Cooking Oil: ಜನಸಾಮಾನ್ಯರಿಗೊಂದು ಗುಡ್ ನ್ಯೂಸ್, ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ

ಬೆಲೆ ಏರಿಕೆಯಿಂದ ತತ್ತರಿಸಿದ್ದ ದೇಶದ ಜನರಿಗೆ ಕೇಂದ್ರ ಸರ್ಕಾರ ಇಂದು ಗುಡ್ ನ್ಯೂಸ್ ಕೊಟ್ಟಿದೆ. ಮುಖ್ಯವಾಗಿ ನಿತ್ಯ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳಲ್ಲಿ ಒಂದಾದ ಅಡುಗೆ ಎಣ್ಣೆಯ ಬೆಲೆ ಇಳಿಕೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ದೇಶದ ಜನರಿಗೊಂದು ಗುಡ್ ನ್ಯೂಸ್ (Good News) ಸಿಕ್ಕಿದೆ. ಅದರಲ್ಲೂ ಅಡುಗೆ ಸಾಮಗ್ರಿ ತರುವ ಬಡ, ಮಧ್ಯಮ ವರ್ಗದ ಪುರುಷರು, ಅಡುಗೆ ಮಾಡಿ ಬಡಿಸುವ ಗೃಹಿಣಿಯರಂತೂ (Housewife’s) ಈ ಸುದ್ದಿಕೇಳಿ ಸಂತಸ ಪಡುವುದರಲ್ಲಿ ಡೌಟೇ ಇಲ್ಲ. ಯಾಕೆಂದ್ರೆ ಇದು ಅಡುಗೆ ಎಣ್ಣೆ ಬೆಲೆ (Cooking Oil Price) ಇಳಿಕೆಯಾಗಿರುವ ಸುದ್ದಿ. ಹೌದು, ಎಲ್‌ಪಿಜಿ ಅಡುಗೆ ಅನಿಲದ (LPG Gas) ಬೆಲೆ ಏರಿಕೆ ಮಾಡಿ ಶಾಕ್ (Shock) ಕೊಟ್ಟಿದ್ದ ಕೇಂದ್ರ ಸರ್ಕಾರ (Central Government), ಇದೀಗ ಅಡುಗೆ ಎಣ್ಣೆಯ ಬೆಲೆ ಕಡಿಮೆ ಮಾಡಿ ಗುಡ್ ನ್ಯೂಸ್ ಕೊಟ್ಟಿದೆ. ಇದೀಗ ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ (Littre) 15 ರೂಪಾಯಿಗಳಷ್ಟು ಇಳಿಕೆಯಾಗಿದೆ.

ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ

ಬೆಲೆ ಏರಿಕೆಯಿಂದ ತತ್ತರಿಸಿದ್ದ ದೇಶದ ಜನರಿಗೆ ಕೇಂದ್ರ ಸರ್ಕಾರ ಇಂದು ಗುಡ್ ನ್ಯೂಸ್ ಕೊಟ್ಟಿದೆ. ಮುಖ್ಯವಾಗಿ ನಿತ್ಯ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳಲ್ಲಿ ಒಂದಾದ ಅಡುಗೆ ಎಣ್ಣೆಯ ಬೆಲೆ ಇಳಿಕೆ ಮಾಡಿದೆ. ಪರಿಷ್ಕೃತ ಬೆಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.

ಜುಲೈ 6ರಂದು ನಡೆದ ಸಭೆಯ ಫಲಶ್ರುತಿ

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾದ್ಯ ತೈಲ ಕಂಪನಿಗಳೊಂದಿಗೆ ಜುಲೈ 6 ರಂದು ನಡೆಸಿದ ಸಭೆಯಲ್ಲಿಅಡುಗೆ ಎಣ್ಣೆಯ ಬೆಲೆಯನ್ನ ಕಡಿಮೆ ಮಾಡಲು ಕೋರಲಾಗಿತ್ತು ಎಂದು ತಿಳಿದು ಬಂದಿದೆ. ಅದ್ರಂತೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ತಕ್ಷಣವೇ ಬೆಲೆಗಳನ್ನ ಕಡಿಮೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: LPG Price: ಜನಸಾಮಾನ್ಯರಿಗೆ ಶೀಘ್ರದಲ್ಲೇ ಗುಡ್​ನ್ಯೂಸ್​! ಮೊನ್ನೆ ಏರಿಕೆಯಾಗಿದ್ದ ಎಲ್​ಪಿಜಿ ಬೆಲೆ ಕಡಿಮೆಯಾಗುತ್ತಂತೆ

ಬೆಲೆ ಇಳಿಕೆ ಮಾಡುವಂತೆ ಸೂಚಿಸಿದ್ದ ಕೇಂದ್ರ ಸರ್ಕಾರ

ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆಯು ಇಳಿಕೆಯಾಗಿದೆ. ಹೀಗಾಗಿ, ದೇಶಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಎಂಆರ್‌ಪಿಯನ್ನು ತಗ್ಗಿಸುವಂತೆ ಕೇಂದ್ರ ಸರ್ಕಾರವು ಕಳೆದ ಬುಧವಾರವಷ್ಟೇ ತೈಲ ಕಂಪನಿಗಳಿಗೆ ಸೂಚಿಸಿತ್ತು. ತಕ್ಷಣದಿಂದಲೇ ಜಾರಿಗೆ ಬರುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿತ್ತು.

ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಿದ ಕಂಪನಿಗಳು

ಇದಾದ ನಂತರದಲ್ಲಿ ಮದರ್ ಡೈರಿ ಕಂಪನಿಯು ‘ಧಾರಾ’ ಬ್ರ್ಯಾಂಡ್‌ನ ಸೋಯಾ ಹಾಗೂ ರೈಸ್‌ ಬ್ರಾನ್‌ ಎಣ್ಣೆಗಳ ಬೆಲೆಯನ್ನು ಪ್ರತಿ ಲೀಟರ್‌ಗೆ 14 ರೂಪಾಯಿಗಳ ವರೆಗೆ ತಗ್ಗಿಸಿತ್ತು. ಇನ್ನು ಖಾದ್ಯ ತೈಲಗಳ ಎಲ್ಲಾ ಪ್ರಮುಖ ಉತ್ಪಾದಕರರಾದ ಅದಾನಿ ವಿಲ್ಮರ್ ಮತ್ತು ರುಚಿ ಸೋಯಾ ಮುಂದಿನ 7ರಿಂದ 10 ದಿನಗಳಲ್ಲಿ ಚಿಲ್ಲರೆ ಬೆಲೆಗಳನ್ನು ಪರಿಷ್ಕರಿಸಲು ಒಪ್ಪಿಕೊಂಡಿವೆ ಎಂದು ವರದಿಗಳು ಹೇಳಿವೆ.

ಕೇಂದ್ರ ಸರ್ಕಾರದಿಂದ ಎಚ್ಚರಿಕೆ

ಖಾದ್ಯ ತೈಲಗಳ ಬೆಲೆಗಳನ್ನು ತಕ್ಷಣವೇ ಕಡಿಮೆ ಮಾಡಬೇಕು, ತಯಾರಕರು ಮತ್ತು ಸಂಸ್ಕರಣಾಗಾರರಿಂದ ವಿತರಕರಿಗೆ ಕಡಿಮೆ ಬೆಲೆಯಲ್ಲಿ ನೀಡಿದಾಗ ಮಾತ್ರ ಸಗಟು ಮಾರಾಟದಲ್ಲೂ ಸಹ ಇಳಿಕೆ ಮಾಡಬಹುದು. ಈ ಕುರಿತು ಇಲಾಖೆಗೆ ಮಾಹಿತಿಯನ್ನು ನೀಡಬೇಕೆಂದೂ ಸಚಿವಾಲಯ ತಿಳಿಸಿದೆ. ಈ ಹಿಂದೆ ಬೆಲೆಯನ್ನು ಕಡಿಮೆ ಮಾಡದ ಪ್ರಮುಖ ತೈಲ ಉತ್ಪಾದಕರೂ ಕೂಡ ತಮ್ಮ ಬೆಲೆಗಳನ್ನು ಕಡಿತಗೊಳಿಸಲೇಬೇಕೆಂದು ಎಚ್ಚರಿಕೆಯನ್ನೂ ನೀಡಿದೆ.

ಇದನ್ನೂ ಓದಿ: Good News: ಜನಸಾಮಾನ್ಯರಿಗೆ ಮತ್ತೊಂದು ಗುಡ್​ ನ್ಯೂಸ್​! ಎಲ್​ಪಿಜಿ ಜೊತೆ ಇದೆಲ್ಲದರ ಬೆಲೆನೂ ಕಡಿಮೆಯಾಗುತ್ತಂತೆ

ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ 300-450 ಅಮೆರಿಕನ್​ ಡಾಲರ್​​ನಷ್ಟು ಕಡಿಮೆಯಾದ ನಂತರ ಈ ಕ್ರಮವು ಬಂದಿದೆ. ಭಾರತವು ತನ್ನ ವಾರ್ಷಿಕ ಖಾದ್ಯ ತೈಲ ಬೇಡಿಕೆಯ ಸುಮಾರು 56 ಪ್ರತಿಶತವನ್ನು ಆಮದುಗಳಿಂದ ಪೂರೈಸುತ್ತದೆ. ಹಾಗಾಗಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯಲ್ಲಿನ ಕುಸಿತವು ದೇಶೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
Published by:Annappa Achari
First published: