Jaatre Ice cream: ತೆಂಗಿನ ಚಿಪ್ಪಿನಲ್ಲಿ 'ಜಾತ್ರೆ’ ಐಸ್‍ಕ್ರೀಮ್! ಅಸಲಿ ರುಚಿಯಿಂದ ಗೆದ್ದ ದೆಹಲಿಯ ದಂಪತಿ

ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮನೆ ಶೈಲಿಯ ದಕ್ಷಿಣ ಭಾರತೀಯ ಆಹಾರದ ರೆಸ್ಟೊರೆಂಟ್ ಅನ್ನು ಆರಂಭಿಸಿ, ಬಳಿಕ ವಿನೂತನ ಫ್ಲೇವರ್​ಗಳ ಐಸ್‍ಕ್ರೀಂಗಳನ್ನು ಕೂಡ ಪರಿಚಯಿಸಿ ಯಶಸ್ವಿಯಾದ ದೆಹಲಿ ನಿವಾಸಿಗಳಾದ ಹೊಟೇಲ್ ಉದ್ಯಮಿ ದಂಪತಿಯ ಸಾಧನೆಯ ಹಾದಿಯ ಕಿರುಪರಿಚಯ ಇಲ್ಲಿದೆ.

ಜಾತ್ರೆ ಐಸ್ ಕ್ರೀಮ್ ಮಾಲೀಕರು

ಜಾತ್ರೆ ಐಸ್ ಕ್ರೀಮ್ ಮಾಲೀಕರು

  • Share this:
ದಕ್ಷಿಣ ಭಾರತೀಯ ರೆಸ್ಟೊರೆಂಟ್‍ಗಳು (South Indian Restaurant) ದೇಶದ ಉದ್ದಗಲಕ್ಕೂ ದೊರೆಯುತ್ತವೆ. ಜನರು ಅವುಗಳಿಂದ ಎಂದೂ ಬೋರ್ ಆಗುವುದಿಲ್ಲ. ನಮ್ಮ ದಕ್ಷಿಣದ ದೋಸೆ, ಇಡ್ಲಿ, ವಡೆಗಳ ಫ್ಯಾನ್ ಫಾಲೋವಿಂಗ್ ಹಾಗಿದೆ. ಅದರಲ್ಲೂ, ಮನೆ ರುಚಿಯ ದಕ್ಷಿಣ ಭಾರತೀಯ ಖಾದ್ಯಗಳನ್ನು ಹುಡುಕಿಕೊಂಡು ಹೋಗಿ ತಿನ್ನುವ ಭೋಜನ (Dinner) ಪ್ರಿಯರಿದ್ದಾರೆ. ಅಂತಹ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮನೆ ಶೈಲಿಯ ದಕ್ಷಿಣ ಭಾರತೀಯ ಆಹಾರದ ರೆಸ್ಟೊರೆಂಟ್ ಅನ್ನು ಆರಂಭಿಸಿ, ಬಳಿಕ ವಿನೂತನ ಫ್ಲೇವರ್‍ಗಳ (Innovative Flavors) ಐಸ್‍ಕ್ರೀಂಗಳನ್ನು (Ice Cream) ಕೂಡ ಪರಿಚಯಿಸಿ ಯಶಸ್ವಿಯಾದ ದೆಹಲಿ ನಿವಾಸಿಗಳಾದ ಹೊಟೇಲ್ ಉದ್ಯಮಿ ದಂಪತಿಯ ಸಾಧನೆಯ ಹಾದಿಯ ಕಿರುಪರಿಚಯ ಇಲ್ಲಿದೆ.

ದೆಹಲಿಯ ಕರ್ನಾಟಿಕ್ ಕೆಫೆ
ಅವರ ಕರ್ನಾಟಿಕ್ ಕೆಫೆಗೆ ಈಗ ಸುಮಾರು ಹತ್ತು ವರ್ಷ. ಶಿಲ್ಪಿ ಭಾರ್ಗವ ಮತ್ತು ಪವನ್ ಜಂಬಗಿ ದಂಪತಿ ಸ್ಥಾಪಿಸಿದ ಈ ರೆಸ್ಟೊರೆಂಟ್ , ಉತ್ತರ ಭಾರತದಲ್ಲಿ ಕರ್ನಾಟಕದ ಅಸಲಿ ರುಚಿಯ ಸಸ್ಯಹಾರಿ ಆಹಾರವನ್ನು ಪೂರೈಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಕರ್ನಾಟಿಕ್ ಕೆಫೆ, ದೆಹಲಿಯ ಎನ್‍ಸಿಆರ್ ಪ್ರದೇಶದಲ್ಲಿ, ಗ್ರಾಹಕರು ಅತ್ಯಂತ ಹೆಚ್ಚು ಇಷ್ಟಪಡುವ ದಕ್ಷಿಣ ಭಾರತೀಯ ರೆಸ್ಟೊರೆಂಟ್‍ಗಳಲ್ಲಿ ಒಂದಾಗಿದೆ.

ತಮ್ಮ ಉದ್ಯಮವನ್ನು ಆರಂಭಿಸಿದ ಕೆಲವು ವರ್ಷಗಳ ಬಳಿಕ, ಅವರು ತಮ್ಮ ರೆಸ್ಟೊರೆಂಟ್‍ನಲ್ಲಿ ತಣ್ಣಗಿನ ಸಿಹಿ ತಿನಿಸುಗಳನ್ನು ಪರಿಚಯಿಸಲು ನಿರ್ಧರಿಸಿದರು. ಆದರೆ, ತಾವೇನು ಪೂರೈಸಬೇಕು ಎಂಬ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ಆದರೆ ಹಣ್ಣುಗಳನ್ನು ಒಳಗೊಂಡ ಸಿಹಿ ತಿನಿಸು ಅದಾಗಿರಬೇಕು ಎಂದು ಅವರು ಬಯಸಿದ್ದರು. ಕೊನೆಗೆ ಶಿಲ್ಪಿ ಭಾರ್ಗವ ಮತ್ತು ಪವನ್ ಜಂಬಗಿ ದಂಪತಿ ಐಸ್‍ಕ್ರೀಂ ಅನ್ನು ನೀಡುವ ನಿರ್ಣಯಕ್ಕೆ ಬಂದರು.

ವಿವಿಧ ಫ್ಲೇವರ್ ನ ಐಸ್ ಕ್ರೀಮ್​ಗಳು
“ಭಾರತದಲ್ಲಿ ಚಿಕ್ಕು, ಪೇರಲೆ, ಜಾಮೂನ್ ಮತ್ತು ಇನ್ನೂ ಅನೇಕ ವಿಧದ ಹಣ್ಣುಗಳಿವೆ. ಮತ್ತು ಅವುಗಳೆಲ್ಲವೂ ದೇಶದ ಆಹಾರ ಪದ್ಧತಿಯ ಭಾಗವಾಗಿವೆ ಕೂಡ. ನಮ್ಮ ಐಸ್‍ಕ್ರೀಂನಲ್ಲಿ ಅವುಗಳ ಫ್ಲೇವರ್‍ಗಳನ್ನು ಫಲೇವರ್‍ಗಳನ್ನು ಆನ್ವೇಷಿಸಲು ನಿರ್ಧರಿದಿದ್ದೇವೆ, ಆದರೆ ಒಂದು ವಿಭಿನ್ನ ರೀತಿಯಲ್ಲಿ” ಎಂದು ವಿವರಿಸುತ್ತಾರೆ ಶಿಲ್ಪಿ.

ಜಾತ್ರೆ ಐಸ್ ಕ್ರೀಮ್
ಈ ಯೋಜನೆಯನ್ನು ಇಟ್ಟುಕೊಂಡು ಅವರು, 2017 ರಲ್ಲಿ, ‘ಶೇಕಡಾ 100 ರಷ್ಟು ನೈಸರ್ಗಿಕ ಮತ್ತು ಸಸ್ಯಹಾರಿ’ ಐಸ್‍ಕ್ರೀಂಗಳನ್ನು ಮಾರಲು ಆರಂಭಿಸಿದರು. ನಂತರದ ದಿನಗಳಲ್ಲಿ ಅದು ‘ಜಾತ್ರೆ’ ಎಂಬ ಬ್ರಾಂಡ್ ಆಗಿ ಮಾರ್ಪಟ್ಟಿತು. ‘ಜಾತ್ರೆ ‘ ಐಸ್‍ಕ್ರೀಂ ಹಣ್ಣು ಮತ್ತು ಮಸಾಲೆಗಳ ನಿರ್ದಿಷ್ಟ ಸಂಯೋಜನೆಯಲ್ಲಿ ಮಾತ್ರವಲ್ಲ, ಅವುಗಳನ್ನು ಪೂರೈಕೆ ಮಾಡಲಾಗುತ್ತಿರುವ ರೀತಿಯಲ್ಲೂ ವೈಶಿಷ್ಟ್ಯತೆಯನ್ನು ಹೊಂದಿದೆ. ಐಸ್‍ಕ್ರೀಂನ ಸುಸ್ಥಿರತೆಯನ್ನು ಗಮನದಲ್ಲಿ ಇಟ್ಟುಕೊಂಡು, ಅವುಗಳನ್ನು ತೆಂಗಿನ ಚಿಪ್ಪು ಮತ್ತು ಟೆರಕೊಟ್ಟ ಕಪ್‍ಗಳನ್ನು ಹಾಕಿ ಕೊಡಲಾಗುತ್ತದೆ.

ನಿಸರ್ಗ ಪ್ರೇರಿತ ಐಸ್‍ಕ್ರೀಂಗಳು
ಕೃಷಿಯ ಬಗ್ಗೆ ವಿಶೇಷ ಅಭಿರುಚಿ ಹೊಂದಿರುವ ಶಿಲ್ಪಿ ಮತ್ತು ಪವನ್ , ತಮ್ಮ ವ್ಯಸ್ಥ ಜೀವನದ ಕೊಂಚ ಸಮಯವನ್ನು , ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ಭೇಟಿ ನೀಡಲು ಮೀಸಲಿಟ್ಟಿದ್ದಾರೆ. ತಮ್ಮ ಆ ಭೇಟಿಗಳು ಬೆಳೆಗಳು, ಕೃಷಿ ಮತ್ತು ನಿಸರ್ಗದ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿª ಎಂದು ಹೇಳುತ್ತಾರೆ ಶಿಲ್ಪಿ ಮತ್ತು ಪವನ್ ದಂಪತಿ.

ಇದನ್ನೂ ಓದಿ:   Business Startup: ಅಮೆರಿಕದಲ್ಲಿ ವಾರಾಣಸಿ ಸಹೋದರರ ಜೋಡಿಯ ಸ್ಟಾರ್ಟಪ್! ಈ ಸಂಸ್ಥೆಯ ಫೋಕಸ್ ಏನು ಗೊತ್ತೆ?

“ನಮ್ಮ ಕೃಷಿ ಕೇಂದ್ರೀಕೃತ ಪಯಣದಲ್ಲಿ ನಾವು ಕೃಷಿ ಚಕ್ರಗಳು ಮತ್ತು ತಂತ್ರಗಳ ಬಗ್ಗೆ ಕಲಿತಿದ್ದೇವೆ. ಜೊತೆಗೆ ಭಾರತದಾದ್ಯಂತ ಬೆಳೆಯುತ್ತಿರುವ ಬೆಳೆಗಳು, ಅದರಲ್ಲೂ ಮುಖ್ಯವಾಗಿ ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳ ಬಗ್ಗೆ ಅರಿತುಕೊಂಡಿದ್ದೇವೆ” ಎನ್ನುವ ಶಿಲ್ಪಿ ಅವರಿಗೆ, ಆ ಜ್ಞಾನದಿಂದ ವಿಭಿನ್ನ ಫ್ಲೇವರ್‍ಗಳ ಪ್ರಯೋಗಗಳನ್ನು ಮಾಡಲು ಸಹಾಯವಾಯಿತಂತೆ.

ಅಸಲಿ ಫ್ಲೇವರ್ ಬಳಕೆ
ಪವನ್ ಉದ್ಯಮ ಕ್ಷೇತ್ರವನ್ನು ಪ್ರವೇಶಿಸುವ ಮೊದಲು, ಎಥ್ನೋಗ್ರಫಿ ಮತ್ತು ಅಂಥ್ರೋಪಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. “ ಗುಣಮಟ್ಟವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನಾವು ಬಳಸುವ ಪದಾರ್ಥಗಳ ಬಗ್ಗೆ ಬಹಳ ಜಾಗರೂಕತೆ ಹೊಂದಿದ್ದೇವೆ. ನಾವು ಕೇವಲ ನಿಜವಾದ ಹಣ್ಣುಗಳನ್ನು ಬಳಸುತ್ತೇವೆ ಮತ್ತು ಯಾವುದೇ ಫ್ಲೇವರ್ ಅಥವಾ ಬಣ್ಣಗಳನ್ನು ಬಳಸುವುದಿಲ್ಲ.

ಅಷ್ಟೇ ಅಲ್ಲ , ಅದರಲ್ಲಿರುವ ನಿಜವಾದ ಹಣ್ಣು ಅಥವಾ ಪದಾರ್ಥಗಳ ಅಸಲಿ ಫ್ಲೇವರ್ ಅನ್ನು ಆಸ್ವಾದಿಸಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ ನಮ್ಮ ಐಸ್‍ಕ್ರೀಂಗಳಲ್ಲಿ ಸಕ್ಕರೆಯ ಮಟ್ಟ ತುಂಬಾ ಕಡಿಮೆ ಇರುವಂತೆ ನೋಡಿಕೊಳ್ಳುತ್ತೇವೆ. ಆರಂಭದಲ್ಲಿ ಕೇವಲ ಎರಡು ಫ್ಲೇವರ್‍ಗಳು ಮಾತ್ರ ಇದ್ದವು - ಬ್ಲಾಕ್ ಪೆಪ್ಪರ್ ಮತ್ತು ಏಲಕ್ಕಿ, ರೋಸ್ ಸ್ಟ್ರಾಬೆರಿ. ಹೆಚ್ಚು ಫ್ಲೇವರ್‍ಗಳನ್ನು ಪರಿಚಯಿಸುವ ಸಾಮಥ್ರ್ಯ ಆ ಸಮಯದಲ್ಲಿ ನಮಗೆ ಇರಲಿಲ್ಲ” ಎನ್ನುತ್ತಾರೆ ಅವರು.

"ಜಾತ್ರೆ" ಬ್ರಾಂಡ್ ಹೆಸರಿಡಲು ಕರಣ
ಹಳ್ಳಿಯ ಜಾತ್ರೆಯಲ್ಲಿ ತಣ್ಣಗಿನ ಐಸ್‍ಕ್ರೀಂ ಸವಿದ ನೆನಪುಗಳೇ, ತಮ್ಮ ಐಸ್ ಕ್ರೀಂ ಬ್ರಾಂಡ್‍ಗೆ ಅವರು ಜಾತ್ರೆ ಎಂದು ಹೆಸರಿಡಲು ಕಾರಣವಂತೆ. ಗ್ರಾಹಕರು ಜಾತ್ರೆ ಐಸ್‍ಕ್ರೀಂ ಅನ್ನು ತುಂಬಾ ಇಷ್ಟ ಪಟ್ಟದ್ದು, ಇನ್ನಷ್ಟು ಫ್ಲೇವರ್‍ಗಳನ್ನು ಪರಿಚಯಿಸಲು ಈ ದಂಪತಿಗೆ ಸ್ಪೂರ್ತಿ ನೀಡಿತು.

“ನಾವು ಆದಾಗಲೇ ಆಹಾರ ಉದ್ಯಮದಲ್ಲಿ ಇದ್ದ ಕಾರಣ ಸಾಮಾಗ್ರಿ ಮತ್ತು ಫ್ಲೇವರ್‍ಗಳ ಸೂಕ್ಷಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗಿತ್ತು. ಅದು ಪ್ರಯೋಗದ ಸಂದರ್ಭದಲ್ಲಿ ತುಂಬಾ ಸಹಾಯಕ್ಕೆ ಬಂತು. ಕ್ರಮೇಣ ನಾವು ಹೆಚ್ಚು ಫ್ಲೇವರ್‍ಗಳು ತಯಾರಿಸುವ ಧೈರ್ಯವನ್ನು ಪಡೆದೆವು” ಎನ್ನುತ್ತಾರೆ ಪವನ್.

ಇದನ್ನೂ ಓದಿ:  Donkey Milk Business: ಕತ್ತೆ ಹಾಲಿನಿಂದ ಕೋಟ್ಯಾಧಿಪತಿ ಆದ ಯುವಕ! ಕತ್ತೆ ಎಂದು ಮೂದಲಿಸುವ ಮುನ್ನ ಎಚ್ಚರ

ತಾಳೆ ಬೆಲ್ಲ, ಹುರಿದ ಎಳ್ಳು, ಕರಿ ಮೆಣಸು, ಏಲಕ್ಕಿ, ಚಾಕಲೇಟ್ ಆರೆಂಜ್, ವೆನಿಲಾ ಬ್ಲೂಬೆರಿ, ಕಚ್ಚಾ ತೆಂಗಿನಕಾಯಿ ಸಕ್ಕರೆ ಮತ್ತು ಹುರಿದ ಬಾದಾಮಿ, ಅಂಜೂರ ಮತ್ತು ಬಲ್ಸಾಮಿಕ್ ವಿನೇಗರ್, ಕೋಕಮ್ ಮತ್ತು ಜೀರಿಗೆ ಶರಬತ್ತು, ಮ್ಯಾಸ್ಕರ್‍ಪೋನ್ ಮತ್ತು ಕೋಕೊ ಇತ್ಯಾದಿ ವಿಶಿಷ್ಟ ಫ್ಲೇವರ್‍ಗಳು ಜಾತ್ರೆ ಐಸ್‍ಕ್ರೀಂನಲ್ಲಿವೆ. ಅಷ್ಟೇ ಅಲ್ಲ, ವೆನಿಲಾ ಪೋಡ್, ಪಿಸ್ತಾ, ಹೇಜಲ್‍ನಟ್ ಮತ್ತು ಡಾರ್ಕ್ ಚಾಕೊಲೇಟ್‍ನಂತಗ ಕ್ಲಾಸಿಕ್ ಫ್ಲೇವರ್‍ಗಳನ್ನು ಮತ್ತು ರತ್ನಗಿರಿ ಆಫೂಸ್ ಮಾವಿನ ಹಣ್ಣು, ಜಾಮೂನ್, ಪಿಂಕ್ ಪೇರಳೆ, ಚೆರ್ರಿ ಮತ್ತು ಚಿಕ್ಕೂವಿನಂತಹ ತಾಜಾ ಹಣ್ಣುಗಳ ಫ್ಲೇವರ್‍ಗಳನ್ನು ಕೂಡ ‘ಜಾತ್ರೆ’ ಹೊಂದಿದೆ.

ಟೆರಾಕೋಟಾ ಟಬ್‍ಗಳಲ್ಲಿ ಐಸ್‍ಕ್ರೀಂ
“ನಮ್ಮದು ದಕ್ಷಿಣ ಭಾರತೀಯ ರೆಸ್ಟೊರೆಂಟ್ ಮತ್ತು ನಾವು ತೆಂಗಿನಕಾಯಿಯನ್ನು ತುಂಬಾ ಹೆಚ್ಚು ಬಳಸುತ್ತೇವೆ. ಹಾಗಾಗಿ, ನಾವು ನಮ್ಮ ರೆಸ್ಟೊರೆಂಟ್‍ನಲ್ಲಿ ಐಸ್‍ಕ್ರೀಂಗಳನ್ನು ಮಾರಲು ಆರಂಭಿಸಿದಾಗ, ಆ ತೆಂಗಿನ ಕಾಯಿ ಚಿಪ್ಪುಗಳನ್ನು , ಐಸ್ ಕ್ರೀಂ ಬೌಲ್‍ಗಳಾಗಿ ಮರುಬಳಕೆ ಮಾಡಲು ನಿರ್ಧರಿಸಿದ್ದೆವು” ಎನ್ನುತ್ತಾರೆ ಶಿಲ್ಪಿ.

ಒಂದು ದಿನಕ್ಕೆ ಮಾರಾಟವಾಗುವ ಐಸ್ ಕ್ರೀಮ್
ವ್ಯಾಪಾರವು ದೊಡ್ಡದಾಗುತ್ತಾ ಹೋದಂತೆ, ಅವರು ಸೂಕ್ತ ರೀತಿಯ ಪ್ಯಾಕೆಜಿಂಗ್ ಬಗ್ಗೆಯೂ ಆಲೋಚಿಸಬೇಕಿತ್ತು. “ ನಾವು ಜೈವಿಕ ವಿಘಟಿನೀಯವಲ್ಲದ ತ್ಯಾಜ್ಯಕ್ಕೆ ಕೊಡುಗೆ ನೀಡಬಾರದು ಎಂಬ ದೃಢ ನಿರ್ಧಾರವನ್ನು ಹೊಂದಿದ್ದೆವು. ಆರಂಭದಲ್ಲಿ ನಾವು ಪೇಪರ್ ಟಬ್‍ಗಳನ್ನು ಬಳಸಬೇಕಿತ್ತು, ಆದರೆ ಅಂತಿಮವಾಗಿ ನಾವು ಟೆರಕೊಟ್ಟ ಟಬ್‍ಗಳ ಕಲ್ಪನೆಯನ್ನು ಅಳವಡಿಸಿಕೊಂಡೆವು. ನಾವು ಈಗ ಒಂದೇ ಸಾರಿ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‍ಗಳನ್ನು ಕೂಡ ಬಳಸುತ್ತಿಲ್ಲ ಎಂಬುವುದನ್ನು ಹೇಳಲು ನನಗೆ ಖುಷಿಯಾಗುತ್ತಿದೆ” ಎನ್ನುವ ಅವರು, ಒಂದು ದಿನಕ್ಕೆ ಸುಮಾರು 600 ರಿಂದ 700 ಕಪ್ ಐಸ್‍ಕ್ರೀಂಗಳನ್ನು ಮಾರುತ್ತಾರಂತೆ.

ಮರುಬಳಕೆ ಮಾಡಬಹುದಾದ ಟೆರಾಕೋಟಾ ಟಬ್‍
“ನಮ್ಮ ಹಲವಾರು ಗ್ರಾಹಕರು ಈ ಟೆರಾಕೋಟಾ ಟಬ್‍ಗಳನ್ನು ತಮ್ಮ ಮನೆಗಳಲ್ಲಿ, ಪೆನ್‍ಸ್ಟ್ಯಾಂಡ್ ಆಗಿ , ಟೀ ಕಪ್ ಆಗಿ, ಸಸಿಗಳನ್ನು ನೆಡಲು ಮತ್ತು ಮೊಸರು ಮಾಡಲು ಮತ್ತಿತರ ಕೆಲಸಗಳಿಗೆ ವಿನೂತನವಾಗಿ ಮರುಬಳಕೆ ಮಾಡುತ್ತಿರುವುದು ನಮಗೆ ಸಂತೋಷ ನೀಡಿದೆ” ಎನ್ನುತ್ತಾರೆ ಆಕೆ.

“ಐಸ್‍ಕ್ರೀಮ್‍ನ ರುಚಿ ಅದ್ಭುತವಾಗಿದೆ, ತಿನ್ನುವವರು ಅದರಲ್ಲಿ ಹಾಕಲಾಗಿರುವ ಅಸಲಿ ಪದಾರ್ಥಗಳ ಫೀಲ್ ಪಡೆಯಲು ಮತ್ತು ರುಚಿ ನೋಡಲು ಸಾಧ್ಯವಾಗುತ್ತದೆ. ಅವರು ಐಸ್‍ಕ್ರೀಂ ಅನ್ನು ಹಾಕಿಕೊಡುವ ಟೆರಕೊಟ್ಟ ಕಂಟೈನರ್ ಕೂಡ ನನಗೆ ತುಂಬಾ ಇಷ್ಟವಾಗುತ್ತದೆ. ನಾನು ಆ ಕಪ್ ಅನ್ನು ಮನೆಯಲ್ಲಿ ಮೊಸರು ಮಾಡಲು ಮರು ಬಳಕೆ ಮಾಡುತ್ತೇನೆ. ನಾನು ಆಗಾಗ ಅಲ್ಲಿಂದ ಐಸ್‍ಕ್ರೀಂ ಆರ್ಡರ್ ಮಾಡುತ್ತಲೇ ಇರುತ್ತೇನೆ” ಎನ್ನುತ್ತಾರೆ ಜಾತ್ರೆಯ ಸಾಮಾನ್ಯ ಗ್ರಾಹಕರಲ್ಲಿ ಒಬ್ಬರಾದ ಡಾ. ಸಂಧ್ಯಾ ಭಲ್ಲಾ.

ಟೆರಾಕೋಟಾ ಟಬ್‍ ತಯಾರಿಸಲು ಒಂದು ಸಣ್ಣ ಘಟಕ ಸ್ಥಾಪನೆ
ಈ ಟೆರಾಕೋಟಾ ಟಬ್‍ಗಳನ್ನು ತಯಾರಿಸಲು ಒಂದು ಸಣ್ಣ ಘಟಕವನ್ನು ಕೂಡ ಸ್ಥಾಪಸಿದೆ. “ ಹೊರಗುತ್ತಿಗೆಯ ಮೂಲಕ ಟಬ್‍ಗಳನ್ನು ತಯಾರಿಸುವುದು ತುಂಬಾ ದುಬಾರಿ ಮತ್ತು ಪ್ಯಾಕೆಜಿಂಗ್‍ನ ಕಾರಣದಿಂದ ನಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚು ಮಾಡಲು ನಮಗೆ ಇಷ್ಟವಿರಲಿಲ್ಲ” ಎನ್ನುತ್ತಾರೆ ಪವನ್.

ಇದನ್ನೂ ಓದಿ:  Shark Tank India: ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಸ್ಟಾರ್ಟ್​ಅಪ್​ಗಳ ಆದಾಯದಲ್ಲಿ ಹೆಚ್ಚಳ! ಈ ಅದ್ಭುತ ಸಾಧ್ಯವಾಗಿದ್ದು ಹೇಗೆ?

ಜಾತ್ರೆ ಪ್ರಸ್ತುತ ಹೊಸ ದೆಹಲಿಯ ಲೋಧಿ ಕಾಲೋನಿಯಲ್ಲಿ ಒಂದು ಔಟ್‍ಲೆಟ್ ಅನ್ನು ಹೊಂದಿದೆ ಮತ್ತು ಅಷ್ಟೇ ಅಲ್ಲ , ಜೊಮ್ಯಾಟೋ ಮತ್ತು ಸ್ವಿಗ್ಗಿಗಳಂತಹ ವಿವಿಧ ಆನ್‍ಲೈನ್ ವೇದಿಕೆಗಳ ಮೂಲಕವೂ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
Published by:Ashwini Prabhu
First published: