EPFO ಹೆಚ್ಚಿನ ಪಿಂಚಣಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

 ಹೆಚ್ಚಿನ ಪಿಂಚಣಿ ಸೌಲಭ್ಯಕ್ಕೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ (ಸಾಂದರ್ಭಿಕ ಚಿತ್ರ)

ಹೆಚ್ಚಿನ ಪಿಂಚಣಿ ಸೌಲಭ್ಯಕ್ಕೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ (ಸಾಂದರ್ಭಿಕ ಚಿತ್ರ)

ಹೆಚ್ಚಿನ ಪಿಂಚಣಿ ಆಯ್ಕೆಯ ಅಡಿಯಲ್ಲಿ, EPS ಕೊಡುಗೆ ಮೊತ್ತವು ಹೆಚ್ಚಾಗುತ್ತದೆ ಏಕೆಂದರೆ ಉದ್ಯೋಗಿಗಳು ವಾಸ್ತವಿಕ ಮೂಲ ವೇತನ + ತುಟ್ಟಿಭತ್ಯೆಯ 8.33% ರಷ್ಟು ಕೊಡುಗೆ ನೀಡುವ ಆಯ್ಕೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಕೊಡುಗೆಯು ಹೆಚ್ಚಿನ ಪಿಂಚಣಿಗೆ ಕಾರಣವಾಗುತ್ತದೆ.

  • Share this:

EPFO ನ ಹೆಚ್ಚಿನ ಪಿಂಚಣಿ (Pension) ಆಯ್ಕೆಗೆ ಅರ್ಜಿ ಸಲ್ಲಿಸುವ ಲಿಂಕ್ ಇದೀಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇತ್ತೀಚೆಗೆ ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ನೀಡುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಿವೃತ್ತಿ ನಿಧಿ ಸಂಸ್ಥೆಯು ಏಕೀಕೃತ ಸದಸ್ಯರ ಪೋರ್ಟಲ್‌ನ (EPFO Portal) ಯುಆರ್‌ಎಲ್ ಅನ್ನು ಸಕ್ರಿಯಗೊಳಿಸಿದೆ ಅಂತೆಯೇ ಹೆಚ್ಚಿನ ಪಿಂಚಣಿಯನ್ನು ಬಯಸುವ ಚಂದಾದಾರರು ಮೇ 3, 2023 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.


ಹೆಚ್ಚಿನ ಕೊಡುಗೆಯು ಹೆಚ್ಚಿನ ಪಿಂಚಣಿಗೆ ಕಾರಣ


ಪ್ರಸ್ತುತ, ಉದ್ಯೋಗದಾತರು ನೀಡಿದ ಕೊಡುಗೆಯ 8.33% EPS ಖಾತೆ ಸೇರುತ್ತದೆ. ಆದಾಗ್ಯೂ, ಗರಿಷ್ಠ ಪಿಂಚಣಿ ವೇತನವನ್ನು ರೂ 15,000 ಕ್ಕೆ ಮಿತಿಗೊಳಿಸಿರುವುದರಿಂದ, ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿ EPS ಖಾತೆಗೆ ಮಾಸಿಕ ಕೊಡುಗೆ ಕೇವಲ ರೂ 1250 ಮಾತ್ರವಾಗಿರುತ್ತದೆ.


ಹೆಚ್ಚಿನ ಪಿಂಚಣಿ ಆಯ್ಕೆಯ ಅಡಿಯಲ್ಲಿ, EPS ಕೊಡುಗೆ ಮೊತ್ತವು ಹೆಚ್ಚಾಗುತ್ತದೆ ಏಕೆಂದರೆ ಉದ್ಯೋಗಿಗಳು ವಾಸ್ತವಿಕ ಮೂಲ ವೇತನ + ತುಟ್ಟಿಭತ್ಯೆಯ 8.33% ರಷ್ಟು ಕೊಡುಗೆ ನೀಡುವ ಆಯ್ಕೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಕೊಡುಗೆಯು ಹೆಚ್ಚಿನ ಪಿಂಚಣಿಗೆ ಕಾರಣವಾಗುತ್ತದೆ.


(ಸಾಂದರ್ಭಿಕ ಚಿತ್ರ)


ಸಂಸ್ಥೆಯೇ ಹೆಚ್ಚಿನ ಪಿಂಚಣಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದರೂ ಅನೇಕ ಪಿಂಚಣಿದಾರರು ಅರ್ಜಿ ಸಲ್ಲಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಹಾಗಿದ್ದರೆ ಈ ಲೇಖನ ನಿಮ್ಮ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವುದು ಖಂಡಿತ.




ಯಾರು ಅರ್ಜಿ ಸಲ್ಲಿಸಬಹುದು?


ತಮ್ಮ ನಿವೃತ್ತಿಯ ನಂತರದ ಜೀವನಕ್ಕೆ ನೆರವಾಗಿರುವ ಬೇರೆ ಯಾವುದೇ ಪಿಂಚಣಿ ಆಯ್ಕೆಗಳು ಅಥವಾ ಇತರ ಹೂಡಿಕೆಗಳನ್ನು ಹೊಂದಿರದ ಚಂದಾದಾರರಿಗೆ ಈ ಆಯ್ಕೆಯು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.


ಇಲ್ಲಿ ಅರ್ಥೈಸಿಕೊಳ್ಳಬೇಕಾದ ಅಂಶವೆಂದರೆ ಹೆಚ್ಚಿನ ಪಿಂಚಣಿ ಮೊತ್ತವು ನಿಮ್ಮದೇ ಹಣದಿಂದ ಬರುವುದಾಗಿದೆ ಎಂದಾಗಿದೆ ಅಂದರೆ ನೀವು ಇಲ್ಲಿಯವರೆಗೆ ಹಾಗೂ ಮುಂಬರುವ ವರ್ಷಗಳಲ್ಲಿ EPF ಖಾತೆಗೆ ಸಲ್ಲಿಸುವ ಮೊತ್ತವಾಗಿರುತ್ತದೆ.


ಹೆಚ್ಚುವರಿ ಪಿಂಚಣಿಯ ಸಮಯದಲ್ಲಿ ನೌಕರರು EPS ಖಾತೆಗೆ ಕಡಿಮೆ ಹಣ ನೀಡಿದಾಗ ಈ ಮೊತ್ತವನ್ನು ಸರಿದೂಗಿಸಲು EPFO ಯು ನಿಮ್ಮ ಪಿಎಫ್ ಖಾತೆಯಿಂದ ಹಣವನ್ನು EPS ಖಾತೆಗೆ ಸರಿಸುತ್ತದೆ.


ಹಾಗಾಗಿ ಹೆಚ್ಚಿನ ಪಿಂಚಣಿ ಆಯ್ಕೆಯು ದೊಡ್ಡ ಮೊತ್ತದ ಬದಲಿಗೆ ನಿವೃತ್ತಿಯ ಮೇಲೆ ಹೆಚ್ಚಿನ ಪಿಂಚಣಿಯನ್ನು ಬಯಸುವ ಚಂದಾದಾರರಿಗೆ ಪ್ರಯೋಜನವನ್ನು ನೀಡುತ್ತದೆ.


ಯಾರು ಅರ್ಜಿ ಸಲ್ಲಿಸಬಾರದು?


ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವನ್ನು ಬಯಸಿದರೆ, ಹೆಚ್ಚಿನ ಪಿಂಚಣಿ ಆಯ್ಕೆ ಸೂಕ್ತವಾದುದಲ್ಲ. ಅನ್ವಯವಾಗುವ ಆದಾಯ ಶ್ರೇಣಿ ದರಗಳಲ್ಲಿ ಮಾಸಿಕ ಪಿಂಚಣಿಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಬಜೆಟ್ 2023 ರಲ್ಲಿ ಪ್ರಮಾಣಿತ ಕಡಿತ ಪಿಂಚಣಿದಾರರನ್ನು ಒದಗಿಸಲು ಸರ್ಕಾರವು ಪ್ರಸ್ತಾಪಿಸಿದೆ.


ಇದನ್ನೂ ಓದಿ: EPFO Pension Scheme: ನೌಕರರ ಭವಿಷ್ಯ ನಿಧಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ, ಹೆಚ್ಚಿನ ಪಿಂಚಣಿ ಬೇಕಾದ್ರೆ ಹೀಗೆ ಮಾಡಿ


ಈಗಾಗಲೇ EPS ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು ಮತ್ತು ವಿಧವೆಯರು ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಿದರೆ ಅವರಿಗೆ ಸಂಪೂರ್ಣ ಅಥವಾ EPFO ಸೂಚಿಸಿದಷ್ಟು ಮೊತ್ತವನ್ನು ಹಿಂದಿರುಗಿಸುವುದು ಸಾಧ್ಯವಿಲ್ಲದ ಕಾರಣ ಈ ಯೋಜನೆ ಅನುಕೂಲಕ್ಕಿಂತ ಅನಾನುಕೂಲವನ್ನುಂಟು ಮಾಡಬಹುದು.


(ಸಾಂದರ್ಭಿಕ ಚಿತ್ರ)


ನಿಮ್ಮದೇ ಹಣ ಎಂಬುದು ನೆನಪಿರಲಿ


ಹೆಚ್ಚಿನ ಪಿಂಚಣಿ ಎಂಬುದು ನಿಮ್ಮದೇ ಹಣದಿಂದ ಬರುವ ಸೌಲಭ್ಯವಾಗಿದ್ದು ಸರಕಾರವಾಗಲೀ, EPFO ಸಂಸ್ಥೆಯಾಗಲೀ ಅಥವಾ ಉದ್ಯೋಗದಾತರು ಈ ವಿಷಯದಲ್ಲಿ ಹೆಚ್ಚುವರಿ ಹಣವನ್ನು ಪಾವತಿಸುವುದಿಲ್ಲ ಹಾಗಾಗಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ನೀಡಿದಾಗ ಮತ್ತೊಂದು ಖಾತೆಯಲ್ಲಿ ಹಣ ಕಡಿಮೆ ಜಮೆಯಾಗುತ್ತದೆ.


ಈ ಸಮಯದಲ್ಲಿ ಅಧಿಕ ಮೊತ್ತದ ಪಿಎಫ್ ಖಾತೆಯಲ್ಲಿ ನೀವು ರಾಜಿಮಾಡಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.

Published by:Mahmadrafik K
First published: