Coins Missing: ಎಸ್‌ಬಿಐನಿಂದ ಒಂದಲ್ಲಾ ಎರಡಲ್ಲ, ಬರೋಬ್ಬರಿ 11 ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳೇ ನಾಪತ್ತೆ!

ಎಸ್ಐಬಿ ಬ್ಯಾಂಕ್‌ನಲ್ಲಿ ಇಟ್ಟಿದ್ದ ನಾಣ್ಯಗಳೆಲ್ಲ (Coins) ನಾಪತ್ತೆ (Missing) ಆಗಿವೆಯಂತೆ. ಅದೂ ಒಂದೆರಡು ರೂಪಾಯಿಯ ನಾಣ್ಯಗಳಲ್ಲ, ಬರೋಬ್ಬರಿ 11 ಕೋಟಿ ರೂಪಾಯಿ (11 Crore Rupees) ಮೌಲ್ಯದ ನಾಣ್ಯಗಳು ನಾಪತ್ತೆಯಾಗಿವೆಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಸ್ಥಾನ: ನಮ್ಮ ಹಣ (Money) ಸುರಕ್ಷಿತವಾಗಿರಲಿ, ಯಾವುದೇ ಕಳ್ಳ ಕಾಕರ ಪಾಲಾಗದಿರಲಿ ಅಂತ ನಾವು ಬ್ಯಾಂಕ್‌ಗಳಲ್ಲಿ (Bank) ಇಡುತ್ತೇವೆ. ಅದರಲ್ಲೂ ಎಸ್‌ಬಿಐ (SBI) ಅಂದ್ರೆ ಸರ್ಕಾರದ (Government) ಅಧೀನದ ಬ್ಯಾಂಕ್ ಇಲ್ಲಿ ಹಣ ಇಟ್ರೆ ಯಾವುದೇ ಗೋಲ್ಮಾಲ್ (Golmaal) ಆಗುವುದಿಲ್ಲ ಎನ್ನುವ ನಂಬಿಕೆ ಗ್ರಾಹಕರದ್ದು. ಆದರೆ ರಾಜಸ್ಥಾನದಲ್ಲಿ (Rajasthan) ಎಸ್ಐಬಿ ಬ್ಯಾಂಕ್ ಒಂದು ಇಂತಹ ಭರವಸೆಯನ್ನು ಸುಳ್ಳು ಮಾಡಿದೆ. ಎಸ್ಐಬಿ ಬ್ಯಾಂಕ್‌ನಲ್ಲಿ ಇಟ್ಟಿದ್ದ ನಾಣ್ಯಗಳೆಲ್ಲ (Coins) ನಾಪತ್ತೆ (Missing) ಆಗಿವೆಯಂತೆ. ಅದೂ ಒಂದೆರಡು ರೂಪಾಯಿಯ ನಾಣ್ಯಗಳಲ್ಲ, ಬರೋಬ್ಬರಿ 11 ಕೋಟಿ ರೂಪಾಯಿ (11 Crore Rupees) ಮೌಲ್ಯದ ನಾಣ್ಯಗಳು ನಾಪತ್ತೆಯಾಗಿವೆಯಂತೆ!

 ಎಸ್‌ಬಿಐನಿಂದ 11 ಕೋಟಿ ಮೊತ್ತದ ನಾಣ್ಯಗಳು ನಾಪತ್ತೆ

ರಾಜಸ್ಥಾನದ ಕರೌಲಿಯಲ್ಲಿರುವ ಎಸ್‌ಬಿಐ ಶಾಖೆಯೊಂದರಲ್ಲಿ ಬರೋಬ್ಬರಿ 11 ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇದೇ ಕೇಸ್‌ಗೆ ಬಂಧಿಸಿದಂತೆ ಸಿಬಿಐ ಗುರುವಾರ 25 ಸ್ಥಳಗಳಲ್ಲಿ ಶೋಧ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಣ್ಯ ಎಣಿಸುವಾಗ ಗೊತ್ತಾಯಿತು ಅಚಾತುರ್ಯ

ಕರೌಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯು ಆಗಸ್ಟ್, 2021 ರಲ್ಲಿ ತನ್ನ ನಗದು ಮೀಸಲು ವ್ಯತ್ಯಾಸವನ್ನು ಸೂಚಿಸಿದ ಪ್ರಾಥಮಿಕ ವಿಚಾರಣೆಯ ನಂತರ ಹಣದ ಎಣಿಕೆಯನ್ನು ಕೈಗೊಳ್ಳಲು ನಿರ್ಧರಿಸಿತು. ಈ ವೇಳೆ ನಾಣ್ಯಗಳು ಮಿಸ್ ಆಗಿರುವುದು ಬೆಳಕಿಗೆ ಬಂದಿದೆ. ನಾಣ್ಯಗಳ ಎಣಿಕೆಯನ್ನು ಖಾಸಗಿ ಮಾರಾಟಗಾರರಿಗೆ ಹೊರಗುತ್ತಿಗೆ ನೀಡಲಾಗಿತ್ತು. ಈ ವೇಳೆ ನಾಣ್ಯ ಎಣಿಸುವಾಗ ಶಾಖೆಯಲ್ಲಿ 11 ಕೋಟಿಗೂ ಹೆಚ್ಚು ಮೌಲ್ಯದ ನಾಣ್ಯಗಳು ಕಾಣೆಯಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gold-Silver Price Today: ಚಿನ್ನ ಖರೀದಿಗಿಲ್ಲ ಚಿಂತೆ, ಬೆಳ್ಳಿಯೂ ಅಗ್ಗ: ಹೀಗಿದೆ ಇಂದಿನ ದರ!

ಹಣ ವರ್ಗಾವಣೆ ಮಾಡುವಾಗ ಮಿಸ್ ಆಯ್ತಾ?

ಸುಮಾರು ₹ 2 ಕೋಟಿ ಹೊತ್ತೊಯ್ಯುವ 3,000 ಕಾಯಿನ್ ಬ್ಯಾಗ್‌ಗಳನ್ನು ಮಾತ್ರ ಲೆಕ್ಕ ಹಾಕಬಹುದಾಗಿದ್ದು, ಅವುಗಳನ್ನು ಆರ್‌ಬಿಐನ ಕಾಯಿನ್ ಹೋಲ್ಡಿಂಗ್ ಶಾಖೆಗೆ ವರ್ಗಾಯಿಸಲಾಗಿದೆ.  ಈ ರೀತಿ ಹಣ ವರ್ಗಾವಣೆ ಮಾಡುವಾಗ ಮಿಸ್ ಆಗಿರುವ ಸಾಧ್ಯತೆ ಇದೆ.

ದೂರು ನೀಡಿದ್ದ ಬ್ಯಾಂಕ್ ಮ್ಯಾನೇಜರ್

ಕಳೆದ ತಿಂಗಳು, ಸಿಬಿಐ ತನಿಖೆಗೆ ಕೋರಿ ಎಸ್‌ಬಿಐ ನ್ಯಾಯಾಲಯದ ಮೊರೆ ಹೋದ ನಂತರ, ರಾಜಸ್ಥಾನ ಹೈಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಏಜೆನ್ಸಿಗೆ ಸೂಚಿಸಿತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದ್ದು, ತನಿಖೆ ಮುಂದುವರಿದಿದೆ. ಈ ನಿಟ್ಟಿನಲ್ಲಿ ಕೆಲವು ಬ್ಯಾಂಕ್ ಅಧಿಕಾರಿಗಳನ್ನು ಕೂಡ ವಿಚಾರಣೆ ನಡೆಸಲಾಗುವುದು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು  ವರದಿ ಮಾಡಿದೆ. ಸಿಬಿಐ ಎಫ್‌ಐಆರ್ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ ನಾಣ್ಯಗಳು ನಾಪತ್ತೆಯಾದ ವಿಷಯ ಬೆಳಕಿಗೆ ಬಂದ ನಂತರ ಎಸ್‌ಬಿಐ ಶಾಖೆಯ ಮ್ಯಾನೇಜರ್ ಹರಗೋವಿಂದ್ ಮೀನಾ ಅವರು ರಾಜಸ್ಥಾನದ ತೋಡಭೀಮ್ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ನೀಡಿದ್ದರು.

ಎಫ್ಐಆರ್‌ ದಾಖಲಿಸಿಕೊಂಡಿರುವ ಸಿಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಏಳು ತಿಂಗಳ ಹಳೆಯ ನಾಣ್ಯ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್ ದಾಖಲಿಸಿದೆ. 2022ರ  ಏಪ್ರಿಲ್ 13 ರಂದು ಸಲ್ಲಿಸಲಾದ ಎಫ್‌ಐಆರ್, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 409 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 420 (ವಂಚನೆ) ಅಡಿಯಲ್ಲಿನ ಆರೋಪಗಳನ್ನು ಒಳಗೊಂಡಿದೆ. ಈ ಪ್ರಕರಣವು ಆಗಸ್ಟ್ 2021 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ರಾಜಸ್ಥಾನದ ಮೆಹಂದಿಪುರ ಶಾಖೆಯಿಂದ 11 ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳು ನಾಪತ್ತೆಯಾಗಿದ್ದಕ್ಕೆ ಸಂಬಂಧಿಸಿದೆ.

ಇದನ್ನೂ ಓದಿ: UPI Transaction Charges: ನೀವು ಗೂಗಲ್​ ಪೇ, ಫೋನ್​ ಪೇ ಹೆಚ್ಚಾಗಿ ಬಳಸ್ತೀರಾ? ಇನ್ಮುಂದೆ ಇದ್ರಲ್ಲಿ ಹಣ ಕಳಿಸಿದ್ರೆ ಎಕ್ಸ್ಟ್ರಾ ದುಡ್ಡು ಕಟ್ ಆಗುತ್ತೆ!

25 ಸ್ಥಳಗಳಲ್ಲಿ ನಾಣ್ಯಗಳಿಗಾಗಿ ಶೋಧ

ಇನ್ನು ನಾಣ್ಯ ನಾಪತ್ತೆಯಾಗಿರುವ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ದೆಹಲಿ, ಜೈಪುರ, ದೌಸಾ, ಕರೌಲಿ, ಸವಾಯಿ ಮಾಧೋಪುರ್, ಅಲ್ವಾರ್, ಉದಯಪುರ ಮತ್ತು ಭಿಲ್ವಾರದ 25 ಸ್ಥಳಗಳಲ್ಲಿ ಸುಮಾರು 15 ಮಾಜಿ ಬ್ಯಾಂಕ್ ಅಧಿಕಾರಿಗಳು ಮತ್ತು ಇತರರ ಆವರಣದಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
Published by:Annappa Achari
First published: