ಮಾಧ್ಯಮ ಲೋಕದಲ್ಲಿ ಈ ಹಿಂದೆ ಹಲವು ದಾಖಲೆ ಬರೆದಿದ್ದ ಸಿಎನ್‌ಎನ್-ನ್ಯೂಸ್ 18 (CNN-News 18) ಈಗ ಮತ್ತೊಂದು ಹೊಸ ದಾಖಲೆ ಬರೆದಿದೆ. ತಮ್ಮ ಪ್ರಬಲ ಸ್ಪರ್ಧಿಗಳಾದ ರಿಪಬ್ಲಿಕ್ ಟಿವಿ (Republic TV) ಹಾಗೂ ಟೈಮ್ಸ್ ನೌಗಳ (Times Now) ಸಂಯೋಜಿತ ಷೇರುಗಳನ್ನು ಹಿಂದಿಕ್ಕಿ CNN-News18 ಜನವರಿ ಮೂರನೇ ವಾರದಲ್ಲಿ 42.7% ಮಾರುಕಟ್ಟೆ ಷೇರನ್ನು (market share) ದಾಖಲಿಸಿದೆ. ಈ ಮೂಲಕ ಹೊಸ ಮೈಲುಗಲ್ಲು ದಾಖಲಿಸಿದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಅಂಕಿಅಂಶಗಳು ರಿಪಬ್ಲಿಕ್ ಟಿವಿ 23.4% ಮಾರುಕಟ್ಟೆ ಪಾಲನ್ನು ದಾಖಲಿಸಿದರೆ, ಟೈಮ್ಸ್ ನೌ 18.3% ಅನ್ನು ದಾಖಲಿಸಿದೆ. ಮಿರರ್ ನೌ 11.1% ಷೇರನ್ನು ದಾಖಲಿಸಿದರೆ, ಇಂಡಿಯಾ ಟುಡೇ ಟೆಲಿವಿಷನ್ 4.4% ಷೇರು ದಾಖಲಿಸಿ ನಂತರ ಸ್ಥಾನವನ್ನು ಪಡೆದುಕೊಂಡಿದೆ.
ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ CNN-News18
ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿರುವ CNN-News18 ಸುದ್ದಿಯನ್ನು ಪ್ರಸ್ತುತಪಡಿಸುವಲ್ಲಿ ವೀಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಸರಳ ಹಾಗೂ ಸ್ಪಷ್ಟವಾದ ವರದಿಗಾರಿಕೆ ಹಾಗೂ ಎಲ್ಲಾ ದೃಷ್ಟಿಕೋನಗಳಿಂದಲೂ ಸುದ್ದಿಮಾಡುವ ತಂತ್ರಗಾರಿಕೆ ಸುದ್ದಿ ಪ್ರಸಾರ ವಲಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿರುವುದು ಸುಳ್ಳಲ್ಲ.
This week @CNNnews18 is more than its two nearest rivals put together.
Wouldn't have been possible without the support of each one of our loyal viewers. Thank you 🙏
Quality matters. Content wins. 👏📺 pic.twitter.com/slgJzOLMdg
— Zakka Jacob (@Zakka_Jacob) January 27, 2023
ವಿಷಯಗಳನ್ನು ಭೌಗೋಳಿಕ ನೆಲೆಯಲ್ಲಿ ವಿಷಯ ಆಧಾರಿತವಾಗಿ ವೀಕ್ಷಕರಿಗೆ ತಲುಪಿಸುವ ಜೊತೆಗೆ ಪ್ರೋಗ್ರಾಮಿಂಗ್‌ನಲ್ಲಿ ಹೆಚ್ಚಿನ ಗಮನಹರಿಸುವುದರಿಂದ ಚಾನಲ್‌ನ ವೀಕ್ಷಕರ ಸಂಖ್ಯೆಯು ಸ್ಥಿರವಾಗಿ ವೀಕ್ಷಕರನ್ನು ಗಳಿಸಿದೆ.
ಇದನ್ನೂ ಓದಿ: Budget 2023: ದೇಶದ 'ಶ್ರೀಮಂತ ರೈತ'ರಿಗೆ ಈ ಬಾರಿ ಬೀಳುತ್ತಾ ತೆರಿಗೆ ಹೊರೆ? ಕೇಂದ್ರ ಸರ್ಕಾರಕ್ಕೆ ತಜ್ಞರು ನೀಡಿದ ಸಲಹೆಯೇನು?
ಧನ್ಯವಾದ ಅರ್ಪಿಸಿದ ಮ್ಯಾನೇಜಿಂಗ್ ಎಡಿಟರ್
ಚಾನಲ್‌ಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ CNN-News18 ಮ್ಯಾನೇಜಿಂಗ್ ಎಡಿಟರ್ ಟ್ವಿಟರ್‌ನಲ್ಲಿ ವೀಕ್ಷಕರಿಗೆ ಧನ್ಯವಾದಗಳನ್ನರ್ಪಿಸಿದ್ದಾರೆ. ನಮ್ಮ ಹೆಮ್ಮಯ ವೀಕ್ಷಕರಿಲ್ಲದೆ CNN-News18 ಇಂತಹ ಸಾಧನೆ ಮಾಡುವುದು ಸಾಧ್ಯವಿಲ್ಲದ ಮಾತಾಗಿದೆ. ಪ್ರತಿಯೊಬ್ಬ ವೀಕ್ಷಕರಿಗೂ ನಾವು ಅಭಾರಿ ಎಂದು ತಿಳಿಸಿರುವ ಮ್ಯಾನೇಜಿಂಗ್ ಎಡಿಟರ್ ಜಕ್ಕಾ ಜೆಕೋಬ್ ನಮ್ಮ ಪ್ರತಿಯೊಬ್ಬ ವೀಕ್ಷಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಅತ್ಯುತ್ತಮ ಸ್ಥಾನ ಪಡೆದ ನ್ಯೂಸ್ 18 ಇಂಡಿಯಾ ಹಾಗೂ CNN-News 18
ನೆಟ್‌ವರ್ಕ್ 18 ನ ಹಿಂದಿ ಹಾಗೂ ಇಂಗ್ಲಿಷ್ ಚಾನಲ್‌ಗಳೆರಡೂ ತಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಟಾಪ್ ಸ್ಥಾನಗಳನ್ನು ಕಾಯ್ದಿರಿಸಿಕೊಳ್ಳುವಲ್ಲಿ ಕೂಡ ಸಫಲವಾಗಿದೆ. CNN-News 18 ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಮಿರರ್ ನೌ ಹಾಗೂ ಇಂಡಿಯಾ ಟುಡೇ ಟೆಲಿವಿಶನ್ ಅನ್ನು ಇಂಗ್ಲಿಷ್ ನ್ಯೂಸ್ ವಿಭಾಗದಲ್ಲಿ ಹಿಂದಿಕ್ಕಿದೆ. ನ್ಯೂಸ್ 18 ಇಂಡಿಯಾ ವಾಹಿನಿಯು ಆಜ್ ತಕ್, ಇಂಡಿಯಾ ಟಿವಿ, ಟಿವಿ9 ಭಾರತ್‌ವರ್ಷ್, ಹಾಗೂ ಹಿಂದಿ ಜನರಲ್ ನ್ಯೂಸ್ ವಿಭಾಗದಲ್ಲಿ ರಿಪಬ್ಲಿಕ್ ಭಾರತ್ ಅನ್ನು ಹಿಂದಿಕ್ಕಿದೆ.
ಬ್ರಾಡ್‌ಕಾಸ್ಟ್ ರೀಸರ್ಚ್ ಕೌನ್ಸಿಲ್ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ ನ್ಯೂಸ್ 18 ಇಂಡಿಯಾ 15.8% ದಷ್ಟು ಮಾರುಕಟ್ಟೆ ಷೇರನ್ನು ಹೊಸ ವರ್ಷದ ಪ್ರಥಮ ವಾರದಲ್ಲೇ ಹೊಂದಿದ್ದು ನಂತರ ವಾರಗಳಲ್ಲಿ 15.8% ಷೇರನ್ನು ದಾಖಲಿಸಿದೆ.
ಆಜ್ ತಕ್ ಅನ್ನು ಹಿಂದಿಕ್ಕಿರುವ ನ್ಯೂಸ್ 18 ಇಂಡಿಯಾ
ಡೇಟಾ ನೀಡಿರುವ ವರದಿಯ ಪ್ರಕಾರ ಆಜ್ ತಕ್ (13.2%) ವಾಹಿನಿಯನ್ನು ಹಿಂದಿಕ್ಕಿ ನ್ಯೂಸ್ 18 ಇಂಡಿಯಾ 20% ಅಧಿಕ ಮಾರುಕಟ್ಟೆ ಷೇರನ್ನು ದಾಖಲಿಸಿದೆ. ಇಂಗ್ಲಿಷ್ ನ್ಯೂಸ್ ವಿಭಾಗದಲ್ಲಿ ಕೂಡ CNN-News 18 ತನ್ನ ಮಾರುಕಟ್ಟೆ ಷೇರನ್ನು ಹೊಸ ವರ್ಷದ ಸಮಯದಲ್ಲಿ 1.8% ದಷ್ಟು ಹೆಚ್ಚಿಸಿಕೊಂಡಿತ್ತು. ಮೊದಲ ವಾರದಲ್ಲಿ 33.0% ದೊಂದಿಗೆ ಪ್ರಥಮ ಸ್ಥಾನವನ್ನು ಕಾಯ್ದರಿಸಿಕೊಂಡಿದ್ದು ಎರಡನೇ ವಾರದಲ್ಲಿ 34.7% ಷೇರು ದಾಖಲಿಸಿದೆ. ಮಾರುಕಟ್ಟೆ ಷೇರು ವಿಚಾರದಲ್ಲಿ ನ್ಯೂಸ್ 18 ಈಗಾಗಲೇ ಟೈಮ್ಸ್ ನೌ ಅನ್ನು ಹಿಂದಿಕ್ಕಿದ್ದು 80% ಷೇರಿನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Bank Loan: ಪದೇ ಪದೇ ನಿಮ್ಮ ಲೋನ್ ಅರ್ಜಿ ಕ್ಯಾನ್ಸಲ್ ಆಗ್ತಿದ್ಯಾ? ಇದೇ ಕಾರಣ ಇರಬಹುದು!
ಮಾರ್ಚ್ 2020 ರಲ್ಲಿನ ವೀಕ್ಷಕ ಅಂಕಿಅಂಶಗಳ ಪ್ರಕಾರ ನ್ಯೂಸ್ 18 ಇಂಡಿಯಾ ಹಾಗೂ CNN-News 18 ಮಾರುಕಟ್ಟೆ ನಾಯಕರು ಎಂದೆನಿಸಿವೆ. ನೆಟ್‌ವರ್ಕ್ 18 ಗ್ರೂಪ್ ಹೊಂದಿರುವ ಸ್ಥಳೀಯ ನ್ಯೂಸ್ ನೆಟ್‌ವರ್ಕ್‌ಗಳು ತಮ್ಮ ವಲಯಗಳಲ್ಲಿ ಅತ್ಯುತ್ತಮ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ