• Home
  • »
  • News
  • »
  • business
  • »
  • Layoff: ಏಕಾಏಕಿ 2700 ಉದ್ಯೋಗಿಗಳನ್ನು ವಜಾ ಮಾಡಿದ ಕಂಪನಿ, ಮಧ್ಯರಾತ್ರಿ ಮೆಸೇಜ್ ನೋಡಿ ಶಾಕ್!

Layoff: ಏಕಾಏಕಿ 2700 ಉದ್ಯೋಗಿಗಳನ್ನು ವಜಾ ಮಾಡಿದ ಕಂಪನಿ, ಮಧ್ಯರಾತ್ರಿ ಮೆಸೇಜ್ ನೋಡಿ ಶಾಕ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲೋನ್ ಮಸ್ಕ್ ಟ್ವಿಟ್ಟರ್ ನ ನೇತೃತ್ವವನ್ನು ವಹಿಸಿಕೊಂಡ ಕೂಡಲೇ ಟ್ವಿಟ್ಟರ್ ನ 7,500 ಸಿಬ್ಬಂದಿಗಳಲ್ಲಿ ಸುಮಾರು 50 ಪ್ರತಿಶತದಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

  • Share this:

ಈಗಂತೂ ಈ ಖಾಸಗಿ ಕಂಪನಿಗಳ(Private Company) ಉದ್ಯೋಗಿಗಳಿಗೆ ಕಾಡುತ್ತಿರುವ ಬಹುದೊಡ್ಡ ಆತಂಕ ಮತ್ತು ಭಯ ಅಂತ ಹೇಳಿದರೆ ಅದು ‘ತಮ್ಮನ್ನೆಲ್ಲಿ ಕೆಲಸದಿಂದ ತೆಗೆದುಹಾಕಿ ಬಿಡುತ್ತಾರೆ’ ಅನ್ನೋದು ಅಂತ ಹೇಳಬಹುದು. ದೊಡ್ಡ ದೊಡ್ಡ ಐಟಿ ಕಂಪನಿಗಳು(IT Company) ಈಗಾಗಲೇ ತಮ್ಮ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದನ್ನು(Layoff) ನಾವೆಲ್ಲಾ ನೋಡಿದ್ದೇವೆ ಮತ್ತು ಕೇಳಿದ್ದೇವೆ.


ಹೌದು.. ಯಾವ ಕ್ಷಣದಲ್ಲಿ ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ ಗೊತ್ತಿಲ್ಲ ಅಂತಹ ಒಂದು ಕ್ಲಿಷ್ಟಕರವಾದ ಸಂದರ್ಭಗಳಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕೆಲ ಕಂಪನಿಗಳಲ್ಲಿ ಅಧಿಕೃತವಾಗಿ ಉದ್ಯೋಗಿಗಳಿಗೆ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗಲೇ ಇ-ಮೇಲ್ ಕಳುಹಿಸುವುದರ ಮೂಲಕ ಕೆಲಸದಿಂದ ವಜಾ ಮಾಡಿರುವ ಸುದ್ದಿಯನ್ನು ತಿಳಿಸಿದರೆ, ಇನ್ನೂ ಕೆಲವು ಕಂಪನಿಗಳು ಚಿತ್ರ-ವಿಚಿತ್ರವಾಗಿ ತಮ್ಮ ಉದ್ಯೋಗಿಗಳಿಗೆ ಮನೆಗೆ ಹೋಗುವಂತೆ ಹೇಳುತ್ತಿವೆ.


ಕಂಪನಿಗಳು ಉದ್ಯೋಗಿಗಳಿಗೆ ಹೇಗೆಲ್ಲಾ ಲೇ-ಆಫ್ ಶಾಕ್ ನೀಡಿದ್ದಾರೆ ನೋಡಿ..


ಥ್ಯಾಂಕ್ಸ್​​ಗಿವಿಂಗ್ ಹೇಳುವ ಕಾರ್ಯಕ್ರಮಕ್ಕೂ ಮುನ್ನ, ಅಮೆರಿಕದ ಪೀಠೋಪಕರಣ ಕಂಪನಿಯೊಂದು ತನ್ನೆಲ್ಲಾ ಉದ್ಯೋಗಿಗಳಿಗೆ ನಿಮ್ಮನ್ನೆಲ್ಲಾ ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಆಘಾತಕಾರಿ ಸಂದೇಶವನ್ನು ಕಳುಹಿಸಿದೆ.


ಡೆಲಿವರಿ ನೀಡಲು ಹೋದಂತಹ ಎಷ್ಟೋ ಜನ ಚಾಲಕರಿಗೆ ಹಾಗೆಯೇ ಮನೆಗೆ ಹೋಗಿ ನೀವು ಅಂತ ತಿಳಿಸಲಾಯಿತು ಎಂದು ಎನ್‌ಬಿಸಿಯ ಅಂಗ ಸಂಸ್ಥೆಯಾದ ಡಬ್ಲ್ಯುಎಲ್‌ಬಿಟಿಯು ವರದಿ ಮಾಡಿದೆ. ಹಾಗೆಯೇ ಇನ್ನೊಂದಿಷ್ಟು ಉದ್ಯೋಗಿಗಳು ಸೋಮವಾರ ಮಧ್ಯರಾತ್ರಿ ತಮ್ಮ ತಮ್ಮ ಮನೆಗಳಲ್ಲಿ ಹಾಯಾಗಿ ಮಲಗಿದ್ದಾಗ ಕೆಲಸದಿಂದ ವಜಾ ಗೊಳಿಸಿದ್ದೇವೆ ಅಂತ ಸಂದೇಶ ಕಳುಹಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.


"ನಿರ್ದೇಶಕರ ಮಂಡಳಿಯ ಸೂಚನೆಯ ಮೇರೆಗೆ... ಅನಿರೀಕ್ಷಿತ ವ್ಯವಹಾರ ಪರಿಸ್ಥಿತಿಗಳಿಂದಾಗಿ, ಕಂಪನಿಯು ತನ್ನ ಎಲ್ಲಾ ಉದ್ಯೋಗಿಗಳ ಉದ್ಯೋಗವನ್ನು ರದ್ದುಗೊಳಿಸುವ ಕಠಿಣ ನಿರ್ಧಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ " ಎಂದು ಯುನೈಟೆಡ್ ಫರ್ನಿಚರ್ ಇಂಡಸ್ಟ್ರೀಸ್ ತಮ್ಮಲ್ಲಿ ಕೆಲಸ ಮಾಡುತ್ತಿದ್ದಂತಹ 2,700 ಉದ್ಯೋಗಿಗಳಿಗೆ ತಿಳಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ವರದಿಗಳ ಪ್ರಕಾರ ಕಂಪನಿಯ ಮೇಲೆ ಸಾಲವು ಸಹ ಹಾಗೆಯೇ ಬೆಳೆಯುತ್ತಿದೆ ಎಂದು ಹೇಳಲಾಗಿದೆ.


ಕಂಪನಿ ದಿಢೀರ್ ನಿರ್ಧಾರದಿಂದ ಆಕ್ರೋಶಗೊಂಡ ಉದ್ಯೋಗಿಗಳು


ಇದರಿಂದ ನೌಕರರು ತುಂಬಾನೇ ಆಕ್ರೋಶಗೊಂಡಿದ್ದಾರೆ. ತಲೆಮಾರುಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡಿದ ಕುಟುಂಬಗಳನ್ನು ಸಹ ಇವರು ಉಳಿಸಿಕೊಳ್ಳಲಿಲ್ಲ ಎಂದು ಸುದ್ದಿ ವೆಬ್‌ಸೈಟ್ ಫ್ರೈಟ್‌ವೇವ್ಸ್ ವರದಿ ಮಾಡಿದೆ. ಒಬ್ಬ ಕೆಲಸಗಾರ ತನ್ನನ್ನು ಈ ರೀತಿ ನಡೆಸಿಕೊಳ್ಳುವ ಕಂಪನಿಯ ಬಗ್ಗೆ ತಾನು ಹಿಂದೊಮ್ಮೆ ಹೇಗೆ ಹೆಮ್ಮೆಪಟ್ಟಿದ್ದರು ಅಂತ ವಿಷಾದಿಸಿದರು.


ಕೆಲಸ ಕಳೆದುಕೊಂಡ ಉದ್ಯೋಗಿಗಳು ತಮ್ಮ ಬಿಲ್ಲುಗಳು ಮತ್ತು ಆರೋಗ್ಯದ ಬಗ್ಗೆ ಚಿಂತಿತರಾಗಿ ಅಪಾಯದಲ್ಲಿ ಸಿಲುಕಿದ್ದಾರೆ ಅಂತ ಹೇಳಲಾಗುತ್ತಿದೆ.


"ಈ ರೀತಿ ಕಂಪನಿ ಅವರೊಟ್ಟಿಗೆ ಕಣ್ಣು ಮುಚ್ಚಾಲೆ ಆಡಿ ಗಂಭೀರವಾಗಿ ಮತ್ತು ಪ್ರಮಾಣಿಕತೆಯಿಂದ ಶ್ರಮಿಸಿದ ಕಾರ್ಮಿಕರಿಗೆ ಇದು ನ್ಯಾಯಸಮ್ಮತವಲ್ಲ" ಎಂದು ಇನ್ನೊಬ್ಬ ಉದ್ಯೋಗಿ ಫ್ರೈಟ್‌ವೇವ್ಸ್ ಗೆ ತಿಳಿಸಿದರು. "ಈಗಷ್ಟೇ ಮಗುವನ್ನು ಪಡೆದ ತಾಯಿಗೆ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಆರೋಗ್ಯ ವಿಮೆಯು ಇನ್ನೂ ಇದೆಯೇ ಅಥವಾ ತನ್ನ ಚಿಕಿತ್ಸೆಗೆ ಹೇಗೆ ಹಣ ಪಾವತಿಸಬೇಕು” ಎಂದು ಇನ್ನೊಬ್ಬ ಉದ್ಯೋಗಿ ಕೇಳಿದ್ದಾರೆ. “ಕೀಮೋ ಚಿಕಿತ್ಸೆಯ ಮಧ್ಯೆ ಇರುವ ಕ್ಯಾನ್ಸರ್ ರೋಗಿಗೆ ಉದ್ಯೋಗದಿಂದ ತೆಗೆದು ಹಾಕಿದ್ದು ನ್ಯಾಯಸಮ್ಮತವಲ್ಲ" ಎಂದು ಮತ್ತೊಬ್ಬರು ಹೇಳಿದ್ದಾರೆ.


ಕಂಪನಿಯ ಮುಚ್ಚುವಿಕೆಯ ಬಗ್ಗೆ 60 ದಿನಗಳ  ನೋಟಿಸ್ ನೀಡದಿದ್ದಕ್ಕಾಗಿ ಉದ್ಯೋಗಿಯೊಬ್ಬರು ಕಂಪನಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.


ಈ ಹಿಂದೆ ಟ್ವಿಟ್ಟರ್ ನಲ್ಲಿ ನಡೆದಿತ್ತು ಲೇ-ಆಫ್


ಎಲೋನ್ ಮಸ್ಕ್ ಟ್ವಿಟ್ಟರ್ ನ ನೇತೃತ್ವವನ್ನು ವಹಿಸಿಕೊಂಡ ಕೂಡಲೇ ಟ್ವಿಟ್ಟರ್ ನ 7,500 ಸಿಬ್ಬಂದಿಗಳಲ್ಲಿ ಸುಮಾರು 50 ಪ್ರತಿಶತದಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಏತನ್ಮಧ್ಯೆ, ಮೆಟಾ ಕಂಪನಿಯು ಸಹ ತನ್ನ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಘೋಷಿಸಿದೆ. ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ನಿರ್ಧಾರವನ್ನು "ಮೆಟಾದ ಇತಿಹಾಸದಲ್ಲಿ ನಾವು ಮಾಡಿದ ಅತ್ಯಂತ ಕಠಿಣವಾದ ಬದಲಾವಣೆ" ಎಂದು ಹೇಳಿದ್ದಾರೆ.

Published by:Latha CG
First published: