Petrol Bumper Offer: ಲೀಟರ್ ಪೆಟ್ರೋಲ್ಗೆ 25 ರೂ ಕಡಿತ; ದ್ವಿಚಕ್ರ ವಾಹನಗಳಿಗೆ ಮಾತ್ರ ಆಫರ್
Rs 25 Concession on Petrol: ಜಾರ್ಖಂಡ್ ಸರ್ಕಾರ ಎರಡು ವರ್ಷದ ಆಡಳಿತ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸಿಎಂ ಹೇಮಂತ್ ಸೊರೇನ್ ಅವರು ದ್ಚಿಚಕ್ರ ವಾಹನಗಳಿಗೆ ಒಂದು ಲೀಟರ್ ಪೆಟ್ರೋಲ್ಗೆ 25 ರೂ ಕಡಿತ ಮಾಡಿದ್ಧಾರೆ.
ರಾಂಚಿ, ಡಿ. 29: ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ (Petrol and Diesel Price Rise) ಕಂಗೆಟ್ಟಿದ್ದ ಜನರು ಈಗ ತುಸು ನಿರಾಳವಾಗಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತನ್ನ ಅಬಕಾರಿ ಸುಂಕವನ್ನು (Excise Duty) ಕಡಿಮೆಗೊಳಿಸಿತು. ಅದರ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನ (VAT) ಇಳಿಕೆ ಮಾಡಿವೆ. 115 ರೂಪಾಯಿಯವರೆಗೂ ಏರಿಕೆಯಾಗಿದ್ದ ಪೆಟ್ರೋಲ್ ಬೆಲೆ ಈಗ ನೂರರ ಆಸುಪಾಸಿನಲ್ಲಿದೆ. ಇದೀಗ ಜಾರ್ಖಂಡ್ ಸರ್ಕಾರ ತನ್ನ ರಾಜ್ಯದ ಜನರಿಗೆ ಬಂಪರ್ ಕೊಡುಗೆ ಕೊಡಲು ಹೊರಟಿದೆ. ಒಂದು ಲೀಟರ್ ಪೆಟ್ರೋಲ್ ಮೇಲೆ 25 ರೂ ಕಡಿತ ಮಾಡುವುದಾಗಿ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪೆಟ್ರಳಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚು ಬಾಧಿತವಾಗಿದೆ. ರಾಜ್ಯ ಮಟ್ಟದಲ್ಲಿ ಟೂವೀಲರ್ಗಳಿಗೆ ಒಂದು ಲೀಟರ್ ಪೆಟ್ರೋಲ್ ಮೇಲೆ 25 ರೂ ಬೆಲೆ ಕಡಿತವನ್ನು ಸರ್ಕಅರ ಮಾಡಲಿದೆ. 2022ರ ಜನವರಿ 26ರಿಂದ ಈ ಕೊಡುಗೆ ಸಿಗಲಿದೆ ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೋರೇನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಜಾರ್ಖಂಡ್ ಸರ್ಕಾರ ಪೆಟ್ರೋಲ್ ಬೆಲೆ ಕಡಿತ ಮಾಡುತ್ತಿರುವುದು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ. ಕಾರು ಅಥವಾ ಬೇರೆ ಯಾವುದೇ ದೊಡ್ಡ ವಾಹನಗಳಿಗೆ ಈ ಆಫರ್ ಅಲ್ಲ. ಪೆಟ್ರೋಲ್ ಹಾಕಲಾಗುವ ದ್ವಿಚಕ್ರ ವಾಹನಗಳಿಗೆ ಮಾತ್ರವೇ 25 ರೂ ಪೆಟ್ರೋಲ್ ಬೆಲೆ ಕಡಿಮೆ. ಜನವರಿ 26ರಿಂದ ಈ ಹೊಸ ಕೊಡುಗೆ ಜನರಿಗೆ ಲಭ್ಯವಾಗಲಿದೆ.
Jharkhand government has decided to give a concession of Rs 25 per litre petrol to motorcycles and scooter riders. This will be implemented from 26th January 2022: Hemant Soren, Chief Minister, Jharkhand pic.twitter.com/eIuJWq6T16
ಕೇಂದ್ರ ಸರ್ಕಾರ ಕಳೆದ ತಿಂಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಐದು ಮತ್ತು ಹತ್ತು ರೂ ಗಳಷ್ಟು ಕಡಿಮೆ ಮಾಡಿತು. ಅದರ ಬೆನ್ನಲ್ಲೇ ಹಲವು ರಾಜ್ಯಗಳು ತಮ್ಮ ಮೌಲ್ಯ ವರ್ಧಿತ ತೆರಿಗೆ (VAT) ಕಡಿತ ಮಾಡಿವೆ.
ಬೆಂಗಳೂರಿನಲ್ಲಿ ಸದ್ಯ ಒಂದು ಲೀಟರ್ ಪೆಟ್ರೋಲ್ 100.58 ರೂ ಬೆಲೆ ಇದೆ. ಡೀಸೆಲ್ 85.01 ರೂ ಇದೆ. ಜಾರ್ಖಂಡ್ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಸುಮಾರು 99 ರೂ ಆಸುಪಾಸಿನಲ್ಲಿ ಇದೆ. ಜನವರಿಯಲ್ಲಿ ಇದೇ ಬೆಲೆ ಮುಂದುವರಿದಲ್ಲಿ ಜಾರ್ಖಂಡ್ನಲ್ಲಿ ದ್ವಿಚಕ್ರ ವಾಹನ ಸವಾರರು 75 ರೂಪಾಯಿ ಬೆಲೆಗೆ ಪೆಟ್ರೋಲ್ ಹಾಕಿಸಿಕೊಳ್ಳಬಹುದು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ