Sushil Mantri: ಖ್ಯಾತ ಉದ್ಯಮಿ ಸುಶೀಲ್ ಮಂತ್ರಿ ಅರೆಸ್ಟ್, ವಂಚನೆ ಕೇಸ್‌ನಲ್ಲಿ ಸಿಐಡಿಯಿಂದ ಬಂಧನ

ವಂಚನೆ ಆರೋಪದ ಮೇಲೆ ಉದ್ಯಮಿ ಸುಶೀಲ್ ಮಂತ್ರಿ ಹಾಗೂ ಅವರ ಪುತ್ರ ಪ್ರತೀಕ್ ಮಂತ್ರಿ ಇಬ್ಬರನ್ನೂ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮನೆ ಖರೀದಿದಾರರಿಗೆ ವಂಚಿಸಿದ ಆರೋಪದ ಮೇಲೆ ಸುಶೀಲ್‌ ಮಂತ್ರಿ ಹಾಗೂ ಪುತ್ರನನ್ನು ಬಂಧಿಸಿ, ಸೆಪ್ಟೆಂಬರ್ 12ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial custody) ವಹಿಸಲಾಗಿದೆ.

ಉದ್ಯಮಿ ಸುಶೀಲ್ ಮಂತ್ರಿ

ಉದ್ಯಮಿ ಸುಶೀಲ್ ಮಂತ್ರಿ

  • Share this:
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಪ್ರಸಿದ್ಧ ಮಂತ್ರಿಮಾಲ್‌ನ ಮಾಲೀಕ (Mantri Mall Owner), ಮಂತ್ರಿ ಡೆವಲಪರ್ಸ್ ನಿರ್ದೇಶಕ (Mantri Developers MD) ಹಾಗೂ ಖ್ಯಾತ ಉದ್ಯಮಿ ಸುಶೀಲ್ ಮಂತ್ರಿ (Sushil Mantri) ಅವರನ್ನು ಸಿಐಡಿ ಅಧಿಕಾರಿಗಳು (CID Officers) ಬಂಧಿಸಿದ್ದಾರೆ. ವಂಚನೆ ಆರೋಪದ ಮೇಲೆ ಉದ್ಯಮಿ ಸುಶೀಲ್ ಮಂತ್ರಿ ಹಾಗೂ ಅವರ ಪುತ್ರ ಪ್ರತೀಕ್ ಮಂತ್ರಿ ಇಬ್ಬರನ್ನೂ ನಿನ್ನೆ ರಾತ್ರಿಯೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮನೆ ಖರೀದಿದಾರರಿಗೆ ವಂಚಿಸಿದ ಆರೋಪದ ಮೇಲೆ ಸುಶೀಲ್‌ ಮಂತ್ರಿ ಹಾಗೂ ಪುತ್ರನನ್ನು ಬಂಧಿಸಿ, ಸೆಪ್ಟೆಂಬರ್ 12ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial custody) ವಹಿಸಲಾಗಿದೆ.

ಸುಶೀಲ್ ಮಂತ್ರಿ ಮೇಲಿನ ಆರೋಪಗಳೇನು?

ಫ್ಲ್ಯಾಟ್‌ ಕೊಡಿಸುವುದಾಗಿ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಸಂಸ್ಥೆ ಮಂತ್ರಿ ಡೆವಲಪರ್ಸ್‌ ಸಂಸ್ಥೆ ಸಾರ್ವಜನಿಕರಿಂದ ಕೋಟ್ಯಂತರ ರುಪಾಯಿ ಹಣ ಪಡೆದುಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಐವರು ಗ್ರಾಹಕರು ಕಂಪನಿಯ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಮಂತ್ರಿ ಡೆವಲಪರ್ಸ್‌ ನಿರ್ದೇಶಕರಾದ ಸುಶೀಲ್‌ ಪಾಂಡುರಂಗ ಮಂತ್ರಿ, ಪ್ರತೀಕ್‌ ಸುಶೀಲ್‌ ಮಂತ್ರಿ, ಸ್ನೇಹಲ್‌ ಸುಶೀಲ್‌ ಮಂತ್ರಿ, ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಲಿ. ಅಧಿಕಾರಿಗಳು, ಮಂತ್ರಿ ವೆಬ್‌ ಸಿಟಿ ಗೃಹ ವಸತಿ ಯೋಜನೆಯ ಜಾಗದ ಮಾಲಿಕರು ಸೇರಿ 18 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ನೂರಾರು ಮಂದಿಗೆ ವಂಚನೆ

ಐವರು ನೀಡಿರುವ ಪ್ರಕರಣದಲ್ಲಿ ಸುಮಾರು ಮೂರು ಕೋಟಿ ವಂಚನೆಯಾಗಿದೆ. ಇದೇ ರೀತಿ ನೂರಾರು ಜನರಿಗೆ ವಂಚನೆ ಆಗಿದೆ ಎಂದು ಹೇಳಲಾಗಿತ್ತು. ಸದ್ಯಕ್ಕೆ ಐವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಇದನ್ನೂ ಓದಿ: Rakesh Jhunjhunwala: 5 ಸಾವಿರದಿಂದ 5 ಬಿಲಿಯನ್ ದುಡ್ಡು ಮಾಡಿದ್ದ ಉದ್ಯಮಿ! ಷೇರು ಮಾರುಕಟ್ಟೆ ಶೇರ್ ಖಾನ್ ರಾಕೇಶ್ ಜುಂಜನ್ವಾಲಾ ಜೀವನಗಾಥೆ ಇಲ್ಲಿದೆ

ಈ ಹಿಂದೆಯೂ ಹಲವು ಬಾರಿ ಸುಶೀಲ್ ಮಂತ್ರಿ ತನಿಖೆ

ಮನೆ ಖರೀದಿದಾರರನ್ನು ವಂಚಿಸಿ, ಅವರಿಂದ ಸಂಗ್ರಹಿಸಿದ ಹಣವನ್ನು ತಮ್ಮ ವೈಯಕ್ತಿಕ ಬಳಕೆಗೆ ಉಪಯೋಗಿಸಿಕೊಂಡ ಆರೋಪದಲ್ಲಿ ಮಂತ್ರಿ ಡೆವಲಪರ್ಸ್ ಸಂಸ್ಥಾಪಕ ಕರ್ನಾಟಕದ ಸುಶೀಲ್ ಮಂತ್ರಿಯನ್ನು ಸಿಐಡಿ ಬಂಧಿಸಿದೆ. ಸುಶೀಲ್ ಮಂತ್ರಿ ಇತ್ತೀಚೆಗೆ ಹಲವಾರು ತನಿಖಾ ಸಂಸ್ಥೆಗಳ ಪರಿಶೀಲನೆಗೆ ಒಳಗಾಗಿದ್ದಾರೆ. ಜೂನ್‌ನಲ್ಲಿ ಕಂಪನಿಯ ಮುಖ್ಯ ಪ್ರವರ್ತಕ ಮತ್ತು ನಿರ್ದೇಶಕ ಸುಶೀಲ್ ಪಿ. ಮಂತ್ರಿ ಅವರನ್ನು ಅಕ್ರಮ ಹಣ ವರ್ಗಾವಣೆಯ ಶಂಕೆಯ ಮೇಲೆ ಇಡಿ ಅಧಿಕಾರಿಗಳು ಬಂಧಿಸಿತ್ತು

10 ವರ್ಷವಾದರೂ ಫ್ಲಾಟ್ ವಿತರಿಸದ ಆರೋಪ

ಮಂತ್ರಿ ಡೆವಲಪರ್ಸ್‌ ಮೂಲಕ ಮನೆ ಖರೀದಿದಾರರನ್ನು ತಪ್ಪುದಾರಿಗೆಳೆಯುವ ಬ್ರೋಷರ್‌ಗಳು, ಸುಳ್ಳು ಡೆಲಿವರಿ ಟೈಮ್‌ಲೈನ್‌ಗಳ ಮೂಲಕ ವಂಚಿಸಿದ ಆರೋಪ ಕೇಳಿ ಬಂದಿದೆ. ವಿವಿಧ ಯೋಜನೆ, ಆಫರ್ ಮೂಲಕ ಮನೆ ಖರೀದಿದಾರರಿಂದ ಠೇವಣಿಗಳನ್ನು ತೆಗೆದುಕೊಂಡ ಮಂತ್ರಿ ಡೆವಲಪರ್ಸ್,  ಏಳರಿಂದ ಹತ್ತು ವರ್ಷಗಳ ನಂತರವೂ ಫ್ಲಾಟ್‌ಗಳನ್ನು ವಿತರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನೋಂದಣಿ ಬಳಿಕವೂ ಫ್ಲಾಟ್ ಕೀ ನೀಡದೆ ವಂಚನೆ

ಫ್ಲಾಟ್‌ನ ಶೇ. 90-100ರಷ್ಟು ಮೊತ್ತವನ್ನು ಪಾವತಿಸಿ ಸುಮಾರು ಒಂದು ದಶಕ ಕಳೆದಿದ್ದರೂ ಮಂತ್ರಿ ಡೆವಲಪರ್‌ಗಳು ಮನೆ ಖರೀದಿದಾರರಿಗೆ ಫ್ಲಾಟ್‌ಗಳನ್ನು ತಲುಪಿಸುತ್ತಿಲ್ಲ. ಕೆಲವು ಮನೆ ಖರೀದಿದಾರರಿಗೆ ನೋಂದಣಿ ನಂತರವೂ, ಫ್ಲಾಟ್‌ನ ಕೀಗಳನ್ನು ನೀಡುತ್ತಿಲ್ಲ ಎಂದು ಮಂತ್ರಿ ಸೆರಿನಿಟಿ ಗೃಹ ಖರೀದಿದಾರರ ವೇದಿಕೆ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಧನಂಜಯ ಪದ್ಮನಾಭಾಚಾರ್ ಹೇಳಿದ್ದಾರೆ.

ಇದನ್ನೂ ಓದಿ: GDP Growth: ಜಿಡಿಪಿಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಭಾರತ! ಡ್ರ್ಯಾಗನ್ ರಾಷ್ಟ್ರಕ್ಕೆ ಶುರುವಾಯ್ತು ಭಯ

ಇಡಿಯಿಂದಲೂ ಆಸ್ತಿ ಮುಟ್ಟುಗೋಲು

ಈ ಹಿಂದೆ ಆಗಸ್ಟ್‌ನಲ್ಲಿ ಮಂತ್ರಿ ವೆಬ್ ಸಿಟಿಯ ಮಂತ್ರಿ ಸೆರಿನಿಟಿಯ ಮನೆ ಖರೀದಿದಾರರನ್ನು ವಂಚಿಸಿದ ಆರೋಪ ಮಂತ್ರಿ ಗ್ರೂಪ್ ಮೇಲಿತ್ತು. ಈ ಕೇಸ್‌ನಲ್ಲಿ ಮಂತ್ರಿ ಗ್ರೂಪ್ ವಿರುದ್ಧ 300.4 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ತಾತ್ಕಾಲಿಕ ಆದೇಶ ಹೊರಡಿಸಿತ್ತು.
Published by:Annappa Achari
First published: