• Home
  • »
  • News
  • »
  • business
  • »
  • Home Loan: ಗೃಹ ಸಾಲ ಪಡೆದುಕೊಳ್ಳುವ ಮುನ್ನ ಅರಿತುಕೊಳ್ಳಬೇಕಾಗಿರುವ ಅಂಶಗಳೇನು..? ಇಲ್ಲಿದೆ ವಿವರ

Home Loan: ಗೃಹ ಸಾಲ ಪಡೆದುಕೊಳ್ಳುವ ಮುನ್ನ ಅರಿತುಕೊಳ್ಳಬೇಕಾಗಿರುವ ಅಂಶಗಳೇನು..? ಇಲ್ಲಿದೆ ವಿವರ

Home Loan

Home Loan

ಗೃಹ ಸಾಲದ ಬಡ್ಡಿ ವೆಚ್ಚ ಕಡಿಮೆ ಮಾಡಲು ಗೃಹ ಸಾಲದ ಓವರ್ ಡ್ರಾಫ್ಟ್ ಅನ್ನು ಆಯ್ಕೆ ಮಾಡುವುದು ಒಂದು ಉತ್ತಮ ವಿಧಾನವಾಗಿದೆ

  • Share this:

ನಿಮ್ಮ ಕನಸಿನ ಮನೆಯನ್ನು ನಿಮ್ಮದಾಗಿಸಿಕೊಳ್ಳುವ ಯೋಜನೆಯನ್ನು ನೀವು ಹೊಂದಿದ್ದರೆ ಕಡಿಮೆ ಬಡ್ಡಿದರದಲ್ಲಿ (interest Rate) ಗೃಹಸಾಲ (home loans) ಒದಗಿಸುವ ಯೋಜನೆಗಳೊಂದಿಗೆ ಇಂದಿನ ಲೇಖನ ನಿಮಗೆ ಸಹಕಾರಿಯಾಗಲಿದೆ. ಕಡಿಮೆ ಬಡ್ಡಿದರದಲ್ಲಿ ದೊರೆಯುವ ಗೃಹಸಾಲಗಳನ್ನು ಪಡೆಯುವಾಗ ಯಾವೆಲ್ಲಾ ಅಂಶಗಳಿಗೆ ಗಮನ ನೀಡಬೇಕು ಎಂಬ ಸಲಹೆಯನ್ನು ಈ ಲೇಖನದಲ್ಲಿ ನೀವು ಕಂಡುಕೊಳ್ಳಬಹುದಾಗಿದೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಗೃಹ ಸಾಲಗಳು ಕಡಿಮೆ ಬಡ್ಡಿದರದಲ್ಲಿ ಬರುತ್ತಿದ್ದು 650 ರೂ ಹಾಗೂ 700 ರೂ.ಗೆ EMIಗಳಿರುವ ಲೋನ್‌ಗಳನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಈ ಅಂಶಗಳತ್ತ ಇನ್ನಷ್ಟು ದೃಷ್ಟಿ ಹಾಯಿಸೋಣ.


ಹೋಮ್ ಲೋನ್ (home loans) ಕುರಿತು ಅರಿತುಕೊಳ್ಳಬೇಕಾಗಿರುವ ಅಂಶಗಳು


ನೀವು ಹೋಮ್ ಲೋನ್ ಅನ್ನು ಯಾವುದೇ ಬ್ಯಾಂಕ್‌ಗಳು ಅಥವಾ ಫೈನಾನ್ಸ್‌ ಕಂಪನಿಯಿಂದ ಕೈಗೆಟುಕುವ EMI ಯೋಜನೆಗಳೊಂದಿಗೆ ತೆಗೆದುಕೊಳ್ಳಬಹುದಾಗಿದೆ. ಸಂಪೂರ್ಣ ಮರುಪಾವತಿ ಆಯ್ಕೆ ಇದ್ದು ಸ್ವತ್ತು ಮರುಸ್ವಾಧೀನ ಅಥವಾ ಪೂರ್ವಪಾವತಿ ಶುಲ್ಕವನ್ನು ಲಗತ್ತಿಸಲಾಗುವುದಿಲ್ಲ.


ಆರ್‌ಬಿಐ ಮಾರ್ಗಸೂಚಿಗಳು ಮತ್ತು ಸಾಲಗಾರರ ಆಂತರಿಕ ಕ್ರೆಡಿಟ್ ನೀತಿಯ ಪ್ರಕಾರ, ಬ್ಯಾಂಕ್/ಎಚ್‌ಎಫ್‌ಸಿ ಆಸ್ತಿ ವೆಚ್ಚದ 75-90%ದಷ್ಟು ಗೃಹ ಸಾಲವನ್ನು ವಿಸ್ತರಿಸುತ್ತದೆ.


ಇದಲ್ಲದೆ, ಗೃಹ ಸಾಲದ ಮರುಪಾವತಿಯು ಸಾಲಗಾರನಿಗೆ ವಿಭಾಗ 80 ಸಿ ಮತ್ತು 24ರ ಅಡಿಯಲ್ಲಿ ಹಲವಾರು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಮರುಪಾವತಿ ಪ್ರಯೋಜನಗಳನ್ನು ಪಡೆದ ನಂತರ, ಅತ್ಯಧಿಕ ತೆರಿಗೆ ಸ್ಲಾಬ್‌ನಲ್ಲಿ ಸಾಲಗಾರರಿಗೆ ಪರಿಣಾಮಕಾರಿ ಕಡಿಮೆ ಬಡ್ಡಿದರವು ವರ್ಷಕ್ಕೆ 5%ಕ್ಕಿಂತ ಕಡಿಮೆ ಇರುತ್ತದೆ.


ಕಡಿಮೆ ಬಡ್ಡಿದರವೊಂದೇ ರಹಸ್ಯವಲ್ಲ:


ಗೃಹಸಾಲ ಆಯ್ಕೆಮಾಡುವಾಗ ಕಡಿಮೆ ಬಡ್ಡಿದರದ ಅಂಶಕ್ಕೆ ಮಾತ್ರವೇ ಪ್ರಾಧಾನ್ಯತೆ ನೀಡುವುದಲ್ಲ. ನೀವು ಆಯ್ಕೆಮಾಡಿದ ಲೋನ್‌ ಮೇಲೆ ಬಡ್ಡಿ ಕಡಿಮೆ ಮಾಡುವ ಬ್ಯಾಲೆನ್ಸ್‌ ವಿಧಾನದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಪ್ರತಿ ಗೃಹ ಸಾಲ EMI ಪಾವತಿಯೊಂದಿಗೆ ಅಸಲು ಬಾಕಿ ಕಡಿಮೆಯಾಗುತ್ತದೆ. ಇದರಿಂದ ಪ್ರತಿ ತಿಂಗಳು ಕಡಿಮೆ ಬಡ್ಡಿ ವೆಚ್ಚವನ್ನು ನೀವು ಪಾವತಿಸುತ್ತೀರಿ.


ಪ್ರಸ್ತುತ ಸನ್ನಿವೇಶದಲ್ಲಿ, ದರಗಳು ಕಳೆದ 15 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಾರ್ಕ್‌ಗಳಲ್ಲಿವೆ. ಮುಂದಿನ ದಿನಗಳಲ್ಲಿ ದರಗಳು ಸ್ವಲ್ಪಮಟ್ಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ.


ಪ್ರಕ್ರಿಯೆ ಶುಲ್ಕಗಳು ಮತ್ತು ಇತರ ಶುಲ್ಕಗಳು


ತಾತ್ಕಾಲಿಕ ದರದ ಗೃಹ ಸಾಲಗಳಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳಿಲ್ಲದಿದ್ದರೂ, ಸಾಲದಾತರು ಇನ್ನೂ ಪೂರ್ವಪಾವತಿಯ ಸಮಯ ಮತ್ತು ಮೊತ್ತವನ್ನು ಮಿತಿಗೊಳಿಸಬಹುದು. ಸ್ಥಿರ ಗೃಹ ಸಾಲಗಳ ಸಂದರ್ಭದಲ್ಲಿ, ಪೂರ್ವ-ಪಾವತಿ ಶುಲ್ಕಗಳನ್ನು ವಿಧಿಸಲಾಗುತ್ತದೆ. ಹೀಗಾಗಿ ನೀವು ಗೃಹ ಸಾಲ ಪಡೆಯುವ ಮುನ್ನ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಬೇಕು. ಗೃಹ ಸಾಲ ನೀಡುವವರು ಆಸ್ತಿಯ ವೆಚ್ಚ ಮತ್ತು ಸಾಲದ ಅರ್ಜಿ ಮೌಲ್ಯಮಾಪನ ಮಾಡಲು ಮತ್ತು ಪರಿಶೀಲಿಸಲು ಖರ್ಚು ಮಾಡುತ್ತಾರೆ.


ಇದನ್ನು ಓದಿ: ಎಲ್ಲೆನಾಬಾದ್ ಉಪಚುನಾವಣೆ: ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಲಿದೆಯೇ?!

ಕಾಲಾವಧಿ: ಇಎಮ್‌ಐಗಳನ್ನು ಮರುಪಾವತಿಸಲು ಎಷ್ಟು ಸಮಯ ಬೇಕಾಗುತ್ತದೆ..?


ಸಾರ್ವಜನಿಕ ಹಾಗೂ ಖಾಸಗಿ ಸಾಲದಾತರು ಗರಿಷ್ಠ 20 ರಿಂದ 30 ವರ್ಷಗಳವರೆಗೆ ಗೃಹ ಸಾಲವನ್ನು ನೀಡುತ್ತಾರೆ. ಆದಾಗ್ಯೂ, ದೀರ್ಘಾವಧಿಯ ಕಾಲಾವಧಿ ಆಯ್ಕೆ ಮಾಡದಿರುವುದು ಒಳ್ಳೆಯದು. 10-15 ವರ್ಷಗಳಲ್ಲಿ ನಿಮ್ಮ ಗೃಹ ಸಾಲ ಮರುಪಾವತಿಸಲು ಯೋಜಿಸುವುದು ಉತ್ತಮ ನಿರ್ಧಾರವಾಗಿದೆ. ಲೋನ್ ದೀರ್ಘವಾಗಿದ್ದು ನಿಮ್ಮ ಇಎಮ್‌ಐ ಸಣ್ಣ ಮೊತ್ತದ್ದಾಗಿದ್ದರೆ ಬಡ್ಡಿದರ ಅಧಿಕವಾಗಿರುತ್ತದೆ. ಹಾಗಾಗಿ ದೀರ್ಘಾವಧಿಯ ಮರುಪಾವತಿ ಆಯ್ಕೆಯು ನಷ್ಟವನ್ನುಂಟು ಮಾಡಬಹುದು.


ಓವರ್ ಡ್ರಾಫ್ಟ್ ಸೌಲಭ್ಯ:


ಗೃಹ ಸಾಲದ ಬಡ್ಡಿ ವೆಚ್ಚ ಕಡಿಮೆ ಮಾಡಲು ಗೃಹ ಸಾಲದ ಓವರ್ ಡ್ರಾಫ್ಟ್ ಅನ್ನು ಆಯ್ಕೆ ಮಾಡುವುದು ಒಂದು ಉತ್ತಮ ವಿಧಾನವಾಗಿದೆ. ಉತ್ಪನ್ನವು ಸರಳ ಗೃಹ ಸಾಲಕ್ಕಿಂತ ಸ್ವಲ್ಪ ಹೆಚ್ಚಿನ ಬಡ್ಡಿದರ ಹೊಂದಿರುತ್ತದೆ. ಆದರೂ, ಹೆಚ್ಚಿನ ದ್ರವ್ಯತೆ ಮತ್ತು ಕಡಿಮೆ ಬಡ್ಡಿ ವೆಚ್ಚದ ಲಾಭಗಳು ಹೆಚ್ಚುವರಿ ಹಣ ಹೊಂದಿರುವ ಜನರಿಗೆ ಇದು ಪರಿಪೂರ್ಣ ಪರಿಹಾರವಾಗಿದೆ.


ಇದನ್ನು ಓದಿ: tate Bank of Indiaಗೆ 1 ಕೋಟಿ ದಂಡ ವಿಧಿಸಿದ RBI: ಕಾರಣ ಇಲ್ಲಿದೆ..

ಗೃಹ ಸಾಲ ವಿಮೆ:


ಇದು ಗೃಹ ಸಾಲ ವಿಮೆ ಖರೀದಿಯು ಸಾಲಗಾರ ಹಾಗೂ ಸಾಲದಾತನ ಹಿತಾಸಕ್ತಿಯನ್ನು ಆಧರಿಸಿದೆ. ಗೃಹ ಸಾಲಕ್ಕೆ ವಿಮೆ ಕಡ್ಡಾಯವಲ್ಲದಿದ್ದರೂ, ಈ ದಿನಗಳಲ್ಲಿ ಸಾಲದಾತರು ಆಸ್ತಿ ವಿಮೆಗೆ ಒತ್ತಾಯಿಸುತ್ತಾರೆ. ನೀವು ಇದನ್ನು ವಿಮಾ ಕಂಪನಿಯಿಂದ ಸ್ವತಂತ್ರವಾಗಿ ಖರೀದಿಸಬಹುದು. ಆಸ್ತಿ ವಿಮೆ ಸಾಮಾನ್ಯವಾಗಿ ಬೆಂಕಿ, ಪ್ರವಾಹ ಮತ್ತು ಭೂಕಂಪಗಳಂತಹ ವಿಪತ್ತುಗಳಿಂದ ಉಂಟಾಗುವ ನಷ್ಟದಿಂದ ಸಂರಕ್ಷಿಸುತ್ತದೆ.


ಗೃಹ ಸಾಲವು ದೀರ್ಘಾವಧಿಯ ಬದ್ಧತೆಯಾಗಿದ್ದು, ಸೂಕ್ತವಾದ ಸಾಲದ ನಿಯಮಗಳೊಂದಿಗೆ ಕಡಿಮೆ ದರಕ್ಕೆ ಮಾತ್ರವಲ್ಲದೆ, ಸಾಲಗಾರರ ಅವಶ್ಯಕತೆಗಳಿಗೆ ಸ್ಪಂದಿಸುವ ಸಾಲದಾತನೊಂದಿಗೆ ಉನ್ನತ-ವಿತರಣಾ ನಂತರದ ಸೇವೆಗಳನ್ನು ಆಯ್ಕೆ ಮಾಡುವುದು ಅತ್ಯುನ್ನತ ಅಂಶವಾಗಿದೆ.


First published: