Electric Vehicle: ಹಳೆಯ ವಾಹನಗಳನ್ನು ಇವಿಯಾಗಿ ಪರಿವರ್ತನೆ, ಇದು ಯುವ ಎಂಜಿನಿಯರ್‌ನ ಹೊಸ ಸಾಧನೆ!

Electric vehicle: ಹಳೆಯ ವಾಹನಗಳಿಗೆ ಹೊಸ ರೂಪವನ್ನೇ ನೀಡಿ ಇ ವಿಯಾಗಿ ಮಾರ್ಪಾಡು ಮಾಡಿದ ಯುವ ಎಂಜಿನಿಯರ್. ಇವರು ಮಾಡಿದ್ದು ಒಂದು ಮಹತ್ತರ ಸಾಧನೆ.

ಮಾಜ್ ಅಹ್ಮದ್ ಖಾನ್

ಮಾಜ್ ಅಹ್ಮದ್ ಖಾನ್

  • Share this:
ಸಾಮಾನ್ಯವಾಗಿ ಬೈಕ್‌ (Bike), ಕಾರು ಹಳೆದಾದಂತೆ ಅದನ್ನು ಮಾರಾಟ ಮಾಡಿ ಬಿಡುತ್ತೇವೆ. ಇಲ್ಲ ತುಂಬಾ ಹಳೆಯದಾಗಿದ್ದರೆ ಅದು ನಮ್ಮ ಮನೆಯ (Home) ಮೂಲೆಯಲ್ಲಿಯೇ ಹಾಗೆಯೇ ಉಳಿದು ಬಿಡುತ್ತದೆ. ನಂತರ ಯಾವುದೋ ಗುಜರಿಗೆ ಹಾಕುವ ಸ್ಥಿತಿ ಬಂದು ಬಿಡುತ್ತದೆ. ಆದರೆ ಇಲ್ಲೊಬ್ಬ ಎಂಜಿನಿಯರ್ (Engineer)‌ ಹಳೆಯ (Old) ಬೈಕ್‌ ಗಳಿಗೆ ಹೊಸ (New) ರೂಪವನ್ನೇ ನೀಡಿ ಒಂದು ಮಹತ್ತರ ಸಾಧನೆ ಈತ ಮಾಡಿದ್ದಾರೆ. 

ಹಳೇ ಬೈಕ್‌ ಗಳನ್ನು ಇ ವಿಯಾಗಿ ಪರಿವರ್ತಿಸಿ ಹೊಸ ಜೀವ

23 ವರ್ಷದ ಮಾಜ್ ಅಹ್ಮದ್ ಖಾನ್ ಎಂಬ ಈತ ಹಳೆಯ ದ್ವಿಚಕ್ರ ವಾಹನಗಳನ್ನು ಮಾರುವ ಬದಲು ಅವುಗಳನ್ನು ವಿದ್ಯುತ್‌ ಚಾಲಿತ ವಾಹನಗಳನ್ನಾಗಿ ಬದಲಾಯಿಸುವ ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ.  ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಈತ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಇದರಲ್ಲಿ ಏನಾದರೂ ಹೊಸದಾಗಿ ಸಾಧಿಸಬೇಕು ಎಂಬ ಬಯಕೆ ಹೊಂದಿದ್ದಈತನ ಕನಸಿನ ಫಲವೇ ಪರಿವರ್ತಿತ ಎಲೆಕ್ಟ್ರಾನಿಕ್‌ ಬೈಕ್.‌

ಮಾರ್ಚ್ 2021 ರಲ್ಲಿ ಯಶಸ್ವಿ ಆವಿಷ್ಕಾರ

ತೆಲಂಗಾಣದ ಮೆಥೋಡಿಸ್ಟ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿನಲ್ಲಿ ಓದುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿ ಹೊಸದಾಗಿ ಏನನ್ನಾದರೂ ಸಾಧಿಸಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ನಂತರ ಅಹ್ಮದ್ ಖಾನ್ ಬಯಸಿದನ್ನು ನನಸು ಮಾಡಲು ಮೊದಲ ಮೆಟ್ಟಿಲಾಗಿ ಇನ್ಕ್ಯುಬೇಟರ್ ಎಡ್ವೆಂಚರ್ ಪಾರ್ಕ್‌ ಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿ, ಆಯ್ಕೆಯಾದರು.  ಸಂಸ್ಥೆಯ ಬೆಂಬಲದೊಂದಿಗೆ ಯುವಕ ತನ್ನ ಕನಸಿನ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅಂತಿಮವಾಗಿ ಮಾರ್ಚ್ 2021 ರಲ್ಲಿ ಟಾರ್ಕ್ ಎಲೆಕ್ಟ್ರಿಕ್ ಅನ್ನು ಸ್ಥಾಪಿಸಿದರು.

"ಕೆಲವು ವರ್ಷಗಳ ಹಿಂದೆ, ನಾನು ಟಾಟಾ ನೆಕ್ಸಾನ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದೆ. ವಾಹನ ನನಗೆ ಇಷ್ಟವಾದರೂ ಕೂಡ ಅಸ್ತಿತ್ವದಲ್ಲಿರುವ ವಾಹನಗಳನ್ನು ಪರಿವರ್ತಿಸುವ ತಂತ್ರಜ್ಞಾನವಿದ್ದರೆ ನಾವು ಹೊಸ ಇವಿಯನ್ನು ಏಕೆ ಖರೀದಿಸಬೇಕು?’ ಎಂದು ನಾನು ಯೋಚಿಸಿದೆ. ಇದು ನನ್ನ ಆವಿಷ್ಕಾರಕ್ಕೆ ಕಾರಣವಾಯಿತು” ಎಂದು ಅವರು  ತಿಳಿಸಿದರು.

ವಾಹನ ಹಳೆಯದಾಗುತ್ತಿದ್ದಂತೆ ಅಥವಾ 15 ವರ್ಷ ಆಗುತ್ತಿದ್ದಂತೆ ಯಾವುದೇ ವಾಹನವಿರಲಿ ಹೆಚ್ಚಿನ ಇಂಧನವನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಮಾಲಿನ್ಯಕ್ಕೂ ಕಾರಣವಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಜನ ತಮ್ಮ ವಾಹನಗಳನ್ನು ಗುಜರಿಗೆ ಹಾಕುತ್ತಾರೆ. ಅಷ್ಟೆಲ್ಲಾ ಹಣ ನೀಡಿ ವಾಹನವನ್ನು ಗುಜರಿಗೆ ಹಾಕುವುದು ಕಷ್ಟ ಆಗಬಹುದು. ಹೀಗಾಗಿ ಇದರ ಬದಲು ಬೈಕ್‌ ಅನ್ನು ಎಲೆಕ್ಟ್ರಾನಿಕ್ ವಾಹನವನ್ನಾಗಿ ಪರಿವರ್ತಿಸಲು ಅಹ್ಮದ್‌ ಖಾನ್‌ ನಿರ್ಧರಿಸಿ, ಆವಿಷ್ಕಾರವನ್ನು ಯಶಸ್ವಿಯಾಗಿಸಿದ್ದಾರೆ.

60,000 ರೂಪಾಯಿಗಳ ವೆಚ್ಚದೊಂದಿಗೆ ಬೈಕ್‌ ಮಾರ್ಪಾಡು

27 ಆಗಸ್ಟ್ 2021 ರಂದು ಎಂಜಿನಿಯರ್‌ ಅಹ್ಮದ್‌ ಖಾನ್ ಅವರು 60,000 ರೂಪಾಯಿಗಳ ವೆಚ್ಚದೊಂದಿಗೆ ಹಳೆಯ ಪೆಟ್ರೋಲ್ ಸ್ಕೂಟರ್ ಅನ್ನು ಮಾರ್ಪಡಿಸಿ ಇವಿಯನ್ನು ತಯಾರಿಸಿದರು. ಯುವಕನ ಈ ಆವಿಷ್ಕಾರ ಮಾಧ್ಯಮಗಳಲ್ಲಿ ಸೇರಿ ಎಲ್ಲೆಡೆ ಸಾಕಷ್ಟು ಸುದ್ದಿಯಾಗಿತ್ತು.

ಏಳು ಬೈಕ್‌ಗಳನ್ನು ಇವಿಯಾಗಿ ಪರಿವರ್ತಿಸುವಲ್ಲಿ ಎಂಜಿನಿಯರ್ ಯಶಸ್ವಿ

ಮಾಜ್ ಅವರು ಇದುವರೆಗೆ ಏಳು ಬೈಕ್‌ಗಳನ್ನು ಇವಿಯಾಗಿ ಪರಿವರ್ತಿಸಿದ್ದಾರೆ ಮತ್ತು ಇನ್ನೂ 15 ಬೈಕ್‌ಗಳಿಗೆ ಆರ್ಡರ್ ಪಡೆದಿದ್ದಾರೆ ಎಂದು ತಿಳಿಸಿದರು. ಹೊಸ ಆವಿಷ್ಕಾರಗಳು, ಕೆಲಸದ ಜೊತೆ ಅಹ್ಮದ್‌ ಖಾನ್‌ ಹೆಚ್ಚುವರಿಯಾಗಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇವಿಗೆ ಸಂಬಂಧಿಸಿದ ಕಾಲೇಜು ಪ್ರಾಜೆಕ್ಟ್‌ಗಳಿಗೆ ಸಹಾಯ ಮಾಡುತ್ತಾರೆ ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡುತ್ತಾರೆ.

‌ಉತ್ತಮ ಪರಿಸರಕ್ಕಾಗಿ ಇವಿ

ದ್ವಿಚಕ್ರ ವಾಹನವನ್ನು ಇವಿಯಾಗಿ ಪರಿವರ್ತಿಸುವ ಕೆಲಸ ಕೇವಲ 5-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆಯಾದರೂ, ಸವಾರಿ ಮಾಡಿದ ನಂತರ ವಾಹನದ ಸುರಕ್ಷತೆಯನ್ನು ಪರಿಶೀಲಿಸಲು ಮತ್ತು ಖಚಿತಪಡಿಸಿಕೊಳ್ಳಲು ಎರಡು ದಿನ ಬೇಕು ಎಂದು ಯುವ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ವಾಹನ ವಿಮೆಯನ್ನು ಖರೀದಿಸುವಾಗ ಜೋಪಾನ, ಈ ರೀತಿಯಲ್ಲಾ ಯಾಮಾರಿಸುತ್ತಾರೆ!

ಅಹ್ಮದ್‌, ಸಂಪೂರ್ಣ ವಿದ್ಯುತ್ ಮತ್ತು ಹೈಬ್ರಿಡ್ ವಾಹನ ಎಂಬ ಎರಡು ರೀತಿಯ ಮಾದರಿಗಳೊಂದಿಗೆ ಬೈಕ್‌ ಗಳನ್ನು ಪರಿವರ್ತಿಸುತ್ತಾರೆ. ಯಾವುದೇ ರೀತಿಯ ದ್ವಿಚಕ್ರ ವಾಹನವನ್ನು ಸಂಪೂರ್ಣ ಎಲೆಕ್ಟ್ರಿಕ್ ಇವಿ ಆಗಿ ಪರಿವರ್ತಿಸಲು 50 ಸಾವಿರ ವೆಚ್ಚವಾದರೆ, ಹೈಬ್ರಿಡ್‌ ಮಾದರಿಗೆ 55 ಸಾವಿರ ವೆಚ್ಚವಾಗುತ್ತದೆ.

45 ಕಿಮೀ ಇಂದ 75 ಚಲಿಸುವ ವಾಹನ

“ಸಂಪೂರ್ಣ ವಿದ್ಯುತ್ ದ್ವಿಚಕ್ರ ವಾಹನಗಳಲ್ಲಿ, ಎಂಜಿನ್ ಮತ್ತು ಇಂಧನ ಟ್ಯಾಂಕ್ ಅನ್ನು ಶಕ್ತಿಯುತ ಮೋಟಾರ್ ಮತ್ತು ಬ್ಯಾಟರಿಗಳೊಂದಿಗೆ ಬದಲಾಯಿಸಲಾಗುತ್ತದೆ. ಹೈಬ್ರಿಡ್ ಪರಿವರ್ತನೆಯಲ್ಲಿ, ಅಸ್ತಿತ್ವದಲ್ಲಿರುವ ಎಂಜಿನ್‌ಗೆ ಮೋಟಾರ್ ಮತ್ತು ಬ್ಯಾಟರಿಯನ್ನು ಸೇರಿಸಲಾಗುತ್ತದೆ. ಇದು ಎಲೆಕ್ಟ್ರಿಕ್ ಪವರ್ ಮತ್ತು ಇಂಜಿನ್ ಪವರ್ ಎರಡರಲ್ಲೂ ಚಾಲನೆ ಮಾಡುವ ನಮ್ಯತೆಯನ್ನು ನೀಡುತ್ತದೆ,”ಎಂದು ಎಂಜಿನಿಯರ್ ಹೇಳುತ್ತಾರೆ.ವಾಹನದ ಮೂಲ ರೂಪಾಂತರವು ಚಾರ್ಜ್ ಮಾಡಲು ಮೂರರಿಂದ ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸರಾಸರಿ ಒಂದು ಗಂಟೆಗೆ 45 ಕಿಮೀ ಇಂದ 75 ಕಿಮೀ ವರೆಗೆ ಓಡಬಹುದು ಎಂದು ಅಹ್ಮದ್ ಹೇಳುತ್ತಾರೆ. ‌

ಇದನ್ನೂ ಓದಿ: ಬೆಳಗಾವಿ, ಬಳ್ಳಾರಿಯಲ್ಲಿ ಪೆಟ್ರೋಲ್‌ ಬೆಲೆ ಇಳಿಕೆ, ಉಳಿದೆಡೆ ಹೇಗಿದೆ?

ಆಟೋ, ಕಾರುಗಳಲ್ಲೂ ತಂತ್ರಜ್ಞಾನ ಅಳವಡಿಸಲು ಯೋಜನೆ.

ಅಹ್ಮದ್‌ ಖಾನ್‌ ಪ್ರಸ್ತುತ ಆವಿಷ್ಕಾರವನ್ನು ಮೂರು ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ವಿಸ್ತರಿಸಲು ಕೂಡ ಯೋಜಿಸಿದ್ದಾರೆ. “ಇಂಧನ ಬೆಲೆ ಏರಿಕೆಯು ದೇಶದ ಆಟೋ ಚಾಲಕರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ತಮ್ಮ ವಾಹನವನ್ನು ಇವಿಗಳಿಗೆ ಬದಲಾಯಿಸಿದರೆ, ಅವರು ದಿನಕ್ಕೆ ಸುಮಾರು 400 ರೂಗಳನ್ನು ಉಳಿಸಬಹುದು. ಹೀಗಾಗಿ ತ್ರಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಆವಿಷ್ಕಾರ ಪ್ರಾರಂಭಿಸುವುದು ನನ್ನ ಯೋಜನೆಯಾಗಿದೆ, ”ಎಂದು 23 ವರ್ಷದ ಎಂಜಿನಿಯರ್ ಹೇಳುತ್ತಾರೆ.
First published: