ಇತ್ತೀಚೆಗೆ ತಂತ್ರಜ್ಞಾನ ಕಂಪೆನಿಗಳು (Technology Company) ತನ್ನ ಕಂಪೆನಿಯ ಏಳಿಗೆಗೆ ಕಂಪೆನಿಯ ಉದ್ಯೋಗಿಗಳ ವಜಾ ನಿರ್ಧಾರವನ್ನು ಕೈಗೊಂಡಿದೆ. ಅದರಲ್ಲೂ ಗೂಗಲ್, ಅಮೆಜಾನ್, ಟ್ವಿಟರ್ ಈ ಪ್ರಕ್ರಿಯೆಯಲ್ಲಿ ಭಅರೀ ಮುಂಚೂಣಿಯಲ್ಲಿದೆ ಎಂದು ಹೇಳ್ಬಹುದು. ದೇಶದ ಆರ್ಥಿಕ ಪರಿಸ್ಥಿತಿ ಭಾರೀ ನಷ್ಟವನ್ನು ಕಾಣಬೇಕಾದರೆ, ಇಲ್ಲಿ ಕೆಲವೊಂದು ಕಂಪೆನಿಗಳುಸಹ ಆರ್ಥಿಕತೆಯಲ್ಲಿ ಭಾರೀ ಹಿನ್ನಡೆಯಲ್ಲಿದೆ. ಇದರ ಪರಿಣಾಮ ವಾಗಿ ಕಳೆದ ವರ್ಷ ಸಾಕಷ್ಟು ಕಂಪೆನಿಗಳು ತನ್ನ ಕಂಪೆನಿಯ ಉದ್ಯೋಗಿಗಳನ್ನು ವಜಾ ಮಾಡಿತ್ತು. ಅದೇ ರೀತಿ ಈ ವರ್ಷವೂ ಅಮೆಜಾನ್ (Amazon), ಮೈಕ್ರೋಸಾಫ್ಟ್ನಂತಹ ತಂತ್ರಜ್ಞಾನ ಕಂಪೆನಿಗಳು ಸಹ ವಜಾ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಮಧ್ಯೆ ಗುಜರಾತ್ನ ಟೆಕ್ ಕಂಪೆನಿಯೊಂದು (TridhyaTech Company) ತನ್ನ ಉದ್ಯೋಗಿಗಳಿಗೆ ಕಾರನ್ನೇ ಗಿಫ್ಟ್ (Car Gift) ಮಾಡಿದೆ.
ಹೌದು, ಗುಜರಾತ್ನ ಅಹಮದಾಬಾದದನಲ್ಲಿರುವ ತ್ರಿದ್ಯಾ ಇನ್ಫೋಟೆಕ್ ಕಂಪನಿಯ ಸಿಇಒ ಆಗಿರುವಂತಹ ರಮೇಶ್ ಮರಂದ್ ಕಂಪನಿಯಲ್ಲಿ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿರುವ 13 ಮಂದಿ ಉದ್ಯೋಗಿಗಳಿಗೆ ಟೊಯೊಟಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಏನಿದು ತ್ರಿದ್ಯಾ ಇನ್ಫೋಟೆಕ್ ಕಂಪೆನಿ?
ಗುಜರಾತ್ನ ಅಹಮದಾಬಾದ್ನಲ್ಲಿರುವ ಈ ತ್ರಿದ್ಯಾ ಇನ್ಫೋಟೆಕ್ ಕಂಪೆನಿಯು ಆರೋಗ್ಯ, ವಿಮೆ, ಚಿಲ್ಲರೆ ಮಾರಾಟ ಮತ್ತು ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಫ್ಟ್ವೇರ್ ಅನ್ನು ಅಭಿವೃದ್ಧಿ ಪಡಿಸುತ್ತದೆ. ಇನ್ನು ಈ ಕಂಪೆನಿ ಏಷ್ಯಾ, ಯುರೋಪ್ ಹಾಗೂ ಆಸ್ಟ್ರೇಲಿಯಾದಲ್ಲಿ ಬಹಳಷ್ಟು ಗ್ರಾಹಕರನ್ನು ಹೊಂದಿದೆ. ಇನ್ನು ಉದ್ದಿಮೆಗಳಿಗೆ ತಂತ್ರಜ್ಞಾನd ಮೂಲಕ ಸಹಾಯವನ್ನೂ ಈ ಕಂಪೆನಿ ಮಾಡುತ್ತದೆ.
ಕಾರು ಗಿಫ್ಟ್ ಬಗ್ಗೆ ಸಿಇಓ ಅವರ ಅಭಿಪ್ರಾಯ
ಇನ್ನು ತನ್ನ ಉದ್ಯೋಗಿಗಳಿಗೆ ಕಾರು ನೀಡಿದ ತ್ರಿದ್ಯಾ ಇನ್ಫೋಟೆಕ್ ಕಂಪೆನಿಯ ಸಿಇಓ ರಮೇಶ್ ಮರಂದ್ ಅವರು, ಇಲ್ಲಿ ಕಾರು ಉಡುಗೊರೆ ಪಡೆದ ಉದ್ಯೋಗಿಗಳು ಕಂಪೆನಿಯಲ್ಲಿ ಆರಂಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಸ್ಥಿರವಾದ ಉದ್ಯೋಗವನ್ನು ಬಿಟ್ಟು ನಮ್ಮ ಕಂಪೆನಿಯ ಸ್ಟಾರ್ಟಪ್ ಉದ್ಯೋಗಕ್ಕೆ ಸೇರಿದ ಇವರೆಲ್ಲ ನಮ್ಮ ಕಂಪೆನಿಯ ಯಶಸ್ಸಿಗಾಗಿ ಬಹಳಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ ಮತ್ತು ಕಂಪೆನಿಯ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದ್ದಾರೆ.
ಉದ್ಯೋಗಿಗಳಿಂದ ಕೃತಜ್ಞತೆ
13 ಉದ್ಯೋಗಿಗಳಲ್ಲಿ ಒಬ್ಬರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, "ಎಲ್ಲರ ಶ್ರಮವನ್ನು ಇಲ್ಲಿ ಪ್ರಶಂಸಿಸಲಾಗಿದೆ, ನಾವು ಪಟ್ಟ ಶ್ರಮಕ್ಕೆ ಮೆಚ್ಚುಗೆ ಮತ್ತು ಇದರ ಫಲಿತಾಂಶವನ್ನು ಈ ರೀತಿ ಪಡೆಯುವುದು ಅದ್ಭುತವಾಗಿದೆ. ಎಂದು ಹೇಳಿದ್ದಾರೆ.
ರಮೇಶ್ ಮರಂದ್ ಯಾರು?
ರಮೇಶ್ ಮರಂದ್ ಅವರು ತ್ರಿದ್ಯಾ ಇನ್ಫೋಟೆಕ್ ಕಂಪೆನಿಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮ ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಇವರು 12 ವರ್ಷಗಳ ಉದ್ಯೋಗದ ಅನುಭವವನ್ನು ಪಡೆದಿದ್ದಾರೆ.
ಬ್ರಿಟನ್ ಮೂಲದ ಸಾಫ್ಟ್ವೇರ್ ಉತ್ಪನ್ನ ಅಭಿವೃದ್ಧಿ ಕಂಪನಿ ಶಾಲಿಗ್ರಾಮ್ ಇನ್ಫೋಟೆಕ್ನ ಸಹಭಾಗಿತ್ವವನ್ನೂ ಸಹ ಹೊಂದಿದ್ದಾರೆ. ಲಿಂಕ್ಡ್ಇನ್ನಲ್ಲಿ 30,000 ಫಾಲೋವರ್ಗಳನ್ನು ಹೊಂದಿರುವ ಇವರು, ‘ನನ್ನ ಕನಸನ್ನು ನನಸು ಮಾಡುವುದಕ್ಕಾಗಿ ಶ್ರಮಿಸುತ್ತಿದ್ದೇನೆ. ಈ ವಿಚಾರದಲ್ಲಿ ನಾನು ಸ್ವಾರ್ಥಿಯೂ ಹೌದು. ಆದರೆ, ನಾನು ಪ್ರಾಮಾಣಿಕ. ಗ್ರಾಹಕರಿಗೆ, ಸ್ನೇಹಿತರಿಗೆ ಬದ್ಧನಾಗಿರುವ ಮೊದಲು ನನಗಾಗಿ ಬದ್ಧತೆಯಿಂದಿರುತ್ತೇನೆ’ ಎಂದು ತಮ್ಮ ಬಗ್ಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 1 ತಿಂಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲ್ಯಾನ್ಸ್ ಇಲ್ಲಿದೆ! ಅಗ್ಗದ ಬೆಲೆಯಲ್ಲಿ ಲಭ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ