ಡಿಫೆನ್ಸ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟವರಿಗೆ ಕೆಲವೇ ಗಂಟೆಗಳಲ್ಲಿ ವಿಮಾ ಹಣ ಪಾವತಿ

ನಮ್ಮ ರಕ್ಷಣಾ ಸಿಬ್ಬಂದಿಯ ಕುರಿತು NIA ಅತಿ ಹೆಚ್ಚು ಗೌರವ ಹೊಂದಿದೆ ಹಾಗೂ ಈ ಕ್ಲೈಮ್ ಪರಿಹಾರವು ಅಗಲಿದ ಆತ್ಮಕ್ಕೆ ನಾವು ಸಲ್ಲಿಸುವ ಗೌರವ ಹಾಗೂ ಅವರ ಕುಟುಂಬಕ್ಕೆ ನಾವು ನೀಡುವ ಬೆಂಬಲವಾಗಿದೆ ಎಂದು NIA ನ CMD ಯಾಗಿರುವ ಅತುಲ್ ಸಹಾಯ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊದಲ ರಕ್ಷಣಾ ಸಿಬ್ಬಂದಿ (CDS) ಜನರಲ್ ಬಿಪಿನ್ ರಾವತ್ (General Bipin Rawat ) ಹಾಗೂ ಎಲ್ಎಸ್ ಲಿಡ್ಡರ್ ಸೇರಿದಂತೆ ಎಲ್ಲಾ ಮಿಲಿಟರಿ ಸಿಬ್ಬಂದಿಗಳ ವೈಯಕ್ತಿಕ ಅಪಘಾತ (PA) ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ನ್ಯೂ ಇಂಡಿಯಾ ಅಶ್ಯೂರೆನ್ಸ್ (NIA)(New India Assurance) ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ (UII) (United India Insurance)ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾದಾರರು, ಕಳೆದ ವಾರ ಧಾವಿಸಿದರು. ಕೂನೂರಿನಲ್ಲಿ(Coonoor) ನಡೆದ ದುರಂತ ಹೆಲಿಕಾಪ್ಟರ್ ಅಪಘಾತದಲ್ಲಿ ( helicopter crash) ತಮ್ಮ ಪ್ರಾಣ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ವಿಮಾ ಮೊತ್ತವನ್ನು ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಒದಗಿಸುವ ಮೂಲಕ NIA ದಾಖಲೆಯನ್ನೇ ಮಾಡಿದೆ.

GPA ಪಾಲಿಸಿಯಡಿ ಸಂರಕ್ಷಣೆ
ಚೆನ್ನೈ ಮೂಲದ UII ಯು ಜನರಲ್ ರಾವತ್ ಮತ್ತು ಇತರರು ಸೇರಿದಂತೆ ಮೃತ ರಕ್ಷಣಾ ಅಧಿಕಾರಿಗಳ ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ (GPA) ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಿದೆ, ಇದೇ ಸಮಯದಲ್ಲಿ NIA ಯು ಬ್ರಿಗೇಡಿಯರ್ ಲ್ಯಾಡರ್‌ ಕ್ಲೈಮ್‌ಗಳನ್ನು ಅತಿ ಕಡಿಮೆ ಸಮಯದಲ್ಲಿ ಪಾವತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

UII ಗಾಗಿ ದುರಂತದಲ್ಲಿ ಅಪಘಾತಕ್ಕೊಳಗಾದವರು ಸಂಸ್ಥೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ GPA ಪಾಲಿಸಿಯಡಿಯಲ್ಲಿ ಸಂರಕ್ಷಿಸಲ್ಪಟ್ಟಿದ್ದು ಹಾಗೂ 30 ಲಕ್ಷ ರೂಪಾಯಿಗಳ ಈ ಎಲ್ಲಾ ಕ್ಲೈಮ್‌ಗಳನ್ನು ದಾಖಲೆಗಳ ಸ್ವೀಕಾರವನ್ನು ಆಧರಿಸಿ 30 ನಿಮಿಷಗಳಲ್ಲಿ ಇತ್ಯರ್ಥಗೊಳಿಸಲಾಯಿತು ಇದು ಹಿಂದೆಂದೂ ಕೇಳಿರದ ಸಾಧನೆಯಾಗಿದೆ ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ. ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಎಲ್‌ಐಸಿ ಕೂಡ (LIC) ಕಾರ್ಯತತ್ಪರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: LIC scheme: ದಿನಕ್ಕೆ 29 ರೂ. ಉಳಿಸಿ 4 ಲಕ್ಷದವರೆಗೆ ಲಾಭ ಗಳಿಸಿ; ಮಹಿಳೆಯರಿಗೆ ಅದ್ಭುತ ಯೋಜನೆ ಇದು

ಗೌರವ ಸಲ್ಲಿಕೆ
ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ರಕ್ಷಣಾ ಸಿಬ್ಬಂದಿಯ ಸಂಬಳ ಖಾತೆಗಳನ್ನು ಕವರ್ ಮಾಡುವ ಮುಂಬೈ ಲಾರ್ಜ್ ಕಾರ್ಪೊರೇಟ್ ಬ್ರೋಕರ್ ಆಫೀಸ್-2 ಇಶ್ಯೂ ಮಾಡಿರುವ ಪಾಲಿಸಿಯ ಅಡಿಯಲ್ಲಿ ಬ್ರಿಗೇಡಿಯರ್ ಲಿಡ್ಡರ್ ಸಂರಕ್ಷಣೆಗೊಳಪಟ್ಟಿದ್ದಾರೆ. ನಮ್ಮ ರಕ್ಷಣಾ ಸಿಬ್ಬಂದಿಯನ್ನು ಅತ್ಯುನ್ನತ ಬೆಂಬಲದಲ್ಲಿ NIA ಹೊಂದಿದೆ ಹಾಗೂ ಈ ಕ್ಲೈಮ್ ಪರಿಹಾರವು ಅಗಲಿದ ಆತ್ಮಕ್ಕೆ ನಾವು ಸಲ್ಲಿಸುವ ಗೌರವ ಹಾಗೂ ಅವರ ಕುಟುಂಬಕ್ಕೆ ನಾವು ನೀಡುವ ಬೆಂಬಲವಾಗಿದೆ ಎಂದು NIA ನ CMD ಯಾಗಿರುವ ಅತುಲ್ ಸಹಾಯ್ ತಿಳಿಸಿದ್ದಾರೆ.

ದಾಖಲೆ ಸಮಯದಲ್ಲಿ ಇತ್ಯರ್ಥ
ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವ CDS ಬಿಪಿನ್ ರಾವತ್ ಸೇರಿದಂತೆ ಎಲ್ಲಾ ಪ್ರಶಸ್ತಿ ಪುರಸ್ಕೃತ ಹಾಗೂ IAF ಅಧಿಕಾರಿಗಳ GPA ಕ್ಲೈಮ್‌ಗಳನ್ನು UII ದಾಖಲೆ ಸಮಯದಲ್ಲಿ ಇತ್ಯರ್ಥಗೊಳಿಸಿದೆ. ಈ ಎಲ್ಲಾ ಕ್ಲೈಮ್‌ಗಳನ್ನು ನಮ್ಮ SBI GPA ನೀತಿಯಡಿಯಲ್ಲಿ ಸಂರಕ್ಷಿಸಲಾಗಿದೆ ಎಂದು UII ನ CMD ಯಾಗಿರುವ ಸತ್ಯಜಿತ್ ತ್ರಿಪಾಠಿ ತಿಳಿಸಿದ್ದಾರೆ.

SBI ಡಿಫೆನ್ಸ್ ಸಂಬಳ ಪ್ಯಾಕೇಜ್ (DSP) ಖಾತೆಯು ಸೇನೆ, ನೌಕಾಪಡೆ, ವಾಯುಪಡೆ, ಭಾರತೀಯ ಕೋಸ್ಟ್ ಗಾರ್ಡ್, ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ರೈಫಲ್ಸ್ (RR) ಭಾರತೀಯ ರಕ್ಷಣಾ ಸಿಬ್ಬಂದಿಗೆ ಮೀಸಲಾಗಿದೆ ಹಾಗೂ ಈ ಪ್ಯಾಕೇಜ್‌ಗಾಗಿ UII ಇಶ್ಯೂ ಮಾಡಿರುವ ಗ್ರೂಪ್ ಆಕ್ಸಿಡೆಂಟ್ ಪಾಲಿಸಿಯು ಮರಣ ಸಮಯದಲ್ಲಿ 30 ಲಕ್ಷ ರೂಗಳ ವಿಮೆ ಕ್ಲೈಮ್ ಅನ್ನು ಆಂಶಿಕ ಅಂಗವೈಕಲ್ಯಕ್ಕೆ 10 ಲಕ್ಷ ರೂಗಳ ವಿಮಾ ಕ್ಲೈಮ್ ಅನ್ನು ಪಾವತಿಸುವ ನಿಬಂಧನೆಗಳನ್ನು ಹೊಂದಿದೆ.

ಖಾತೆಗೆ ಮೊತ್ತ ಜಮೆ
ನಮ್ಮ ವಿಚಾರಣೆಯ ನಂತರ, ಮಧ್ಯವರ್ತಿ ಪಾಲುದಾರರಿಂದ ಔಪಚಾರಿಕ ವಿನಂತಿಯನ್ನು ಸ್ವೀಕರಿಸಿದ್ದೇವೆ ಹಾಗೂ ಬ್ರಿಗೇಡಿಯರ್‌ನ ಕ್ಲೈಮ್‌ನ ತ್ವರಿತ ಇತ್ಯರ್ಥಕ್ಕಾಗಿ ವಿನಂತಿಸಿದ್ದೇವೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದುರದೃಷ್ಟಕರ ಪ್ರಯಾಣಿಕರಲ್ಲಿ ಒಬ್ಬರಾಗಿದ್ದಾರೆ. ನಮ್ಮ ತಂಡವು ಕೂಡಲೇ ಕಾರ್ಯಪ್ರವೃತ್ತರಾಯಿತು ಹಾಗೂ ಬ್ಯಾಂಕ್‌ಗೆ ಅಗತ್ಯವಾಗಿರುವ ಕನಿಷ್ಠ ಕಡ್ಡಾಯ ದಾಖಲೆಗಳನ್ನು ಪಡೆದುಕೊಂಡಿತು ಹಾಗೂ ಗಂಟೆಗಳ ಸಮಯದಲ್ಲಿ 30 ಲಕ್ಷ ರೂ.ಗಳ ವಿಮೆ ಮೊತ್ತವನ್ನು ಬಿಡುಗಡೆ ಮಾಡಿತು. ಹಾಗೂ ಅದೇ ದಿನ ಆ್ಯಕ್ಸಿಸ್ ಬ್ಯಾಂಕ್‌ನ ಖಾತೆಗೆ ಮೊತ್ತ ಜಮೆಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಂಡಿತು.

ಇದನ್ನೂ ಓದಿ: LIC Recruitment 2021: ಇನ್ಶೂರೆನ್ಸ್​ ಅಡ್ವೈಸರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 25,000

ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಭಾರತೀಯ ವಾಯುಪಡೆ, ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ (IAF), ಜೂನಿಯರ್ ವಾರಂಟ್ ಅಧಿಕಾರಿ (JWO) ರಾಣಾ ಪ್ರತಾಪ್ ದಾಸ್ (IAF), JWO ಪ್ರದೀಪ್ ಅರಾಕಲ್ (IAF), ನಾಯಕ್ ಜಿತೇಂದ್ರ ಕುಮಾರ್ (ಭಾರತೀಯ) ಅವರ ಕ್ಲೈಮ್‌ಗಳನ್ನು UII ಯು ತ್ವರಿತವಾಗಿ ಇತ್ಯರ್ಥಪಡಿಸಿದೆ.
Published by:vanithasanjevani vanithasanjevani
First published: