SBI vaultsನಿಂದ 11 ಕೋಟಿ ರೂ. ಮೌಲ್ಯದ ನಾಣ್ಯಗಳು ನಾಪತ್ತೆ: ತನಿಖೆ ಕೈಗೆತ್ತಿಕೊಂಡ CBI

11 ಕೋಟಿ ರೂ. ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವುದರಿಂದ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಎಸ್‌ಬಿಐ ರಾಜಸ್ಥಾನ ಹೈಕೋರ್ಟ್‌ನಲ್ಲಿ ಮನವಿ ಮಾಡಿತ್ತು. ನಂತರ ಹೈಕೋರ್ಟ್‌ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಅನುಮತಿ ನೀಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

    ಮನೆಯಲ್ಲಿ ಕಳ್ಳತನ ಪ್ರಕರಣಗಳು (Theft Cases) ಆಗಾಗ್ಗೆ ಕೇಳುತ್ತಿರುತ್ತದೆ. ಈ ಹಿನ್ನೆಲೆ ನಿಮ್ಮ ಹಣ (Money) ಮನೆಯಲ್ಲಿ ಸುರಕ್ಷಿತವಾಗಿರುವುದಿಲ್ಲವೆಂದು ಬ್ಯಾಂಕ್‌ನ ಲಾಕರ್‌ನಲ್ಲಿ (Bank Locker) ಇಡುತ್ತೀರಿ. ಏಕೆಂದರೆ, ಅಲ್ಲಿಟ್ಟರೆ ಸುರಕ್ಷಿತವಾಗಿರುತ್ತದೆಂಬ ಭಾವನೆ ಅನೇಕರಲ್ಲಿದೆ. ಆದರೆ, ಈ ಸೇಫ್‌ ಲಾಕರ್‌ ಅತವಾ ವಾಲ್ಟ್‌ಗಳಲ್ಲಿಟ್ಟಿರುವ ಹಣವೂ ನಾಪತ್ತೆಯಾಗಿದೆ ಎಂದರೆ ಏನಾಗಬೇಡ.. ಇದ್ಯಾಕಪ್ಪಾ ಈಗ ಈ ವಿಷಯ ಅಂತೀರಾ..? ರಾಜಸ್ಥಾನದಲ್ಲಿ (Rajasthan) ಇಂತದ್ದೇ ಘಟನೆ ನಡೆದಿದೆ. ರಾಜಸ್ಥಾನದ ಮೆಹಂದಿಪುರ ಬಾಲಾಜಿಯಲ್ಲಿರುವ ಎಸ್‌ಬಿಐ ಶಾಖೆಯ ವಾಲ್ಟ್‌ಗಳಿಂದ ಅಥವಾ ಲಾಕರ್‌ಗಳಿಂದ 11 ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಾಗೂ, ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ ಎಂದು ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ನಾಪತ್ತೆಯಾದ ಮೊತ್ತವು 3 ಕೋಟಿ ರೂ.ಗಿಂತ ಹೆಚ್ಚಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ರಾಜಸ್ಥಾನ ಹೈಕೋರ್ಟ್‌ ಮೊರೆ ಹೋಗಿತ್ತು.


    11 ಕೋಟಿ ರೂ. ಮೌಲ್ಯದ ನಾಣ್ಯಗಳು ನಾಪತ್ತೆ

    ಸಿಬಿಐ ತನಿಖೆಗೆ ಕೋರಲು 3 ಕೋಟಿ ರೂ. ಮಿತಿ ಇದೆ. ಇಲ್ಲಿ, 11 ಕೋಟಿ ರೂ. ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವುದರಿಂದ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಎಸ್‌ಬಿಐ ರಾಜಸ್ಥಾನ ಹೈಕೋರ್ಟ್‌ನಲ್ಲಿ ಮನವಿ ಮಾಡಿತ್ತು. ನಂತರ ಹೈಕೋರ್ಟ್‌ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಅನುಮತಿ ನೀಡಿದೆ. ಅಲ್ಲದೆ,ಈ ಹಿಂದೆ ರಾಜಸ್ಥಾನ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್‌ ನಿರ್ದೇಶನದ ಮೇರೆಗೆ ಸಿಬಿಐ ಕೈಗೆತ್ತಿಕೊಂಡಿದೆ. ಈ ನಾಣ್ಯಗಳು ಕಳುವಾಗಿದೆಯೇ, ಕಳುವಾಗಿದ್ದರೆ ಯಾರು ಕಳುವು ಮಾಡಿದ್ದಾರೆ, ಯಾವಾಗ ಕಳುವಾಗಿದೆ, ಇಲ್ಲದಿದ್ದರೆ ಆ ನಾಣ್ಯಗಳು ಏನಾಗಿದೆ ಎನ್ನುವ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ಇಲ್ಲ.


    ಇದನ್ನೂ ಓದಿ: ಡಾಟಾ ಸೈನ್ಸ್, Artificial Intelligence, ಡಿಜಿಟಲ್ ಮೀಡಿಯಾ ಕೋರ್ಸ್​ ಓದ್ಬೇಕೇ? ಇಲ್ಲಿ ಅರ್ಜಿ ಹಾಕಿ

    ಪ್ರಾಥಮಿಕ ವಿಚಾರಣೆಯ ನಂತರ ಬ್ಯಾಂಕ್‌ನಲ್ಲಿನ ರಿಸರ್ವ್‌ ಹಣದ ವ್ಯತ್ಯಾಸವನ್ನು ಸೂಚಿಸಿದ ನಂತರ ಎಸ್‌ಬಿಐ ಶಾಖೆ ಹಣ ಎಣಿಕೆ ಮಾಡಲು ನಿರ್ಧರಿಸಿದ ಬಳಿಕ 11 ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕ್‌ ಎಸ್‌ಬಿಐನ ಈ ಶಾಖೆಯ ಅಕೌಂಟ್‌ ಪುಸ್ತಕಗಳ ಪ್ರಕಾರ 13 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಾಣ್ಯಗಳ ಎಣಿಕೆಯನ್ನು ಕೈಗೊಳ್ಳಲು ಜೈಪುರ ಮೂಲದ ಖಾಸಗಿ ವೆಂಡರ್‌ಗಳನ್ನು ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.


    ಈ ನಾಣ್ಯಗಳ ಎಣಿಕೆ ವೇಳೆ ಶಾಖೆಯಲ್ಲಿ 11 ಕೋಟಿ ರೂ.ಗೂ ಅಧಿಕ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಸುಮಾರು 2 ಕೋಟಿ ರೂ.ಗಳನ್ನು ಹೊತ್ತ 3,000 ಕಾಯಿನ್ ಬ್ಯಾಗ್‌ಗಳನ್ನು ಮಾತ್ರ ಲೆಕ್ಕ ಹಾಕಬಹುದಾಗಿದ್ದು, ಅವುಗಳನ್ನು ಆರ್‌ಬಿಐನ ಕಾಯಿನ್ ಹೋಲ್ಡಿಂಗ್ ಶಾಖೆಗೆ ವರ್ಗಾಯಿಸಲಾಗಿದೆ ಎಂದೂ ಹೇಳಲಾಗಿದೆ.


    ಎಣಿಕೆ ಮಾಡುತ್ತಿದ್ದವರಿಗೆ ಬೆದರಿಕೆ..!


    ಇನ್ನು, ಈ ಪ್ರಕರಣದ ಎಫ್‌ಐಆರ್‌ನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅದೇನೆಂದರೆ, ಆ ನಾಣ್ಯಗಳನ್ನು ಎಣಿಕೆ ಮಾಡುತ್ತಿದ್ದ ಖಾಸಗಿ ವೆಂಡರ್‌ಗಳಿಗೆ ಬೆದರಿಕೆ ಹಾಕಲಾಗಿತ್ತಂತೆ. ಹೌದು, ಆಗಸ್ಟ್ 10, 2021 ರಂದು ರಾತ್ರಿ ಅವರು ತಂಗಿದ್ದ ಅತಿಥಿಗೃಹದಲ್ಲಿ ಬೆದರಿಕೆ ಹಾಕಲಾಯಿತು ಮತ್ತು ಆ ನಾಣ್ಯಗಳ ಎಣಿಕೆಯಿಂದ ದೂರವಿರುವಂತೆಯೂ ಒತ್ತಡ ಹೇರಲಾಯಿತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.


    77 ಲಕ್ಷ ರೂ. ಲೂಟಿ ಮಾಡಿ ಎಟಿಎಂಗೆ ಬೆಂಕಿ..!


    ಮೇಲಿನದು, ಬ್ಯಾಂಕ್‌ನ ಸೇಫ್‌ ವಾಲ್ಟ್‌ ಘಟನೆಯಾದರೆ, ಗೋರೆಗಾಂವ್ (ಇ) ನಲ್ಲಿರುವ ಎಟಿಎಂ ಮಾರಾಟ ಕೇಂದ್ರವನ್ನು ಲೂಟಿ ಮಾಡಲು ಕ್ರಿಮಿನಲ್ ಸಂಚು ರೂಪಿಸಿ 77.18 ಲಕ್ಷ ರೂ. ಮೌಲ್ಯದ ಹಣವನ್ನು ಕದ್ದಿರುವ ಘಟನೆ ಇದೇ ತಿಂಗಳಲ್ಲಿ ನಡೆದಿತ್ತು. ನಂತರ ಕುರುಹುಗಳನ್ನು ಅಳಿಸಲು ಆ ಆರೋಪಿಗಳು ಎಟಿಎಂ ಮಷಿನ್‌ಗೆ ಬೆಂಕಿ ಹಾಕಿದ್ದರು. ಬಳಿಕ, ಪೊಲೀಸರು ಅಗ್ನಿ ಶಾಮಕ ದಳದ ನೆರವಿನಿಂದ ಬೆಂಕಿ ನಂದಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಅಲ್ಲದೆ, ಅವರ ವಿರುದ್ಧ ಕೇಸ್‌ ಅನ್ನೂ ದಾಖಲಿಸಲಾಗಿದೆ.

    Published by:Kavya V
    First published: