ಡಿಸೆಂಬರ್ (December) ಬಂತೆಂದರೆ ಮೈಕೊರೆಯುವ ಚಳಿಯೊಂದಿಗೆ ಕ್ರಿಸ್ಮಸ್ ಹಬ್ಬದ ಸಡಗರ ಕೂಡ ರಂಗೇರುತ್ತದೆ ಇದರೊಂದಿಗೆ ಹೊಸ ವರ್ಷದ ಸಂಭ್ರಮ ಕೂಡ ಜೊತೆಯಾಗಿಯೇ ಸಡಗರಕ್ಕೆ ಕಾರಣವಾಗುತ್ತದೆ. ಕ್ರಿಸ್ಮಸ್ (Christmas) ಹಬ್ಬದ ಸಮಯದಲ್ಲಿ ಮುಖ್ಯವಾಗಿ ಕ್ರಿಸ್ಮಸ್ ಟ್ರೀಯ ಅಲಂಕಾರ, ಸಾಂತಾಕ್ಲಾಸ್, ವೈವಿಧ್ಯಮಯ ಕೇಕ್ಗಳು ಹೀಗೆ ಕ್ರಿಸ್ಮಸ್ಗೆ ಸಂಬಂಧಿಸಿದ ಅದೆಷ್ಟೋ ವಿಚಾರಗಳು ಮೂಡುತ್ತವೆ. ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಕ್ರಿಸ್ಮಸ್ ಟ್ರೀಯ ಅಲಂಕಾರದಲ್ಲಿ (Decoration) ಹೆಚ್ಚಿನವರು ತೊಡಗುತ್ತಾರೆ. ಕೆಲವೊಂದೆಡೆ ಸುಂದರ ಅಲಂಕಾರವನ್ನು ಗುರುತಿಸಲು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ತಾವೇ ನೆಟ್ಟ ಕ್ರಿಸ್ಮಸ್ ಟ್ರೀ ವಿತರಿಸುವ ಸಂಸ್ಥೆ
ಈಗೆಲ್ಲಾ ಕೃತಕ ಕ್ರಿಸ್ಮಸ್ ಟ್ರೀಗಳನ್ನು ತಂದು ಅದಕ್ಕೆ ಅಲಂಕಾರ ಮಾಡುವುದು ರೂಢಿಯಾಗಿದೆ. ಸಾಂಪ್ರದಾಯಿಕ ಕ್ರಿಸ್ಮಸ್ ಟ್ರೀ ದೊರೆಯುವುದೇ ದುರ್ಲಭವಾಗಿದೆ ಎಂಬುದು ಕ್ರಿಸ್ಮಸ್ ಆಚರಿಸುವವರ ಮಾತಾಗಿದೆ.
ಆದರೆ ಚಿಕಾಗೋದಲ್ಲಿ ಕ್ರಿಸ್ಮಸ್ ಟ್ರೀಗಳನ್ನು ವಿತರಿಸುವ ಕ್ರಿಸ್ ಹೋಹೆನ್ಸ್ಟೈನ್ ಸ್ವತಃ ಕ್ರಿಸ್ಮಸ್ ಮರಗಳನ್ನು ತಮ್ಮ ಫಾರ್ಮ್ನಲ್ಲಿ ಬೆಳೆದು ಅದನ್ನು ನೇರವಾಗಿ ಮನೆಗಳಿಗೆ ತಂದು ನೀಡುತ್ತಾರೆ.
ಚಿಕಾಗೋದಲ್ಲಿ ಕ್ರಿಸ್ಮಸ್ ಟ್ರೀ ಡೆಲಿವರಿ ಉದ್ಯಮವನ್ನು ಕೈಗೊಂಡಿರುವ ಕ್ರಿಸ್ ಹೋಹೆನ್ಸ್ಟೈನ್ 13 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದಾರೆ. ಮನೆಗಳಿಗೆ ಕ್ರಿಸ್ಮಸ್ ಟ್ರೀ ತಂದು ವಿತರಿಸಿದ ನಂತರ ಇದೇ ಮರಗಳನ್ನು ಮರುಬಳಕೆ ಮಾಡುವ ಪರಿಸರ ಸ್ನೇಹಿ ಕಾಯಕದಲ್ಲಿ ಕೂಡ ಕ್ರಿಸ್ ಉತ್ಸಾಹಿತರಾಗಿದ್ದಾರೆ.
ಚಿಕಾಗೊದ ಹೆಚ್ಚಿನ ಕುಟುಂಬಗಳಿಗೆ ಸಿಟಿ ಟ್ರೀ ಡೆಲಿವರಿ ಸೆಂಟರ್ ಆಪ್ತವಾದ ತಾಣ ಎಂದೆನಿಸಿದ್ದು, ರಜಾದಿನಗಳಲ್ಲಿ ಕ್ರಿಸ್ಮಸ್ ಟ್ರೀ ಅಲಂಕಾರಕ್ಕಾಗಿ ಸಿಟಿ ಟ್ರೀಗೆ ಭೇಟಿ ನೀಡುತ್ತಾರೆ.
ಕಾರ್ಪೋರೇಟ್ ಉದ್ಯಮ ತ್ಯಜಿಸಿ ಪರಿಸರ ಸ್ನೇಹಿ ಕಾಯಕ
ಅಕೌಂಟಿಂಗ್ ವೃತ್ತಿಯನ್ನು ತ್ಯಜಿಸಿದ ನಂತರ ಪುನಃ ಕಾರ್ಪೋರೇಟ್ ಜಗತ್ತಿಗೆ ಕ್ರಿಸ್ ಮರಳಬಹುದಾಗಿತ್ತು ಅದಾಗ್ಯೂ ಅವರು ಆಯ್ದುಕೊಂಡಿದ್ದು ಚಿಕಾಗೋದಲ್ಲಿ ಇದೀಗ ಕಣ್ಮರೆಯಾಗುತ್ತಿರುವ ಸರಳ ಉದ್ಯಮವಾದ ಕ್ರಿಸ್ಮಸ್ ಟ್ರೀ ಡೆಲಿವರಿ ಉದ್ಯಮ.
ಹಿಂದಿನಿಂದಲೂ ಈ ಉದ್ಯಮ ಪ್ರಚಲಿತದಲ್ಲಿದ್ದರೂ ಇಂದಿನ ಆಧುನಿಕ ಮಾರ್ಪಾಡುಗಳಿಗೆ ಅನ್ವಯವಾಗುವಂತೆ ಕ್ರಿಸ್ ಟ್ರೀಗಳನ್ನು ವಿತರಿಸುತ್ತಾರೆ ಎಂಬುದು ಇಲ್ಲಿ ಮುಖ್ಯವಾದುದು.
ಇದನ್ನೂ ಓದಿ: ಬ್ಯುಸಿನೆಸ್ ಐಡಿಯಾ! 7 ಲಕ್ಷ ಹೂಡಿಕೆ ತಿಂಗಳಿಗೆ ರೂ 5 ಲಕ್ಷಕ್ಕಿಂತ ಹೆಚ್ಚು ಆದಾಯ!
ಸಣ್ಣ ಅಲಂಕಾರಿಕ ಕ್ರಿಸ್ಮಸ್ ಟ್ರೀಗಳಿಂದ ಹಿಡಿದು ಉದ್ಯಾನಗಳಲ್ಲಿ ಬೆಳೆಯುವ ಕ್ರಿಸ್ಮಸ್ ಟ್ರೀಗಳು ಹಾಗೂ ರಸಗೊಬ್ಬರಗಳ ಪೂರೈಕೆಯನ್ನು ಕ್ರಿಸ್ ಮಾಡುತ್ತಾರೆ.
ಕ್ರಿಸ್ಮಸ್ ಟ್ರೀಗಳ ಮರುಬಳಕೆ ಯೋಜನೆಗಳಿಗೆ ಇರುವ ಸವಾಲುಗಳು ಹಾಗೂ ಕೊರತೆಗಳೇನು ಎಂಬುದನ್ನು ಅರ್ಥೈಸಿಕೊಳ್ಳಲು ಊರಿನ ಹಿರಿಯರೊಂದಿಗೆ ಚರ್ಚಿಸಿದರು ಹಾಗೂ ಕ್ರಿಸ್ಮಸ್ ಟ್ರೀ ಮರುಬಳಕೆಯನ್ನು ವಿಸ್ತರಿಸಲು ಚಿಕಾಗೋದಲ್ಲಿನ ಪರಿಸರ ಇಲಾಖೆಯೊಂದಿಗೆ ಕೆಲಸ ಮಾಡಲಾರಂಭಿಸಿದರು ಎಂದು ತಿಳಿಸಿದ್ದಾರೆ.
ಕ್ರಿಸ್ಮಸ್ ಮರಗಳನ್ನು ಮರುಬಳಕೆ ಮಾಡುವ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಹಾಗೂ ಪರಿಸರ ಕಾಳಜಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸ್ಥಳೀಯ ಸರಕಾರಿ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ.
ಕ್ರಿಸ್ಮಸ್ ಟ್ರೀಗಳ ಮರುಬಳಕೆ ಕೂಡ ಮಾಡಲಾಗುತ್ತದೆ
ಕ್ರಿಸ್ಮಸ್ ಟ್ರೀಗಳ ಡೆಲಿವರಿ ಉದ್ಯಮದಲ್ಲಿ ಕ್ರಿಸ್ಗೆ ಯಾವುದೇ ಜ್ಞಾನವಿರಲಿಲ್ಲ, ಅದಕ್ಕಾಗಿ ಪರಿಸರ ಯೋಜನೆಗಳಲ್ಲಿ ಪಾಲ್ಗೊಂಡು ಅಲ್ಲಿ ತಮ್ಮ ವ್ಯವಹಾರ ಸಲಹೆಗಳನ್ನು ಚರ್ಚಿಸಿದರು ಹಾಗೂ ಬೇಕಾದ ತಿದ್ದುಪಡಿಗಳನ್ನು ನಡೆಸಿದರು.
ಮಡಕೆಗಳಲ್ಲಿ ಕ್ರಿಸ್ಮಸ್ ಟ್ರೀಯನ್ನು ಬೆಳೆಸುವ ಯೋಜನೆಯನ್ನು ಕ್ರಿಸ್ ಮೊದಲ ಬಾರಿಗೆ ಆಯ್ದುಕೊಂಡಿದ್ದರು, ಆದರೆ ಇದು ಅಷ್ಟೊಂದು ಪ್ರಯೋಗಾತ್ಮಕವಾಗಿಲ್ಲ ಎಂದು ಕಂಡುಕೊಂಡ ನಂತರ ಕ್ರಿಸ್ಮಸ್ ಟ್ರೀಗಳ ವಿತರಣೆಯ ಸೇವೆ ಹಾಗೂ ಮರುಬಳಕೆ ಯೋಜನೆಯನ್ನು ಆಯ್ದುಕೊಂಡೆ ಎಂಬುದು ಕ್ರಿಸ್ ಮಾತಾಗಿದೆ.
ಸಿಟಿ ಟ್ರೀ ಸಂಸ್ಥೆಯ ಯೋಜನೆಗಳು
ಕ್ರಿಸ್ ಹುಟ್ಟುಹಾಕಿದ ಸಿಟಿ ಟ್ರೀ ಸಂಸ್ಥೆ ಕ್ರಿಸ್ಮಸ್ ಮರಗಳ ವಿಲೇವಾರಿಗೆ ಅನುಕೂಲಕರವಾದ ವ್ಯವಸ್ಥೆಯನ್ನು ಒದಗಿಸುವುದು ಮಾತ್ರವಲ್ಲದೆ ವಿವಿಧ ಪರಿಸರ ಯೋಜನೆಗಳು ಹಾಗೂ ದತ್ತಿ ಕಾರ್ಯಕ್ರಮಗಳಿಗೆ ಅನುದಾನ ಕೂಡ ನೀಡುತ್ತದೆ.
ಕ್ರಿಸ್ಮಸ್ ಟ್ರೀಯನ್ನು ಖುದ್ದು ಸಂಸ್ಥೆಯ ಸಿಬ್ಬಂದಿಗಳು ಮನೆಗೆ ವಿತರಿಸುತ್ತಾರೆ ಹಾಗೂ ಬೇಕಾದಲ್ಲಿ ಟ್ರೀಗೆ ಅಲಂಕಾರ ಕೂಡ ಮಾಡುತ್ತಾರೆ ಎಂದು ಕ್ರಿಸ್ ತಿಳಿಸಿದ್ದಾರೆ.
ಆಚರಣೆ ಮುಗಿದ ನಂತರ ಮರಗಳನ್ನು ಮರುಬಳಕೆ ಮಾಡಲು ಸ್ವತಃ ಸಿಬ್ಬಂದಿಗಳೇ ಮನೆಗೆ ಭೇಟಿ ನೀಡಿ ಕ್ರಿಸ್ಮಸ್ ಟ್ರೀಗಳನ್ನು ಕೊಂಡೊಯ್ಯುತ್ತಾರೆ ಎಂದು ತಮ್ಮ ಉದ್ಯಮದ ವಿವರಗಳನ್ನು ಕ್ರಿಸ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ