Business: ತೆಂಗಿನ ಕೃಷಿಯಿಂದ ಕೂಡ ಸಕತ್ ಆದಾಯ ಗಳಿಸಬಹುದಂತೆ.. ಹೇಗೆ ಅಂತೀರಾ?

ತೆಂಗಿನ ಕೃಷಿಗೆ ಮರಳು ಮಣ್ಣಿನ ಅವಶ್ಯಕತೆ ಇದ್ದು ಕಪ್ಪು ಮತ್ತು ಕಲ್ಲಿನ ಮಣ್ಣು ತೆಂಗಿನ ಕೃಷಿಗೆ ಸೂಕ್ತವಲ್ಲ. ಹೊಲವು ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿರಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತೆಂಗಿನಕಾಯಿಯನ್ನು(Coconut) ಭಾರತದಾದ್ಯಂತ ಎಲ್ಲಾ ಕಡೆ ಎಲ್ಲಾ ಪ್ರಾಂತ್ಯಗಳಲ್ಲಿ ಮಾರಾಟ ಮಾಡಲಾಗುತ್ತದೆ. ಧಾರ್ಮಿಕ ಕಾರ್ಯಗಳಿಂದ ಹಿಡಿದು, ಔಷಧಗಳು ಮತ್ತು ಸೌಂದರ್ಯವರ್ಧಕಗಳವರೆಗೆ (Medicines and Cosmetics) ಇದರ ಬಳಕೆ ಅಪಾರ. ತೆಂಗಿನ ಮರಗಳು 80 ವರ್ಷಗಳವರೆಗೆ ಸತತವಾಗಿ ಫಲ ನೀಡುತ್ತಲೇ ಇರುತ್ತವೆ. ಆದ್ದರಿಂದ, ಇವನ್ನು ಬೆಳೆಸುವುದು ತುಂಬಾ ಪ್ರಯೋಜನಕಾರಿ.10 ಮೀಟರ್‌ವರೆಗಿನ ಎತ್ತರಕ್ಕೆ ಬೆಳೆಯುವುದರಿಂದ, ತೆಂಗಿನ ಗಿಡವನ್ನು 'ಕಲ್ಪವೃಕ್ಷ' ಅಥವಾ 'ಸ್ವರ್ಗದ ಸಸ್ಯ' ಎಂದೂ ಕರೆಯಲಾಗುವುದು. ಭಾರತದಲ್ಲಿ ತೆಂಗಿನಕಾಯಿಯನ್ನು ಹೇರಳವಾಗಿ ಉತ್ಪಾದಿಸಲಾಗುತ್ತದೆ. ತೆಂಗಿನ ಕೃಷಿಗೆ (Farming) ಕಡಿಮೆ ಶ್ರಮದ ಅಗತ್ಯವಿದ್ದು ಒಂದು(Small Investment)  ಸಣ್ಣ ಹೂಡಿಕೆಯಿಂದ ಲಕ್ಷ ರೂ. ಗಟ್ಟಲೆ ಲಾಭ (Earn Profits) ಗಳಿಸುವ ಸಾಧ್ಯತೆ ಇದೆ. ಇದರ ಕೃಷಿಗೆ ಕೀಟನಾಶಕ (Pesticides) ಮತ್ತು ರಸಗೊಬ್ಬರಗಳ ಅಗತ್ಯವಿಲ್ಲ. ಆದರೆ ಬಿಳಿ ನೊಣಗಳ ಕಾಟ ತೆಂಗಿನ ಗಿಡಗಳನ್ನು ಹಾನಿಗೊಳಪಡಿಸಬಹುದು. ಹಾಗಾಗಿ ರೈತರು ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.

ತೆಂಗಿನ ಮರಗಳ ಉಪಯೋಗಗಳು :
ತೆಂಗಿನಕಾಯಿಯಿಂದ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳಿವೆ. ತೆಂಗಿನ ಮರದ ಎಲ್ಲಾ ಭಾಗಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಲಾಗುವುದರಿಂದಲೇ ಅದರ ವಾಣಿಜ್ಯ ಮೌಲ್ಯ ಹೆಚ್ಚಾಗಿರುವುದು. ಇದರ ಎಳ ನೀರು ತುಂಬಾ ಪೌಷ್ಟಿಕಾಂಶಗಳಿಂದ ಕೂಡಿದ್ದು ಹಸಿ ತಿರುಳನ್ನು ಅಥವಾ ಗಂಜಿಯನ್ನು ಕೂಡ ತಿನ್ನಬಹುದು.

ತೆಂಗಿನ ಮರದ ವಿವಿಧ ಭಾಗಗಳನ್ನು ಈ ಕೆಳಗಿನ ವಿಧಾನಗಳಲ್ಲಿ ಬಳಸಲಾಗುತ್ತದೆ:
ತೆಂಗಿನ ತಿರುಳು: ಹಾಲು, ಆಹಾರದ ಬಳಕೆ ಮತ್ತು ಹಿಟ್ಟು
ಎಳ ನೀರು: ತಂಪಾದ ಆರೋಗ್ಯಕರ ಪಾನೀಯ
ತೆಂಗಿನ ಎಣ್ಣೆ: ಅಡುಗೆ, ಚರ್ಮ ಮತ್ತು ಕೂದಲು
ತೆಂಗಿನ ಚಿಪ್ಪು: ಆಹಾರವನ್ನು ಆವಿಯಲ್ಲಿ ಬೇಯಿಸಲು ಮತ್ತು ಕರಕುಶಲ ವಸ್ತು ತಯಾರಿಕೆ
ತೆಂಗಿನ ಸಿಪ್ಪೆ: ನೈಸರ್ಗಿಕ ಸ್ಕ್ರಬ್ಬರ್, ಕರಕುಶಲ ವಸ್ತು ಮತ್ತು ಹಗ್ಗ
ತೆಂಗಿನ ಮರದ ಎಲೆಗಳು: ಛಾವಣಿ ನಿರ್ಮಾಣಕ್ಕೆ

ಇದನ್ನೂ ಓದಿ: Raw Coconut: ಹಸಿ ತೆಂಗಿನಕಾಯಿ ತಿಂದ್ರೆ ಸಿಗುವ ಲಾಭಗಳು ಒಂದೆರಡಲ್ಲ..!

ತೆಂಗಿನ ಕಟ್ಟಿಗೆಗಳು: ಸಾಂಪ್ರದಾಯಿಕ ಅಡುಗೆಮನೆಗಳಲ್ಲಿ ಒಲೆ ಉರಿಸಲು
ತೆಂಗಿನ ಮರದ ಹೂವುಗಳು: ಔಷಧೀಯ ಉಪಯೋಗಕ್ಕಾಗಿ
ತೆಂಗಿನ ನಾಟಿ ಸಮಯ: ಮಳೆಗಾಲದ ನಂತರ ತೆಂಗಿನ ಗಿಡಗಳು ಫಲವತ್ತಾಗಿ ಬೆಳೆಯಲು ಪ್ರಾರಂಭಿಸುತ್ತವೆ. ನೆಟ್ಟ 4 ವರ್ಷಗಳ ನಂತರವಷ್ಟೇ, ತೆಂಗಿನ ಮರಗಳು ಫಲ ನೀಡಬಲ್ಲವು. ಕಾಯಿಗಳು ಹಸಿರು ಬಣ್ಣಕ್ಕೆ ತಿರುಗಿದಾಗ ಕೀಳುವ ಕ್ರಿಯೆ ಪ್ರಾರಂಭವಾಗುತ್ತದೆ ಮತ್ತು ಅದು ಪೂರ್ತಿಯಾಗಿ ತೆಂಗಿನ ಕಾಯಿಯಾಗಿ ಪರಿವರ್ತನೆಗೊಳ್ಳಲು 15 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ತೆಂಗಿನ ಕೃಷಿ: ಮಣ್ಣು ಮತ್ತು ಹವಾಮಾನಪರಿಸ್ಥಿತಿಗಳು
ತೆಂಗಿನ ಕೃಷಿಗೆ ಮರಳು ಮಣ್ಣಿನ ಅವಶ್ಯಕತೆ ಇದ್ದು ಕಪ್ಪು ಮತ್ತು ಕಲ್ಲಿನ ಮಣ್ಣು ತೆಂಗಿನ ಕೃಷಿಗೆ ಸೂಕ್ತವಲ್ಲ. ಹೊಲವು ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿರಬೇಕು. ಸಾಮಾನ್ಯ ತಾಪಮಾನ ಮತ್ತು ಬೆಚ್ಚಗಿನ ಹವಾಮಾನ ಇದರ ಬೆಳವಣಿಗೆಗೆ ಬಹಳ ಮುಖ್ಯ . ಹೆಚ್ಚು ನೀರಿನ ಅವಶ್ಯಕತೆ ಈ ಕೃಷಿಗೆ ಇಲ್ಲ ಹಾಗೂ ಹೆಚ್ಚಿನ ಮಟ್ಟಿನಲ್ಲಿ ನೀರಿನ ಪೂರೈಕೆಯನ್ನು ಮಳೆ ನೀರು ಪೂರ್ಣಗೊಳಿಸುತ್ತದೆ.

ಇದನ್ನೂ ಓದಿ: Benefits of Tender Coconut: ಗರ್ಭಿಣಿಯರು ಎಳನೀರು ಕುಡಿದರೆ ಬೇಗ ಸುಸ್ತಾಗುವುದಿಲ್ಲ, ಸೌಂದರ್ಯವೂ ಹೆಚ್ಚುತ್ತದೆ!

ತೆಂಗಿನ ಕೃಷಿಯಲ್ಲಿ ನೀರಾವರಿ:
ತೆಂಗಿನ ಸಸಿಗಳ ನೀರಿನ ಸೂಕ್ಷ್ಮತೆಯಿಂದಾಗಿ ಹನಿ ವಿಧಾನದಿಂದ ನೀರಾವರಿ ಮಾಡಲಾಗುತ್ತದೆ ಮತ್ತು ಹೆಚ್ಚು ನೀರು ಸಿಂಪಡಿಸಿದರೆ ಗಿಡಗಳು ಸಾಯಬಹುದು. ಅವುಗಳ ಬೆಳವಣಿಗೆಯ ಆರಂಭದಲ್ಲಿ ಲಘು ತೇವಾಂಶದ ಅಗತ್ಯವಿದ್ದು ಬೇಸಿಗೆಯಲ್ಲಿ ಪ್ರತಿ 3 ದಿನಗಳಿಗೊಮ್ಮೆ ಸಸಿಗಳಿಗೆ ನೀರಿನ ಅವಶ್ಯಕತೆ ಇದೆ. ಇನ್ನು, ಚಳಿಗಾಲದಲ್ಲಿ, ವಾರಕ್ಕೆ ಒಂದು ಬಾರಿ ನೀರಾವರಿ ಮಾಡಿದರೆ ಸಾಕಾಗುವುದು .
Published by:vanithasanjevani vanithasanjevani
First published: