುದನ್ನು ನಿಲ್ಲಿಸಿರುವುದೇ ಇದಕ್ಕೆ ಮುಖ್ಯ ಕಾರಣ ಎಂದೂ ದಂಪತಿಗಳು ಹೇಳಿಕೊಂಡಿದ್ದಾರೆ. ಟಿಕ್​ಟಾಕ್​ನಲ್ಲಿ ಈ ದಂಪತಿ ಮಾಡಿರುವ ವಿಡಿಯೋ ಅದೆಷ್ಟೋ ಮಂದಿಗೆ ಸೇವಿಂಗ್ಸ್​ ಟಿಪ್ಸ್​ (Saving Tips in Kannada) ಆದರೆ, ಇನ್ನಷ್ಟು ಮಂದಿಗೆ ಹಣ ಉಳಿತಾಯ ಮಾಡಲು ಪ್ರೇರಣೆಯಾಗಿದೆ. ಅಬ್ಬಿ ಡುನ್ಸುಮುರೆ ಎಂಬ ಮಹಿಳೆ ತಾನು ಮತ್ತು ತನ್ನ ಗಂಡ ಹೇಗೆ ದುಂದು ವೆಚ್ಚ ಮಾಡುತ್ತಿದ್ದೆವು ಮತ್ತು ಅದಕ್ಕೆ ಹೇಗೆ ಕಡಿವಾಣ ಹಾಕಿದರು ಎಂಬುದನ್ನು ಹಂಚಿಕೊಂಡಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಇದೇ ರೀತಿ ಮಾಡಿ, ಸುಮಾರು 1 ಕೋಟಿ ಮೂವತ್ತು ಲಕ್ಷ ಉಳಿಸಲು ದಂಪತಿ ಪಣ ತೊಟ್ಟಿದ್ದಾರಂತೆ.

  ಉಳಿತಾಯ ಮಾಡಿದ್ದು ಹೇಗೆ? (How to save money):

  ಅಬ್ಬಿ ಡುನ್ಸುಮುರೆ ಹೇಳುವ ಪ್ರಕಾರ, ಮೊದಲು ಸೇವಿಂಗ್ಸ್​ ಅಕೌಂಟ್​ ಒಂದನ್ನು ತೆರೆಯಬೇಕು (Open separate Savings Account). ದಿನನಿತ್ಯದ ಖರ್ಚಿಗೆ ಬಳಕೆ ಮಾಡುವ ಹಣ ಮತ್ತು ಉಳಿತಾಯ ಮಾಡುವ ಹಣ ಎರಡನ್ನೂ ಬೇರೆ ಬೇರೆ ಖಾತೆಯಲ್ಲಿ ಇರಿಸಬೇಕು ಎಂಬುದು ಮೊದಲ ಟಿಪ್ಸ್​. ಅಬ್ಬಿ ಹೇಳುವ ಪ್ರಕಾರ, ಬಟ್ಟೆ, ತಿನಿಸು ಮತ್ತಿತರ ವಸ್ತುಗಳನ್ನು ಖರೀದಿಸುವಾಗ ಬ್ರಾಂಡ್​ ಎಂದು ಹಿಂದೆ ಓಡಬಾರದು. ಅದರ ಬದಲು ಕಡಿಮೆ ಮೊತ್ತಕ್ಕೆ ಸಿಗುವ ಬ್ರಾಂಡ್​ ಅಲ್ಲದ ಪ್ರಾಡಕ್ಟ್​ಗಳನ್ನು ಖರೀದಿಸಬೇಕು (Buy products without brand). ಇದರಿಂದ ಅರ್ಧಕ್ಕರ್ದ ಉಳಿತಾಯವಾಗಲಿದೆ. ಜತೆಗೆ ಕೇವಲ ಬ್ರಾಂಡೆಡ್​ ಪ್ರಾಡಕ್ಟ್​ ಮಾತ್ರ ಉತ್ತಮ ಕ್ವಾಲಿಟಿಯದ್ದಾಗಿರುವುದಿಲ್ಲ. ಬ್ರಾಂಡ್​ ಇಲ್ಲದ ಪ್ರಾಡಕ್ಟ್​ಗಳು ಕೂಡ ಉತ್ತಮವಾಗಿರುತ್ತವೆ. ತುಂಬಾ ಹಣ ಕೊಟ್ಟು ಆಚೆ ಊಟ ಮಾಡುವುದು, ಕಾಫಿ ತಿಂಡಿ ತಿನ್ನುವುದು ಮತ್ತು ಮನೆಗೆ ಊಟ ತರಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಮನೆಯಲ್ಲೇ ಅಡಿಗೆ ಮಾಡಿ ತಿನ್ನುವುದರಿಂದ ದೊಡ್ಡ ಮೊಟ್ಟದ ಸೇವಿಂಗ್ಸ್​ ಆಗಲಿದೆ ಜತೆಗೆ ಆರೋಗ್ಯವೂ ಚೆನ್ನಾಗಿರಲಿದೆ ಎನ್ನುತ್ತಾರೆ ಅಬ್ಬಿ ಡುನ್ಸುಮುರೆ.

  ದುಡ್ಡು ದುಡಿಯುವ ಸಮಯದ ಮೇಲೆ ಖರ್ಚಿನ ಲೆಕ್ಕ:

  ಅಬ್ಬಿ ಡುನ್ಸುಮುರೆ ಪ್ರಕಾರ ನಾವು ಖರ್ಚು ಮಾಡುವ ಮುನ್ನ, ಖರ್ಚು ಮಾಡುವ ವೆಚ್ಚವನ್ನು ದುಡಿಯಲು ಬೇಕಾದ ಸಮಯವನ್ನು ಲೆಕ್ಕ ಹಾಕಬೇಕು. ಉದಾಹರಣೆಗೆ ಒಂದು ಬ್ಯಾಗ್​ 800 ರೂಪಾಯಿಗಳಿಗೆ ಖರೀದಿಸುತ್ತೀರ ಎಂದರೆ, 800 ರೂ ದುಡಿಯಲು ಹಿಡಿದ ಸಮಯವನ್ನು ಲೆಕ್ಕ ಹಾಕಬೇಕು. 800 ರೂ ದುಡಿಯಲು ಎಂಟು ಗಂಟೆ ಕೆಲಸ ಮಾಡಿರುತ್ತೀವಿ ಎಂದರೆ, ನಮ್ಮ ಎಂಟು ಗಂಟೆಗಳ ಶ್ರಮವನ್ನು ಒಂದು ಬ್ಯಾಗ್​ ಮೇಲೆ ಸುರಿಯುವುದು ಸರಿಯೇ ಎಂಬುದನ್ನು ಯೋಚಿಸಬೇಕು ಎನ್ನುತ್ತಾರೆ ಅಬ್ಬಿ ಡುನ್ಸುಮುರೆ.

  ಅಗತ್ಯ ಮತ್ತು ಆಸೆ ನಡುವಿನ ವ್ಯತ್ಯಾಸ ಅರಿಯಿರಿ (Know difference between need and want):

  ಅಗತ್ಯ ಮತ್ತು ಆಸೆ ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ. ಯಾರೇ ಆಗಲಿ, ದುಡ್ಡು ಖರ್ಚು ಮಾಡುವಾಗ, ಆ ಹಣ ನಿಮ್ಮ ಆಸೆ ತಣಿಸಲು ವ್ಯಯವಾಗುತ್ತಿದೆಯೇ ಅಥವಾ ಅಗತ್ಯಕ್ಕಾಗಿಯೇ ಎಂಬುದನ್ನು ಯೋಚಿಸಬೇಕು. ನಾನಂತೂ ಅನಗತ್ಯವಾಗಿ ಖರ್ಚು ಮಾಡುವುದಿಲ್ಲ. ಹ್ಯಾಂಡ್​ ಬ್ಯಾಗ್​ ಕೇವಲ ತೋರುಗಾಣಿಕೆಗೆ ಹೊರತು ಅದು ಅಗತ್ಯವಲ್ಲ. ಎಂಟು ಗಂಟೆಗಳು ಕಷ್ಟಪಟ್ಟು ದುಡಿದ ಹಣವನ್ನು ಹೀಗೆ ವ್ಯಯಿಸುವುದು ತಪ್ಪು ಎಂದು ಡುನ್ಸುಮುರೆ ಅಭಿಪ್ರಾಯ ಪಡುತ್ತಾರೆ.

  ಇದನ್ನೂ ಓದಿ: ಮುಂದುವರಿದ ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆಯ ನಾಗಾಲೋಟ: ಜನ ಸಾಮಾನ್ಯರು ಕಂಗಾಲು!

  ಟಿಕ್​ ಟಾಕ್​ನಲ್ಲಿ (TikTok) ಈ ವಿಡಿಯೋ ಈಗಾಗಲೇ ಸುಮಾರು ಒಂದು ಲಕ್ಷ ವೀಕ್ಷಣೆಯಾಗಿದೆ. ಮತ್ತು ಸುಮಾರು 5000ಕ್ಕೂ ಹೆಚ್ಚು ಜನ ಇದನ್ನು ಲೈಕ್​ ಮಾಡಿದ್ದಾರೆ.

  ಇದನ್ನೂ ಓದಿ: ಗೃಹ ಸಾಲ ಪಡೆದುಕೊಳ್ಳುವ ಮುನ್ನ ಅರಿತುಕೊಳ್ಳಬೇಕಾಗಿರುವ ಅಂಶಗಳೇನು..? ಇಲ್ಲಿದೆ ವಿವರ

  ಪಾಶ್ಚಿಮಾತ್ಯ ದೇಶಗಳಲ್ಲಿ ಜನ ಹೆಚ್ಚು ಹಣ ದುಡಿಯುತ್ತಾರೆ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರೆ ಲಕ್ಷಾಂತರ ಹಣ ಕೂಡಿಡಬಹುದು. ನಮ್ಮ ದೇಶದಲ್ಲೂ ನಾವು ದುಡಿಯುವ ಸಂಬಂಕ್ಕೆ ತಕ್ಕ ಲೈಫ್​ಸ್ಟೈಲ್​ ರೂಢಿಸಿಕೊಂಡರೆ, ಹೆಚ್ಚು ಹಣವನ್ನು ಉಳಿತಾಯ ಮಾಡಬಹುದು. ಇದು ನಿಜಕ್ಕೂ ಸಾಧ್ಯ. ಆನ್​ಲೈನ್​ ಶಾಪಿಂಗ್​ (Online Shopping), ಆನ್​ಲೈನ್​ನಲ್ಲಿ ವಿಶ್​ಲಿಸ್ಟ್​ಗೆ (Online Wishlist) ಹಾಕಿಟ್ಟುಕೊಳ್ಳುವುದು, ಹೋಟೆಲ್​ನಲ್ಲಿ ಊಟ ಮಾಡುವುದು ಇಂತವುಗಳನ್ನ ಕಡಿಮೆ ಮಾಡಿದರೆ ಉಳಿತಾಯ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯ.
  Published by:Sharath Sharma Kalagaru
  First published: